logo
ಕನ್ನಡ ಸುದ್ದಿ  /  ಜೀವನಶೈಲಿ  /  Yoga Day 2023: ಅಂತಾರಾಷ್ಟ್ರೀಯ ಯೋಗ ದಿನ; ಪ್ರಾಣಾಯಾಮದಿಂದ ಮನಸ್ಸಿನ ನಿಯಂತ್ರಣ ಸಾಧ್ಯ; ಸರಳ ಪ್ರಾಣಾಯಾಮಗಳು ಇವು

Yoga Day 2023: ಅಂತಾರಾಷ್ಟ್ರೀಯ ಯೋಗ ದಿನ; ಪ್ರಾಣಾಯಾಮದಿಂದ ಮನಸ್ಸಿನ ನಿಯಂತ್ರಣ ಸಾಧ್ಯ; ಸರಳ ಪ್ರಾಣಾಯಾಮಗಳು ಇವು

Raghavendra M Y HT Kannada

Jun 21, 2023 10:01 AM IST

google News

ಸರಳ ಪ್ರಾಣಾಯಾಮಗಳಿಂದ ಆಗುವ ಪ್ರಯೋಜನಗಳನ್ನು ತಿಳಿಯಿರಿ (Flickr)

  • ಪ್ರಾಣಾಯಾಮ ಎಂದರೆ ಪ್ರಾಣ್ ಎಂಬುದು ಜೈವಿಕ ಶಕ್ತಿ ಹಾಗೂ ಆಯಮ ಎಂದರೆ ನಿಯಂತ್ರಣ. ದೇಹದ ಪ್ರಾಣವನ್ನು ಕ್ರಮಬದ್ಧಗೊಳಿಸುವ ಪ್ರಮುಖ ಶಕ್ತಿ. ಸರಳ ಪ್ರಾಣಾಯಾಮಗಳು ಮತ್ತು ಅವುಗಳಿಂದಾಗುವ ಪ್ರಯೋಜಗಳನ್ನು ತಿಳಿಯಿರಿ.

ಸರಳ ಪ್ರಾಣಾಯಾಮಗಳಿಂದ ಆಗುವ ಪ್ರಯೋಜನಗಳನ್ನು ತಿಳಿಯಿರಿ (Flickr)
ಸರಳ ಪ್ರಾಣಾಯಾಮಗಳಿಂದ ಆಗುವ ಪ್ರಯೋಜನಗಳನ್ನು ತಿಳಿಯಿರಿ (Flickr)

ಬೆಂಗಳೂರು: ಇಂದು (ಜೂನ್ 21, ಬುಧವಾರ) ಅಂತಾರಾಷ್ಟ್ರೀಯ ಯೋಗ (International Yoga Day), ದಿನವಾಗಿದ್ದು, ಜಗತ್ತಿನಾದ್ಯಂತ ಯೋಗಾಭ್ಯಾಸಗಳ ಪ್ರದರ್ಶನ ಮೂಲಕ ಯೋಗ ದಿನವನ್ನು ಆಚರಿಸಲಾಗುತ್ತಿದೆ. ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕವಾಗಿ ಮನಸು ಮತ್ತು ದೇಹದ ನಡುವೆ ಏಕಾಗ್ರತೆ ಭಾವನೆಯನ್ನು ಯೋಗದ ಮೂಲಕ ಹೆಚ್ಚಿಸಿಕೊಳ್ಳಬಹುದು.

ಯೋಗ ಮಾಡುವುದರಿಂದ ಅದ್ಭುತ ಪ್ರಯೋಜನೆಗಳನ್ನು ಪಡೆಯಬಹುದು. ಯೋಗವು ಜಾಗತಿಕ ಮನ್ನಣೆಯನ್ನು ಪಡೆದಿದ್ದು, ಇದೀಗ ಫ್ಯಾಶನ್ ಆಗಿ ಮಾರ್ಪಟಿದೆ. ಜೀವನಕ್ಕೆ ಯೋಗದ ಅಗತ್ಯವನ್ನು ಜನರು ಅರಿತುಕೊಳ್ಳುತ್ತಿದ್ದು, ಎಲ್ಲರ ಗಮನ ಸೆಳೆಯುತ್ತಿದೆ. ಪ್ರಾಚೀನ ಭಾರತೀಯ ವಿಜ್ಞಾನ ಭಾಗ ಅಂತಲೂ ಯೋಗವನ್ನು ಕರೆಯಲಾಗುತ್ತಿದೆ.

ಯೋಗದಲ್ಲಿ ಬರುವ ಸರಳ ಪ್ರಾಣಾಯಾಮಗಳನ್ನು (Pranayama) ತಿಳಿಯುವ ಮುನ್ನ ಯೋಗದ ಬಗ್ಗೆ ತಿಳಿದಿರಬೇಕು. ಯೋಗ ಎಂಬ ಪದ ಯುಜ್ ಎಂಬ ಸಂಸ್ಕೃತ ಪದದಿಂದ ಹುಟ್ಟಿಕೊಂಡಿದೆ. ಇದರ ಅರ್ಥ ಮನಸ್ಸು, ದೇಹ ಮತ್ತ ಆತ್ಮಕ್ಕೆ ಶಕ್ತಿಯ ಸೇರ್ಪಡೆಯಾಗಿದೆ. ಇದು ಮನಸ್ಸಿನ ಶಾಂತಿ ಹಾಗೂ ಆತ್ಮಸಾಕ್ಷಾತ್ಕಾರದ ಕಡೆಗೆ ಮನಸ್ಸನ್ನು ನಿಶ್ಚಲಗೊಳಿಸುತ್ತದೆ. ದೈಹಿಕ ಸ್ವಾಸ್ಥ್ಯವನ್ನು ಪಡೆಯಲು ಯೋಗ ಸಹಾಯ ಮಾಡುತ್ತದೆ.

ಪ್ರಾಣಾಯಾಮ ಎಂದರೆ ಪ್ರಾಣ್ ಎಂಬುದು ಜೈವಿಕ ಶಕ್ತಿ ಹಾಗೂ ಆಯಮ ಎಂದರೆ ನಿಯಂತ್ರಣ. ದೇಹದ ಪ್ರಾಣವನ್ನು ಕ್ರಮಬದ್ಧಗೊಳಿಸುವ ಪ್ರಮುಖ ಶಕ್ತಿ ಎಂದು ಯೋಗ ತಜ್ಞರು ವಿಶ್ಲೇಷಿಸುತ್ತಾರೆ.

ಪ್ರಾಣಾಯಾಮ ಅಭ್ಯಾಸಿಸಲು ಇರಬೇಕು ಪ್ರಮುಖ ಅಂಶಗಳು

ಪ್ರಾಣಾಯಾಮಕ್ಕೆ ಗಾಳಿ ವಾತಾವರಣ ಉತ್ತಮವಾಗಿರಬೇಕು

ಬೆಳಗ್ಗೆ ಅಥವಾ ಸಂಜೆ ಪ್ರಾಣಾಯಾಮಕ್ಕೆ ಸೂಕ್ತ ಸಮಯ

ಪ್ರತಿದಿನ ಸುಮಾರು 15 ನಿಮಿಷ ಪ್ರಾಣಾಯಾಮ ಮಾಡಬೇಕು

ಪ್ರಾಣಾಮಾಯ ಮಾಡುವ ಸ್ಥಳ ಸ್ವಚ್ಛವಾಗಿರಬೇಕು

ಪ್ರತಿದಿನ ಒಂದೇ ಸ್ಥಳ, ಸಮಯದಲ್ಲಿ ಅಭ್ಯಾಸ ಮಾಡುವುದನ್ನ ರೂಢಿಸಿಕೊಳ್ಳಿ

ಖಾಲಿ ಹೊಟ್ಟೆಯಲ್ಲಿ ಪ್ರಾಣಾಯಾಮ ಮಾಡಬೇಕು

ಪ್ರಾಣಾಯಾದಿಂದ ಆಗುವ ಪ್ರಯೋಜನಗಳು:

ಇದು ಶ್ವಾಸಕೋಶಕ್ಕೆ ತುಂಬಾ ಪ್ರಯೋಜನಕಾರಿಯಾಗಿದ್ದು, ತೂಕ ನಷ್ಟ, ಹೃದಯದ ಆರೋಗ್ಯ ಸುಧಾರಣೆ, ಮಾನಸಿಕ ಏಕಾಗ್ರತೆಯನ್ನು ಸುಧಾರಿಸುತ್ತದೆ. ಖಿನ್ನತೆಯನ್ನು ದೂರ ಮಾಡಲಿದ್ದು, ಜೀರ್ಣಕ್ರಿಯೆಯನ್ನು ಸುಲಭಗೊಳಿಸುತ್ತದೆ.

ಸರಳ ಪ್ರಾಣಾಯಾಮಗಳು

ನಾಡಿಶೋಧನ ಪ್ರಾಣಾಮಯ: ನಾಡಿಶೋಧನ ಪ್ರಾಣಾಯಾಮವನ್ನು ಅನುಲೋಮ್-ಆಂಟೋನಿಮ್ ಎಂದು ಕರೆಯಲಾಗುತ್ತದೆ. ಈ ಪ್ರಾಣಾಯಾಮದಲ್ಲಿ ಎಡ ಮೂಗಿನ ರಂದ್ರದ ಮೂಲಕ ಉಸಿರನ್ನು ಎಳೆದುಕೊಂಡು ಬಲ ಮೂಗಿನಲ್ಲಿ ನಿಧಾನವಾಗಿ ಬಿಡುವುದಾಗಿದೆ. ಹೀಗೆ ಮಾಡುವುದರಿಂದ ಆತಂಕ, ಒತ್ತಡ ಕಡಿಮೆಯಾಗುತ್ತದೆ. ಏಕಾಗ್ರತೆ ಹಾಗೂ ಶಾಂತಿಯನ್ನು ಹೆಚ್ಚಿಸುತ್ತದೆ. ಪ್ರತಿರಕ್ಷಣಾ ವ್ಯವಸ್ಥೆಯನ್ನು ಇದು ಬಲಪಡಿಸುತ್ತದೆ.

ಭಸ್ತ್ರಿಕಾ ಪ್ರಾಣಾಯಾಮ: ಈ ಅಭ್ಯಾಸದಲ್ಲಿ ಉಸಿರಾಟವನ್ನು ವೇಗವಾಗಿ ಮಾಡಲಾಗುತ್ತದೆ. ಉಸಿರನ್ನು ನಿಲ್ಲಿಸಿ ಬಲವಾಡಿ ಬಿಡುಗಡೆ ಮಾಡಲಾಗುತ್ತದೆ. ಇದರಿಂದ ಹೊಟ್ಟೆಯ ಕೊಬ್ಬು, ತೂಕ ನಷ್ಟ, ಅಸ್ತಮಾ ಹಾಗೂ ಗಂಟಲಿನ ಉರಿಯೂತ ಇದ್ದರೆ ಕಡಿಮೆಯಾಗುತ್ತದೆ.

ಕಪಾಲಭಾತಿ ಪ್ರಾಣಾಯಾಮ: ಕಪಾಲ್‌ ಎಂದರೆ ತಲೆಬುರುಡೆ. ಭಾತಿ ಎಂದರೆ ಹೊಳೆಯುವುದು. ಕಪಾಲಭಾತಿಯು ಒಂದು ರೀತಿಯ ಪ್ರಾಣಾಯಾಮವಾಗಿದ್ದು, ಇದು ಕುಂಡಲಿನಿ ಶಕ್ತಿಯನ್ನು ಜಾಗೃತಗೊಳಿಸಲು ಸಹಾಯ ಮಾಡುತ್ತದೆ. ಹಣೆಯ ಹೊಳೆಯುವ ಉಸಿರಾಟದ ತಂತ್ರವಾಗಿದೆ. ಇದು ನಿಮ್ಮ ದೇಹದಲ್ಲಿ ವಿಷಕಾರಿ ಗಾಳಿಯನ್ನು ಹೊರಹಾಕುತ್ತದೆ. ಸುಖಾಸನ ಅಥವಾ ಸುಲಭ ಭಂಗಿಯಲ್ಲಿ ಆರಾಮವಾಗಿ ಕುಳಿತುಕೊಂಡು ನಿಮ್ಮ ಮೊಕಾಲುಗಳ ಮೇಲೆ ನಿಮ್ಮ ಅಂಗೈಗಳನ್ನು ಇರಿಸಿ. ಬಳಿಕ ನಿಮ್ಮ ಎರಡು ಮೂಗಿನ ಹೊಳ್ಳೆಗಳಿಂದ ಆಳವಾಗಿ ಉಸಿರಾಡಿ. ನಿಮ್ಮ ಎರಡೂ ಶ್ವಾಸಗಳನ್ನು ಗಾಳಿಯಿಂದ ತುಂಬಿಸಿ. ಉಸಿರಾಟ ನಿಧಾನವಾಗಿ ಮತ್ತು ಸ್ಥಿರವಾಗಿರಬೇಕು.

ಉಜ್ಜಯಿ ಪ್ರಾಣಾಯಾಮ: ಎರಡೂ ಮೂಗಿನ ಹೊಳ್ಳೆಗಳಿಂದ ಉಸಿರನ್ನು ಎಳೆದುಕೊಂಡು ಕೆಲ ಸೆಕೆಂಡ್‌ಗಳು ಉಸಿರಾಟ ನಿಲ್ಲಿಸಿ ಹೊಳ್ಳೆಗಳಿಂದ ನಿಧಾನವಾಗಿ ಎಳೆದುಕೊಂಡಿದ್ದ ಉಸಿರು ಎಡಮೂಗಿನಿಂದ ನಿಧಾನವಾಗಿ ಬಿಡಬೇಕು. ಥೈರಾಯ್ಡ್ ರೋಗಿಗಳಿಗೆ ಇದು ಸೂಕ್ತವಾಗಿದೆ. ಇದು ದೇಹವನ್ನು ತಂಪಾಗಿಸುತ್ತದೆ.

ಸೂರ್ಯಭೇದನ ಪ್ರಾಣಾಯಾಮ: ಬಲ ಮೂಗಿನ ಹೊಳ್ಳೆಯಿಂದ ಉಸಿರನ್ನು ತೆಗೆದುಕೊಂಡು ನಂತರ ಉಸಿರನ್ನು ನಿಲ್ಲಿಸಿ ಎಡ ಮೂಗಿನ ಹೊಳ್ಳೆಯಲ್ಲಿ ಬಿಡುವುದು. ಹೀಗೆ ಮಾಡುವುದರಿಂದ ತಲೆ ನೋವು ಕಡಿಮೆಯಾಗುತ್ತದೆ. ಕಡಿಮೆ ರಕ್ತದೊತ್ತಡ ಹಾಗೂ ಉಸಿರಾಟದ ಸಮಸ್ಯೆಗಳಿಗೆ ಸೂರ್ಯಭೇದನ ಪ್ರಾಣಾಮಾಯ ಸಹಕಾರಿಯಾಗಿದೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ