Chandra Babu Naidu:4ನೇ ಬಾರಿಗೆ ಆಂಧ್ರಪ್ರದೇಶ ಸಿಎಂ ಆಗಿ ಚಂದ್ರಬಾಬು ನಾಯ್ಡು; ಪ್ರಮುಖ 10 ಅಂಶಗಳು
Jun 12, 2024 11:19 AM IST
ಆಂಧ್ರ ಪ್ರದೇಶ ನೂತನ ಸಿಎಂ ಚಂದ್ರಬಾಬು ನಾಯ್ಡು
- Andhara Politics ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ಚಂದ್ರಬಾಬು ನಾಯ್ಡು ಅವರು ಬುಧವಾರ ಪ್ರಮಾಣ ವಚನ ಸ್ವೀಕರಿಸಲಿದ್ದು. ಕ್ಷಣ ಗಣನೆ ಶುರುವಾಗಿದೆ.
ಹೈದ್ರಾಬಾದ್: ಆಂಧ್ರಪ್ರದೇಶದಲ್ಲಿ ಹೊಸ ರಾಜಕೀಯ ಅಧ್ಯಾಯ ಶುರುವಾಗುತ್ತಿದೆ. ಅಂಧ್ರಪ್ರದೇಶದ ರಾಜಕಾರಣದಲ್ಲಿ ಗೆಲುವು ಹಾಗೂ ಸೋಲಿನ ಸಮಾನ ರುಚಿಯನ್ನು ಅನುಭವಿಸಿರುವ ತೆಲುಗು ದೇಶಂ ಪಕ್ಷದ ಮುಖ್ಯಸ್ಥರೂ ಆಗಿರುವ ಚಂದ್ರಬಾಬು ನಾಯ್ಡು ಅವರು ಭಾರೀ ಬಹುಮತದೊಂದಿಗೆ ಆರಿಸಿ ಬಂದ ನಂತರ ಆಂಧ್ರಪ್ರದೇಶದಲ್ಲಿ ಮುಖ್ಯಮಂತ್ರಿ ಗಾದಿಗೆ ಏರುತ್ತಿದ್ದಾರೆ. ನಾಲ್ಕನೇ ಬಾರಿಗೆ ಅವರಿಗೆ ಮುಖ್ಯಮಂತ್ರಿ ಗದ್ದುಗೆ ದೊರೆತಿದೆ. ಚಂದ್ರಬಾಬು ನಾಯ್ಡು ಅವರ ಬದುಕು, ರಾಜಕೀಯ ಹಾದಿ. ಅಭಿವೃದ್ದಿಯ ನೋಟ, ಪದಗ್ರಹಣ, ಭವಿಷ್ಯದ ರಾಜಕಾರಣದ ಕುರಿತು ಸಂಪೂರ್ಣ ಚಿತ್ರಣ ಇಲ್ಲಿ ನೀಡಲಾಗಿದೆ.
- ತೆಲುಗುದೇಶಂ ಪಕ್ಷದ ಮುಖ್ಯಸ್ಥ ನಾರಾ ಚಂದ್ರಬಾಬು ನಾಯ್ಡು ಅವರು ಆಂಧ್ರ ಪ್ರದೇಶದ ಮುಖ್ಯಮಂತ್ರಿಯಾಗಿ ನಾಲ್ಕನೇ ಬಾರಿಗೆ ಪ್ರಮಾಣ ವಚನವನ್ನು ಬುಧವಾರ ಸ್ವೀಕರಿಸಲಿದ್ದಾರೆ. ಭಾರೀ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿರುವ ಅವರು ಲೋಕಸಭೆ ಚುನಾವಣೆಯಲ್ಲೂ ಹಚ್ಚಿನ ಸ್ಥಾನ ಪಡೆದುಕೊಂಡಿದ್ದಾರೆ.
- ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಹಾಗೂ ಕೇಂದ್ರ ಸಚಿವ ಜೆಪಿ ನಡ್ಡಾ ಸಹಿತ ಹಲವರು ಗಣ್ಯರು ನಾಯ್ಡು ಪ್ರಮಾಣ ವಚನ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದು, ಅಮರಾವತಿಗೆ ಆಗಮಿಸಿದ್ದಾರೆ.
- ಭಾರತದ ರಾಜಕೀಯ ಇತಿಹಾಸದಲ್ಲಿಯೇ ವಿಭಿನ್ನ ವ್ಯಕ್ತಿತ್ವದೊಂದಿಗೆ ಗಮನ ಸೆಳೆದಿರುವ ನಾಯ್ಡು ಅವರನ್ನು ಸಿಎಂ ಅನ್ನುವುದಕ್ಕಿಂತ ಸಿಇಒ ಎಂದು ಕರೆಯುವವರೇ ಹೆಚ್ಚು. ಅಷ್ಟರ ಮಟ್ಟಿಗೆ ಅವರು ರಾಜಕೀಯದ ಜತೆಗೆ ಅಭಿವೃದ್ದಿ, ಪ್ರಗತಿಗೂ ಒತ್ತು ನೀಡುತ್ತಾ ಬಂದಿದ್ದಾರೆ.
- ನಾರಾ ಚಂದ್ರಬಾಬು ನಾಯ್ಡು ಒಬ್ಬ ಭಾರತೀಯ ರಾಜಕಾರಣಿ ಮತ್ತು ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ (1995-2004 ಮತ್ತು 2014-19). ಅವರು ಆಂಧ್ರ ಪ್ರದೇಶ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿದ್ದಾರೆ. ಅವರು ತೆಲುಗು ದೇಶಂ ಪಕ್ಷದ (ಟಿಡಿಪಿ) ರಾಷ್ಟ್ರೀಯ ಅಧ್ಯಕ್ಷರಾಗಿದ್ದಾರೆ ಮತ್ತು 1999 ರ ಸಾರ್ವತ್ರಿಕ ಚುನಾವಣೆಗಳಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್‌ಡಿಎ) ಸಂಚಾಲಕರಾಗಿಯೂ ಸೇವೆ ಸಲ್ಲಿಸಿದ್ದಾರೆ.
- ಎನ್ ಚಂದ್ರಬಾಬು ನಾಯ್ಡು ಅವರು 1950 ರ ಏಪ್ರಿಲ್ 20, ರಂದು ಆಂಧ್ರಪ್ರದೇಶದ ನಾರಾವರಿಪಲ್ಲೆ ಎಂಬ ಸಣ್ಣ ಹಳ್ಳಿಯಲ್ಲಿ ಜನಿಸಿದರು. ಅವರ ತಂದೆ ಎನ್ ಖರ್ಜೂರ ನಾಯ್ಡು ಕೃಷಿಕರು ಮತ್ತು ತಾಯಿ ಅಮ್ಮನಮ್ಮ ಗೃಹಿಣಿ. ಸ್ನಾತಕೋತ್ತರ ಪದವೀಧರರಾಗಿರುವ ನಾಯ್ಡು ಮೊದಲ ಬಾರಿಗೆ 1978 ರಲ್ಲಿ ಆಂಧ್ರ ಪ್ರದೇಶ ವಿಧಾನಸಭೆಗೆ ಚುನಾಯಿತರಾಗಿ ಆನಂತರ ನಿರಂತರ ಗೆಲ್ಲುತ್ತಾ ಬಂದಿದ್ದಾರೆ.
ಇದನ್ನೂಓದಿರಿ: ಬನ್ನೇರುಘಟ್ಟ ಜೈವಿಕ ಉದ್ಯಾನದಿಂದ ಪ್ರಾಣಿ ಆರೈಕೆ ಮತ್ತು ನಿರ್ವಹಣೆ ಕುರಿತು 10 ತಿಂಗಳ ಡಿಪ್ಲೊಮಾ ಕೋರ್ಸ್
- ಆಂಧ್ರಪ್ರದೇಶದ ಮಾಜಿ ಸಿಎಂ ಹಾಗೂ ಸಿನಿ ತಾರೆಯಾಗಿದ್ದ ಎನ್‌ಟಿ ರಾಮರಾವ್ ಅವರ ಅಳಿಯ ಚಂದ್ರಬಾಬು ನಾಯ್ಡು ಅವರ ಗರಡಿಯಲ್ಲಿಯೇ ಬೆಳೆದು ಪಕ್ಷವನ್ನು ಮುನ್ನಡೆಸಿದವರು.
- ಈಗಾಗಲೇ ಹೈದ್ರಾಬಾದ್ ಅನ್ನು ಐಟಿ ಸಿಟಿಯಾಗಿ ಪರಿವರ್ತಿಸುವಲ್ಲಿ ಅವರ ಶ್ರಮವೂ ಅಪಾರಾಗಿದೆ. ಎರಡು ದಶಕದ ಹಿಂದೆಯೇ ನಾಯ್ಡು ಅವರು ಇದಕ್ಕೆ ಒತ್ತು ಕೊಟ್ಟು ಹೈದ್ರಾಬಾದ್ ನಗರಕ್ಕೆ ಜಾಗತಿಕ ಮಾನ್ಯತೆ ತಂದಿದ್ದಾರೆ.
- ಪಕ್ಷದ ಶಾಸಕರ ಸಭೆಯಲ್ಲಿ ಮಾತನಾಡಿರುವ ಚಂದ್ರಬಾಬು ನಾಯ್ಡು, ಈಗಾಗಲೇ ಕೇಂದ್ರ ಸರ್ಕಾರದ ಸಂಪೂರ್ಣ ಸಹಕಾರವನ್ನು ಕೋರಿದ್ದೇನೆ. ಆಂಧಪ್ರದೇಶದ ಅಭಿವೃದ್ದಿಗೆ ಎಲ್ಲ ರೀತಿಯ ಸಹಕಾರವನ್ನು ನೀಡುವುದಾಗಿ ಕೇಂದ್ರ ಸರ್ಕಾರ ಅಭಯ ನೀಡಿದೆ. ತಂಡವಾಗಿ ಎಲ್ಲರೂ ಕೆಲಸ ಮಾಡೋಣ ಎಂದು ಹೇಳಿದ್ದಾರೆ.
- ಈಗಾಗಲೇ ಕೇಂದ್ರದಲ್ಲಿ ಎನ್‌ಡಿಎ ಸರ್ಕಾರ ರಚನೆಗೆ ಟಿಡಿಪಿ ಬೆಂಬಲ ಸೂಚಿಸಿದೆ. ಅಲ್ಲದೇ ಪಕ್ಷದ ಸಂಸದರೂ ಕೇಂದ್ರದಲ್ಲಿ ಮಂತ್ರಿಯಾಗಿದ್ದಾರೆ. ಸ್ಪೀಕರ್ ಹುದ್ದೆಯನ್ನು ಪಡೆಯುವ ನಿಟ್ಟಿನಲ್ಲಿ ಟಿಡಿಪಿ ಯೋಚಿಸುತ್ತಿದೆ.
ಇದನ್ನೂ ಓದಿರಿ: Parenting: ಹದಿವಯಸ್ಸಿನ ಮಕ್ಕಳಿಗೆ ವೈಯಕ್ತಿಕ ಸ್ವಾತಂತ್ರ್ಯ ನೀಡುವುದು ಎಷ್ಟು ಸರಿ? ಪೋಷಕರ ದುಗುಡಕ್ಕೆ ಇಲ್ಲಿದೆ ಉತ್ತರ- ಮನದ ಮಾತು
- ನಾಯ್ಡು ಅವರ ಪದಗ್ರಹಣ ಸಮಾರಂಭಕ್ಕೆ ಅಮರಾವತಿಯಲ್ಲಿ ಸಿದ್ದತೆಗಳು ಪೂರ್ಣಗೊಂಡಿವೆ. ಚಂದ್ರಬಾಬು ನಾಯ್ಡು ಅವರೊಂದಿಗೆ ಪುತ್ರ ನಾರಾ ಲೋಕೇಶ್, ಜನಸೇನಾ ಪಕ್ಷದ ಮುಖ್ಯಸ್ಥ ಹಾಗೂ ನಟ ಪವನ್ ಕಲ್ಯಾಣ್ ಕೂಡ ಸಂಪುಟ ಸಚಿವರಾಗಿ ಅಧಿಕಾರ ವಹಿಸಿಕೊಳ್ಳುವ ಸಾಧ್ಯತೆಯಿದೆ.
- ಈಗಷ್ಟೇ ಮುಗಿದ ವಿಧಾನಸಭೆ ಚುನಾವಣೆಯಲ್ಲಿ ಒಟ್ಟು 175 ವಿಧಾನಸಭೆ ಸ್ಥಾನಗಳಲ್ಲಿಟಿಡಿಪಿ ಗೆದ್ದ ಕ್ಷೇತ್ರಗಳ ಸಂಖ್ಯೆ 164. ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಪಕ್ಷಗಳು 25ರಲ್ಲಿ 21 ಸ್ಥಾನ ಗೆದ್ದಿವೆ.