Trump in trouble: ಕ್ಲಾಸಿಫೈಡ್ ದಾಖಲೆಗಳ ಪ್ರಕರಣದಲ್ಲಿ ಸಿಲುಕಿದ ಅಮೆರಿಕಾದ ಮಾಜಿ ಅಧ್ಯಕ್ಷ: ಡೊನಾಲ್ಡ್ ಟ್ರಂಪ್ ವಿರುದ್ದ ದೋಷಾರೋಪಣೆ
Jun 09, 2023 07:30 AM IST
ಸರ್ಕಾರಿ ಕಡತಗಳನ್ನು ಹಿಂದುರಿಗಿಸದ ಪ್ರಕರಣದಲ್ಲಿ ಅಮೆರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಿಲುಕಿದ್ದಾರೆ.
- ನಾಲ್ಕು ವರ್ಷ ಕಾಲ ಅಧ್ಯಕ್ಷರಾಗಿದ್ದ ಡೊನಾಲ್ಡ್ ಟ್ರಂಪ್ 200 ಕ್ಕೂ ಹೆಚ್ಚು ದಾಖಲೆಗಳನ್ನುತೆಗೆದುಕೊಂಡು ಹೋಗಿದ್ದರು. ಜೋ ಬೈಡನ್ ಅಧ್ಯಕ್ಷರಾದ ನಂತರ ಎಲ್ಲಾ ದಾಖಲೆಗಳನ್ನು ಹಿಂದಿರುಗಿಸುವಂತೆ ನ್ಯಾಷನಲ್ ಆರ್ಕೈವ್ಸ್ ಪ್ರಯತ್ನಿಸಿತ್ತು. ಆದರೂ ಟ್ರಂಪ್ ಕಡೆಯಿಂದ ಸೂಕ್ತ ಉತ್ತರ ಬಂದಿರಲಿಲ್ಲ. ನಂತರ ಕೆಲವು ದಾಖಲೆ ನೀಡಿದರೂ ಪೂರ್ಣ ಹಿಂದಿರುಗಿಸಿರಲಿಲ್ಲ
ನ್ಯೂಯಾರ್ಕ್: ಸರ್ಕಾರಿ ಕಡತಗಳನ್ನು ಹಿಂದುರಿಗಿಸದ ಕ್ಲಾಸಿಫೈಡ್ ದಾಖಲೆಗಳ ಪ್ರಕರಣದಲ್ಲಿ ಅಮೆರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಿಲುಕಿದ್ದಾರೆ.
ಅವರ ವಿರುದ್ದ ದೋಷಾರೋಪಣೆ ಹೊರಿಸಲಾಗಿದ್ದು, ವಿಚಾರಣೆಗೆ ಬರುವಂತೆ ಸೂಚಿಸಲಾಗಿದೆ.
ಮುಂದಿನ ವರ್ಷದ ಅಮೆರಿಕಾ ಅಧ್ಯಕ್ಷೀಯ ಚುನಾವಣೆ ನಡೆಯಲಿದ್ದು, ಟ್ರಂಪ್ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿದ್ದಾರೆ. ಚುನಾವಣೆಗೂ ಮುನ್ನ ಅಮೆರಿಕಾದಲ್ಲಿ ನಡೆಯುತ್ತಿರುವ ಈ ಬೆಳವಣಿಗೆಗಳು ಗಮನ ಸೆಳೆಯುತ್ತಿವೆ. ಇದು ಟ್ರಂಪ್‌ಗೆ ಹಿನ್ನಡೆ ಎಂದೇ ವ್ಯಾಖ್ಯಾನಿಸಲಾಗುತ್ತಿದೆ.
ಅಮೆರಿಕಾದ ನ್ಯಾಯಾಂಗ ವಿಭಾಗ ಹೊರಿಸಿರುವ ಏಳು ದೋಷಾರೋಪಣೆ ಪಟ್ಟಿಗಳ ನೊಟೀಸ್ ತಲುಪಿದ ನಂತರ ಪ್ರತಿಕ್ರಿಯಿಸಿರುವ ಟ್ರಂಪ್, ಮಿಯಾಮಿ ನ್ಯಾಯಾಲಯಕ್ಕೆ ಮಂಗಳವಾರ ಬರುವಂತೆ ತಿಳಿಸಲಾಗಿದೆ. ಮಾಜಿ ಅಧ್ಯಕ್ಷರಿಗೆ ಈ ರೀತಿ ಕಿರುಕುಳ ನೀಡುತ್ತಿರುವುದು ಇದೇ ಮೊದಲು. ತನಿಖೆ ಎದುರಿಸುತ್ತೇನೆ ಎಂದು ಹೇಳಿದ್ದಾರೆ.
ನಾಲ್ಕು ವರ್ಷ ಕಾಲ ಅಧ್ಯಕ್ಷರಾಗಿದ್ದ ಡೊನಾಲ್ಡ್ ಟ್ರಂಪ್ 200 ಕ್ಕೂ ಹೆಚ್ಚು ಪ್ರಮುಖ ದಾಖಲೆಗಳನ್ನುತೆಗೆದುಕೊಂಡು ಹೋಗಿದ್ದರು. ಜೋ ಬೈಡನ್ ಅಧ್ಯಕ್ಷರಾದ ನಂತರ ಎಲ್ಲಾ ದಾಖಲೆಗಳನ್ನು ಹಿಂದಿರುಗಿಸುವಂತೆ ನ್ಯಾಷನಲ್ ಆರ್ಕೈವ್ಸ್ ಪ್ರಯತ್ನಿಸಿತ್ತು. ಆದರೂ ಟ್ರಂಪ್ ಕಡೆಯಿಂದ ಸೂಕ್ತ ಉತ್ತರ ಬಂದಿರಲಿಲ್ಲ. ನಂತರ ಕೆಲವು ದಾಖಲೆ ನೀಡಿದರೂ ಪೂರ್ಣ ಹಿಂದಿರುಗಿಸಿರಲಿಲ್ಲ. ಇದರಲ್ಲಿ ಕೆಲವಂತೂ ಪ್ರಮುಖ ದಾಖಲೆಗಳಾಗಿದ್ದು, ಉತ್ತರ ಕೊಡದ ಟ್ರಂಪ್ ಮೇಲೆ ಅಮೆರಿಕಾದ ನ್ಯಾಯಾಂಗ ಇಲಾಖೆ ಏಳು ದೋಷಾರೋಪಣೆಗಳನ್ನು ಹೊರಿಸಿ ಸಮನ್ಸ್ ಜಾರಿ ಮಾಡಿದೆ. ಅಮೆರಿಕಾದ ಶ್ವೇತಭವನದಿಂದ ಹೊರ ಬಂದ ನಂತರ ತಪ್ಪು ಆರೋಪಗಳನ್ನು ಟ್ರಂಪ್ ಮಾಡಿದ್ದಾರೆ ಎನ್ನುವ ಅಂಶವೂ ಸಮನ್ಸ್‌ನಲ್ಲಿ ಉಲ್ಲೇಖವಿದೆ.
ಇದು ಅಮೆರಿಕಾದ ಇತಿಹಾಸದಲ್ಲಿಯೇ ಕಪ್ಪು ದಿನ. ಮಾಜಿ ಅಧ್ಯಕ್ಷರೊಬ್ಬರಿಗೆ ಈ ರೀತಿ ಸಮನ್ಸ್ ನೀಡುತ್ತಿರುವುದು ಇತಿಹಾಸದಲ್ಲಿಯೇ ಮೊದಲು. ಭ್ರಷ್ಟ ಬೈಡನ್ ಆಡಳಿತ ನನ್ನ ವಿರುದ್ದ ಹಗೆತನ ಸಾಧಿಸುತ್ತಿದೆ. ಎಲ್ಲಾ ಅಧ್ಯಕ್ಷರಿಗಿಂತ ಅತೀ ಹೆಚ್ಚು ಮತ ಪಡೆದ, ಈಗಲೂ ಮುಂದಿನ ವರ್ಷದ ಅಧ್ಯಕ್ಷೀಯ ಚುನಾವಣೆಯಲ್ಲಿ ಮುನ್ನಡೆಯಲ್ಲಿದ್ದೇನೆ. ನಾನು ಅಮಾಯಕ, ಇದೆಲ್ಲವನ್ನೂ ಎದುರಿಸುತ್ತೇನೆ. ಅಮೆರಿಕಾ ಸಂಕಷ್ಟದಲ್ಲಿದೆ. ನಾವೆಲ್ಲರೂ ಸೇರಿ ಅಮೆರಿಕಾವನ್ನು ಗಟ್ಟಿಗೊಳಿಸೋಣ ಎಂದು ಟ್ರಂಪ್ ಸಾಮಾಜಿಕ ಮಾಧ್ಯಮಗಳಲ್ಲಿ ಬರೆದುಕೊಂಡಿದ್ದಾರೆ.
ವಿವಾದಗಳ ನಾಯಕರಾಗಿಯೇ ಗುರುತಿಸಿಕೊಂಡಿರುವ 77 ವರ್ಷದ ಡೊನಾಲ್ಡ್ ಟ್ರಂಪ್ ಪೋರ್ನ್ ನಟಿಯೊಂದಿಗೆ ಸಂಬಂಧ ಹೊಂದಿದ್ದು, ಆಕೆಯ ಖಾತೆಗೆ ಹಣ ಹಾಕಿರುವುದನ್ನು ಒಪ್ಪಿಕೊಂಡಿರುವುದು ವಿವಾದವಾಗಿತ್ತು. ಈ ಪ್ರಕರಣದ ವಿಚಾರಣೆ ಬಾಕಿಯಿದೆ. ಇದಲ್ಲದೇ ಹಣಕಾಸು ದುರುಪಯೋಗಕ್ಕೆ ಸಂಬಂಧಿಸಿದಂತೆ ಹಲವು ಪ್ರಕರಣದಲ್ಲೂ ಟ್ರಂಪ್ ವಿಚಾರಣೆ ಎದುರಿಸುತ್ತಿದ್ದು, ಮಾರ್ಚ್‌ನಲ್ಲಿ ತನಿಖೆ ನಡೆಯಬೇಕಿದೆ.
ವಿಭಾಗ