logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Modi Ram Bhajan: ಆಂಧ್ರದ ಲೇಪಾಕ್ಷಿ ದೇಗುಲದಲ್ಲಿ ರಾಮ ಭಜನೆಗೆ ದನಿಗೂಡಿಸಿದ ಮೋದಿ: ಹೀಗಿತ್ತು ಆ ಕ್ಷಣ

Modi Ram Bhajan: ಆಂಧ್ರದ ಲೇಪಾಕ್ಷಿ ದೇಗುಲದಲ್ಲಿ ರಾಮ ಭಜನೆಗೆ ದನಿಗೂಡಿಸಿದ ಮೋದಿ: ಹೀಗಿತ್ತು ಆ ಕ್ಷಣ

Umesha Bhatta P H HT Kannada

Jan 16, 2024 06:10 PM IST

google News

ಪ್ರಧಾನಿ ನರೇಂದ್ರ ಮೋದಿ ಅವರು ಲೇಪಾಕ್ಷಿ ವೀರಭದ್ರ ದೇಗುಲದಲ್ಲಿ ಪೂಜೆ ಸಲ್ಲಿಸಿ ಭಜನೆ ಹಾಡಿದರು.

    • pm Ram Bhajan ಪ್ರಧಾನಿ ನರೇಂದ್ರ ಮೋದಿ ಅವಕಾಶ ಸಿಕ್ಕಾಗಲೆಲ್ಲಾ ಭಕ್ತಿ ಭಾವ ಮೆರೆಯುತ್ತಾರೆ. ಈ ಬಾರಿ ಆಂಧ್ರಪ್ರದೇಶದ ಲೇಪಾಕ್ಷಿಯಲ್ಲಿ ರಾಮಭಜನೆ ಹಾಡಿ ಗಮನ ಸೆಳೆದರು.
ಪ್ರಧಾನಿ ನರೇಂದ್ರ ಮೋದಿ ಅವರು ಲೇಪಾಕ್ಷಿ ವೀರಭದ್ರ ದೇಗುಲದಲ್ಲಿ ಪೂಜೆ ಸಲ್ಲಿಸಿ ಭಜನೆ ಹಾಡಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಲೇಪಾಕ್ಷಿ ವೀರಭದ್ರ ದೇಗುಲದಲ್ಲಿ ಪೂಜೆ ಸಲ್ಲಿಸಿ ಭಜನೆ ಹಾಡಿದರು.

ಹೈದ್ರಾಬಾದ್‌: ಶ್ರೀರಾಮ ಜಯರಾಮ ಜಯ ಜಯ ರಾಮ ಗೀತೆಗೆ ಪ್ರಧಾನಿ ನರೇಂದ್ರ ಮೋದಿ ದನಿಗೂಡಿಸುತ್ತಲೇ ಭಕ್ತಿಭಾವದಲ್ಲಿ ಮುಳುಗಿ ಹೋಗಿದ್ದರು. ಅರ್ಧಗಂಟೆಗೂ ಹೆಚ್ಚು ಕಾಲ ಮೋದಿ ಅವರು ಎಲ್ಲವನ್ನೂ ಮರೆತು ರಾಮನಲ್ಲಿ ಲೀನರಾಗಿದ್ದರು. ಕಣ್ಣು ಮುಚ್ಚಿ ರಾಮ ಭಜನೆಯಲ್ಲಿ ತೊಡಗಿಸಿಕೊಂಡ ಮೋದಿ ಅವರೊಂದಿಗೆ ಇತರರೂ ಹಾಡಿದರು. ಇದು ನಡೆದದ್ದು ಆಂಧ್ರಪ್ರದೇಶದ ಲೇಪಾಕ್ಷಿಯಲ್ಲಿ. ಲೇಪಾಕ್ಷಿಯ ವೀರಭದ್ರ ದೇಗುಲಕ್ಕೆ ಮಂಗಳವಾರ ಆಗಮಿಸಿದ್ದ ನರೇಂದ್ರ ಮೋದಿ ಅವರು ಅಲ್ಲಿ ಬಹು ಹೊತ್ತು ಕಳೆದರು.

ರಾಮಮಂದಿರ ಉದ್ಘಾಟನೆ ಭಾಗವಾಗಿ ಪ್ರಮುಖ ದೇಗುಲವಾದ ಲೇಪಾಕ್ಷಿಗೆ ಪ್ರಧಾನಿ ಮೋದಿ ಭೇಟಿ ನೀಡಿದ್ದರು. ರಾಮಾಯಣದ ಮಹತ್ವ ಇರುವ ಈ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಜತೆಗೆ ಭಜನೆಯನ್ನೂ ಹಾಡಿದರು. ಮೋದಿ ಅವರು ಬುಧವಾರ ಕೇರಳದ ಗುರುವಾಯೂರು ಸಹಿತ ವಿವಿಧ ದೇಗುಲಕ್ಕೆ ಭೇಟಿ ನೀಡುವ ಕಾರ್ಯಕ್ರಮ ನಿಗದಿಯಾಗಿದೆ.

ಆಂಧ್ರಪ್ರದೇಶದ ಲೇಪಾಕ್ಷಿ ಪ್ರಮುಖ ಧಾರ್ಮಿಕ ಕ್ಷೇತ್ರ. ಅಲ್ಲಿಮನ ವೀರಭದ್ರ ದೇಗುಲದಲ್ಲಿ ನಾನಾ ಧಾರ್ಮಿಕ ಚಟುವಟಿಕೆಗಳು ಇದ್ದವು. ಆ ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ಪ್ರಧಾನಿ ನರೇಂದ್ರ ಮೋದಿ ಅಗಮಿಸಿದ್ದರು. ಬಹುತೇಕ ಧಾರ್ಮಿಕ ಕಾರ್ಯಕ್ರಮಗಳನ್ನು ಅವರು ತಪ್ಪಿಸಿಕೊಳ್ಳುವುದಿಲ್ಲ. ಈ ಬಾರಿಯೂ ವೀರಭದ್ರ ದೇಗುಲಕ್ಕೆ ಆಗಮಿಸಿದಾಗ ಅಲ್ಲಿ ಭಜನೆ ನಡೆಯುತ್ತಿತ್ತು. ಅದೂ ವಿದೂಷಿಯರು ರಾಮ ಭಜನೆಯಲ್ಲಿ ನಿರತರಾಗಿದ್ದರು. ಅದರಲ್ಲೂ ರಾಮನ ಕುರಿತು ಹಲವಾರು ಗೀತೆಗಳನ್ನು ರಾಗಬದ್ದವಾಗಿ ಹಾಡುತ್ತಿದ್ದರು. ಅದಕ್ಕೆ ಸಂಗೀತ ಹಿನ್ನೆಲೆಯೂ ಇತ್ತು. ಅಂತಹ ಧಾರ್ಮಿಕ ಸ್ಥಳದಲ್ಲಿ ಭಜನೆಯ ನಿನಾದ ಕಿವಿಯ ಮೇಲೆ ಬಿದ್ದರೆ ಯಾರ ಮನಸು ಪ್ರಫುಲ್ಲವಾಗದೇ ಇರದು. ದೈವ ಭಕ್ತರಾದ ಮೋದಿ ಅವರರ ಕಿವಿಗೂ ಭಜನೆಗಳು ಬೀಳುತ್ತಲೇ ಅಲ್ಲಿಯೇ ಕುಳಿತುಬಿಟ್ಟರು. ರೇಷ್ಮೆ ಅಂಗಿ, ಪಂಚೆಯೊಂದಿಗೆ ಅಪ್ಪಟ ಗುರುಭಕ್ತರಾಗಿಯೇ ಬಂದಿದ್ದ ಮೋದಿ ಅವರು ಭಜನೆ ಹಾಡಲು ಶುರು ಮಾಡಿದರು. ಶ್ರೀರಾಮ ಜಯ ರಾಮ ಜಯ ಜಯ ರಾಮ ಎನ್ನುವ ಭಜನೆಯನ್ನು ಹಾಡುತ್ತಲೇ ಇದ್ದರೆ ಮೋದಿ ಅವರೂ ದನಿಗೂಡಿಸುತ್ತಲೇ ಹೋದರು. ವಿದುಷಿಯನ್ನು ಹಾಡಿನ ಓಘವನ್ನು ಹೆಚ್ಚಿಸುತ್ತಿದ್ದರೆ ಮೋದಿ ಕೂಡ ಅದೇ ಓಘದಲ್ಲಿಯೇ ಹಾಡಿದರು. ಭಜನೆ ಮುಗಿಯುವವರೆಗೂ ಮೋದಿ ಅವರು ಕಣ್ಣನ್ನು ಬಿಡದೇ ಹಾಡಿನಲ್ಲಿ ಮುಳುಗಿ ಹೋಗಿದ್ದರು. ಅಲ್ಲಿ ಸೇರಿದ್ದವರೂ ಕೂಡ ಭಜನೆಯನ್ನು ಹಾಡಿ ಶ್ರೀರಾಮನ ಪಠಣೆ ಮಾಡಿದರು.

ಇದಾದ ನಂತರ ರಾಮ ಕೋದಂಡರಾಮನ ಗೀತೆಯನ್ನು ಹಾಡಲಾಯಿತು. ಅದಕ್ಕೂ ಮೋದಿ ದನಿಯಾದರು.

ಬಹಳ ಹೊತ್ತು ಎಲ್ಲವನ್ನೂ ಮರೆತು ಮೋದಿ ಕುಳಿತಿದ್ದು ಗಮನ ಸೆಳೆಯಿತು. ಮುಂದಿನ ವಾರ ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಕಾರ್ಯಕ್ರಮವಿದ್ದು. ಇದಕ್ಕಾಗಿ ತಯಾರಿಗಳು ಭರದಿಂದ ಸಾಗಿವೆ. ಇದರ ನಡುವೆ ಮೋದಿ ಅವರ ರಾಮಭಜನೆ ವಿಡಿಯೋ ವೈರಲ್‌ ಆಗಿದೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ