AI Predicts Heart Disease: ಹೃದಯ ಸಂಬಂಧಿ ಕಾಯಿಲೆ ಪತ್ತೆಗೆ ಕೃತಕ ಬುದ್ಧಿಮತ್ತೆ: ಸಾವಿನ ಸಂಭವನೀಯತೆ ತಿಳಿಸಲಿದೆ ಸಿಂಗಲ್ ಎಕ್ಸ್-ರೇ!
Dec 04, 2022 04:20 PM IST
ಸಾಂದರ್ಭಿಕ ಚಿತ್ರ
- ಹೃದಯ ರಕ್ತನಾಳದ ಕಾಯಿಲೆಯು ಪ್ರಪಂಚದಾದ್ಯಂತ ಸಾವಿಗೆ ಪ್ರಮುಖ ಕಾರಣವಾಗಿದೆ. ಈ ರೋಗದ ವಿನಾಶಕಾರಿ ಪರಿಣಾಮಗಳು ಹೃದ್ರೋಗ ಮತ್ತು ಅಪಾಯಕಾರಿ ಅಂಶಗಳ ಚಿಕಿತ್ಸೆ ಮತ್ತು ತಡೆಗಟ್ಟುವಿಕೆಗೆ ಕೆಲಸ ಮಾಡಲು ಸಂಶೋಧಕರನ್ನು ಪ್ರೇರೇಪಿಸಿವೆ. ಹೃದಯಾಘಾತ ಅಥವಾ ಹೃದಯ ರಕ್ತನಾಳದ ಕಾಯಿಲೆಯಿಂದ ಉಂಟಾಗುವ ಸ್ಟ್ರೋಕ್‌ನಿಂದ ಸಾಯುವ 10 ವರ್ಷಗಳ ಸಂಭವನೀಯತೆಯನ್ನು ಗುರುತಿಸುವ ಕೃತಕ ಬುದ್ಧಿಮತ್ತೆ ಚಿಕಿತ್ಸೆಯ ಬಗ್ಗೆ ಇದೀಗ ಸಂಶೋಧನೆ ನಡೆದಿದೆ.
ವಾಷಿಂಗ್ಟನ್: ಹೃದಯ ರಕ್ತನಾಳದ ಕಾಯಿಲೆಯು ಪ್ರಪಂಚದಾದ್ಯಂತ ಸಾವಿಗೆ ಪ್ರಮುಖ ಕಾರಣವಾಗಿದೆ. ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, ಹೃದಯ ರಕ್ತನಾಳದ ಕಾಯಿಲೆಗಳು (CVDs) ಪ್ರತಿ ವರ್ಷ 17.9 ಮಿಲಿಯನ್ ಜೀವಗಳನ್ನು ತೆಗೆದುಕೊಳ್ಳುತ್ತದೆ ಎಂದು ಅಂದಾಜಿಸಲಾಗಿದೆ.
ಈ ರೋಗದ ವಿನಾಶಕಾರಿ ಪರಿಣಾಮಗಳು ಹೃದ್ರೋಗ ಮತ್ತು ಅಪಾಯಕಾರಿ ಅಂಶಗಳ ಚಿಕಿತ್ಸೆ ಮತ್ತು ತಡೆಗಟ್ಟುವಿಕೆಗೆ ಕೆಲಸ ಮಾಡಲು ಸಂಶೋಧಕರನ್ನು ಪ್ರೇರೇಪಿಸಿವೆ. ಎದೆಯ ಕ್ಷ-ಕಿರಣವನ್ನು ಬಳಸಿಕೊಂಡು, ಸಂಶೋಧಕರು ಈಗ ಕಲಿಕಾ ಮಾದರಿಯನ್ನು ಅಭಿವೃದ್ಧಿಪಡಿಸಿದ್ದಾರೆ. ಇದು ಹೃದಯಾಘಾತ ಅಥವಾ ಹೃದಯ ರಕ್ತನಾಳದ ಕಾಯಿಲೆಯಿಂದ ಉಂಟಾಗುವ ಸ್ಟ್ರೋಕ್‌ನಿಂದ ಸಾಯುವ 10 ವರ್ಷಗಳ ಸಂಭವನೀಯತೆಯನ್ನು ಊಹಿಸುತ್ತದೆ.
bgr.com ಪ್ರಕಾರ, ತಂತ್ರಜ್ಞಾನವನ್ನು CXR-CVD ರಿಸ್ಕ್ ಎಂದು ಕರೆಯಲಾಗುತ್ತದೆ. ಅಮೆರಿಕದ ರಾಷ್ಟ್ರೀಯ ಕ್ಯಾನ್ಸರ್ ಸಂಸ್ಥೆ ವಿನ್ಯಾಸಗೊಳಿಸಿದ, ವಿಶೇಷ ಪ್ರಯೋಗಾಲಯದಲ್ಲಿ ಇದರ ಸಂಶೋಧನೆ ನಡೆಯುತ್ತಿದೆ. ಇದುವರೆಗೂ ಸುಮಾರು 11,430 ಹೊರರೋಗಿಗಳನ್ನು ಈ ಸಂಶೋಧನೆಗೆ ಒಳಪಡಿಸಿದ್ದು, ಎದೆಯ ಎಕ್ಸ್-ರೇ ಮೂಲಕ ಹೃದಯಾಘಾತದ ಅಪಾಯದ ಬಗ್ಗೆ ಮುನ್ಸೂಚನೆ ಪಡೆದುಕೊಳ್ಳಲಾಗಿದೆ ಎಂದು ಮೂಲಗಳು ಖಚಿತಪಡಿಸಿವೆ.
ಅಧ್ಯಯನದ ಸಂಶೋಧನೆಗಳನ್ನು ರೇಡಿಯೊಲಾಜಿಕಲ್ ಸೊಸೈಟಿ ಆಫ್ ನಾರ್ತ್ ಅಮೆರಿಕದ ವಾರ್ಷಿಕ ಸಭೆಯಲ್ಲಿ (RSNA) ಪ್ರಸ್ತುತಪಡಿಸಲಾಯಿತು. ಇದರ ಆಳವಾದ ಕಲಿಕೆಯು ಒಂದು ವಿಧದ ಮುಂದುವರಿದ ಕೃತಕ ಬುದ್ಧಿಮತ್ತೆ (AI) ಆಗಿದ್ದು, ರೋಗ-ಸಂಬಂಧಿತ ಮಾದರಿಗಳಿಗಾಗಿ ಎಕ್ಸ್-ರೇ ವಿಧಾನದ ತರಬೇತಿಯ ಮಹತ್ವವನ್ನು ಸಾರಿ ಹೇಳಿದೆ.
"ನಮ್ಮ ಆಳವಾದ ಕಲಿಕೆಯ ಮಾದರಿಯು ಅಸ್ತಿತ್ವದಲ್ಲಿರುವ ಎದೆಯ ಎಕ್ಸ್-ರೇ ಚಿತ್ರಗಳನ್ನು ಬಳಸಿಕೊಂಡು, ಹೃದಯ ರಕ್ತನಾಳದ ಕಾಯಿಲೆಯ ಅಪಾಯಕ್ಕೆ ಸಂಭಾವ್ಯ ಪರಿಹಾರವನ್ನು ನೀಡುತ್ತದೆ" ಎಂದು ಅಧ್ಯಯನದ ಪ್ರಮುಖ ಲೇಖಕ ಜಾಕೋಬ್ ವೈಸ್ ಸ್ಪಷ್ಟಪಡಿಸಿದ್ದಾರೆ.
ಹೃದಯ ರಕ್ತನಾಳದ ಕಾಯಿಲೆಯ ಸಂಭವನೀಯತೆಯ 10 ವರ್ಷದ ಅಪಾಯವನ್ನು ಅಂದಾಜು ಮಾಡಲು, ಪ್ರಸ್ತುತ ಮಾರ್ಗಸೂಚಿಗಳು ಶಿಫಾರಸು ಮಾಡುತ್ತವೆ. ಇದು ವಯಸ್ಸು, ಲಿಂಗ, ಜನಾಂಗ, ರಕ್ತದೊತ್ತಡ, ಧೂಮಪಾನ, ಟೈಪ್ 2 ಮಧುಮೇಹ ಮತ್ತು ರಕ್ತ ಪರೀಕ್ಷೆಗಳನ್ನು ಒಳಗೊಂಡಂತೆ, ಹಲವು ಮಾದರಿಗಳ ಸಂಖ್ಯಾಶಾಸ್ತ್ರೀಯ ಮಾದರಿಯಾಗಿದೆ.
ಡಾ. ವೈಸ್ ಮತ್ತು ಸಂಶೋಧಕರ ತಂಡವು ಎದೆಯ ಎಕ್ಸ್-ರೇ (CXR) ಇನ್‌ಪುಟ್ ಅನ್ನು ಬಳಸಿಕೊಂಡು ಆಳವಾದ ಕಲಿಕೆಯ ಮಾದರಿಯನ್ನು ತರಬೇತುಗೊಳಿಸಿತು. ಈ ತಂಡ CXR-CVD ರಿಸ್ಕ್ ಎಂದು ಕರೆಯಲ್ಪಡುವ ಮಾದರಿಯನ್ನು ಅಭಿವೃದ್ಧಿಪಡಿಸಿದ್ದು, ಹೃದಯ ರಕ್ತನಾಳದ ಕಾಯಿಲೆಯಿಂದ ಸಾವಿನ ಅಪಾಯವನ್ನು ಊಹಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ನಿಯಂತ್ರಿತ ಪ್ರಯೋಗವನ್ನು ರಾಷ್ಟ್ರೀಯ ಕ್ಯಾನ್ಸರ್ ಸಂಸ್ಥೆ ವಿನ್ಯಾಸಗೊಳಿಸಿದೆ ಮತ್ತು ಪ್ರಾಯೋಜಿಸಿದೆ.
"ಸಾಂಪ್ರದಾಯಿಕ ರೋಗ ನಿರ್ಣಯದ ಸಂಶೋಧನೆಗಳನ್ನು ಮೀರಿ ಎಕ್ಸ್-ರೇ ತಂತ್ರಜ್ಞಾನವು ಹೆಚ್ಚಿನ ಮಾಹಿತಿಯನ್ನು ಕಲೆ ಹಾಕುತ್ತದೆ. ಆದರೆ ದೃಢವಾದ ಮತ್ತು ವಿಶ್ವಾಸಾರ್ಹ ವಿಧಾನಗಳನ್ನು ಹೊಂದಿಲ್ಲವಾದ್ದರಿಂದ, ನಾವು ಸದ್ಯಕ್ಕೆ ಈ ಡೇಟಾವನ್ನು ಬಳಸಿಲ್ಲ.." ಎಂದು ಡಾ. ವೈಸ್ ಸ್ಪಷ್ಟಪಡಿಸಿದ್ದಾರೆ. ಆದರೆ ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಆಗುವ ಪ್ರಗತಿಗಳು, ನಮ್ಮ ಸಂಶೋಧನೆಯನ್ನು ವಾಸ್ತವಿಕವಾಗಿಸುವಲ್ಲಿ ಸಹಕರಿಸುತ್ತದೆ ಎಂದೂ ಡಾ. ವೈಸ್ ಅಭಿಪ್ರಾಯಪಟ್ಟಿದ್ದಾರೆ.
ಸಂಶೋಧಕರು ಸರಾಸರಿ ವಯಸ್ಸು 60.1 ವರ್ಷದ 11,430 ಹೊರರೋಗಿಗಳನ್ನು ಈ ಸಂಶೋಧನೆಗೆ ಗುರಿಪಡಿಸಿದ್ದು, ಈ ಪೈಕಿ ಶೇ.42.9ರಷ್ಟು ಪುರುಷ ರೋಗಿಗಳ ಎದೆಯ ಎಕ್ಸ್-ರೇ ಮಾಡಿದಾಗ, ಬಹುತೇಕರು ಸ್ಟ್ಯಾಟಿನ್ ಚಿಕಿತ್ಸೆಗೆ ಅರ್ಹರಾಗಿದ್ದು ಕಂಡುಬಂದಿತು ಎಂದು ಡಾ. ವೈಸ್ ಹೇಳಿದ್ದಾರೆ.
11,430 ರೋಗಿಗಳಲ್ಲಿ 1,096 (ಅಥವಾ ಶೇ.9.6) ಜನರು 10.3 ವರ್ಷಗಳ ಸರಾಸರಿ ಅನುಸರಣೆಯಲ್ಲಿ ಪ್ರಮುಖ ಪ್ರತಿಕೂಲ ಹೃದಯ ಸಂಬಂಧಿ ಕಾಯಿಲೆಯ ಅಪಾಯ ಎದುರಿಸುತ್ತಿದ್ದಾರೆ. CXR-CVD ಅಪಾಯದ ಆಳವಾದ ಕಲಿಕೆಯ ಮಾದರಿ ಮತ್ತು ಗಮನಿಸಲಾದ ಪ್ರಮುಖ ಹೃದಯ ಘಟನೆಗಳಿಂದ ಊಹಿಸಲಾದ ಅಪಾಯದ ನಡುವೆ ಮಹತ್ವದ ಸಂಬಂಧವಿದೆ ಎಂದು ಡಾ. ವೈಸ್ ಮಾಹಿತಿ ನೀಡಿದ್ದಾರೆ.
ವಿಭಾಗ