logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Ai Powered Satellite: ಚೀನಾದಿಂದ ಎಐ ಚಾಲಿತ ಉಪಗ್ರಹ ಪ್ರಯೋಗ; ಭಾರತ, ಜಪಾನ್‌ ಮೇಲೆ ʻಎಐ ಕಣ್ಣುʼ

AI Powered Satellite: ಚೀನಾದಿಂದ ಎಐ ಚಾಲಿತ ಉಪಗ್ರಹ ಪ್ರಯೋಗ; ಭಾರತ, ಜಪಾನ್‌ ಮೇಲೆ ʻಎಐ ಕಣ್ಣುʼ

Umesh Kumar S HT Kannada

Apr 19, 2023 03:52 PM IST

google News

Qimingxing 1 ಎಂಬ ಉಪಗ್ರಹವನ್ನು ನೆಲದ ಮೇಲಿಂದಲೇ ಮಾನವನ ಹಸ್ತಕ್ಷೇಪವಿಲ್ಲದೆ ಎಐ ಮೂಲಕ ನಿಯಂತ್ರಿಸಲಾಯಿತು.

  • AI Powered Satellite: ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌  ಭಾರತದ ಆ ನಿರ್ದಿಷ್ಟ ಸ್ಥಳಗಳನ್ನು ಯಾಕೆ ಆಯ್ಕೆ ಮಾಡಿದೆ ಎಂಬುದರ ಕುರಿತು ವಿಜ್ಞಾನಿಗಳು ಯಾವುದೇ ವಿವರಣೆಯನ್ನು ನೀಡಿಲ್ಲ ಎಂದು ಚೀನಾದ ಮಾಧ್ಯಮ ವರದಿ ಹೇಳಿದೆ.

Qimingxing 1 ಎಂಬ ಉಪಗ್ರಹವನ್ನು ನೆಲದ ಮೇಲಿಂದಲೇ ಮಾನವನ ಹಸ್ತಕ್ಷೇಪವಿಲ್ಲದೆ ಎಐ ಮೂಲಕ ನಿಯಂತ್ರಿಸಲಾಯಿತು.
Qimingxing 1 ಎಂಬ ಉಪಗ್ರಹವನ್ನು ನೆಲದ ಮೇಲಿಂದಲೇ ಮಾನವನ ಹಸ್ತಕ್ಷೇಪವಿಲ್ಲದೆ ಎಐ ಮೂಲಕ ನಿಯಂತ್ರಿಸಲಾಯಿತು. (Shutterstock/Representational HT News)

ಚೀನಾದ ವಿಜ್ಞಾನಿಗಳು (China scientists) ಇತ್ತೀಚೆಗೆ ಪ್ರಾಯೋಗಿಕ ರಿಮೋಟ್ ಸೆನ್ಸಿಂಗ್ ಉಪಗ್ರಹ ( Remote Sensing Satellite AI Powered Satellite)ದ ಸಾಮರ್ಥ್ಯವನ್ನು ವೀಕ್ಷಿಸುವುದಕ್ಕೆ ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ (ಎಐ)ಗೆ ತಾತ್ಕಾಲಿಕವಾದ ಸಂಪೂರ್ಣ ನಿಯಂತ್ರಣವನ್ನು ನೀಡಿದರು. ಇದು ಸ್ಪಷ್ಟವಾಗಿ ಉಪಗ್ರಹವು ಭಾರತ (India) ಮತ್ತು ಜಪಾನ್‌ (Japan)ನ ಮೇಲೆ ಆ ಉಪಗ್ರಹ ಸುಳಿದಾಡುವಂತೆ ಮಾಡಿತು ಎಂದು ವುಹಾನ್‌ ವಿಶ್ವವಿದ್ಯಾಲಯದ ಜಿಯೋಮ್ಯಾಟಿಕ್ಸ್ ಆಂಡ್‌ ಇನ್‌ಫಾರ್ಮೇಶನ್‌ ಸೈನ್ಸ್‌ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನವನ್ನು ಉಲ್ಲೇಖಿಸಿ ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ಹೇಳಿದೆ.

ಇದನ್ನು ಉಲ್ಲೇಖಿಸಿ HTಕನ್ನಡದ ಮಾತೃತಾಣ ಹಿಂದುಸ್ತಾನ್‌ ಟೈಮ್ಸ್‌ ವರದಿ ಮಾಡಿದ್ದು, Qimingxing 1 ಎಂಬ ಉಪಗ್ರಹವು ಮಾನವನ ಹಸ್ತಕ್ಷೇಪವಿಲ್ಲದೆಯೇ ಭೂ-ಆಧಾರಿತ AI ನಿಂದ ನಿಯಂತ್ರಿಸಲ್ಪಟ್ಟಿದೆ. ಇದು ಭೂಮಿಯ ಮೇಲಿನ ಕೆಲವು ಸ್ಥಳಗಳನ್ನು ಆರಿಸಿ ಅದನ್ನು ಹತ್ತಿರದಿಂದ ನೋಡಲು ಆದೇಶಿಸಿತು ಎಂದು ಅಧ್ಯಯನವು ಹೇಳಿದ್ದಾಗಿ ಉಲ್ಲೇಖಿಸಿದೆ.

ಚೀನಾದ ಮಾಧ್ಯಮಗಳ ಪ್ರಕಾರ, ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ಆ ನಿರ್ದಿಷ್ಟ ಸ್ಥಳಗಳನ್ನು ಏಕೆ ಆಯ್ಕೆ ಮಾಡಿದೆ ಎಂಬುದರ ಕುರಿತು ವಿಜ್ಞಾನಿಗಳು ಯಾವುದೇ ವಿವರಣೆಯನ್ನು ನೀಡಿಲ್ಲ. ಭಾರತೀಯ ಸೇನೆಯ ಬಿಹಾರ ರೆಜಿಮೆಂಟ್ ನೆಲೆಗೊಂಡಿರುವ ಬಿಹಾರದ ಪಾಟ್ನಾದಲ್ಲಿ ಉದ್ದೇಶಿತ ಪ್ರದೇಶಗಳನ್ನು ವೀಕ್ಷಿಸಲು ಎಐ ನಿರ್ಧರಿಸಿತು ಎಂದು ವರದಿಯಾಗಿದೆ. ಈ ಉದ್ದೇಶಿತ ಪ್ರದೇಶವು 2020 ರಲ್ಲಿ ಲಡಾಖ್‌ನ ಗಾಲ್ವಾನ್ ಕಣಿವೆಯಲ್ಲಿ ನಡೆದ ಮಾರಣಾಂತಿಕ ಎನ್‌ಕೌಂಟರ್‌ನಲ್ಲಿ ಚೀನಾ ಮಿಲಿಟರಿಯನ್ನು ಭೇಟಿಯಾದ ಅದೇ ಸೇನಾ ಘಟಕ ಇರುವಂಥ ಪ್ರದೇಶವಾಗಿದೆ.

ಯುಎಸ್ ನೌಕಾಪಡೆಯ ಹಡಗುಗಳನ್ನು ಕಾಲಕಾಲಕ್ಕೆ ನಿಗಾವಹಿಸುವ ಅತ್ಯಂತ ಜನನಿಬಿಡ ಬಂದರುಗಳಲ್ಲಿ ಒಂದಾದ ಜಪಾನ್‌ನ ಒಸಾಕಾವನ್ನು ಹತ್ತಿರದಿಂದ ನೋಡುವುದಕ್ಕೂ ಎಐ ಆಸಕ್ತಿಯನ್ನು ತೋರಿಸಿರುವ ಅಂಶ ಅಧ್ಯಯನದಲ್ಲಿ ಉಲ್ಲೇಖವಾಗಿರುವುದಾಗಿ ವರದಿ ಹೇಳಿದೆ.

ಇಲ್ಲಿಯವರೆಗೆ, ಎಐ ತಂತ್ರಜ್ಞಾನವು ಮಾನವ ಆದೇಶಗಳು ಮತ್ತು ಕಾರ್ಯಯೋಜನೆಗಳಿಲ್ಲದೆ ತನ್ನದೇ ಆದ ಕ್ರಮಗಳನ್ನು ತೆಗೆದುಕೊಳ್ಳುತ್ತಿರಲಿಲ್ಲ. ಈ ನಿರೂಪಣೆಯನ್ನು ಬದಲಾಯಿಸಲು ಚೀನಾದ ಸಂಶೋಧಕರು ಬಯಸಿದ್ದರು. ಇದಕ್ಕಾಗಿ ಪ್ರಪಂಚದಾದ್ಯಂತ ಲಭ್ಯ ಡೇಟಾದ ಪಠ್ಯ ಗ್ರಂಥಾಲಯವನ್ನು ರಚಿಸಿದರು. ಡೇಟಾ, ಚಾಟ್‌ಜಿಪಿಟಿಗೆ ತರಬೇತಿ ನೀಡಲು ಹೇಗೆ ಬಳಸಲಾಗುತ್ತದೆ.

ಇದಕ್ಕೆ ಅನುಗುಣವಾಗಿ, ಮಾನವ ನಡವಳಿಕೆಯನ್ನು ಅರ್ಥಮಾಡಿಕೊಳ್ಳಲು ಎಐಗೆ ಅವಕಾಶ ನೀಡುತ್ತದೆ ಮತ್ತು ಪ್ರಸ್ತುತ 'ನಿಷ್ಕ್ರಿಯವಾಗಿ' ಕಕ್ಷೆಯಲ್ಲಿ ಕುಳಿತಿರುವ 260 ಕ್ಕೂ ಹೆಚ್ಚು ರಿಮೋಟ್-ಸೆನ್ಸಿಂಗ್ ಉಪಗ್ರಹಗಳಿಗೆ ನಿರ್ದೇಶನಗಳನ್ನು ನೀಡಲು ಇದು ಅನುವು ಮಾಡಿಕೊಡುತ್ತದೆ ಎಂಬ ನಂಬಿಕೆಯಲ್ಲಿದ್ದಾರೆ ಸಂಶೋಧಕರು.

"ಸೀಮಿತ ಜೀವಿತಾವಧಿಯೊಂದಿಗೆ ಉಪಗ್ರಹಗಳು ದುಬಾರಿಯಾಗಿದೆ. ಹೊಸ ಕಕ್ಷೀಯ ಅಪ್ಲಿಕೇಶನ್‌ಗಳ ಅಭಿವೃದ್ಧಿಯೊಂದಿಗೆ ಅವುಗಳ ಮೌಲ್ಯದಿಂದ ಹೆಚ್ಚಿನದನ್ನು ಸಾಧಿಸುವ ತುರ್ತು ಈಗ ಎದುರಿಗೆ ಇದೆ" ಎಂದು ಸಂಶೋಧಕರು ಎಸ್‌ಸಿಎಂಪಿಗೆ ತಿಳಿಸಿರುವುದಾಗಿ ವರದಿ ಹೇಳಿದೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ