logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Bajrang Dal Ban: ಬಜರಂಗ ದಳ ನಿಷೇಧ; ಇತರೆ ಕಾಂಗ್ರೆಸ್‌ ಆಳ್ವಿಕೆ ರಾಜ್ಯಗಳಿಗೆ ಮಾದರಿ ಎನಿಸತೊಡಗಿದೆ ಕರ್ನಾಟಕ ಕಾಂಗ್ರೆಸ್‌ ಪ್ರಣಾಳಿಕೆ

Bajrang Dal Ban: ಬಜರಂಗ ದಳ ನಿಷೇಧ; ಇತರೆ ಕಾಂಗ್ರೆಸ್‌ ಆಳ್ವಿಕೆ ರಾಜ್ಯಗಳಿಗೆ ಮಾದರಿ ಎನಿಸತೊಡಗಿದೆ ಕರ್ನಾಟಕ ಕಾಂಗ್ರೆಸ್‌ ಪ್ರಣಾಳಿಕೆ

HT Kannada Desk HT Kannada

May 16, 2023 05:10 PM IST

google News

ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ದಿವಂಗತ ಕೈಲಾಶ್ ಜೋಶಿ ಅವರ ಪುತ್ರ ದೀಪಕ್ ಜೋಶಿ ಶನಿವಾರ ಭೋಪಾಲ್‌ನಲ್ಲಿರುವ ಪಕ್ಷದ ಪ್ರಧಾನ ಕಚೇರಿಯಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಯಾದ ನಂತರ ಅವರಿಗೆ ಮಧ್ಯಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಕಮಲ್ ನಾಥ್ ಸಿಹಿ ತಿನಿಸಿದರು. (ಕಡತ ಚಿತ್ರ)

  • Bajrang Dal Ban: ಕರ್ನಾಟಕದಲ್ಲಿ ಬಜರಂಗ ಬಲಿಯ ಆಶೀರ್ವಾದ ಕಾಂಗ್ರೆಸ್‌ ಪಕ್ಷಕ್ಕೆ ಸಿಕ್ಕಿದೆ. ಮಧ್ಯಪ್ರದೇಶದಲ್ಲೂ ಸಿಗಲಿದೆ ಎಂದು ಮಧ್ಯಪ್ರದೇಶ ಪ್ರದೇಶ ಕಾಂಗ್ರೆಸ್‌ ಕಮಿಟಿ ಅಧ್ಯಕ್ಷ ಕಮಲನಾಥ್‌ ಘೋಷಿಸಿದ್ದಾರೆ. ಇದರೊಂದಿಗೆ ಅಲ್ಲಿಯೂ ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಬಜರಂಗದಳ ನಿಷೇಧ ಸೇರಿಸುವ ಸುಳಿವು ನೀಡಿದ್ದಾರೆ ಅವರು. ಈ ವಿದ್ಯಮಾದನ ವಿವರ ಇಲ್ಲಿದೆ.

ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ದಿವಂಗತ ಕೈಲಾಶ್ ಜೋಶಿ ಅವರ ಪುತ್ರ ದೀಪಕ್ ಜೋಶಿ ಶನಿವಾರ ಭೋಪಾಲ್‌ನಲ್ಲಿರುವ ಪಕ್ಷದ ಪ್ರಧಾನ ಕಚೇರಿಯಲ್ಲಿ  ಕಾಂಗ್ರೆಸ್‌ಗೆ ಸೇರ್ಪಡೆಯಾದ ನಂತರ ಅವರಿಗೆ ಮಧ್ಯಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಕಮಲ್ ನಾಥ್ ಸಿಹಿ ತಿನಿಸಿದರು. (ಕಡತ ಚಿತ್ರ)
ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ದಿವಂಗತ ಕೈಲಾಶ್ ಜೋಶಿ ಅವರ ಪುತ್ರ ದೀಪಕ್ ಜೋಶಿ ಶನಿವಾರ ಭೋಪಾಲ್‌ನಲ್ಲಿರುವ ಪಕ್ಷದ ಪ್ರಧಾನ ಕಚೇರಿಯಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಯಾದ ನಂತರ ಅವರಿಗೆ ಮಧ್ಯಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಕಮಲ್ ನಾಥ್ ಸಿಹಿ ತಿನಿಸಿದರು. (ಕಡತ ಚಿತ್ರ) (Sanjeev Gupta /ANI Photo)

ಕರ್ನಾಟಕದಲ್ಲಿ ಬಜರಂಗದಳ ಮತ್ತು ಅಂತಹ ಸಂಘಟನೆಗಳು, ಆ ರೀತಿಯ ವ್ಯಕ್ತಿಗಳ ವಿರುದ್ಧ ನಿರ್ಣಾಯಕ ಕ್ರಮ ಕೈಗೊಳ್ಳುವುದಾಗಿ ಚುನಾವಣಾ ಪ್ರಣಾಳಿಕೆಯಲ್ಲಿ ಕರ್ನಾಟಕ ಕಾಂಗ್ರೆಸ್‌ ಘೋಷಿಸಿತ್ತು. ನಿರ್ಣಾಯಕ ಕ್ರಮ ಎಂದರೆ ಅಗತ್ಯವೆನಿಸಿದರೆ ಅವುಗಳನ್ನು ನಿಷೇಧಿಸುವ ಕ್ರಮ ಎಂದು ಅರ್ಥ. ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷವು 135 ಸ್ಥಾನಗಳ ಭರ್ಜರಿ ಗೆಲುವು ದಾಖಲಿಸಿದ್ದು, ಸ್ಪಷ್ಟ ಬಹುಮತವನ್ನೂ ಹೊಂದಿದೆ.

ಇದೇ ವರ್ಷ ಮಧ್ಯಪ್ರದೇಶದಲ್ಲೂ ರಾಜ್ಯ ವಿಧಾನಸಭಾ ಚುನಾವಣೆಯ ನಡೆಯಲಿದೆ. ಇತ್ತೀಚೆಗೆ (ಮೇ 13) ಮಧ್ಯಪ್ರದೇಶ ಪ್ರದೇಶ ಕಾಂಗ್ರೆಸ್‌ ಕಮಿಟಿಯ ಅಧ್ಯಕ್ಷ ಕಮಲನಾಥ್‌ ಅವರು, ಕರ್ನಾಟಕದಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಬಜರಂಗ ಬಲಿಯ ಆಶೀರ್ವಾದ ಸಿಕ್ಕಿದೆ. ಮಧ್ಯಪ್ರದೇಶದಲ್ಲೂ ಆ ಆಶೀರ್ವಾದ ಸಿಗಲಿದೆ ಎಂದು ಹೇಳುವ ಮೂಲಕ ಆ ರಾಜ್ಯದಲ್ಲೂ ಬಜರಂಗ ದಳ ಬ್ಯಾನ್‌ ವಿಚಾರ ಚಿಂತನೆಯಲ್ಲಿದೆ ಎಂಬುದನ್ನು ಸೂಚ್ಯವಾಗಿ ತಿಳಿಸಿದ್ದಾರೆ. ಇದು ರಾಜಕೀಯವಾಗಿ ಅಲ್ಲಿ ಸಂಚಲನ ಸೃಷ್ಟಿಸಿದೆ.

ಕಮಲ್ ನಾಥ್ ಅವರು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ವಿರುದ್ಧ ವಾಗ್ದಾಳಿ ನಡೆಸುತ್ತ, ರಾಜ್ಯದ ಬಿಜೆಪಿ ನಾಯಕ ಕರ್ನಾಟಕದಲ್ಲಿ ಪ್ರಚಾರ ಮಾಡಿದ ಎಂಟು ಸ್ಥಾನಗಳ ಪೈಕಿ ಆರು ಸ್ಥಾನಗಳನ್ನು ಬಿಜೆಪಿ ಕಳೆದುಕೊಂಡಿದೆ ಎಂದು ಹೇಳಿದರು.

ಕರ್ನಾಟಕದಲ್ಲಿ ಕಾಂಗ್ರೆಸ್‌ ಪಕ್ಷದ ಗೆಲುವನ್ನು ಮಧ್ಯಪ್ರದೇಶ ಕಾಂಗ್ರೆಸ್‌ ಕಚೇರಿಯಲ್ಲಿ ಆಚರಿಸುತ್ತಿದ್ದ ಸಂದರ್ಭದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಕಮಲನಾಥ್‌, ಕರ್ನಾಟಕದಲ್ಲಿ ಚೌಹಾಣ್‌ ಅವರು ಎಂಟು ಕ್ಷೇತ್ರಗಳಲ್ಲಿ ಪ್ರಚಾರ ಮಾಡಿದರು. ಅದರಲ್ಲಿ ಆರರಲ್ಲಿ ಬಿಜೆಪಿ ಸೋಲು ಕಂಡಿದೆ. ಇಂತಹ ಸನ್ನಿವೇಶವನ್ನು ನಾವು ಮ‍ಧ್ಯಪ್ರದೇಶದಲ್ಲೂ ನಿರೀಕ್ಷಿಸುತ್ತಿದ್ದೇವೆ" ಎಂದು ಹೇಳಿದರು.

ಕರ್ನಾಟಕದಂತೆಯೇ ಬುದ್ಧಿವಂತರ ರಾಜ್ಯ ಮಧ್ಯಪ್ರದೇಶ. ಇಲ್ಲೂ ಬಜರಂಗ ಬಲಿಯ ಆಶೀರ್ವಾದ ಕಾಂಗ್ರೆಸ್‌ ಪಕ್ಷಕ್ಕೆ ಸಿಗಲಿದೆ ಎಂದೂ ಕಮಲನಾಥ್‌ ಹೇಳಿದರು.

ಮಧ್ಯಪ್ರದೇಶ ಚುನಾವಣೆ ಈ ವರ್ಷವೇ ಇದ್ದು, ಛತ್ತೀಸ್‌ಗಢದಲ್ಲೂ ಅದೇ ಸಮಯದಲ್ಲಿ ವಿಧಾಸಭಾ ಚುನಾವಣೆ ನಡೆಯಲಿದೆ.

ಸಮಾಜದಲ್ಲಿ ಜಾತಿ ಮತ್ತು ಧರ್ಮದ ಹೆಸರಿನಲ್ಲಿ ದ್ವೇಷ ಪ್ರಚೋದಿಸುವ ಬಜರಂಗ ದಳ ಸೇರಿ ಆ ಮಾದರಿಯ ಇತರೆ ಸಂಘಟನೆ, ಅದೇ ರೀತಿ ವ್ಯಕ್ತಿಗಳನ್ನು ನಿಷೇಧಿಸುವುದಾಗಿ ಕರ್ನಾಟಕ ಕಾಂಗ್ರೆಸ್‌ ಪ್ರಣಾಳಿಕೆ ಘೋಷಿಸಿದೆ. ಇದು ಈಗ ದೇಶದ ಇತರೆ ಕಾಂಗ್ರೆಸ್‌ ಆಳ್ವಿಕೆಯ ರಾಜ್ಯಗಳ ಗಮನಸೆಳೆದಿದೆ. ಎಲ್ಲೆಲ್ಲಿ ಹಿಂದು ಪ್ರಾಬಲ್ಯ ಇದೆಯೋ ಅಲ್ಲಿ ಈ ಅಂಶವನ್ನು ಪ್ರಣಾಳಿಕೆಯಲ್ಲಿ ಸೇರಿಸಲು ಕಾಂಗ್ರೆಸ್‌ ನಾಯಕರು ಚಿಂತನೆ ನಡೆಸಿದ್ದಾರೆ.

ಕರ್ನಾಟಕದಲ್ಲಿ ಚುನಾವಣಾ ಪ್ರಚಾರದ ವೇಳೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಈ ವಿಚಾರ ಪ್ರಸ್ತಾಪಿಸಿದ್ದರು. ಕಾಂಗ್ರೆಸ್‌ ಪಕ್ಷ ಹಿಂದೆ ರಾಮನ ಜತೆಗೆ ಸೆಣೆಸಲು ಮುಂದಾಗಿತ್ತು. ಈಗ ರಾಮ ಭಕ್ತ ಹನುಮಾನ್‌ ಜತೆಗೆ ಹೋರಾಟಕ್ಕೆ ಅಣಿಯಾಗಿದೆ ಎಂದು ಹೇಳುತ್ತ, ಜೈ ಬಜರಂಗ ಬಲಿ ಘೋಷಣೆ ಮೊಳಗಿಸಿದ್ದರು.

ಕಾಂಗ್ರೆಸ್‌ ನಾಯಕ ಪವನ್‌ ಖೇರಾ ಈ ವಿಚಾರಕ್ಕೆ ಪ್ರತಿಕ್ರಿಯಿಸಿದ್ದು, ಬಜರಂಗ ಬಲಿಗೆ ಅವಮಾನ ಮಾಡುವ ಅಧಿಕಾರವನ್ನು ಪ್ರಧಾನಮಂತ್ರಿಗೆ ಯಾರೂ ಕೊಟ್ಟಿಲ್ಲ ಎಂದು ಪ್ರತಿಟೀಕೆ ಮಾಡಿದ್ದರು.

ಈ ನಡುವೆ, ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಸಮಾಜದಲ್ಲಿ ಶಾಂತಿ ಕದಡಿದರೆ ವಿಶ್ವ ಹಿಂದೂ ಪರಿಷತ್‌ನ ಯುವ ಘಟಕ ಬಜರಂಗ ದಳವನ್ನು ನಿಷೇಧ ಮಾಡುವುದಾಗಿ ಹೇಳಿತ್ತು.

ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿನ ಭರವಸೆಯ ಸಂಬಂಧ 100 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪಂಜಾಬ್ ಕೋರ್ಟ್ ಸಮನ್ಸ್ ಜಾರಿಗೊಳಿಸಿದೆ.

ಏತನ್ಮಧ್ಯೆ, ಮಧ್ಯಪ್ರದೇಶದ ಹೊರತಾಗಿ, ಬಜರಂಗ ದಳ ವಿವಾದವು ತೆಲಂಗಾಣ, ಮಹಾರಾಷ್ಟ್ರ, ಛತ್ತೀಸ್‌ಗಢ, ಅಸ್ಸಾಂಗಳಲ್ಲಿ ರಾಜಕೀಯ ನಾಯಕರ ನಡುವೆ ವಾಕ್ಸಮರಕ್ಕೆ ದಾರಿ ಮಾಡಿಕೊಟ್ಟಿದೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ