Chandrayaan 3: ಚಂದ್ರಯಾನ 3 ಉಡಾವಣೆ ಜುಲೈ 14ಕ್ಕೆ; ದಿನಾಂಕ, ಸಮಯ ಘೋಷಣೆ ಮಾಡಿದ ಇಸ್ರೋ
Jul 06, 2023 05:41 PM IST
ಚಂದ್ರಯಾನ-3 ಅನ್ನು ಹೊತ್ತಿರುವ ISRO ದ LVM3 ಅನ್ನು ಅದರ ಉಡಾವಣೆಗೆ ಮುಂಚಿತವಾಗಿ ಉಡಾವಣಾ ಪ್ಯಾಡ್‌ಗೆ ಸರಿಸಲಾಗಿದೆ.
Chandrayaan 3: ಚಂದ್ರಯಾನ 3ಕ್ಕೆ ದಿನಗಣನೆ ಶುರುವಾಗಿದೆ. ಉಡಾವಣಾ ದಿನಾಂಕ ಜುಲೈ 14 ಎಂದು ಇಸ್ರೋ ಈಗಷ್ಟೆ ಘೋಷಿಸಿದೆ. ಇಸ್ರೋ ಟ್ವೀಟ್ ಪ್ರಕಾರ, ಚಂದ್ರಯಾನ 3 ಜುಲೈ 14ರಂದು ಅಪರಾಹ್ನ 2.35ಕ್ಕೆ ಉಡಾವಣೆ ಆಗಲಿದೆ.
ಭಾರತದ ಮಹತ್ವಾಕಾಂಕ್ಷೆಯ ಬಾಹ್ಯಾಕಾಶ ಯೋಜನೆಯಾದ ಚಂದ್ರಯಾನ 3ಕ್ಕೆ ದಿನಗಣನೆ ಶುರುವಾಗಿದೆ. ಉಡಾವಣಾ ದಿನಾಂಕ ಜುಲೈ 14 ಎಂದು ಇಸ್ರೋ ಈಗಷ್ಟೆ ಘೋಷಿಸಿದೆ.
ಇಸ್ರೋ ಟ್ವೀಟ್ ಪ್ರಕಾರ, ಚಂದ್ರಯಾನ 3 ಜುಲೈ 14ರಂದು ಅಪರಾಹ್ನ 2.35ಕ್ಕೆ ಉಡಾವಣೆ ಆಗಲಿದೆ.
ಚಂದ್ರಯಾನ ಬಾಹ್ಯಾಕಾಶ ನೌಕೆಯು ಒಂದು ತಿಂಗಳಿಗಿಂತ ಸ್ವಲ್ಪ ಹೆಚ್ಚು ಅವಧಿಯ ಪ್ರಯಾಣವನ್ನು ಮಾಡಿ ಚಂದ್ರನ ಮೇಲ್ಮೈ ತಲುಪಲಿದೆ. ಚಂದ್ರನ ಮೇಲ್ಮೈಯಲ್ಲಿ ಉದ್ದೇಶಿತ ಲ್ಯಾಂಡಿಂಗ್ ಆಗಸ್ಟ್ 23 ರ ಸುಮಾರಿಗೆ ನಿರೀಕ್ಷಿಸಲಾಗಿದೆ ಎಂದು ಐಎಎನ್‌ಎಸ್ ಸ್ವಲ್ಪ ದಿನದ ಹಿಂದೆ ವರದಿ ಮಾಡಿತ್ತು.
ಇಸ್ರೋ ಅಧ್ಯಕ್ಷ ಎಸ್. ಸೋಮನಾಥ್ ಅವರು ಜುಲೈ 12 ಅಥವಾ ಜುಲೈ 13 ರಂದು ಸಾಧ್ಯವಾದಷ್ಟು ಬೇಗ ಮಿಷನ್ ಅನ್ನು ಪ್ರಾರಂಭಿಸುವ ಸಂಸ್ಥೆಯ ಗುರಿಯನ್ನು ಬಹಿರಂಗಪಡಿಸಿದ್ದರು. ಈ ಮಿಷನ್‌ಗೆ 615 ಕೋಟಿ ರೂಪಾಯಿ ಬಜೆಟ್ ಅನ್ನು ನಿಗದಿಪಡಿಸಲಾಗಿತ್ತು.
ಇಸ್ರೋ ಚಂದ್ರಯಾನ-3 ಮಿಷನ್ ಕಾರ್ಯಸಾಧನೆಗೆ 3 ಮುಖ್ಯ ಗುರಿ
ಚಂದ್ರಯಾನ 3ರ ಕಾರ್ಯಸಾಧನೆಗಾಗಿ ಮೂರು ಗುರಿಗಳನ್ನು ಇಸ್ರೋ ನಿಗದಿ ಮಾಡಿದೆ. ಇದರಂತೆ, ಚಂದ್ರನ ಮೇಲೆ ಸುರಕ್ಷಿತ ಮತ್ತು ಸೌಮ್ಯವಾದ ಲ್ಯಾಂಡಿಂಗ್ ಅನ್ನು ಯಶಸ್ವಿಯಾಗಿ ಸಾಧಿಸುವುದು, ಚಂದ್ರನ ಮೇಲ್ಮೈಯಲ್ಲಿ ಚಲಿಸುವ ರೋವರ್ ಸಾಮರ್ಥ್ಯವನ್ನು ಪ್ರದರ್ಶಿಸುವುದು ಮತ್ತು ನೇರವಾಗಿ ಸ್ಥಳದಲ್ಲಿ (ಇನ್-ಸಿಟು) ವೈಜ್ಞಾನಿಕ ವೀಕ್ಷಣೆಗಳನ್ನು ನಡೆಸುವುದು ಸೇರಿವೆ.