Maruti Cars: ಹಬ್ಬದ ಋತುವಿಗೆ ಡಿಸ್ಕೌಂಟ್ ಆರಂಭಿಸಿದ ಮಾರುತಿ ಸುಜುಕಿ, ವ್ಯಾಗನಾರ್ ಸ್ವಿಫ್ಟ್ ಆಲ್ಟೊ ಕೆ10ಗೆ 60 ಸಾವಿರ ರೂವರೆಗೆ ದರಕಡಿತ
Dec 22, 2023 06:04 PM IST
ವ್ಯಾಗನಾರ್ ಸ್ವಿಫ್ಟ್ ಆಲ್ಟೊ ಕೆ10ಗೆ 60 ಸಾವಿರ ರೂವರೆಗೆ ದರಕಡಿತ
Maruti Car Price Discount: ಮಾರುತಿ ಸುಜುಕಿ ಕಂಪನಿಯು ತನ್ನ ಕೆಲವು ಅರೇನಾ ಮಾಡೆಲ್‌ಗಳಿಗೆ ಈ ಸೆಪ್ಟೆಂಬರ್ ತಿಂಗಳಲ್ಲಿ ಡಿಸ್ಕೌಂಟ್ ಘೋಷಿಸಿದೆ. ವ್ಯಾಗನಾರ್ ಸ್ವಿಫ್ಟ್ ಆಲ್ಟೊ ಕೆ10 ಕಾರುಗಳಿಗೆ ಎಷ್ಟು ದರ ಕಡಿತವಿರಲಿದೆ ಎಂದು ತಿಳಿಯೋಣ.
ಬೆಂಗಳೂರು: ಭಾರತದಲ್ಲಿ ಹಬ್ಬದ ಋತು ಆರಂಭವಾಗಿದೆ. ಗಣೇಶ ಚತುರ್ಥಿ, ದೀಪಾವಳಿಯಂತಹ ಹಬ್ಬವನ್ನು ಗಮನದಲ್ಲಿಟ್ಟುಕೊಂಡು ಮಾರುತಿ ಸುಜುಕಿ ಕಂಪನಿಯು ತನ್ನ ಕೆಲವು ಅರೇನಾ ಮಾಡೆಲ್‌ಗಳಿಗೆ ಈ ಸೆಪ್ಟೆಂಬರ್ ತಿಂಗಳಲ್ಲಿ ಡಿಸ್ಕೌಂಟ್ ಘೋಷಿಸಿದೆ. ಹಬ್ಬದ ಋತುವಿನಲ್ಲಿ ದೇಶದಲ್ಲಿ ವಾಹನ ಖರೀದಿ ಹೆಚ್ಚಿರುತ್ತದೆ. ಈ ಅವಧಿಯಲ್ಲಿ ಗ್ರಾಹಕರಿಗೆ ಕಾರು ಕಂಪನಿಗಳು ಒಂದಿಷ್ಟು ದರ ಕಡಿತದ ಆಫರ್ ನೀಡುತ್ತಿವೆ. ಭಾರತದ ಪ್ರಮುಖ ಕಾರು ತಯಾರಿಕಾ ಕಂಪನಿ ಮಾರುತಿ ಸುಜುಕಿಯು ಆಯ್ದ ಮಾಡೆಲ್‌ಗಳಿಗೆ 59 ಸಾವಿರ ರೂಪಾಯಿವರೆಗೆ ಡಿಸ್ಕೌಂಟ್ ಪ್ರಕಟಿಸಿದೆ.
ಅರೇನಾ ಡೀಲರ್‌ಶಿಪ್‌ಗಳಲ್ಲಿ ಎಂಟು ಮಾಡೆಲ್‌ಗಳಿಗೆ ಡಿಸ್ಕೌಂಟ್ ಇದೆ ಎಂದು ದಿ ಮಿಂಟ್ ವರದಿ ಮಾಡಿದೆ. ಕ್ಯಾಶ್ ಡಿಸ್ಕೌಂಟ್, ಎಕ್ಸ್‌ಚೇಂಜ್ ಬೋನಾಸ್, ಕಾರ್ಪೊರೇಟ್ ಡಿಸ್ಕೌಂಟ್ ಇತ್ಯಾದಿಗಳು ಒಳಗೊಂಡಂತೆ ಈ ಡಿಸ್ಕೌಂಟ್ ಘೋಷಣೆಯಾಗಿದೆ. ಅರೇನಾ ಡೀಲರ್‌ಶಿಪ್‌ನಲ್ಲಿ ಸಾಮಾನ್ಯವಾಗಿ ಮಾರುತಿ ಸುಜುಕಿ ಕಂಪನಿಯ ಸಣ್ಣ ಕಾರುಗಳನ್ನು ಮಾರಾಟ ಮಾಡಲಾಗುತ್ತದೆ. ಇತ್ತೀಚಿಗೆ ಅರೇನಾ ಡೀಲರ್‌ಶಿಪ್ ಆರನೇ ವಾರ್ಷಿಕೋತ್ಸವ ಆಚರಿಸಿತ್ತು. ಇಷ್ಟು ವರ್ಷ ಸುಮಾರು 70 ಲಕ್ಷ ಕಾರುಗಳನ್ನು ಅರೇನಾ ಮಾರಾಟ ಮಾಡಿದೆ.
ಮಾರುತಿ ಸುಜುಕಿ ಅರೇನಾ ಡೀಲರ್‌ಶಿಪ್‌ನಲ್ಲಿ ಒಂಬತ್ತು ಮಾಡೆಲ್‌ಗಳಿವೆ. ಆಲ್ಟೊ ಕೆ10, ಎಸ್ ಪ್ರೆಸೊ, ವ್ಯಾಗನಾರ್, ಸೆಲೆರಿಯೊ, ಸ್ವಿಫ್ಟ್, ಡಿಜೈರ್, ಎರ್ಟಿಗಾ, ಇಕೊ ಇತ್ಯಾದಿಗಳಿಗೆ ಡಿಸ್ಕೌಂಟ್ ದೊರಕಲಿದೆ. ಅಂದರೆ, ಬ್ರಿಜಾ ಎಸ್‌ಯುವಿ ಹೊರತುಪಡಿಸಿ ಉಳಿದ ಕಾರುಗಳಿಗೆ ಸೆಪ್ಟೆಂಬರ್‌ನಲ್ಲಿ ಡಿಸ್ಕೌಂಟ್ ದೊರಕಲಿದೆ. ಯಾವ ಕಾರಿಗೆ ಎಷ್ಟು ಡಿಸ್ಕೌಂಟ್ ಇದೆ ಎಂದು ತಿಳಿಯೋಣ.
ಮಾರುತಿ ವ್ಯಾಗನಾರ್
ಸೆಪ್ಟೆಂಬರ್ ತಿಂಗಳಲ್ಲಿ ಮಾರುತಿ ವ್ಯಾಗನಾರ್‌ಗೆ ಡಿಸ್ಕೌಂಟ್ ದೊರಕಲಿದೆ. 35 ಸಾವಿರ ರೂಪಾಯಿ ಕ್ಯಾಶ್ ಡಿಸ್ಕೌಂಟ್, ಉಳಿದಂತೆ 20 ಸಾವಿರ ರೂಪಾಯಿ ಎಕ್ಸ್‌ಚೇಂಜ್ ಬೋನಸ್, ಕಾರ್ಪೊರೇಟ್ ಡಿಸ್ಕೌಂಟ್ 4 ಸಾವಿರ ರೂಪಾಯಿ ದೊರಕಲಿದೆ. ಇದೇ ಸಮಯದಲ್ಲಿ ಸಿಎನ್‌ಜಿ ಆವೃತ್ತಿಗೆ ಇನ್ನಷ್ಟು ಡಿಸ್ಕೌಂಟ್ ದೊರಕಲಿದೆ. ಸಿಎನ್‌ಜಿಗೆ ವ್ಯಾಗನಾರ್‌ಗೆ 30 ಸಾವಿರ ರೂಪಾಯಿ ಕ್ಯಾಶ್ ಡಿಸ್ಕೌಂಟ್ ಸೇರಿದಂತೆ ಒಟ್ಟು 54 ಸಾವಿರ ರೂಪಾಯಿ ಡಿಸ್ಕೌಂಟ್ ದೊರಕಲಿದೆ.
ಮಾರುತಿ ಸ್ವಿಫ್ಟ್
ಸ್ವಿಫ್ಟ್ ಹ್ಯಾಚ್‌ಬ್ಯಾಕ್ ಕಾರಿಗೆ 55 ಸಾವಿರ ರೂಪಾಯಿವರೆಗೆ ವಿನಾಯಿತಿ ದೊರಕಲಿದೆ. ಅದರಲ್ಲಿ ಕ್ಯಾಶ್ ಬೆನಿಫಿಟ್ಸ್ 35 ಸಾವಿರ ರೂಪಾಯಿ, ಎಕ್ಸ್‌ಚೇಂಜ್ ಬೋನಸ್ 20 ಸಾವಿರ ರೂಪಾಯಿ ದೊರಕಲಿದೆ. ಹೆಚ್ಚುವರಿಯಾಗಿ ಕಾರ್ಪೊರೇಟ್ ಡಿಸ್ಕೌಂಟ್ 5 ಸಾವಿರ ರೂಪಾಯಿ ದೊರಕಲಿದೆ. ಗಮನಿಸಿ, ಎಲ್ಲಾ ಆವೃತ್ತಿಗಳಿಗೂ ಈ ಡಿಸ್ಕೌಂಟ್ ಅನ್ವಯವಾಗದು. ಝಡ್‌ಎಕ್ಸ್‌ಐ ಮತ್ತು ಝಡ್‌ಎಕ್ಸ್‌ಐ ಪ್ಲಸ್‌ಗೆ ಕಡಿಮೆ ಡಿಸ್ಕೌಂಟ್ ದೊರಕಲಿದೆ. ಅಂದರೆ, ಇವೆರಡು ಆವೃತ್ತಿಗಳಿಗೆ 25 ಸಾವಿರ ರೂಪಾಯಿ ಕ್ಯಾಶ್ ಡಿಸ್ಕೌಂಟ್ ಇರಲಿದೆ. ಎಕ್ಸ್‌ಚೇಂಜ್ ಬೋನಾಸ್ 15 ಸಾವಿರ ರೂಪಾಯಿ ಇರಲಿದೆ.
ಮಾರುತಿ ಆಲ್ಟೊ ಕೆ10
ಆಲ್ಟೋ ಕಾರಿಗೂ ಸೆಪ್ಟೆಂಬರ್‌ನಲ್ಲಿ ಡಿಸ್ಕೌಂಟ್ ದೊರಕಲಿದೆ. ಗ್ರಾಹಕರಿಗೆ 54 ಸಾವಿರ ರೂ.ವರೆಗೆ ಡಿಸ್ಕೌಂಟ್ ದೊರಕಲಿದೆ. ಕ್ಯಾಶ್ ಬೆನಿಫಿಟ್ಸ್ 35 ಸಾವಿರ ರೂಪಾಯಿ, ಎಕ್ಸ್‌ಚೇಂಜ್ ಬೋನಸ್ 20 ಸಾವಿರ ರೂಪಾಯಿ ದೊರಕಲಿದೆ. ಹೆಚ್ಚುವರಿಯಾಗಿ ಕಾರ್ಪೊರೇಟ್ ಡಿಸ್ಕೌಂಟ್ 5 ಸಾವಿರ ರೂಪಾಯಿ ದೊರಕಲಿದೆ. ಪೆಟ್ರೋಲ್ ಆಟೋಮ್ಯಾಟಿಕ್ ಮತ್ತು ಸಿಎನ್‌ಜಿ ಆವೃತ್ತಿಗೆ ಕ್ಯಾಷ್ ಬೆನಿಫಿಟ್ 20 ಸಾವಿರ ರೂಪಾಯಿ ಇರಲಿದೆ.
ಇದೇ ರೀತಿ ಸೆಲೆರಿಯೊ, ಡಿಜೈರ್, ಎರ್ಟಿಗಾ, ಎಕೊ ಕಾರಿಗೂ ಡಿಸ್ಕೌಂಟ್ ದೊರಕಲಿದೆ.