logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Race Bike For Kids: ಭಾರತದಲ್ಲಿ ಮಕ್ಕಳಿಗಾಗಿ ಮೊದಲ ಕಿಡ್ಸ್‌ ರೇಸ್‌ ಬೈಕ್‌ ಬಿಡುಗಡೆ, ಅಟಂ ಜಿಪಿ1 ದರ 2.75 ಲಕ್ಷ ರೂಪಾಯಿ, ಏನಿದೆ ವಿಶೇಷ

Race bike for kids: ಭಾರತದಲ್ಲಿ ಮಕ್ಕಳಿಗಾಗಿ ಮೊದಲ ಕಿಡ್ಸ್‌ ರೇಸ್‌ ಬೈಕ್‌ ಬಿಡುಗಡೆ, ಅಟಂ ಜಿಪಿ1 ದರ 2.75 ಲಕ್ಷ ರೂಪಾಯಿ, ಏನಿದೆ ವಿಶೇಷ

Praveen Chandra B HT Kannada

Jan 09, 2024 07:49 PM IST

google News

Race bike for kids: ಭಾರತದಲ್ಲಿ ಮಕ್ಕಳಿಗಾಗಿ ಮೊದಲ ಕಿಡ್ಸ್‌ ರೇಸ್‌ ಬೈಕ್‌ ಬಿಡುಗಡೆ, ಅಟಂ ಜಿಪಿ1 ದರ 2.75 ಲಕ್ಷ ರೂಪಾಯಿ, ಏನಿದೆ ವಿಶೇಷ

    • India's first race bike: 10-17 ವರ್ಷ ವಯಸ್ಸಿನ ಮಕ್ಕಳನ್ನು ಗುರಿಯಾಗಿಸಿಕೊಂಡು ಅಟಂ ಜಿಪಿ1 ಎಂಬ ಮಕ್ಕಳ ರೇಸ್‌ ಬೈಕನ್ನು ಭಾರತಕ್ಕೆ ಪರಿಚಯಿಸಲಾಗಿದೆ. ಇದರ ದರ 2.75 ಲಕ್ಷ ರೂಪಾಯಿ. ಹೆಚ್ಚುವರಿಯಾಗಿ ಜಿಎಸ್‌ಟಿ ಪಾವತಿಸಬೇಕು. ಇದು ಭಾರತದಲ್ಲಿ ಮಿನಿ ಜಿಪಿ ಮೋಟಾರ್‌ಸೈಕಲ್‌ ಸೆಗ್ಮೆಂಟ್‌ ಉಂಟಾಗಲು ಮುನ್ನುಡಿ ಬರೆಯುವ ನಿರೀಕ್ಷೆಯಿದೆ.
Race bike for kids: ಭಾರತದಲ್ಲಿ ಮಕ್ಕಳಿಗಾಗಿ ಮೊದಲ ಕಿಡ್ಸ್‌ ರೇಸ್‌ ಬೈಕ್‌ ಬಿಡುಗಡೆ, ಅಟಂ ಜಿಪಿ1 ದರ 2.75 ಲಕ್ಷ ರೂಪಾಯಿ, ಏನಿದೆ ವಿಶೇಷ
Race bike for kids: ಭಾರತದಲ್ಲಿ ಮಕ್ಕಳಿಗಾಗಿ ಮೊದಲ ಕಿಡ್ಸ್‌ ರೇಸ್‌ ಬೈಕ್‌ ಬಿಡುಗಡೆ, ಅಟಂ ಜಿಪಿ1 ದರ 2.75 ಲಕ್ಷ ರೂಪಾಯಿ, ಏನಿದೆ ವಿಶೇಷ

ಭಾರತದಲ್ಲಿ ಸಣ್ಣ ಮಕ್ಕಳು ಕೂಡ ಮೋಟಾರ್‌ಸ್ಪೋರ್ಟ್ಸ್‌ ಮಾಡಬಹುದು. ಅದಕ್ಕಾಗಿಯೇ ವಿಶೇಷ ಮೋಟಾರ್‌ಸೈಕಲನ್ನು ಸಿಆರ್‌ಎ ಮೋಟಾರ್‌ಸ್ಪೋರ್ಟ್ಸ್‌ ಪರಿಚಯಿಸಿದೆ. ಇದು ಕೊಯಮತ್ತೂರು ಮೂಲದ ಕಂಪನಿಯಾಗಿದ್ದು, ಮಕ್ಕಳಿಗಾಗಿಯೇ ವಿಶೇಷ ಅಟಂ ಜಿಪಿಎ ರೇಸ್‌ ಬೈಕ್‌ ವಿನ್ಯಾಸ ಮಾಡಿದೆ. 10-17 ವರ್ಷ ವಯಸ್ಸಿನ ನಡುವಿನ ಮಕ್ಕಳನ್ನು ಗುರಿಯಾಗಿಸಿ ಈ ಬೈಕನ್ನು ಬಿಡುಗಡೆ ಮಾಡಲಾಗಿದೆ. ಇದರ ದರ 2.75 ಲಕ್ಷ ರೂಪಾಯಿ. ಹೆಚ್ಚುವರಿಯಾಗಿ ಜಿಎಸ್‌ಟಿ ಪಾವತಿಸಬೇಕು. ಇದು ಭಾರತದಲ್ಲಿ ಮಿನಿ ಜಿಪಿ ಮೋಟಾರ್‌ಸೈಕಲ್‌ ಸೆಗ್ಮೆಂಟ್‌ ರಚನೆಯಾಗಲು ನೆರವಾಗುವ ನಿರೀಕ್ಷೆಯಿದೆ.

ಭವಿಷ್ಯದಲ್ಲಿ ಬೈಕ್‌ ರೇಸರ್‌ ಆಗಲು ಬಯಸುವ ಮಕ್ಕಳಿಗೆ ಇದು ಆರಂಭಿಕ ಕಲಿಕೆಗೆ ನೆರವಾಗಲಿದೆ. ದೊಡ್ಡ ರೇಸ್‌ ಬೈಕ್‌ಗಳಿಗೆ ಕಾಲಿಡುವ ಮೊದಲು ಈ ಪುಟ್ಟ ಬೈಕ್‌ಗಳಲ್ಲಿ ಮಕ್ಕಳು ಬೈಕ್‌ ರೇಸ್‌ ಕೌಶಲ ಕಲಿಯಬಹುದು. ಆದರೆ, ಅಟಂ ಜಿಪಿ1 ಬೈಕನ್ನು ರಸ್ತೆಯಲ್ಲಿ ಚಲಾಯಿಸಲು ಭಾರತದ ಕಾನೂನಿನಲ್ಲಿ ಅವಕಾಶವಿಲ್ಲ. ಇದಕ್ಕಾಗಿಯೇ ವಿಶೇಷ ಟ್ರ್ಯಾಕ್‌ ರಚಿಸಿ ಅದರಲ್ಲಿ ಮಕ್ಕಳು ಕಲಿಯಬಹುದು. ಭಾರತದಲ್ಲಿ ವಾಹನ ಚಾಲನೆ ಲೈಸನ್ಸ್‌ ಪಡೆಯಲು ಕನಿಷ್ಠ 18 ವರ್ಷ ವಯಸ್ಸಾಗಿರಬೇಕು.

ಕಂಪನಿಯು ಸತತ ಮೂರು ವರ್ಷಗಳ ಪ್ರಯತ್ನದ ಬಳಿಕ ಅಟಂ ಜಿಪಿ1 ಎಂಬ ಮಕ್ಕಳ ರೇಸ್‌ ಬೈಕನ್ನು ಅಭಿವೃದ್ಧಿಪಡಿಸಿದೆ. 2020ರಲ್ಲಿ ಕಂಪನಿಯು ಈ ಬೈಕ್‌ನ ಮೊದಲ ಪ್ರೊಟೊಟೈಪ್‌ ಮಾದರಿಯನ್ನು ಬಿಡುಗಡೆ ಮಾಡಿತ್ತು. ಬಳಿಕ ಒಂದು ವರ್ಷದ ಬಳಿಕ ಎರಡನೇ ಪ್ರೊಟೊಟೈಪ್‌ ಬಿಡುಗಡೆ ಮಾಡಿ ಹಲವು ಟ್ರ್ಯಾಕ್‌ಗಳಲ್ಲಿ ಟೆಸ್ಟ್‌ ಮಾಡಲಾಗಿತ್ತು. ಕರಿ ಮೋಟಾರ್‌ ಸ್ಫೀಡ್‌ವೇ, ಮದ್ರಾಸ್‌ ಮೋಟಾರ್‌ ರೇಸ್‌ ಟ್ರಾಕ್‌, ಚಿಕಾನೆ ಸರ್ಕ್ಯೂಟ್‌ ಹೈದರಾಬಾದ್‌, ಯುಎಇಯ ಕರಿ ಟೌನ್‌, ಮಾಕೊ ಕಾರ್ಟೊಪಿಯಾ ಮುಂತಾದ ಟ್ರ್ಯಾಕ್‌ಗಳಲ್ಲಿ ಇದನ್ನು ಟೆಸ್ಟ್‌ ಮಾಡಲಾಗಿತ್ತು.

ಈ ಬೈಕ್‌ನಲ್ಲಿ 159.3 ಸಿಸಿಯ ಸಿಂಗಲ್‌ ಸಿಲಿಂಡರ್‌, ಎರಡು ಕವಾಆಟ, ಕಾರ್ಬೊರೇಟೆಡ್‌ ಎಂಜಿನ್‌ ಇದೆ. ಇದು 8 ಸಾವಿರ ಆವರ್ತನಕ್ಕೆ 15 ಬಿಎಚ್‌ಪಿ ಮತ್ತು 7 ಸಾವಿರ ಆವರ್ತನಕ್ಕೆ 13.85 ಟಾರ್ಕ್‌ ಬಿಡುಗಡೆ ಮಾಡುತ್ತದೆ. ಈ ಎಂಜಿನ್‌ಗೆ ಐದು ಸ್ಪೀಡ್‌ನ ಗಿಯರ್‌ ಬಾಕ್ಸ್‌ ಇದೆ. ಈ ಬೈಕ್‌ಗೆ ಕಸ್ಟಮ್‌ ವಿನ್ಯಾಸದ ಫ್ರೇಮ್‌ಗಳನ್ನು ಹಾಕಲಾಗಿದೆ. ಯುಎಸ್‌ಡಿ ಫ್ರಂಟ್‌ ಫೋರ್ಕ್ಸ್‌ ಮತ್ತು ಮೊನೊಶಾಕ್‌ ಹಿಂಬದಿಯಲ್ಲಿದೆ. 12 ಇಂಚಿನ ಅಲಾಯ್‌ ವೀಲ್‌ ಅನ್ನು ಟಿವಿಎಸ್‌ ಎನ್‌ಟಾರ್ಕ್‌ ಇದೆ.

ಬೈಕ್‌ ರೇಸರ್‌ ಆಗಲು ಬಯಸುವ ಮಕ್ಕಳಿಗೆ ಇದು ಆರಂಭಿಕ ಕಲಿಕೆಗೆ ಪೂರಕ

ದೊಡ್ಡವರಾದ ಬಳಿಕ ರೇಸ್‌ ಬೈಕ್‌ನಲ್ಲಿ ಸಾಧನೆ ಮಾಡಬೇಕೆಂದು ಬಯಸುವ ಮಕ್ಕಳಿಗೆ ಈ ಬೈಕ್‌ ಒಂದು ಆರಂಭಿಕ ಬೈಕಾಗಲಿದೆ. ಈ ಬೈಕ್‌ ನಮ್ಮ ಇತರೆ 150 ಸಿಸಿ ಬೈಕ್‌ನಷ್ಟೇ ಪವರ್‌ ಹೊಂದಿದ್ದರೂ ರೇಸ್‌ ಮಾಡಲು ಪೂರಕವಾಗಿರುವಂತೆ ಇದೆ. ಹೀಗಾಗಿ, ಮಕ್ಕಳು ಟ್ರ್ಯಾಕ್‌ನಲ್ಲಿ ಸುರಕ್ಷಿತ ಉಡುಗೆಗಳನ್ನು, ಹೆಲ್ಮೆಟ್‌ ಧರಿಸಿ ಈ ಬೈಕ್‌ನಲ್ಲಿ ಚಾಲನೆ ಮಾಡಲು ಪ್ರಯತ್ನ ಮಾಡಬಹುದು. ಭವಿಷ್ಯದಲ್ಲಿ ದೊಡ್ಡ ಬೈಕ್‌ನಲ್ಲಿ ರೇಸ್‌ ಮಾಡಿ ಸಾಧನೆ ಮಾಡಬಹುದು.

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ