World Emoji Day 2023: ಇಂದು ವಿಶ್ವ ಎಮೋಜಿ ದಿನ; ಇದರ ಇತಿಹಾಸ, ಸಾಮಾನ್ಯವಾಗಿ ಬಳಸುವ 5 ಎಮೋಜಿಗಳು ಇವು
Jul 17, 2023 08:59 AM IST
ವಿಶ್ವ ಎಮೋಜಿ ದಿನ 2023 - ಇದರ ಇತಿಹಾಸ ಹಾಗೂ ಸಾಮಾನ್ಯವಾಗಿ ಬಳಸುವ ಐದು ಎಮೋಜಿಗಳು ಇಲ್ಲಿವೆ
ವಾಟ್ಸಪ್, ಫೇಸ್‌ಬುಕ್, ಶೇರ್‌ಚಾಟ್, ಮೆಸೆಂಜರ್ ಹೀಗೆ ಯಾವುದೇ ಸಾಮಾಜಿಕ ಜಾಲತಾಣದ ಮೂಲಕ ಸಂದೇಶ ಕಳುಹಿಸಬೇಕಾದರೂ ಎಮೋಜಿಗಳನ್ನು ಬಳಸುವುದು ಸಾಮಾನ್ಯವಾಗಿದೆ.
ಬೆಂಗಳೂರು: ಇಂದು ವಿಶ್ವ ಎಮೋಜಿ ದಿನ (World Emoji Day 2023). ಭಾವನೆಗಳು ಅಥವಾ ಆಲೋಚನೆಗಳನ್ನು ವ್ಯಕ್ತಪಡಿಸಲು ಬಳಸುವ ಸಣ್ಣ ಡಿಜಿಟಲ್ ಐಕಾನ್‌ಗಳೇ ಈ ಎಮೋಜಿಗಳು.
1990ರಲ್ಲಿ ಮೊದಲ ಬಾರಿಗೆ ಜಪಾನ್‌ನಲ್ಲಿ ಎಮೋಜಿಗಳು ಹುಟ್ಟಿಕೊಂಡವು. ಆ ನಂತರ ಜಗತ್ತಿನಾದ್ಯಂತ ವ್ಯಾಪಕವಾಗಿ ಹರಡಿ ಜನಪ್ರಿಯಾವಾಗಿವೆ. ವಿವಿಧ ಡಿಜಿಟಲ್ ಫ್ಲಾಟ್‌ಫಾರ್ಮ್‌ಗಳು ಹಾಗೂ ಸಂದೇಶದ ಅಪ್ಲಿಕೇಶ್‌ನಗಳಲ್ಲಿ ಈ ಎಮೋಜಿಗಳನ್ನು ಸೇರಿಸಲಾಗಿದೆ.
ಜಪಾನ್‌ನ ಎನ್‌ಟಿಟಿ ಡೊಕೊಮೊ ಎಂಬ ಸಂಸ್ಥೆ ಪರಿಚಯಿಸಿತು. ಸಾಮಾಜಿಕ ತಾಲತಾಣಗಳಾದ ಫೇಸ್‌ಬುಕ್, ಮೆಸೆಂಜರ್, ವಾಟ್ಸಾಪ್, ಇನ್‌ಸ್ಟಾಗ್ರಾಂ ಹಾಗೂ ಟೆಲಿಗ್ರಾಂ ಆ್ಯಪ್‌ಗಳಲ್ಲಿ ಎಮೋಜಿಗಳನ್ನು ಬಳಸಲಾಗುತ್ತದೆ. ಯಾವುದೇ ಸಂದೇಶದ ಜೊತೆಗೆ ಅಥವಾ ಎಮೋಜಿಗಳ ಮೂಲಕವೇ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿಕೊಳ್ಳಬಹುದು.
ನಗು ಮುಖದ ಎಮೋಜಿಗಳು, ಥಂಬ್ಸ್ ಅಪ್, ದುಃಖದ ಮುಖ, ಹಾರ್ಟ್ ಸಿಂಬಲ್ ಹಾಗೂ ಆಹಾರ ಎಮೋಜಿಗಳನ್ನು ಜನರು ಸೋಷಿಯಲ್ ಮೀಡಿಯಾದಲ್ಲಿ ಸಂದೇಶದ ವೇಳೆ ಹೆಚ್ಚಾಗಿ ಬಳಸುತ್ತಾರೆ.
ಅಕ್ಷರ ರೂಪದಲ್ಲಿ ಹೇಳುವ ಸಂದೇಶವನ್ನು ಕೇವಲ ಎಮೋಜಿಗಳ ಮೂಲಕವೇ ಕಳಿಸಬಹುದು. ಇಂದು ಸಾವಿರಾರು ಎಮೋಜಿಗಳು ಚಾಲ್ತಿಯಲ್ಲಿದ್ದು, ದೇಶಗಳ ಚಿತ್ರಗಳು, ರಾಷ್ಟ್ರ ಧ್ವಜಗಳು, ಚಿಹ್ನೆಗಳು, ವಾಹನಗಳು, ಹೂ, ಕೃಷಿ, ವಿಜ್ಞಾನ ಸೇರಿದಂತೆ ಎಲ್ಲಾ ಕ್ಷೇತ್ರಗಳಿಗೆ ಸಂಬಂಧಿಸಿದ ಎಮೋಜಿಗಳು ಲಭ್ಯ ಇವೆ.
ಭಾಷೆಯ ಅಡೆತಡೆಗಳನ್ನು ಮೀರಿದ ಎಮೋಜಿ
ಮಾನವ ಜೀವನ ಹಾಗೂ ಸಂವಹನದ ವಿವಿಧ ಅಂಶಗಳನ್ನು ಪ್ರತಿನಿಧಿಸುವ ಸಾವಿರಾರು ಎಮೋಜಿಗಳು ಲಭ್ಯವಿವೆ. ಪಠ್ಯ ಆಧಾರಿತ ಸಂಭಾಷಣೆಗಳಿಗೆ ದೃಶ್ಯ ಎಮೋಜಿಗಳನ್ನು ಹೆಚ್ಚಾಗಿ ಬಳಸಲಾಗುತ್ತದೆ. ಇದು ಕೇವಲ ವಿನೋದ ಮತ್ತು ಸೃಜನಶೀಲ ಮಾರ್ಗವಾಗಿದ್ದು, ಎಮೋಜಿಗಳು ಭಾಷೆಯ ಅಡೆತಡೆಗಳನ್ನು ಮೀರಿದ ಜಾಗತಿಕ ಭಾಷೆಯಾಗಿದೆ. ಇವುಗಳನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದಾಗಿದೆ.
ಸದ್ಯ ಎಮೋಜಿಗಳ ಜನಪ್ರಿಯತೆ ಮತ್ತು ವ್ಯಾಪಕ ಬಳಕೆಯಿಂದಾಗಿ ಮತ್ತಷ್ಟು ಹೊಸ ಹೊಸ ಎಮೋಜಿಗಳನ್ನು ಪರಿಚಯಿಸಲಾಗುತ್ತಲೇ ಇದೆ. ಆಧುನಿಕ ಸಂವಹನ ಮಾರುಕಟ್ಟೆ ಮತ್ತು ಶೈಕ್ಷಣಿಕ ಅಧ್ಯಯನಗಳ ವಿವಿಧ ಅಂಶಗಳ ಮೇಲೂ ಇವು ಪ್ರಭಾವ ಬೀರುತ್ತಿವೆ. ಎಮೋಜಿಗಳ ವ್ಯಾಖ್ಯಾನವು ಕೆಲವೊಮ್ಮೆ ವ್ಯಕ್ತಿನಿಷ್ಠ ಮತ್ತು ಸಂದರ್ಭವನ್ನು ಅವಲಂಬಿತವಾಗಿರುತ್ತದೆ.