ಜಪಾನ್‌ನಲ್ಲಿ 7.6 ತೀವ್ರತೆಯ ಪ್ರಬಲ ಭೂಕಂಪ; ಸುನಾಮಿಯ ಎಚ್ಚರಿಕೆ
Jan 01, 2024 02:03 PM IST
ಜಪಾನ್‌ನಲ್ಲಿ ತೀವ್ರ ಭೂಕಂಪನ ಸಂಭವಿಸಿದೆ
ಜಪಾನ್‌ನಲ್ಲಿ 7.6 ತೀವ್ರತೆಯ ಪ್ರಬಲ ಭೂಕಂಪನ ಸಂಭವಿಸಿರುವ ವರದಿಯಾಗಿದೆ.
ಟೋಕಿಯೋ: ಜಪಾನ್‌ನಲ್ಲಿ ಪ್ರಬಲ ಭೂಕಂಪವಾಗಿದ್ದು (Earthquake), ಭಾರಿ ನಷ್ಟದ ಆತಂಕದ ವಾತಾವರಣ ನಿರ್ಮಾಣವಾಗಿದೆ. ರಿಕ್ಟರ್ ಮಾಪಕದಲ್ಲಿ ಭೂಕಂಪನದ ತೀವ್ರತೆ 7.6 ರಷ್ಟು ದಾಖಲಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಸುನಾಮಿಯ ಎಚ್ಚರಿಕೆ ನೀಡಿದ್ದಾರೆ.
ಇಶಿಕಾವಾ, ನಿಗಾಟಾ ಹಾಗೂ ಟೊಯಾಮಾ ಪ್ರದೇಶಗಳ ಕರಾವಳಿಯಲ್ಲಿನ ಪಶ್ಚಿಮ ಭಾಗದಲ್ಲಿ ಪ್ರಬಲ ಭೂಕಂಪನ ಸಂಭವಿಸಿದೆ. ಹೀಗಾಗಿ ಸುನಾಮಿಯ ಎಚ್ಚರಿಕೆ ನೀಡಲಾಗಿದೆ ಎಂದು ಜಪಾನ್ ಹವಾಮಾನ ಸಂಸ್ಥೆ ಹೇಳಿದೆ.
ಪರಮಾಣು ವಿದ್ಯುತ್ ಸ್ಥಾವರದಲ್ಲಿ ಪರಿಶೀಲಿಸಲಾಗುತ್ತಿದೆ ಎಂದು ಹೊಕುರಿಕು ಎಲೆಕ್ಟ್ರಿಕ್ ಪವರ್-ಎಚ್‌ಇಪಿ ಸಂಸ್ಥೆ ತಿಳಿಸಿರುವುದಾಗಿ ಜಪಾನ್ ಸರ್ಕಾರಿ ಟಿವಿ ಎನ್‌ಎಚ್‌ಕೆ ವರದಿ ಮಾಡಿದೆ. ಇಶಿಕಾವಾ ಮತ್ತು ಇದರ ಸಮೀಪದ ಪ್ರಾಂತ್ಯಗಳಲ್ಲಿ ಪ್ರಾಥಮಿಕವಾಗಿ 7.4 ತೀವ್ರತೆಯ ಭೂಕಂಪ ದಾಖಲಾಗಿತ್ತು ಎಂದು ಜಪಾನ್‌ನ ಹವಾಮಾನಶಾಸ್ತ್ರ ವಿವರಿಸಿದೆ.
ಪ್ರಬಲ ಭೂಕಂಪನ ಹಿನ್ನೆಲೆಯಲ್ಲಿ ನೀರಿನ ಅಲೆಗಳು 5 ಮೀಟರ್ ವರೆಗೆ ತಲುಪಬಹುದು, ಜನರು ಸಾಧ್ಯವಾದಷ್ಟು ಎತ್ತರದ ಭೂಪ್ರದೇಶ ಅಥವಾ ಕಟ್ಟಡಗಳ ಮೇಲ್ಭಾಗಕ್ಕೆ ಹೋಗುವಂತೆ ಸೂಚಿಸಲಾಗಿದೆ. ಪೂರ್ವ ಕರಾವಳಿಯ ಕೆಲವು ಭಾಗಗಳ ಸಮುದ್ರದಲ್ಲಿ ಅಲೆಗಳ ಮಟ್ಟವು ಹೆಚ್ಚಾಗಬಹುದು ಎಂದು ದಕ್ಷಿಣ ಕೊರಿಯಾದ ಹವಾಮಾನ ಸಂಸ್ಥೆ ತಿಳಿಸಿದೆ.
ವಿಭಾಗ