logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Aadhaar-pan Link: ಆಧಾರ್‌ ಪ್ಯಾನ್‌ ಲಿಂಕ್‌ಗೆ ನಾಳೆ ಕೊನೆದಿನ, 1000 ರೂ ದಂಡಕಟ್ಟಿ ಲಿಂಕ್‌ ಮಾಡೋಲ್ಲ ಅಂತಿರಾ, ಪರಿಣಾಮಗಳ‌ ಬಗ್ಗೆ ತಿಳಿಯಿರಿ

Aadhaar-PAN link: ಆಧಾರ್‌ ಪ್ಯಾನ್‌ ಲಿಂಕ್‌ಗೆ ನಾಳೆ ಕೊನೆದಿನ, 1000 ರೂ ದಂಡಕಟ್ಟಿ ಲಿಂಕ್‌ ಮಾಡೋಲ್ಲ ಅಂತಿರಾ, ಪರಿಣಾಮಗಳ‌ ಬಗ್ಗೆ ತಿಳಿಯಿರಿ

Praveen Chandra B HT Kannada

Jun 29, 2023 10:42 AM IST

google News

Aadhaar-PAN link: ಆಧಾರ್‌ ಪಾನ್‌ ಲಿಂಕ್‌ಗೆ ನಾಳೆ ಕೊನೆದಿನ

  • Aadhaar-PAN linking deadline: ಆಧಾರ್‌ ಮತ್ತು ಪಾನ್‌ ಕಾರ್ಡ್‌ ಲಿಂಕ್‌ ಮಾಡಲು ನಾಳೆ ಅಂದರೆ ಜೂನ್‌ 30 ಕೊನೆಯ ದಿನವಾಗಿದೆ. ಜೂನ್‌ 30ರವರೆಗೆ 1000 ರೂಪಾಯಿ ದಂಡದೊಂದಿಗೆ ಆಧಾರ್‌ ಪಾನ್‌ ಲಿಂಕ್‌ ಮಾಡಬೇಕಾಗುತ್ತದೆ. ದಂಡ ಕಟ್ಟಿಯೂ ಪಾನ್‌ ಆಧಾರ್‌ ಲಿಂಕ್‌ ಮಾಡದೆ ಇದ್ದರೆ ಟಿಡಿಎಸ್‌ ಮತ್ತು ಟಿಸಿಎಸ್‌ ದರವೂ ಹೆಚ್ಚಾಗಿ ನಿಮಗೆ ನಷ್ಟವಾಗಲಿದೆ.

Aadhaar-PAN link: ಆಧಾರ್‌ ಪಾನ್‌ ಲಿಂಕ್‌ಗೆ ನಾಳೆ ಕೊನೆದಿನ
Aadhaar-PAN link: ಆಧಾರ್‌ ಪಾನ್‌ ಲಿಂಕ್‌ಗೆ ನಾಳೆ ಕೊನೆದಿನ (Reuters)

Aadhaar-PAN linking deadline: ಆಧಾರ್‌ ಮತ್ತು ಪಾನ್‌ ಕಾರ್ಡ್‌ ಲಿಂಕ್‌ ಮಾಡಲು ನಾಳೆ ಅಂದರೆ ಜೂನ್‌ 30 ಕೊನೆಯ ದಿನವಾಗಿದೆ. ಜೂನ್‌ 30ರವರೆಗೆ 1000 ರೂಪಾಯಿ ದಂಡದೊಂದಿಗೆ ಆಧಾರ್‌ ಪಾನ್‌ ಲಿಂಕ್‌ ಮಾಡಬೇಕಾಗುತ್ತದೆ. ದಂಡ ಕಟ್ಟಿಯೂ ಪಾನ್‌ ಆಧಾರ್‌ ಲಿಂಕ್‌ ಮಾಡದೆ ಇದ್ದರೆ ಟಿಡಿಎಸ್‌ ಮತ್ತು ಟಿಸಿಎಸ್‌ ದರವೂ ಹೆಚ್ಚಾಗಿ ನಿಮಗೆ ನಷ್ಟವಾಗಲಿದೆ. ಇಂದಿನ ಲೇಖನದಲ್ಲಿ ಆಧಾರ್‌ ಪಾನ್‌ ಕಾರ್ಡ್‌ ಲಿಂಕ್‌ ಮಾಡುವ ಅಗತ್ಯ, ಆಧಾರ್‌ ಪಾನ್‌ ಕಾರ್ಡ್‌ ಲಿಂಕ್‌ ಮಾಡುವುದು ಹೇಗೆ? ಲಿಂಕ್‌ ಮಾಡದೆ ಇದ್ದರೆ ಪರಿಣಾಮ ಏನಾಗುತ್ತದೆ ಎಂದು ತಿಳಿದುಕೊಳ್ಳೋಣ.

ಪಾನ್‌- ಆಧಾರ್‌ ಲಿಂಕ್‌ ಮಾಡಲು ಡೆಡ್‌ಲೈನ್‌

ಆದಾಯ ತೆರಿಗೆ ನಿಯಮದ ಪ್ರಕಾರ ಪಾನ್‌ ಮತ್ತು ಆಧಾರ್‌ ಲಿಂಕ್‌ ಮಾಡುವುದು ಕಡ್ಡಾಯವಾಗಿದೆ. ಈ ಹಿಂದೆ ಹಲವು ಬಾರಿ ಆಧಾರ್‌ ಮತ್ತು ಪಾನ್‌ ಲಿಂಕ್‌ ಮಾಡಲು ಆದಾಯ ತೆರಿಗೆ ಇಲಾಖೆಯು ಅವಕಾಶ ನೀಡಿತ್ತು. ಹಲವು ಡೆಡ್‌ಲೈನ್‌ ನೀಡಿತ್ತು. ಆ ಡೆಡ್‌ಲೈನ್‌ಗಳೆಲ್ಲವೂ ಮುಗಿದ ಬಳಿಕ 1000 ರೂಪಾಯಿ ದಂಡ ಪಾವತಿಯೊಂದಿಗೆ ಪಾನ್‌ ಆಧಾರ್‌ ಲಿಂಕ್‌ ಮಾಡಲು ಕೊನೆಯ ಅವಕಾಶ ನೀಡಿತ್ತು. ಈ ರೀತಿ ದಂಡ ಪಾವತಿಯೊಂದಿಗೆ ಆಧಾರ್‌ ಪಾನ್‌ ಲಿಂಕ್‌ ಮಾಡಲು ನಾಳೆ ಅಂದರೆ ಜೂನ್‌ 30 ಕೊನೆಯ ದಿನವಾಗಿದೆ. ನೀವು ಇನ್ನೂ ಆಧಾರ್‌ ಪಾನ್‌ ಕಾರ್ಡ್‌ ಲಿಂಕ್‌ ಮಾಡದೆ ಇದ್ದರೆ ನಾಳೆಯೊಳಗೆ 1000 ರೂಪಾಯಿ ದಂಡದೊಂದಿಗೆ ಲಿಂಕ್‌ ಮಾಡಿ.

"ಪಾನ್‌ ಕಾರ್ಡ್‌ ಹೊಂದಿರುವವರೇ ಗಮನಿಸಿ, ಪಾನ್‌ ಆಧಾರ್‌ ಲಿಂಕ್‌ ಮಾಡಿ! ಆದಾಯ ತೆರಿಗೆ ಕಾಯಿದೆ 1961ರ ಪ್ರಕಾರ ಪಾನ್‌ ಕಾರ್ಡ್‌ ಹೊಂದಿರುವ ಎಲ್ಲರೂ ಕಡ್ಡಾಯವಾಗಿ ಆಧಾರ್‌-ಪಾನ್‌ ಲಿಂಕ್‌ ಮಾಡಬೇಕು. ಪಾನ್‌ ಮತ್ತು ಆಧಾರ್‌ ಕಾರ್ಡ್‌ ಅನ್ನು 30.06.2023 ದಿನಾಂಕದ ಮೊದಲು ಲಿಂಕ್‌ ಮಾಡಿ. ದಯವಿಟ್ಟು ಇಂದೇ ನಿಮ್ಮ ಪಾನ್‌ ಮತ್ತು ಆಧಾರ್‌ ಲಿಂಕ್‌ ಮಾಡಿ" ಎಂದು ಆದಾಯ ತೆರಿಗೆ ಇಲಾಖೆ ಟ್ವೀಟ್‌ ಮಾಡಿದೆ.

ಆದಾಯ ತೆರಿಗೆ ನಿಯಮಗಳ ಪ್ರಕಾರ ಯಾರು ಕೂಡ ಒಂದು ಪಾನ್‌ ಕಾರ್ಡ್‌ಗಿಂತ ಹೆಚ್ಚಿನ ಪಾನ್‌ ಕಾರ್ಡ್‌ ಹೊಂದಿರುವಂತೆ ಇಲ್ಲ. ಎಲ್ಲಾದರೂ ಯಾರಾದರೂ ಒಂದು ಪಾನ್‌ ಕಾರ್ಡ್‌ಗಿಂತ ಹೆಚ್ಚು ಪಾನ್‌ ಕಾರ್ಡ್‌ ಹೊಂದಿದ್ದರೆ ಅವರು 10000 ರೂಪಾಯಿ ದಂಡ ಪಾವತಿಸಬೇಕು.

ಯಾರು ಆಧಾರ್‌ ಮತ್ತು ಪಾನ್‌ ಲಿಂಕ್‌ ಮಾಡಬೇಕು?

ಆದಾಯ ತೆರಿಗೆ ಕಾಯಿದೆಯ ಸೆಕ್ಷನ್‌ 139ಎಎ ಪ್ರಕಾರ ಪ್ರತಿಯೊಬ್ಬರು, ಯಾರು ಕಾಯಂ ಖಾತೆ ಸಂಖ್ಯೆ (ಪಾನ್‌) ಹೊಂದಿರುವರೋ ಅವರೆಲ್ಲರೂ ಪಾನ್‌-ಆಧಾರ್‌ ಲಿಂಕ್‌ ಮಾಡಬೇಕು. ಇತ್ತೀಚೆಗೆ ಪಾನ್‌ ಕಾರ್ಡ್‌ ಪಡೆದವರ ಪಾನ್‌ ಕಾರ್ಡ್‌ಗೆ ಆಧಾರ್‌ ಲಿಂಕ್‌ ಆಗಿರುತ್ತದೆ. ಈ ರೀತಿ ಲಿಂಕ್‌ ಆಗದೆ ಇರುವವರು ನಿಗದಿತ ನಮೂನೆ ಮತ್ತು ಕ್ರಮದಲ್ಲಿ ಆಧಾರ್‌ ಪಾನ್‌ ಕಾರ್ಡ್‌ ಲಿಂಕ್‌ ಮಾಡಬೇಕು.

ಪಾನ್‌-ಆಧಾರ್‌ ಲಿಂಕ್‌ ಮಾಡದೆ ಇದ್ದರೆ ಏನಾಗುತ್ತದೆ?

  1. ನಿಮ್ಮ ಪಾನ್‌ ಕಾರ್ಡ್‌ ಅನೂರ್ಜಿತ ಅಥವಾ ಕಾರ್ಯನಿರ್ವಹಿಸುವುದಿಲ್ಲ.
  2. ನೀವು ಪಡೆಯಬೇಕಿರುವ ತೆರಿಗೆ ರಿಫಂಡ್‌ ಮತ್ತು ಬಡ್ಡಿಗಳು ದೊರಕುವುದಿಲ್ಲ.
  3. ದೊಡ್ಡ ಮೊತ್ತದ ಟಿಡಿಎಸ್‌ ಕಡಿತವಾಗುತ್ತದೆ.
  4. ದೊಡ್ಡ ಮೊತ್ತದ ಟಿಸಿಎಸ್‌ ಕಡಿತವಾಗುತ್ತದೆ.

ಪಾನ್‌- ಆಧಾರ್‌ ಲಿಂಕ್‌ ಹೇಗೆ?

  1. ಮೊದಲು www.incometax.gov.in/iec/foportal ವೆಬ್‌ಸೈಟ್‌ಗೆ ಹೋಗಿ
  2. ಲಾಗಿನ್‌ ಅಗಿ
  3. ಡ್ಯಾಷ್‌ಬೋರ್ಡ್‌ನ ಪ್ರೊಫೈಲ್‌ ವಿಭಾಗದಲ್ಲಿ ಲಿಂಕ್‌ ಆಧಾರ್‌ ಟು ಪಾನ್‌ ಎಂಬ ಆಯ್ಕೆ ದೊರಕುತ್ತದೆ. ಅದನ್ನು ಕ್ಲಿಕ್‌ ಮಾಡಿ
  4. ನಿಮ್ಮ ಪಾನ್‌ ಮತ್ತು ಆಧಾರ್‌ ಸಂಖ್ಯೆ ನಮೂದಿಸಿ
  5. ಪಾನ್‌ ಸಂಖ್ಯೆ ನಮೂದಿಸಿ. ಪಾನ್‌ ಕಾರ್ಡ್‌ ಸಂಖ್ಯೆ ಖಚಿತಪಡಿಸಿ. ಮೊಬೈಲ್‌ಗೆ ಒಟಿಪಿ ಬರುತ್ತದೆ.
  6. ಒಟಿಪಿ ವೇರಿಫಿಕೇಷನ್‌ ಮಾಡಿ, ಇ-ಪಾವತಿ ಟ್ಯಾಕ್ಸ್‌ ಪುಟಕ್ಕೆ ರಿಡೈರೆಕ್ಟ್‌ ಆಗುತ್ತದೆ.
  7. - ಪ್ರೊಸಿಡ್‌ ಕ್ಲಿಕ್‌ ಮಾಡಿ.
  8. - ಎವೈ ಅನ್ನು 2024-25 ಎಂದು ಸೆಲೆಕ್ಟ್‌ ಮಾಡಿ. ನಿಗದಿತ ಮೊತ್ತ ಪಾವತಿಸಿ.

ಗಮನಿಸಿ, ಆಧಾರ್‌ ಮತ್ತು ಪಾನ್‌ ಲಿಂಕ್‌ ಮಾಡಲು ನಾಳೆ ಕೊನೆಯ ದಿನವಾಗಿದೆ. ಹಾಗಂತ, ನಾಳೆಯವರೆಗೆ ಕಾಯಬೇಡಿ. ಪಾನ್‌- ಆಧಾರ್‌ ಕಾರ್ಡ್‌ ಲಿಂಕ್‌ ಮಾಡುವ ವೆಬ್‌ಸೈಟ್‌ಗೆ ಅತ್ಯಧಿಕ ಸಂಖ್ಯೆಯ ಜನರು ಭೇಟಿ ನೀಡುವುದರಿಂದ ಸರ್ವರ್‌ ಸ್ಲೋ ಅಥವಾ ಡೌನ್‌ ಇರಬಹುದು. ಹೀಗಾಗಿ, ಈಗಲೇ ಲಿಂಕ್‌ ಮಾಡಲು ಮುಂದಾಗಿ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ