logo
ಕನ್ನಡ ಸುದ್ದಿ  /  ಜೀವನಶೈಲಿ  /  Mental Health Day: 9 ಗಂಟೆಗೂ ಹೆಚ್ಚು ಕಾಲ ಕುಳಿತೇ ಕೆಲಸ ಮಾಡ್ತಿದ್ರೆ ಅಪಾಯ ಕಟ್ಟಿಟ್ಟ ಬುತ್ತಿ; ಇದರಿಂದ ಎದುರಾಗುವ ಮಾನಸಿಕ ಸಮಸ್ಯೆಗಳಿವು

Mental Health Day: 9 ಗಂಟೆಗೂ ಹೆಚ್ಚು ಕಾಲ ಕುಳಿತೇ ಕೆಲಸ ಮಾಡ್ತಿದ್ರೆ ಅಪಾಯ ಕಟ್ಟಿಟ್ಟ ಬುತ್ತಿ; ಇದರಿಂದ ಎದುರಾಗುವ ಮಾನಸಿಕ ಸಮಸ್ಯೆಗಳಿವು

Reshma HT Kannada

Oct 10, 2023 06:47 AM IST

google News

9 ಗಂಟೆಗೂ ಹೆಚ್ಚು ಕಾಲ ಕುಳಿತೇ ಕೆಲಸ ಮಾಡ್ತಿದ್ರೆ ಅಪಾಯ ಕಟ್ಟಿಟ್ಟ ಬುತ್ತಿ

    • ಹೆಚ್ಚು ಹೊತ್ತು ಒಂದೇ ಕಡೆ ಕುಳಿತಿರುವುದರಿಂದ ಹಲವು ರೀತಿಯ ಆರೋಗ್ಯ ಸಮಸ್ಯೆಗಳು ಎದುರಾಗಲಿವೆ ಎಂದು ಅಧ್ಯಯನಗಳು ತಿಳಿಸಿವೆ. ಅದರಲ್ಲೂ 9 ಗಂಟೆಗೂ ಹೆಚ್ಚು ಕಾಲ ಕಂಪ್ಯೂಟರ್‌ ಮುಂದೆ ಕುಳಿತು ಕೆಲಸ ಮಾಡುವವರಲ್ಲಿ ಹಲವು ರೀತಿ ದೈಹಿಕ ಹಾಗೂ ಮಾನಸಿಕ ಆರೋಗ್ಯ ಸಮಸ್ಯೆಗಳು ಕಾಣಿಸುತ್ತಿವೆ. 
9 ಗಂಟೆಗೂ ಹೆಚ್ಚು ಕಾಲ ಕುಳಿತೇ ಕೆಲಸ ಮಾಡ್ತಿದ್ರೆ ಅಪಾಯ ಕಟ್ಟಿಟ್ಟ ಬುತ್ತಿ
9 ಗಂಟೆಗೂ ಹೆಚ್ಚು ಕಾಲ ಕುಳಿತೇ ಕೆಲಸ ಮಾಡ್ತಿದ್ರೆ ಅಪಾಯ ಕಟ್ಟಿಟ್ಟ ಬುತ್ತಿ

ʼಕೊರೊನಾ ದಿನಗಳ ನಂತರ ಆರಂಭವಾದ ವರ್ಕ್‌ ಫ್ರಂ ಹೋಮ್‌ ಪದ್ಧತಿಯು ಚಾಲ್ತಿಗೆ ಬಂದಾಗಿನಿಂದ ದಿನವಿಡೀ ಕಂಪ್ಯೂಟರ್‌ ಮುಂದೆ ಕುಳಿತಿರುವಂತಾಗಿದೆ. ಇದರಿಂದ ಒಂಥರಾ ಮನಸ್ಸಿಗೆ ಒತ್ತಡ, ಅಲ್ಲದೆ ದೇಹ ತೂಕ ಹೆಚ್ಚಿದ್ದಲ್ಲದೇ ಇನ್ನೂ ಹಲವು ಸಮಸ್ಯೆಗಳು ಎದುರಾಗಿದೆʼ ಎಂದು ಹಲವರು ಹೇಳುವುದನ್ನು ಕೇಳಿಸಿಕೊಂಡಿದ್ದೇವೆ. ದಿನವಿಡೀ ಕುಳಿತೇ ಇರುವುದು ನಿಜಕ್ಕೂ ಒಳ್ಳೆಯ ಅಭ್ಯಾಸವಲ್ಲ. ವೃತ್ತಿ ಅನಿವಾರ್ಯದಿಂದ ನಾನು ಕಂಪ್ಯೂಟರ್‌ ಅಥವಾ ಲ್ಯಾಪ್‌ಟಾಪ್‌ ಮುಂದೆ ಸಾಕಷ್ಟು ಸಮಯ ಕುಳಿತಿರುತ್ತೇವೆ. ಆದರೆ ಇದರಿಂದ ಒಂದಿಲ್ಲ ಒಂದು ಆರೋಗ್ಯ ಸಮಸ್ಯೆಗಳು ಕಾಡುವುದು ಸುಳ್ಳಲ್ಲ.

ಹೆಚ್ಚು ಹೊತ್ತು ಒಂದೇ ಕಡೆ ಕುಳಿತಿರುವುದರಿಂದ ಹಲವು ರೀತಿಯ ಆರೋಗ್ಯ ಸಮಸ್ಯೆಗಳು ಎದುರಾಗಲಿವೆ ಎಂದು ಅಧ್ಯಯನಗಳು ತಿಳಿಸಿವೆ. ಅದರಲ್ಲೂ 9 ಗಂಟೆಗೂ ಹೆಚ್ಚು ಕಾಲ ಕಂಪ್ಯೂಟರ್‌ ಮುಂದೆ ಕುಳಿತು ಕೆಲಸ ಮಾಡುವವರಲ್ಲಿ ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿವೆ.

ಇತ್ತೀಚಿನ ಅಧ್ಯಯನವೊಂದರ ಪ್ರಕಾರ ದೀರ್ಘಕಾಲದವರೆಗೆ ಕುಳಿತುಕೊಳ್ಳುವುದು ಹಾಗೂ ಹೆಚ್ಚಿನ ಸಮಯ ಅಂದರೆ 9 ಗಂಟೆಗೂ ಅಧಿಕ ಕಾಲ ಕುಳಿತು ಕೆಲಸ ಮಾಡುವುದರಿಂದ ಮೆದುಳು ಹಾಗೂ ವ್ಯಕ್ತಿಗಳ ಒಟ್ಟಾರೆ ಆರೋಗ್ಯದ ಮೇಲೆ ಹಲವು ನಕಾರಾತ್ಮಕ ಪರಿಣಾಮಗಳು ಬೀರುತ್ತವೆ. ʼಫ್ರಾಂಟಿಯರ್ಸ್‌ ಇನ್‌ ಸೈಕಿಯಾಟ್ರಿʼ ಎಂಬ ನಿಯತಕಾಲಿಕೆಯಲ್ಲಿ ಈ ಅಧ್ಯಯನದ ಅಂಶಗಳನ್ನು ಪ್ರಕಟಿಸಲಾಗಿದೆ.

ಹಾಗಾದರೆ 9 ಗಂಟೆಗಳಿಗೂ ಅಧಿಕ ಒಂದು ಕಡೆ ಕುಳಿತೇ ಇರುವುದರಿಂದ ಇದು ನಿಮ್ಮ ಆರೋಗ್ಯ ಮತ್ತು ದೇಹದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದನ್ನು ತಿಳಿಯೋಣ.

ಹೆಚ್ಚು ಸಮಯ ಕಂಪ್ಯೂಟರ್‌ ಮುಂದೆ ಕುಳಿತೇ ಇರುವುದರಿಂದ ಉಂಟಾಗುವ ಮಾನಸಿಕ ಹಾಗೂ ದೈಹಿಕ ಸಮಸ್ಯೆಗಳಿವು

ರಕ್ತದ ಹರಿವನ್ನು ಕಡಿಮೆ ಮಾಡುತ್ತದೆ

ದಿನವಿಡೀ ಕುಳಿತೇ ಇರುವುದರಿಂದ ದೇಹದ ವಿವಿಧ ಭಾಗಗಳಲ್ಲಿ ರಕ್ತಸಂಚಾರ ಕಡಿಮೆಯಾಗುತ್ತದೆ. ಮೆದುಳಿನ ರಕ್ತಸಂಚಾರದಲ್ಲೂ ಕೊರತೆ ಉಂಟಾಗುತ್ತದೆ. ರಕ್ತಪರಿಚಲನೆಯ ಕೊರತೆಯಿಂದ ಮೆದುಳಿನ ಜೀವಕೋಶಗಳಿಗೆ ಆಮ್ಲಜನಕ ಮತ್ತು ಅಗತ್ಯ ಪೋಷಕಾಂಶಗಳು ಲಭ್ಯವಾಗುವುದಿಲ್ಲ. ಇದರಿಂದ ಅರಿವಿನ ಕಾರ್ಯ (ಕಾಗ್ನೆಟಿವ್‌ ಫಂಕ್ಷನ್‌) ದ ಮೇಲೆ ಪರಿಣಾಮ ಬೀರುತ್ತದೆ.

ಬ್ರೈನ್‌ ಫಾಗ್‌

ಹೆಚ್ಚು ಹೊತ್ತು ಒಂದು ಕಡೆ ಕುಳಿತೇ ಇರುವುದರಿಂದ ಮಾನಸಿಕ ಆಯಾಸ ಹಾಗೂ ಬ್ರೈನ್‌ ಫಾಗ್‌ ಉಂಟಾಗುತ್ತದೆ. ಬ್ರೈನ್‌ ಫಾಗ್‌ ಎಂದರೆ ಮೆದುಳಿಗೆ ಮಂಜ ಕವಿದ ಭಾವ. ದೀರ್ಘಾವಧಿಯವರೆಗೆ ಹೀಗೆ ಕುಳಿತೇ ಇರುವುದರಿಂದ ಏಕಾಗ್ರತೆ ಕಷ್ಟವಾಗುತ್ತದೆ. ಜೊತೆಗೆ ಇದರಿಂದ ಸ್ಪಷ್ಟವಾಗಿ ಯೋಚಿಸುವುದು, ಮನಸ್ಸು ಸದಾ ಎಚ್ಚರದಿಂದಿರುವುದು ಇದಕ್ಕೆ ತೊಂದರೆ ಉಂಟಾಗಬಹುದು.

ಖಿನ್ನತೆ ಹಾಗೂ ಆತಂಕ ಹೆಚ್ಚಬಹುದು

ಜಡ ವರ್ತನೆಯು ಮಾನಸಿಕ ಆರೋಗ್ಯ ಸಮಸ್ಯೆಗಳ ಹೆಚ್ಚಳಕ್ಕೂ ಕಾರಣವಾಗುತ್ತದೆ. ಇದರಿಂದ ಆತಂಕ, ಖಿನ್ನತೆಯಂತಹ ಸಮಸ್ಯೆಗಳು ಹೆಚ್ಚಬಹುದು. ದೈಹಿಕ ಚಟುವಟಿಕೆಯಿಂದ ಮಾನಸಿಕ ಚೈತನ್ಯ ಹೆಚ್ಚುವ ಸಿರೊಟೋನಿನ್‌ ಮತ್ತು ಎಂಡಾರ್ಫಿನ್‌ಗಳಂತಹ ಉತ್ತಮ ಹಾರ್ಮೋನ್‌ಗಳ ಬಿಡುಗಡೆ ಸಹಕಾರಿಯಾಗುತ್ತದೆ. ಇದು ಮನಸ್ಥಿತಿ ಸುಧಾರಣೆಗೆ ಸಹಾಯ ಮಾಡುತ್ತದೆ.

ನೆನಪಿನ ಶಕ್ತಿಯ ಕೊರತೆ ಕಾಡಬಹುದು

ಕೆಲವು ಅಧ್ಯಯನಗಳ ಪ್ರಕಾರ ಹೆಚ್ಚು ಹೊತ್ತು ಕುಳಿತು ಕೆಲಸ ಮಾಡುವುದರಿಂದ ನೆನಪಿನ ಶಕ್ತಿ ಕುಂಠಿತವಾಗಬಹುದು ಮತ್ತು ಅರಿವಿನ ಸಾಮರ್ಥ್ಯದ ಕೊರತೆಗೂ ಕಾರಣವಾಗಬಹುದು ಎಂದಿವೆ. 30 ವರ್ಷ ದಾಟಿದ ನಂತರ ಮೆದುಳಿನ ಆರೋಗ್ಯವನ್ನು ಉತ್ತಮವಾಗಿರಿಸಿಕೊಳ್ಳಲು ಆರೋಗ್ಯ ಮತ್ತು ಮೆದುಳಿನ ಕಾರ್ಯವನ್ನು ಕಾಪಾಡಿಕೊಳ್ಳಲು ದೈಹಿಕವಾಗಿ ಸಕ್ರಿಯವಾಗಿರುವುದು ಅತ್ಯಗತ್ಯ.

ಮೆದುಳಿನ ರಚನೆಯಲ್ಲಿ ಬದಲಾವಣೆಗಳು ಉಂಟಾಗಬಹುದು

ದೀರ್ಘಕಾಲ ಕುಳಿತಲ್ಲೇ ಕುಳಿತು ಕೆಲಸ ಮಾಡುವುದರಿಂದ ಮೆದುಳಿನ ರಚನೆಯಲ್ಲಿ ವ್ಯತ್ಯಯಗಳು ಉಂಟಾಗಬಹುದು. ಇತ್ತೀಚಿನ ಸಂಶೋಧನೆಯ ಪ್ರಕಾರ ಜಡ ವರ್ತನೆಯು ಮೆಡಿಕಲ್‌ ಟೆಂಪೊರಲ್‌ ಲೋಬ್‌ ತೆಳುವಾಗುವಿಕೆಗೆ ಕಾರಣವಾಗಬಹುದು. ಇದು ನೆನಪಿಗೆ ಮುಖ್ಯವಾದ ಮೆದುಳಿನ ಪ್ರಮುಖ ಭಾಗವಾಗಿದೆ.

ಒತ್ತಡ ಹೆಚ್ಚುವುದು

ಬಹಳಷ್ಟು ಹೊತ್ತು ಕಂಪ್ಯೂಟರ್‌ ಅಥವಾ ಲ್ಯಾಪ್‌ಟಾಪ್‌ ಮುಂದೆ ಕುಳಿತು ಕೆಲಸ ಮಾಡುವುದರಿಂದ ನಿಮ್ಮ ಮೆದುಳು ಮತ್ತು ಒಟ್ಟಾರೆ ಮಾನಸಿಕ ಯೋಗಕ್ಷೇಮದ ಮೇಲೆ ಹಾನಿಕಾರಣ ಪರಿಣಾಮಗಳು ಉಂಟಾಗುತ್ತವೆ. ಅಲ್ಲದೆ ಇದು ಒತ್ತಡದ ಮಟ್ಟ ಹೆಚ್ಚಲು ಕಾರಣಬಹುದು.

ಸ್ಥೂಲಕಾಯತೆ ಮತ್ತು ಚಯಾಪಚಯ ಸಮಸ್ಯೆ

ಒಡಜೀವನಶೈಲಿಯಿಂದ ಬೊಜ್ಜು ಮತ್ತು ಇನ್ಸುಲಿನ್ ಪ್ರತಿರೋಧ ಮತ್ತು ಟೈಪ್ 2 ಮಧುಮೇಹದಂತಹ ಚಯಾಪಚಯ ಸಮಸ್ಯೆಗಳಿಗೆ ಗಮನಾರ್ಹ ಕೊಡುಗೆ ನೀಡುತ್ತದೆ. ಈ ಪರಿಸ್ಥಿತಿಗಳು ಮೆದುಳಿನ ಆರೋಗ್ಯದ ಮೇಲೆ ಪರೋಕ್ಷ ಪರಿಣಾಮಗಳನ್ನು ಬೀರಬಹುದು. ಏಕೆಂದರೆ ಅವುಗಳು ಅರಿವಿನ ಸಾಮರ್ಥ್ಯವನ್ನು ಕುಗ್ಗಿಸುವುದು ಮತ್ತು ಅಲ್ಜೈಮರ್ಸ್‌ನಂತಹ ನ್ಯೂರೋ ಡಿಜೆನೆರೆಟಿವ್ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತವೆ.

ಹೆಚ್ಚು ಹೊತ್ತು ಕಂಪ್ಯೂಟರ್‌ ಅಥವಾ ಲ್ಯಾಪ್‌ಟಾಪ್‌ ಮುಂದೆ ಕುಳಿತು ಕೆಲಸ ಮಾಡುವುದರಿಂದ ಇಂತಹ ಮಾನಸಿಕ ಸಮಸ್ಯೆಗಳು ಮಾತ್ರವಲ್ಲ, ಹಲವು ರೀತಿಯ ದೈಹಿಕ ಸಮಸ್ಯೆಗಳು ಎದುರಾಗುತ್ತವೆ. ಆ ಕಾರಣಕ್ಕೆ ಪ್ರತಿದಿನ ಕನಿಷ್ಠ ಅರ್ಧ ಗಂಟೆ ವ್ಯಾಯಾಮ, ವಾಕಿಂಗ್‌ನಂತಹ ದೈಹಿಕ ಚಟುವಟಿಕೆಗೆ ಒತ್ತು ನೀಡಿ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ