logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Big Ticket Lottery: ಬೆಂಗಳೂರಿನ ಅರುಣ್‌ ಅಬುಧಾಬಿ ಲಾಟರಿಯಲ್ಲಿ ಗೆದ್ದಿದ್ದು 44 ಕೋಟಿ

Big Ticket Lottery: ಬೆಂಗಳೂರಿನ ಅರುಣ್‌ ಅಬುಧಾಬಿ ಲಾಟರಿಯಲ್ಲಿ ಗೆದ್ದಿದ್ದು 44 ಕೋಟಿ

D M Ghanashyam HT Kannada

Apr 05, 2023 10:41 AM IST

google News

ಅಬುಧಾಬಿಯಲ್ಲಿ ನಡೆದ ಲಾಟರಿ ಡ್ರಾ ಸಮಾರಂಭ

    • Series 250 Big Ticket Live draw: ಅರುಣ್ ಕುಮಾರ್ ಅವರು ಗೆದ್ದಿದ್ದು 2 ಕೋಟಿ ದಿರ್ಹಮ್. ಭಾರತೀಯ ರೂಪಾಯಿ ಲೆಕ್ಕದಲ್ಲಿ ಇದು 44,75,00,000 (44.75 ಕೋಟಿ) ಆಗುತ್ತದೆ.
ಅಬುಧಾಬಿಯಲ್ಲಿ ನಡೆದ ಲಾಟರಿ ಡ್ರಾ ಸಮಾರಂಭ
ಅಬುಧಾಬಿಯಲ್ಲಿ ನಡೆದ ಲಾಟರಿ ಡ್ರಾ ಸಮಾರಂಭ (YouTube/@BigTicketLive)

ಬೆಂಗಳೂರು: ನಗರದ ಅರುಣ್ ಕುಮಾರ್ ವಟಕ್ಕೆ ಕೊರೊತ್ (Arun Kumar Vatakke Koroth) ಎನ್ನುವವರು ಅಬುಧಾಬಿಯ (Abu Dhabi) ಬಿಗ್ ಲಾಟರಿಯಲ್ಲಿ ಗ್ರಾಂಡ್ ಪ್ರೈಜ್ ಗೆದ್ದಿದ್ದಾರೆ. ಅಬುಧಾಬಿಯಲ್ಲಿ ನಡೆದ 250ರ ಸರಣಿಯ ಬಿಟ್ ಟಿಕೆಟ್ ಲೈವ್ ಡ್ರಾ (Series 250 Big Ticket Live draw) ಸಮಾರಂಭದಲ್ಲಿ ಅವರ ಗೆಲುವನ್ನು ಘೋಷಿಸಲಾಯಿತು. ಜಾಗತಿಕ ಮಟ್ಟದ ಈ ಲಾಟರಿ ಟಿಕೆಟ್‌ ಅನ್ನು ವಿಶ್ವದ ಹಲವು ದೇಶಗಳ ಜನರು ಖರೀದಿಸಿರುತ್ತಾರೆ. ನೇರ ಪ್ರಸಾರವಾಗುವ ಸಮಾರಂಭದಲ್ಲಿ ವಿಜೇತರನ್ನು ಆಯ್ಕೆ ಮಾಡಲಾಗುತ್ತದೆ. ಗೆಲುವು ಸಾಧಿಸಿದವರಿಗೆ ನಗದು ಬಹುಮಾನ ಅಥವಾ ಅದಕ್ಕೆ ಸರಿಸಮಾನ ಮೊತ್ತದ ಐಷಾರಾಮಿ ಕಾರ್ ಆಯ್ಕೆ ಮಾಡಿಕೊಳ್ಳುವ ಅವಕಾಶ ಇರುತ್ತದೆ. ಈ ಬಾರಿ ಅರುಣ್ ಕುಮಾರ್ ಅವರು ಗೆದ್ದಿದ್ದು 2 ಕೋಟಿ ದಿರ್ಹಮ್. ಭಾರತೀಯ ರೂಪಾಯಿ ಲೆಕ್ಕದಲ್ಲಿ ಇದು 44,75,00,000 (44.75 ಕೋಟಿ) ಆಗುತ್ತದೆ.

ಗಲ್ಫ್‌ ನ್ಯೂಸ್‌ ವರದಿಯ ಪ್ರಕಾರ ಅರುಣ್ ಅವರಿಗೆ ಬಿಗ್ ಟಿಕೆಟ್ ಲೈವ್ ಡ್ರಾ ಬಗ್ಗೆ ಅವರ ಗೆಳೆಯರಿಂದ ತಿಳಿದುಬಂತು. ನಂತರ ಅವರು ಆನ್‌ಲೈನ್‌ನಲ್ಲಿ ಬಿಟ್‌ ಟಿಕೆಟ್ ರಫಲ್ ಟಿಕೆಟ್‌ಗಳನ್ನು ಖರೀದಿಸಿದರು. ಮಾರ್ಚ್ 22ರಂದು ಅವರು 2ನೇ ಟಿಕೆಟ್ ಖರೀದಿಸಿ ಅದೃಷ್ಟ ಪರೀಕ್ಷೆಗೆ ಮುಂದಾದರು.

ನಿನ್ನೆ (ಏ 4) ನೇರ ಪ್ರಸಾರವಾದ ಕಾರ್ಯಕ್ರಮದಲ್ಲಿ ಅರುಣ್ ಅವರ ಗೆಲುವನ್ನು ಘೋಷಿಸಲಾಯಿತು. ವೇದಿಕೆಯಲ್ಲಿದ್ದ ಕೆಲ ಗಣ್ಯರು ಅರುಣ್ ಅವರ ಟಿಕೆಟ್‌ ಅವನ್ನು ಮರುಪರಿಶೀಲಿಸಿ, ಅವರ ಗೆಲುವನ್ನು ಖಚಿತಪಡಿಸಿದರು. ನಂತರ ಕಾರ್ಯಕ್ರಮದ ಆಯೋಜಕರು ಅರುಣ್ ಅವರಿಗೆ 20 ಕೋಟಿ ಡಿರ್ಹಾಮ್ಸ್‌ ವಿಜೇತರಾಗಿರುವ ಮಾಹಿತಿ ನೀಡಿದರು. ಈ ಹಣವನ್ನು ಏನು ಮಾಡಬೇಕು ಎಂದು ಇನ್ನೂ ಯೋಚಿಸಿಲ್ಲ ಎಂದು ಅರುಣ್ ಹೇಳಿದರು.

ಇದೀಗ ಈ ವಿಡಿಯೊ ಯುಟ್ಯೂಬ್‌ನಲ್ಲಿ ಟ್ರೆಂಡ್ ಆಗುತ್ತಿದ್ದು ಕೇವಲ ಒಂದೇ ದಿನದಲ್ಲಿ 60 ಸಾವಿರಕ್ಕೂ ಹೆಚ್ಚು ಜನರು ನೋಡಿದ್ದಾರೆ. ಸಾವಿರಾರು ಮಂದಿ ಲೈಕ್ ಮಾಡಿದ್ದಾರೆ. ಅರುಣ್ ಅವರಿಗೆ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ. 'ಅಭಿನಂದನೆಗಳು ಅರುಣ್, ನಿಮಗೆ ಬಹುಮಾನ ಬಂದಿರುವುದು ತಿಳಿದು ತುಂಬಾ ಸಂತೋಷವಾಯಿತು. ಹಣವನ್ನು ಸಮರ್ಪಕ ರೀತಿಯಲ್ಲಿ ಬಳಸಿ, ದೇವರ ದಯೆ ನಿಮಗಿರಲಿ' ಎಂದು ವ್ಯಕ್ತಿಯೊಬ್ಬರು ಹಾರೈಸಿದ್ದಾರೆ. ಉಳಿದಂತೆ ಬಹುತೇಕರು, 'ವಿಜೇತರಿಗೆ ಅಭಿನಂದನೆಗಳು' ಎಂದು ಶುಭಾಶಯ ಕೋರಿದ್ದಾರೆ.

 

 

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ