Election Results 2023: 4 ರಾಜ್ಯಗಳ ಚುನಾವಣಾ ಮತ ಎಣಿಕೆ ಆರಂಭ; ಹೇಗಿದೆ ಟ್ರೆಂಡ್, ಮುನ್ನಡೆ, ಹಿನ್ನಡೆ ವಿವರ ಇಲ್ಲಿದೆ
Dec 03, 2023 08:35 AM IST
ನಾಲ್ಕು ರಾಜ್ಯ ವಿಧಾನಸಭೆ ಚುನಾವಣೆಯ ಮತ ಎಣಿಕೆ ಆರಂಭವಾಗಿದೆ
4 ರಾಜ್ಯಗಳ ವಿಧಾನಸಭೆ ಚುನಾವಣೆಯ ಮತ ಎಣಿಕೆ ಆರಂಭವಾಗಿದೆ. ಆರಂಭದಲ್ಲಿ ಯಾರು ಮುನ್ನಡೆ, ಯಾರಿಗೆ ಹಿನ್ನಡೆಯಾಗುತ್ತಿದೆ ಎಂಬುದರ ಸಂಪೂರ್ಣ ವಿವರ ಇಲ್ಲಿ ತಿಳಿಯಿರಿ.
ನಾಲ್ಕು ರಾಜ್ಯ ವಿಧಾನಸಭೆ ಚುನಾವಣೆಯ ಮತ ಎಣಿಕೆ ಆರಂಭವಾಗಿದೆ
ಬೆಂಗಳೂರು: ತೆಲಂಗಾಣ, ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಛತ್ತೀಸ್‌ಗಢ ವಿಧಾನಸಭೆ ಚುನಾವಣೆಗಳ ಮತ ಎಣಿಕೆ ಆರಂಭವಾಗಿದೆ. ಮೊದಲಿಗೆ ಅಂಚೆ ಮತಗಳ ಎಣಿಕೆ ಮುಕ್ತಾಯವಾಗಿದ್ದು, ಇವಿಎಂಗಳ ಎಣಿಕೆ ಶುರುವಾಗಿದೆ.
ನಾಲ್ಕು ರಾಜ್ಯಗಳ ಪೈಕಿ ಮೂರರಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದ್ದರೆ, ಮಧ್ಯಪ್ರದೇಶದಲ್ಲಿ ಮಾತ್ರ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಹಾವು-ಏಣಿ ಆಟ ಏರ್ಪಟ್ಟಿದೆ.
ನವೆಂಬರ್ 7 ರಿಂದ 30ರವರೆಗೆ ವಿವಿಧ ಹಂತಗಳಲ್ಲಿ 5 ರಾಜ್ಯಗಳ ವಿಧಾನಸಭೆ ಚುನಾವಣೆ ನಡೆದಿತ್ತು. ಮಿಜೋರಾಂನಲ್ಲಿ ನಾಳೆ (ಡಿಸೆಂಬರ್ 4, ಸೋಮವಾರ) ಮತ ಎಣಿಕೆ ನಡೆಯಲಿದೆ.
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.