logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Maruti Suzuki: ಸ್ಟೇರಿಂಗ್​ ಸಿಸ್ಟಮ್​ನಲ್ಲಿ ದೋಷ; 87 ಸಾವಿರ ಕಾರುಗಳನ್ನು ಹಿಂಪಡೆಯಲಿದೆ ಮಾರುತಿ ಸುಜುಕಿ

Maruti Suzuki: ಸ್ಟೇರಿಂಗ್​ ಸಿಸ್ಟಮ್​ನಲ್ಲಿ ದೋಷ; 87 ಸಾವಿರ ಕಾರುಗಳನ್ನು ಹಿಂಪಡೆಯಲಿದೆ ಮಾರುತಿ ಸುಜುಕಿ

Meghana B HT Kannada

Jul 25, 2023 01:07 PM IST

google News

87 ಸಾವಿರ ಕಾರುಗಳನ್ನು ಹಿಂಪಡೆಯಲಿದೆ ಮಾರುತಿ ಸುಜುಕಿ ಕಂಪನಿ

    • Automobile news: 2021ರ ಜುಲೈ 5 ಮತ್ತು 2023ರ ಫೆಬ್ರವರಿ 15ರ ನಡುವೆ ತಯಾರಿಸಲಾದ ಎಸ್​-ಪ್ರೆಸ್ಸೋ (S-Presso) ಮತ್ತು ಎಕೋ (Eeco) ಕಾರುಗಳ ಸ್ಟೇರಿಂಗ್​ ವ್ಯವಸ್ಥೆಯಲ್ಲಿ ದೋಷಗಳು ಕಂಡುಬಂದಿದ್ದು, ದೂರುಗಳು ಬಂದಿದ್ದವು. ದೋಷ ಕಂಡು ಬಂದ 87,599 ಕಾರುಗಳನ್ನು ರಿಕಾಲ್​ ಮಾಡುವುದಾಗಿ ಮಾರುತಿ ಸುಜುಕಿ ಕಂಪನಿ ಘೋಷಿಸಿದೆ.
87 ಸಾವಿರ ಕಾರುಗಳನ್ನು ಹಿಂಪಡೆಯಲಿದೆ ಮಾರುತಿ ಸುಜುಕಿ ಕಂಪನಿ
87 ಸಾವಿರ ಕಾರುಗಳನ್ನು ಹಿಂಪಡೆಯಲಿದೆ ಮಾರುತಿ ಸುಜುಕಿ ಕಂಪನಿ

ಭಾರತದ ಅತಿದೊಡ್ಡ ಕಾರು ತಯಾರಕ ಕಂಪನಿ ಮಾರುತಿ ಸುಜುಕಿ ಇಂಡಿಯಾ ಈಗಾಗಲೇ ಮಾರಾಟವಾಗಿರುವ 87 ಸಾವಿರಕ್ಕೂ ಹೆಚ್ಚು ಕಾರುಗಳನ್ನು ಹಿಂಪಡೆಯಲು ನಿರ್ಧರಿಸಿದೆ. ಇದಕ್ಕೆ ಕಾರಣ ಸ್ಟೇರಿಂಗ್​ ಸಿಸ್ಟಮ್​ನಲ್ಲಿ ದೋಷ ಕಂಡುಬಂದಿರುವುದು.

2021ರ ಜುಲೈ 5 ಮತ್ತು 2023ರ ಫೆಬ್ರವರಿ 15ರ ನಡುವೆ ತಯಾರಿಸಲಾದ ಎಸ್​-ಪ್ರೆಸ್ಸೋ (S-Presso) ಮತ್ತು ಎಕೋ (Eeco) ಕಾರುಗಳ ಸ್ಟೇರಿಂಗ್​ ವ್ಯವಸ್ಥೆಯಲ್ಲಿ ದೋಷಗಳು ಕಂಡುಬಂದಿದ್ದು, ದೂರುಗಳು ಬಂದಿದ್ದವು. ದೋಷ ಕಂಡು ಬಂದ 87,599 ಕಾರುಗಳನ್ನು ರಿಕಾಲ್​ ಮಾಡುವುದಾಗಿ ಮಾರುತಿ ಸುಜುಕಿ ಕಂಪನಿ ಘೋಷಿಸಿದೆ.

ಈ ಕಾರುಗಳನ್ನು ರಿಕಾಲ್​ ಮಾಡಿ ಪರಿಶೀಲನೆ ಮಾಡಲಾಗುವುದು. ಬದಲಾವಣೆ ಮಾಡಬೇಕಾದ ಅಗತ್ಯವಿದ್ದಲ್ಲಿ ಕಾರಿನ ಸ್ಟೇರಿಂಗ್​ ಟೈ ರಾಡ್​ ಅನ್ನು ಬದಲಾಯಿಸಕಲಾಗುವುದು. ಸ್ಟೀರಿಂಗ್ ಟೈ ರಾಡ್‌ನ ಒಂದು ಭಾಗದಲ್ಲಿ ದೋಷವಿದೆ ಎಂದು ಶಂಕಿಸಲಾಗಿದೆ. ಇದು ವಾಹನ ಸ್ಟೀರಬಿಲಿಟಿ ಮತ್ತು ನಿರ್ವಹಣೆಯ ಮೇಲೆ ಪರಿಣಾಮ ಬೀರಬಹುದು ಎಂದು ಕಂಪನಿ ಹೇಳಿದೆ.

ಸಮಸ್ಯೆ ಹೊಂದಿರುವ ಕಾರು ಮಾಲೀಕರು ಕಂಪನಿಯ ಅಧಿಕೃತ ಡೀಲರ್ ವರ್ಕ್‌ಶಾಪ್‌ಗಳಿಂದ ದೋಷಯುಕ್ತ ಭಾಗವನ್ನು ಪರಿಶೀಲಿಸಲು ಮತ್ತು ಬದಲಾಯಿಸಲು ಉಚಿತವಾಗಿ ಸಂವಹನವನ್ನು ಸ್ವೀಕರಿಸುತ್ತಾರೆ ಎಂದು ಮಾರುತಿ ಸುಜುಕಿ ಇಂಡಿಯಾ ತಿಳಿಸಿದೆ.

ಮಾರುತಿ ಸುಜುಕಿ ಈ ವಿಚಾರವನ್ನು ಘೋಷಿಸಿದ ಬೆನ್ನಲ್ಲೇ ಸೋಮವಾರ (ಜುಲೈ 24) ಕಂಪನಿಯ ಷೇರು ಬಿಎಸ್‌ಇನಲ್ಲಿ ಶೇ 0.75ರಷ್ಟು ಕುಸಿದಿದೆ. ಈ ವರ್ಷ ಮಾರುತಿ ಸುಜುಕಿ ತನ್ನ ವಾಹನಗಳನ್ನು ರಿಕಾಲ್​ ಮಾಡುತ್ತಿರುವುದು ಇದು ಮೂರನೇ ಬಾರಿ. ಈ ಮೊದಲು ಜನವರಿಯಲ್ಲಿ ಏರ್‌ಬ್ಯಾಗ್ ನಿಯಂತ್ರಕಗಳಲ್ಲಿನ ದೋಷದ ಕಾರಣದಿಂದ 17,362 ಕಾರುಗಳನ್ನು ಹಾಗೂ ಏಪ್ರಿಲ್​ನಲ್ಲಿ 7,213 ಕಾರುಗಳನ್ನು ಹಿಂಪಡೆದು ಸಮ್ಯಸ್ಯೆಗೆ ಪರಿಹಾರ ಒದಗಿಸಿಕೊಟ್ಟಿತ್ತು.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ