logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Donald Trump: ಅಮೆರಿಕಾದ ರಕ್ಷಣಾ, ಪರಮಾಣು ದಾಖಲೆಗಳನ್ನು ಹೊತ್ತೊಯ್ದ ಆರೋಪ ಸಾಬೀತಾದರೆ ಟ್ರಂಪ್‌ಗೆ ಎಷ್ಟು ವರ್ಷ ಶಿಕ್ಷೆ?

Donald Trump: ಅಮೆರಿಕಾದ ರಕ್ಷಣಾ, ಪರಮಾಣು ದಾಖಲೆಗಳನ್ನು ಹೊತ್ತೊಯ್ದ ಆರೋಪ ಸಾಬೀತಾದರೆ ಟ್ರಂಪ್‌ಗೆ ಎಷ್ಟು ವರ್ಷ ಶಿಕ್ಷೆ?

HT Kannada Desk HT Kannada

Jun 10, 2023 06:46 AM IST

google News

ಅಮೆರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ವಿರುದ್ದದೇಶದ ಪ್ರಮುಖ ದಾಖಲೆ ಹೊತ್ತೊಯ್ದ ಆರೋಪ ಹೊರಿಸಲಾಗಿದೆ.

    • ಡೊನಾಲ್ಡ್‌ ಟ್ರಂಪ್‌ ವಿರುದ್ದ ಅಮೆರಿಕಾದ ನ್ಯಾಯಾಂಗ ಇಲಾಖೆಯು ಶುಕ್ರವಾರ ದೇಶದ ಪ್ರಮುಖ ದಾಖಲೆಗಳನ್ನುಸಂಗ್ರಹಿಸಿಟ್ಟುಕೊಂಡು ವಾಪಾಸ್‌ ನೀಡದ ಗಂಭೀರ ಆರೋಪಗಳನ್ನು ಹೊರಿಸಿದೆ. ಅದರಲ್ಲೂ ೩೭ ಕಡೆ ಟ್ರಂಪ್‌ ಹೆಸರು ಆರೋಪ ಪಟ್ಟಿಯಲ್ಲಿ ಉಲ್ಲೇಖವಾಗಿದೆ.
ಅಮೆರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ವಿರುದ್ದದೇಶದ ಪ್ರಮುಖ ದಾಖಲೆ ಹೊತ್ತೊಯ್ದ ಆರೋಪ ಹೊರಿಸಲಾಗಿದೆ.
ಅಮೆರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ವಿರುದ್ದದೇಶದ ಪ್ರಮುಖ ದಾಖಲೆ ಹೊತ್ತೊಯ್ದ ಆರೋಪ ಹೊರಿಸಲಾಗಿದೆ.

ವಾಷಿಂಗ್ಟನ್‌: ಅಮೆರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ದೇಶದ ಅಣುಶಕ್ತಿ ಹಾಗೂ ರಕ್ಷಣಾ ಇಲಾಖೆ ದಾಖಲೆಗಳನ್ನು ಹೊತ್ತೊಯ್ದ ಗಂಭೀರ ಆರೋಪ ಎದುರಿಸುತ್ತಿದ್ದು, ಶುಕ್ರವಾರ ಆರೋಪ ಪಟ್ಟಿಯನ್ನು ಫ್ಲೋರಿಡಾ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ.

ಅಮೆರಿಕಾದ ಮಾಜಿ ಅಧ್ಯಕ್ಷರು ಇಂತಹ ಗಂಭೀರ ಆರೋಪಗಳನ್ನು ಎದುರಿಸುತ್ತಿರುವುದು ಇದೇ ಮೊದಲು.

ಡೊನಾಲ್ಡ್‌ ಟ್ರಂಪ್‌ ವಿರುದ್ದ ಅಮೆರಿಕಾದ ನ್ಯಾಯಾಂಗ ಇಲಾಖೆಯು ಶುಕ್ರವಾರ ದೇಶದ ಪ್ರಮುಖ ದಾಖಲೆಗಳನ್ನುಸಂಗ್ರಹಿಸಿಟ್ಟುಕೊಂಡು ವಾಪಾಸ್‌ ನೀಡದ ಗಂಭೀರ ಆರೋಪಗಳನ್ನು ಹೊರಿಸಿದೆ.

ಅದರಲ್ಲೂ 37 ಕಡೆ ಟ್ರಂಪ್‌ ಹೆಸರು ಆರೋಪ ಪಟ್ಟಿಯಲ್ಲಿ ಉಲ್ಲೇಖವಾಗಿದೆ. ಉದ್ದೇಶಪೂರ್ವಕವಾಗಿಯೇ ರಾಷ್ಟ್ರೀಯ ಭದ್ರತಾ ದಾಖಲೆ ಸಂಗ್ರಹ, ನ್ಯಾಯಾಂಗ ಚಟುವಟಿಕೆಗೆ ಅಡ್ಡಿಪಡಿಸುವ ಜತೆಗೆ ಪಿತೂರಿ, ಭ್ರಷ್ಟಾಚಾರ ಮಾರ್ಗದಿಂದ ದಾಖಲೆಗಳನ್ನು ಅಡಗಿಸಿಟ್ಟಿರುವ ಆರೋಪಗಳು ಟ್ರಂಪ್‌ ಮೇಲೆ ಇವೆ.

2021ರ ಜನವರಿಯಲ್ಲಿ ಟ್ರಂಪ್‌ ಅಮೆರಿಕಾದ ಶ್ವೇತ ಭವನವನ್ನು ತೆರವು ಮಾಡಿದರು. ಈ ವೇಳೆ ಅತಿ ಪ್ರಮುಖ ಎನ್ನಬಹುದಾದ ಪೆಂಟಗಾನ್‌, ಸಿಐಇ, ರಾಷ್ಟ್ರೀಯ ಭದ್ರತಾ ಸಂಸ್ಥೆ ಹಾಗೂ ಇತರೆ ಪ್ರಮುಖ ಗುಪ್ತಚರ ವಿಭಾಗಗಳ ದಾಖಲೆಗಳನ್ನುತೆಗೆದುಕೊಂಡು ಹೋಗಿದ್ದರು. ಇದರಲ್ಲಿ ಅಮೆರಿಕಾದ ರಕ್ಷಣಾ ಇಲಾಖೆ, ಸೇನಾ ಬಲದ ಮಾಹಿತಿ ಮಾತ್ರವಲ್ಲದೇ ಜಗತ್ತಿನ ಇತರೆ ದೇಶಗಳ ವಿವರಗಳೂ ಇವೆ.

ಅಮೆರಿಕಾದ ಅಣುಶಕ್ತಿ ಕಾರ್ಯಕ್ರಮಗಳು, ದೇಶದ ಸೇನಾ ದಾಳಿಯಿಂದ ಆಗಿರುವ ಪರಿಣಾಮಗಳು, ಅಮೆರಿಕಾ ಕೈಗೊಂಡ ನಿರ್ಣಯಗಳ ಪ್ರಮುಖ ದಾಖಲೆಗಳು ಟ್ರಂಪ್‌ ತೆಗೆದುಕೊಂಡು ಹೋಗಿರುವುದರಲ್ಲಿ ಸೇರಿವೆ. ನೊಟೀಸ್‌ ನೀಡಿದ ನಂತರವೂ ಪ್ರಮುಖ ದಾಖಲೆಗಳನ್ನು ಹಿಂದಿರುಗಿಸಿಲ್ಲ.ಟ್ರಂಪ್‌ ಅವರು ಅನಧಿಕೃತವಾಗಿ ಸಂಗ್ರಹಿಸಿಟ್ಟುಕೊಂಡಿರುವ ಈ ದಾಖಲೆಗಳು ಅಮೆರಿಕಾದ ರಾಷ್ಟ್ರೀಯ ಭದ್ರತೆಗೆ ಧಕ್ಕೆ ತರುವಂತದ್ದು. ಈ ಕುರಿತು ನೊಟೀಸ್‌ಗಳಿಗೂ ಸಮರ್ಪವಾಗಿಕ ಉತ್ತರ ನೀಡದೇ ಇಲಾಖೆಯ ವಿರುದ್ದ ಆರೋಪಗಳನ್ನು ಮಾಡಿದ್ಧಾರೆ ಎನ್ನುವುದನ್ನು ತಿಳಿಸಲಾಗಿದೆ.

ಎರಡು ಬಾರಿ ಪ್ರಮುಖ ದಾಖಲೆಗಳನ್ನು ಟ್ರಂಪ್‌ ಸಾರ್ವಜನಿಕವಾಗಿ ಪ್ರದರ್ಶಿಸಿದ ಗಂಭೀರ ಆರೋಪಗಳಿವೆ. ಅದರಲ್ಲಿ ಅಮೆರಿಕಾ ಮಿಲಟರಿ ಕಾರ್ಯಾಚರಣೆ ಹಾಗೂ ಯೋಜನೆಗಳನ್ನುತಮ್ಮ ಜ್ಯೂ ಜೆರ್ಸಿಯಲ್ಲಿರುವ ಗಾಲ್ಫ್‌ ಕ್ಲಬ್‌ನಲ್ಲಿ ಪ್ರದರ್ಶಿಸಿದ್ದರು ಎಂದು ಆರೋಪಿಸಲಾಗಿದೆ. ಅಲ್ಲದೇ ಈ ದಾಖಲೆಗಳನ್ನು ತಮ್ಮ ಮಾರ್-ಎ- ಲಗೋ ಮನೆ ಹಾಗೂ ಫ್ಲೋರಿಡಾದ ಕ್ಲಬ್‌ನಲ್ಲಿ ಭದ್ರವಾಗಿಯೂ ಇರಿಸಿರಲಿಲ್ಲ. ಈ ನಿವಾಸಗಳಲ್ಲಿ ನಿಯಮಿತವಾಗಿ ನೂರಾರು ಮಂದಿ ಸೇರಿಸಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದರು ಎನ್ನುವುದನ್ನು ಫ್ಲೋರಿಡಾ ನ್ಯಾಯಾಲಯಕ್ಕೆ ನ್ಯಾಯಾಂಗ ಇಲಾಖೆ ವಿಶೇಷ ವಕೀಲ ಜಾಕ್‌ ಸ್ಮಿತ್‌ ಸಲ್ಲಿಸಿರುವ ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

ದಾಖಲೆಗಳನ್ನು ಸಂಗ್ರಹಿಸಲು ಟ್ರಂಪ್‌ ಬೆಂಬಲಿಗ ವಾಲ್ಟ್‌ ನೌಟಾ ವಿರುದ್ದವೂ ಆರು ಆರೋಪಗಳನ್ನು ಉಲ್ಲೇಖಿಸಲಾಗಿದೆ.

ಈ ಆರೋಪಗಳು ಸಾಬೀತಾದರೆ 20 ವರ್ಷದ ವರೆಗೆ ಜೈಲು ಶಿಕ್ಷೆಯನ್ನು ಟ್ರಂಪ್‌ ಹಾಗೂ ಬೆಂಬಲಿಗ ಅನುಭವಿಸಬೇಕಾಗುತ್ತದೆ ಎನ್ನುತ್ತಾರೆ ನ್ಯಾಯಾಂಗ ಇಲಾಖೆ ಅಧಿಕಾರಿಗಳು.

ಮುಂದಿನ ವರ್ಷ ಅಮೆರಿಕಾದ ಅಧ್ಯಕ್ಷೀಯ ಚುನಾವಣೆ ಇದೆ. ರಿಪಬ್ಲಿಕನ್‌ ಪಕ್ಷದ ಅಭ್ಯರ್ಥಿಯಾಗಿರುವ ಡೊನಾಲ್ಡ್‌ ಟ್ರಂಪ್‌ ಮೇಲೆ ನ್ಯಾಯಾಂಗ ಇಲಾಖೆ ಹೊರಿಸಿರುವ ಆರೋಪಗಳು ಪರಿಣಾಮ ಉಂಟು ಮಾಡಬಹುದು. ಈಗಾಗಲೇ ನಾನು ಅಮಾಯಕ. ಕಾನೂನು ಹೋರಾಟ ಮುಂದುವರೆಸುತ್ತೇನೆ ಎಂದು ಟ್ರಂಪ್‌ ಕೂಡ ಹೇಳಿದ್ದಾರೆ. ಸದ್ಯದಲ್ಲೇ ವಿಚಾರಣೆಯೂ ಶುರುವಾಗಲಿದೆ.

ಇದನ್ನೂ ಓದಿರಿ..

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ