logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Live Update: ಪ್ರಧಾನಿ ಮೋದಿ ಈಜಿಪ್ಟ್ ಪ್ರವಾಸ ಶುರು; ಕರ್ನಾಟಕದ ಮಳೆ ಮಾಹಿತಿ; ರಷ್ಯಾದಲ್ಲಿ ದಂಗೆ
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನಾಲ್ಕು ದಿನಗಳ ಅಮೆರಿಕ ಪ್ರವಾಸ ಮುಗಿಸಿದ ನಂತರ ಯುನೈಟೆಡ್ ಸ್ಟೇಟ್ಸ್‌ನ ಜಾಯಿಂಟ್ ಬೇಸ್ ಆಂಡ್ರ್ಯೂಸ್ ವಿಮಾನ ನಿಲ್ದಾಣದಿಂದ ಈಜಿಪ್ಟ್‌ನ ಕೈರೋಗೆ ಪ್ರಯಾಣ ಬೆಳೆಸಿದರು. (ANI ಫೋಟೋ) (PIB)

Live Update: ಪ್ರಧಾನಿ ಮೋದಿ ಈಜಿಪ್ಟ್ ಪ್ರವಾಸ ಶುರು; ಕರ್ನಾಟಕದ ಮಳೆ ಮಾಹಿತಿ; ರಷ್ಯಾದಲ್ಲಿ ದಂಗೆ

Jun 24, 2023 08:31 PM IST

ಅಮೆರಿಕಾದಲ್ಲಿ ಪ್ರವಾಸ ಮುಗಿಸಿದ ಭಾರತದ ಪ್ರಧಾನಿ ನರೇಂದ್ರ ಮೋದಿ ಈಗ ಈಜಿಪ್ಟ್‌ ತಲುಪಿದ್ದಾರೆ. ಅಲ್ಲಿನ ಪ್ರಮುಖರ ಜತೆ ಮಾತುಕತೆ ನಡೆಸಲಿದ್ದಾರೆ.ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಇಂದು ಮಳೆಯಾಗುವ ಸಾಧ್ಯತೆ ಇದ್ದು, ಮೋಡ ಕವಿದ ವಾತಾವರಣವಿದೆ.ವಿವಿಧ ಜಾಗತಿಕ ವಿದ್ಯಮಾನಗಳ ಕುರಿತ ಕ್ಷಣ ಕ್ಷಣದ ಅಪ್‌ಡೇಟ್‌..

Jun 24, 2023 08:30 PM IST

ರಷ್ಯಾದಲ್ಲಿ ತೀವ್ರಗೊಂಡ ಆಂತರಿಕ ದಂಗೆ; ವ್ಯಾಗ್ನರ್‌ ವಿರುದ್ಧ ಸಮರ ಸಾರಿದೆ ಸೇನೆ 

ವ್ಯಾಗ್ನರ್ ಗುಂಪನ್ನು ಗುರಿಯಾಗಿಸಿ ರಷ್ಯಾ ಸೇನಾ ಹೆಲಿಕಾಪ್ಟರ್ ಮೂಲಕ ನಡೆಸಿದ ಗುಂಡಿನ ದಾಳಿಯಲ್ಲಿ ವೊರೊನೆಜ್ ನಗರದ ಹೊರವಲಯದ ಹೆದ್ದಾರಿ ಪಕ್ಕದಲ್ಲಿ ಇದ್ದ ತೈಲ ಘಟಕ, ವ್ಯಾಗ್ನರ್‌ ಪಡೆಯ ವಾಹನ ಹೊತ್ತಿ ಉರಿದಿದೆ. ವಿವರಕ್ಕೆ Russia Coup: ರಷ್ಯಾದಲ್ಲಿ ವ್ಯಾಗ್ನರ್ ಪಡೆ ವಿರುದ್ಧ ಸೇನಾ ಸಮರ; ವೊರೊನೆಜ್ ಹೆದ್ದಾರಿಯಲ್ಲಿ ಸೇನಾ ಹೆಲಿಕಾಪ್ಟರ್ ಗುಂಡಿನ ದಾಳಿ; ವಿಡಿಯೊ

Jun 24, 2023 08:25 PM IST

ಬೆಂಗಳೂರು ಮಂಗಳೂರು ನಡುವೆ ಶಿರಾಡಿ ಘಾಟ್​ನಲ್ಲಿ ಸುರಂಗ ಮಾರ್ಗ ಯೋಜನೆ

ಬೆಂಗಳೂರು ಮಂಗಳೂರು ನಡುವೆ ಶಿರಾಡಿ ಘಾಟ್​ನಲ್ಲಿ ಸುರಂಗಗಳನ್ನೊಳಗೊಂಡ ಸಂಚಾರ ಮಾರ್ಗ ನಿರ್ಮಾಣ ಮಾಡಲು ಯೋಜಿಸಲಾಗಿದೆ ಎಂದು ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ. ವಿವರಕ್ಕೆ - Shiradi Ghat: ಶಿರಾಡಿ ಘಾಟ್ ಮಾರ್ಗದಲ್ಲಿ ಸುರಂಗ ನಿರ್ಮಾಣ ಎಂದ ಸಚಿವ ಸತೀಶ್ ಜಾರಕಿಹೊಳಿ

Jun 24, 2023 07:56 PM IST

ಕೈರೋದಲ್ಲಿರುವ 1000 ವರ್ಷ ಹಳೆಯ ಅಲ್‌ ಹಕಿಮ್‌ ಮಸೀದಿಗೆ ಭೇಟಿ ನೀಡಲಿರುವ ಪ್ರಧಾನಿ ಮೋದಿ 

ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಈಜಿಪ್ಟ್‌ ತಲುಪಿದ್ದು, ಕೈರೋದಲ್ಲಿರುವ 1000 ವರ್ಷ ಹಳೆಯ ಅಲ್‌ ಹಕಿಮ್‌ ಮಸೀದಿಗೆ ಭೇಟಿ ನೀಡಲಿದ್ದಾರೆ. ಅವರ ಈ ಭೇಟಿ ಭಾರತದ ದಾವೂದಿ ಮುಸ್ಲಿಂ ಸಮುದಾಯದ ಮಟ್ಟಿಗೆ ಮಹತ್ವದ್ದಾಗಿದೆ. ವಿವರಕ್ಕೆ - PM Modi in Egypt: ಕೈರೋದ 1000 ವರ್ಷ ಹಳೆಯ ಅಲ್‌ ಹಕಿಮ್‌ ಮಸೀದಿಗೆ ಭೇಟಿ ನೀಡಲಿರುವ ಪ್ರಧಾನಿ ಮೋದಿ; ಮಹತ್ವದ ಭೇಟಿ ಯಾಕೆ, ಇಲ್ಲಿದೆ ವಿವರ

Jun 24, 2023 07:20 PM IST

ಲಿಫ್ಟ್​​ನಲ್ಲಿ 10 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ಕೊಟ್ಟ ಡೆಲಿವರಿ ಬಾಯ್ ಬಂಧನ

ಬೆಂಗಳೂರಿನ ಅಪಾರ್ಟ್‌ಮೆಂಟ್‌ವೊಂದಕ್ಕೆ ಫುಡ್ ಡೆಲಿವರಿ ಮಾಡಲು ತೆರಳಿದ್ದ ಡೆಲಿವರಿ ಬಾಯ್ ಲಿಫ್ಟ್​​ನಲ್ಲಿ ತೆರಳುವಾಗ 10 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆ ನಡೆದಿದೆ. ಈ ಬಗ್ಗೆ ಬಾಲಕಿಯ ಪೋಷಕರು ಪೋಕ್ಸೋ ಪ್ರಕರಣವನ್ನು ದಾಖಲಿಸಿದ್ದಾರೆ. ವಿವರಕ್ಕೆ - Bengaluru Crime: ಲಿಫ್ಟ್​​ನಲ್ಲಿ 10 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ; ಬೆಂಗಳೂರು ಫುಡ್ ಡೆಲಿವರಿ ಬಾಯ್ ಬಂಧನ

Jun 24, 2023 07:18 PM IST

ಭಾರತದ ಪ್ರಧಾನಿ ಮೋದಿ ಎರಡು ದಿನಗಳ ಈಜಿಪ್ಟ್‌ ಪ್ರವಾಸ ಶುರು

ಭಾರತದ ಪ್ರಧಾನಿ ಮೋದಿ ಎರಡು ದಿನಗಳ ಪ್ರವಾಸಕ್ಕಾಗಿ ಈಜಿಪ್ಟ್‌ಗೆ ತಲುಪಿದರು.ಇದು 26 ವರ್ಷಗಳ ನಂತರ ಭಾರತೀಯ ಪ್ರಧಾನಿಯ ಮೊದಲ ದ್ವಿಪಕ್ಷೀಯ ಪ್ರವಾಸವಾಗಿದೆ. ವಿವರಕ್ಕೆ - PM Modi in Egypt: ಈಜಿಪ್ಟ್‌ ತಲುಪಿದ ಭಾರತದ ಪ್ರಧಾನಿ ಮೋದಿ; ಎರಡು ದಿನಗಳ ಪ್ರವಾಸ

Jun 24, 2023 06:41 PM IST

Passport Seva 2.0: ಸುಧಾರಿತ ಇ ಪಾಸ್‌ಪೋರ್ಟ್‌ ಶೀಘ್ರ; ಪಾಸ್‌ಪೋರ್ಟ್‌ ಸೇವಾ 2.0 ಬೇಗ ಜಾರಿ

ಭಾರತವು ಶೀಘ್ರದಲ್ಲೇ ಎರಡನೇ ಹಂತದ ಪಾಸ್‌ಪೋರ್ಟ್‌ ಸೇವಾ (Passport Seva 2.0) ಕಾರ್ಯಕ್ರಮವನ್ನು ಪರಿಚಯಿಸಲಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್‌ ಶನಿವಾರ ಹೇಳಿದರು. ವಿವರ ಓದಿಗೆ - Passport Seva 2.0: ಸುಧಾರಿತ ಇ ಪಾಸ್‌ಪೋರ್ಟ್‌ ಶೀಘ್ರ; ಪಾಸ್‌ಪೋರ್ಟ್‌ ಸೇವಾ 2.0ಕ್ಕೆ ಶೀಘ್ರ ಚಾಲನೆ ಎಂದ ವಿದೇಶಾಂಗ ಸಚಿವ ಜೈಶಂಕರ್‌

Jun 24, 2023 06:25 PM IST

ಈಜಿಪ್ಟ್‌ನ ಕೈರೋ ತಲುಪಿದ ಭಾರತದ ಪ್ರಧಾನಿ ಮೋದಿ 

ನಾಲ್ಕು ದಿನಗಳ ಅಧಿಕೃತ ಅಮೆರಿಕ ಪ್ರವಾಸವನ್ನು ಯಶಸ್ವಿಯಾಗಿ ಮುಗಿಸಿದ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಸ್ವಲ್ಪ ಹೊತ್ತಿನ ಮುಂಚೆ ಈಜಿಪ್ಟ್‌ನ ಕೈರೋ ತಲುಪಿದ್ದಾರೆ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್‌ ಬಗ್ಚಿ ಹೇಳಿದ್ದಾರೆ. 

Jun 24, 2023 05:16 PM IST

ಪಶ್ಚಿಮ ಬಾಗಿಲಿನ ಮೂಲಕ ಕಚೇರಿ ಪ್ರವೇಶಿಸಿ ಸಿಎಂ ಸಿದ್ದರಾಮಯ್ಯ

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು (ಜೂ.24) ವಿಧಾನಸೌಧದಲ್ಲಿರುವ ತಮ್ಮ ಕೊಠಡಿಗೆ ಪಶ್ಚಿಮ ಬಾಗಿಲಿನ ಮೂಲಕ ಒಳಪ್ರವೇಶಿಸಿದರು. ಈ ಪಶ್ಚಿಮ ಬಾಗಿಲು ವಾಸ್ತು ದೋಷದ ಕಾರಣ ಈ ಹಿಂದೆ ಮುಚ್ಚಲಾಗಿತ್ತು. 

 

Jun 24, 2023 04:50 PM IST

ಸಾರ್ವಜನಿಕ ಸಭೆ ವೇದಿಕೆ ಕುಸಿದು ಟಿಡಿಪಿಯ 10 ನಾಯಕರಿಗೆ ಗಾಯ

ಮಾಜಿ ಗೃಹ ಸಚಿವ ನಿಮ್ಮಕಾಯಲ ಚಿನ್ನರಾಜಪ್ಪ ಸೇರಿದಂತೆ ಪ್ರತಿಪಕ್ಷ ತೆಲುಗು ದೇಶಂ ಪಕ್ಷದ (ಟಿಡಿಪಿ) ಹತ್ತು ನಾಯಕರಿಗೆ ಸಾರ್ವಜನಿಕ ಸಭೆಗಾಗಿ ಹಾಕಲಾಗಿದ್ದ ವೇದಿಕೆ ಕುಸಿದು ಬಿದ್ದಿದ್ದರಿಂದ ಸಣ್ಣಪುಟ್ಟ ಗಾಯಗಳಾಗಿವೆ. ಶುಕ್ರವಾರ ತಡರಾತ್ರಿ ಈ ಘಟನೆ ಸಂಭವಿಸಿದೆ ಎಂದು ಪಕ್ಷದ ವಕ್ತಾರ ಕೊಮ್ಮರೆಡ್ಡಿ ಪಟ್ಟಾಭಿ ಶನಿವಾರ ತಿಳಿಸಿದ್ದಾರೆ. ಎಲೂರು ಜಿಲ್ಲೆಯ ಬತ್ತುಲವಾರಿಗುಡೆಂ ಗ್ರಾಮದಲ್ಲಿ ಪಕ್ಷದ ಭವಿಷ್ಯತ್ತುಕು ಖಾತರಿ (ಭವಿಷ್ಯದ ಭರವಸೆ) ಕಾರ್ಯಕ್ರಮದಲ್ಲಿ ನಾಯಕರು ಭಾಗವಹಿಸಿದ್ದರು.

Jun 24, 2023 04:05 PM IST

ಮಣಿಪುರ ಹಿಂಸಾಚಾರ: ಮಣಿಪುರಕ್ಕೆ ಸರ್ವಪಕ್ಷ ನಿಯೋಗ ಹೋಗಲಿ ಎಂದ ಸಂಜಯ್‌ ರಾವತ್‌

ಮಣಿಪುರದ ಹಿಂಸಾಚಾರದ ಬಗ್ಗೆ ಪ್ರತಿಕ್ರಿಯಿಸಿದ ರಾಜ್ಯಸಭಾ ಸದಸ್ಯ ಸಂಜಯ್ ರಾವತ್ ಅವರು ಪ್ರಧಾನಿ ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು ಮತ್ತು ಹಿಂಸಾಚಾರವನ್ನು ತಡೆಯುವಲ್ಲಿ ಕೇಂದ್ರ ವಿಫಲವಾಗಿದೆ ಎಂದು ಹೇಳಿದರು. ಅಲ್ಲದೆ, ಹಿಂಸಾಚಾರವನ್ನು ತಡೆಯಲು ಮಣಿಪುರಕ್ಕೆ ಸರ್ವಪಕ್ಷ ನಿಯೋಗ ಕಳುಹಿಸಬೇಕು ಎಂದು ಆಗ್ರಹಿಸಿದರು.

Jun 24, 2023 03:22 PM IST

ರಷ್ಯಾದಲ್ಲಿ ವ್ಯಾಗ್ನರ್‌ ಗುಂಪಿನ ದಂಗೆ; ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಪದಚ್ಯುತಿ ಬೆದರಿಕೆ 

ರಷ್ಯಾ- ಉಕ್ರೇನ್‌ ಸಮರ (Russia-Ukraine War) ಮುಂದುವರಿದಿರುವಾಗಲೇ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್‌ಗೆ ಆಂತರಿಕವಾಗಿ ಪದಚ್ಯುತರಾಗುವ ಆತಂಕ ಎದುರಾಗಿದೆ. ಅವರಿಗೆ ಸವಾಲು ಒಡ್ಡಿರುವುದು ಬೇರಾರೂ ಅಲ್ಲ, ಅವರ ಆಪ್ತವಲಯದಲ್ಲಿದ್ದ ಯೆವ್ಗೆನಿ ಪ್ರಿಗೊಜಿವ್.‌ ವಿವರಕ್ಕೆ - ವ್ಯಾಗ್ನರ್‌ ದಂಗೆ; ರಷ್ಯಾ ಅಧ್ಯಕ್ಷರ ಪದಚ್ಯುತಿ ಮಾಡುವೆ ಎಂದ ಪ್ರಿಗೊಜಿನ್‌, ಇದು ವಿಶ್ವಾಸಘಾತುಕತನ ಎಂದ ಪುಟಿನ್‌

Jun 24, 2023 02:52 PM IST

ಶಿಮ್ಲಾದಲ್ಲಿ ಮತ್ತೊಮ್ಮೆ ಸಭೆ ಸೇರುತ್ತೇವೆ - ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ

“ನಾವು ಎಲ್ಲ ವಿರೋಧ ಪಕ್ಷದವರು ಒಗ್ಗಟ್ಟಿನಿಂದ ಹೋರಾಡುತ್ತೇವೆ, ಅದಕ್ಕಾಗಿ ನಾವು ಶಿಮ್ಲಾದಲ್ಲಿ ಮತ್ತೊಮ್ಮೆ ಸಭೆ ಮಾಡುತ್ತೇವೆ... ನಾವು ನಮ್ಮ ಹೋರಾಟವನ್ನು ಮುಂದುವರಿಸುತ್ತೇವೆ” ಎಂದು ಹೇಳಿದ ಪ್ರತಿಪಕ್ಷಗಳ ಸಭೆಗೆ ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ. 

 

Jun 24, 2023 01:59 PM IST

ಗೃಹ ಲಕ್ಷ್ಮೀ ಯೋಜನೆ ಪ್ರತ್ಯೇಕ ಆ್ಯಪ್ ಸಿದ್ದ: ಹೆಬ್ಬಾಳಕರ

ಮೈಸೂರು: ಗೃಹ ಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಕೆಗೆ ಪ್ರತ್ಯೇಕ ಆ್ಯಪ್ ರೂಪಿಸಿದ್ದೇವೆ. ಜೂನ್ 27 ರಂದು ಸಚಿವ ಸಂಪುಟ ಸಭೆಯಲ್ಲಿ ಸಿಎಂ ಆ ಆ್ಯಪ್ ತೋರಿಸಿ ಅಂತಿಮಗೊಳಿಸುತ್ತೇವೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳಕರ್‌ ತಿಳಿಸಿದ್ದಾರೆ.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 

ಆ್ಯಪ್ ಮೂಲಕ ಅರ್ಜಿ ಸಲ್ಲಿಸಲು ಎಲ್ಲಾ ತಯಾರಿ ಮಾಡಿದ್ದೇವೆ. ನಂತರ ಅರ್ಜಿ ಸಲ್ಲಿಕೆಗೆ ಆ್ಯಪ್ ಬಿಡುಗಡೆ ಮಾಡುತ್ತೇವೆ. ಆಗಸ್ಟ್ 17 ರ ನಂತರದಿಂದ ಫಲಾನುಭವಿಗಳ ಹಣ ಹಾಕುತ್ತೇವೆ ಎಂದು ಹೇಳಿದರು.

Jun 24, 2023 01:20 PM IST

ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿಲ್ಲ: ಕಟೀಲು

 

ಬೆಂಗಳೂರು: ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ರಾಜೀನಾಮೆ ಗೊಂದಲ ಉಂಟಾಗಿದೆ.

ಬಳ್ಳಾರಿಯಲ್ಲಿ ಶನಿವಾರ ಬೆಳಗ್ಗೆ ಮಾತನಾಡಿದ್ದ ನಳಿನ್‌ಕುಮಾರ್‌ ಕಟೀಲು ಈಗಾಗಲೇ ರಾಜೀನಾಮೆ ನೀಡಿದ್ದೇನೆ ಎಂದು ಹೇಳಿದ್ದರು. ವಿವಾದ ಉಂಟಾಗುತ್ತಿದ್ದಂತೆ ಮಧ್ಯಾಹ್ನ ಪ್ರಕಟಣೆ ಬಿಡುಗಡೆ ಮಾಡಿರುವ ಕಟೀಲ್‌, ನಾನು ರಾಜೀನಾಮೆ ನೀಡಿಲ್ಲ. ಇದೆಲ್ಲಾ ಮಾಧ್ಯಮಗಳ ಸೃಷ್ಟಿ ಎಂದು ತಿಳಿಸಿದ್ದಾರೆ.

Jun 24, 2023 01:04 PM IST

ಅಸ್ಸಾಂನಲ್ಲಿ ಪ್ರವಾಹ ಭೀತಿ

ಗುವಹಾಟಿ: ಅಸ್ಸಾಂನಲ್ಲಿ ಕೆಲ ದಿನಗಳಿಂದ ಮಳೆ ಮುಂದುವರೆದಿದ್ದು, ಪ್ರವಾಹ ಭೀತಿ ತೀವ್ರಗೊಂಡಿದೆ. ರಾಜ್ಯದ ಹತ್ತಕ್ಕೂ ಹೆಚ್ಚು ಜಿಲ್ಲೆಗಳ ಐದು ಲಕ್ಷ ಮಂದಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈವರೆಗೂ ಇಬ್ಬರು ಮೃತಪಟ್ಟಿದ್ದಾರೆ. ಬ್ರಹ್ಮಪುತ್ರ ನದಿ ಉಕ್ಕಿ ಹರಿಯುತ್ತಿರುವುದರಿಂದ ಹಲವು ಗ್ರಾಮಗಳಲ್ಲಿ ಪ್ರವಾಹ ಪ್ರಮಾಣ ಹೆಚ್ಚಾಗಿದೆ. ಅಸ್ಸಾಂ ರಾಜ್ಯ ಸರ್ಕಾರವು ಕೇಂದ್ರ ಹಾಗೂ ರಾಜ್ಯದ ರಕ್ಷಣಾ ಪಡೆಗಳ ನೆರವು ಪಡೆದು ಜನರನ್ನು ಪುನರ್ವಸತಿ ಕೇ‍ಂದ್ರಗಳಿಗೆ ರವಾನಿಸಲಾಗುತ್ತಿದೆ.

Jun 24, 2023 12:58 PM IST

ಮುಂಬೈನಲ್ಲಿ ಭಾರೀ ಮಳೆ ಮುನ್ಸೂಚನೆ

ಮುಂಬೈ: ನೈರುತ್ಯ ಮಾನ್ಸೂನ್‌ ಮಾರುತಗಳು ಮಹಾರಾಷ್ಟ್ರ ತಲುಪಿದ್ದು. ಮುಂಬೈ ಮಹಾನಗರಕ್ಕೂ ಪ್ರವೇಶಿಸಿದೆ. ಶನಿವಾರ ಮುಂಬೈನಲ್ಲಿ ಮಳೆಯಾಗಿದೆ. ಇನ್ನೂ ಎರಡು ದಿನ ಸಾಮಾನ್ಯ ಮಳೆ ಬರುವ ನಿರೀಕ್ಷೆಯಿದೆ. ಎರಡು ದಿನದ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಈ ಕುರಿತು ಹವಾಮಾನ ಇಲಾಖೆ ಕೂಡ ಯಲ್ಲೋ ಅಲರ್ಟ್‌ ಅನ್ನು ಘೋಷಿಸಿದೆ. 

Jun 24, 2023 12:52 PM IST

ಶ್ರೀನಗರದಲ್ಲಿ ಅಮಿತ್‌ ಶಾ

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಜಮ್ಮು ಹಾಗೂ ಕಾಶ್ಮೀರ ಪ್ರವಾಸದಲ್ಲಿದ್ದು, ಶನಿವಾರ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು. ಹುತಾತ್ಮರಾದ ಸಿಬ್ಬಂದಿಯ ನೆನಪಿಗೆ ನಿರ್ಮಿಸುತ್ತಿರುವ ಸ್ಮಾರಕಸ್ಥಂಭಕ್ಕೆ ಶಿಲಾನ್ಯಾಸ ನೆರವೇರಿಸಿದರು. ಇತ್ತೀಚಿನ ದಿನಗಳಲ್ಲಿ ಸೇವೆಯಲ್ಲಿರುವಾಗಲೇ ಜೀವ ಕಳೆದುಕೊಂಡ ವಿವಿಧ ಪಡೆಗಳ ಪ್ರಮುಖರ ಕುಟುಂಬದವರನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು. ಕಾಶ್ಮೀರದ ಸ್ಥಿತಿಗತಿ ಕುರಿತು ಸಭೆಯನ್ನೂ ನಡೆಸಿದರು.

Jun 24, 2023 12:39 PM IST

ಬಿಜೆಪಿ ರಾಜಾಧ್ಯಕ್ಷ ಸ್ಥಾನಕ್ಕೆ ಕಟೀಲು ರಾಜೀನಾಮೆ

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ ಮುಗಿದು ಒಂದೂವರೆ ತಿಂಗಳ ಬಳಿಕ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ರಾಜೀನಾಮೆ ನೀಡಿದ್ದಾರೆ.

ಚುನಾವಣೆ ಸೋಲಿನ ನೈತಿಕ ಹೊಣೆ ಹೊತ್ತು ಕಳೆದ ತಿಂಗಳೇ ರಾಜೀನಾಮೆ ನೀಡಬೇಕಾಗಿತ್ತಾದರೂ ಕಟೀಲು ಆ ನಿರ್ಧಾರ ಕೈಗೊಂಡಿರಲಿಲ್ಲ. ಮುಂದಿನ ವಾರ ಕರ್ನಾಟಕ ಬಿಜೆಪಿಗೆ ಹೊಸ ಅಧ್ಯಕ್ಷರ ನೇಮಕವಾಗುವ ಸಾಧ್ಯತೆಯಿದ್ದು, ಇದರ ಮುನ್ನ ಅವರು ರಾಜೀನಾಮೆ ನೀಡಿದ್ದಾರೆ ಎನ್ನಲಾಗುತ್ತಿದೆ. ರಾಜೀನಾಮೆ ನೀಡಿರುವ ಕುರಿತು ಬಳ್ಳಾರಿಯಲ್ಲಿ ಕಟೀಲು ಮಾಹಿತಿ ನೀಡಿದ್ದಾರೆ.

Jun 24, 2023 06:33 AM IST

ಮೋದಿ ಒಬ್ಬರೇ ಏನೂ ಮಾಡಿಲ್ಲ - ಪ್ರಧಾನಿ ಮೋದಿ

ಭಾರತದ ಈ ಅಗಾಧ ಪ್ರಗತಿಗೆ ದೇಶದ 140 ಕೋಟಿ ಜನರ ನಂಬಿಕೆಯೇ ಕಾರಣ. ಮೋದಿ ಒಬ್ಬರೇ ಏನೂ ಮಾಡಿಲ್ಲ. ನೂರಾರು ವರ್ಷಗಳ ವಸಾಹತುಶಾಹಿ ಈ ನಂಬಿಕೆಯನ್ನು ನಮ್ಮಿಂದ ದೂರ ಮಾಡಿದೆ ಎಂದು ವಾಷಿಂಗ್ಟನ್ ಡಿಸಿಯ ರೊನಾಲ್ಡ್ ಕಟ್ಟಡದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅನಿವಾಸಿ ಭಾರತೀಯರನ್ನು ಉದ್ದೇಶಿ ಪ್ರಧಾನಿ ಮೋದಿ ‘ಗುಡ್ ಬೈ’ ಭಾಷಣ ಮಾತನಾಡಿದ್ದಾರೆ.

Jun 24, 2023 06:32 AM IST

ಸೂಪರ್ ಮಾರ್ಕೆಟ್‌ನಲ್ಲಿ ಮೇಡ್ ಇನ್ ಇಂಡಿಯಾ ವಸ್ತುಗಳನ್ನ ನೋಡಿದಾಗ ಹೆಮ್ಮೆಯಾಗುತ್ತೆ-ಪ್ರಧಾನಿ

ಭಾರತದ ಪ್ರತಿಯೊಂದು ಸಾಧನೆಯಿಂದ ನೀವು ಸಂತೋಷಪಡುತ್ತೀರಿ. ಯೋಗ ದಿನಾಚರಣೆಗಾಗಿ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಇಷ್ಟು ದೊಡ್ಡ ಸಂಖ್ಯೆ ದೇಶಗಳು ಒಟ್ಟಾಗಿ ಸೇರಿರುವುದು ಹೆಮ್ಮೆಯ ವಿಷಯ. ಅಮೆರಿಕದ ಸೂಪರ್ ಮಾರ್ಕೆಟ್‌ಗಳಲ್ಲಿ ಮೇಡ್ ಇನ್ ಇಂಡಿಯಾ ನೋಡಿದಾಗ ಹೆಮ್ಮೆ ಅನಿಸುತ್ತೆ. ಕಂಪನಿಗಳನ್ನು ಮುನ್ನಡೆಸುತ್ತಿರುವ ಭಾರತೀಯ ಪ್ರತಿಭೆಗಳನ್ನು ನೋಡಿದಾಗ ಹೆಮ್ಮೆಯಾಗುತ್ತೆ, ಇಡೀ ವಿಶ್ವವೇ ನಾಟು ನಾಟು ಹಾಡಿಗೆ ಕುಣಿದಾಗ ಹೆಮ್ಮೆ ಅನಿಸುತ್ತೆ ಎಂದು ಹೇಳಿದ್ದಾರೆ.

Jun 24, 2023 06:31 AM IST

ಅಮೆರಿಕದಲ್ಲಿ ಅನಿವಾಸಿ ಭಾರತೀಯರನ್ನು ಉದ್ದೇಶಿ ಪ್ರಧಾನಿ ಮೋದಿ ಭಾಷಣ

ನಾಲ್ಕು ದಿನಗಳ ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಕೊನೆಯ ದಿನವಾದ ಇಂದು (ಜೂನ್ 24, ಶನಿವಾರ) ಯುನೈಟೆಡ್ ಸ್ಟೇಟ್ಸ್ ಇಂಡಿಯನ್ ಕಮ್ಯೂನಿಟಿ ಫೌಂಡೇಶನ್ ವತಿಯಿಂದ ವಾಷಿಂಗ್ಟನ್ ಡಿಸಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅನಿವಾಸಿ ಭಾರತೀಯರನ್ನು ಉದ್ದೇಶಿ ಮಾತನಾಡಿದ್ದಾರೆ. ಭಾರತದ ಪ್ರತಿಭೆಯನ್ನು ಕೊಂಡಾಡಿದ್ದಾರೆ.

Jun 24, 2023 06:23 AM IST

ಭಾರತದೊಂದಿಗೆ ಬೆಳೆಯಿರಿ

ವಾಷಿಂಗ್ಟನ್‌ನಲ್ಲಿ ನಡೆಯುತ್ತಿರುವ ಯುಎಸ್‌- ಇಂಡೋ ಸ್ಟ್ರಾಟಜಿಕ್‌ ಫೋರಂನ ಸಭೆಯಲ್ಲಿ ಮೋದಿ ಪಾಲ್ಗೊಂಡರು. ಭಾರತದಲ್ಲಿ ಹೂಡಿಕೆ ಮಾಡುವಂತೆ ಅಮೆರಿಕಾದ ಯುವ ಉದ್ಯಮಿಗಳಿಗ ಮನವಿ ಮಾಡಿದ ಪ್ರಧಾನಿ ನರೇಂದ್ರ ಮೋದಿ ಭಾರತದ ಪ್ರಗತಿಯೊಂದಿಗೆ ನೀವು ಬೆಳೆಯಿರಿ ಎಂದು ಮನವಿ ಮಾಡಿದರು.

Jun 24, 2023 06:19 AM IST

ಗುಜರಾತ್‌ನಲ್ಲಿ ಗೂಗಲ್‌ನ ಫಿನ್‌ಟೆಕ್‌ ಕೇಂದ್ರ

ಭಾರತದಲ್ಲಿ 10 ಬಿಲಿಯನ್‌ ಡಾಲರ್‌ ಹೂಡಿಕೆಗೆ ಒತ್ತು ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗೂಗಲ್‌ ಮುಖ್ಯಸ್ಥ ಸುಂದರ್‌ ಪಿಚ್ಚೈ ಭರವಸೆ ನೀಡಿದರು. ಗುಜರಾತ್‌ನಲ್ಲಿ ಫಿನ್‌ಟೆಕ್‌ ಕೇಂದ್ರ ಆರಂಭಿಸುವುದಾಗಿಯೂ ಹೇಳಿದರು.

Jun 24, 2023 06:19 AM IST

ಮೋದಿ ಅವರನ್ನು ವಾಷಿಂಗ್ಟನ್‌ನಲ್ಲಿ ಭೇಟಿ ಮಾಡಿದ ಗೂಗಲ್‌ ಮುಖ್ಯಸ್ಥ ಸುಂದರ್‌ ಪಿಚ್ಚೈ ಭಾರತದಲ್ಲಿ 10 ಬಿಲಿಯಲ್‌ ಡಾಲರ್‌ ಹೂಡಿಕೆಗೆ ಒತ್ತು ನೀಡುವ ಜತೆಗೆ ಗುಜರಾತ್‌ನಲ್ಲಿ ಜಾಗತಿಕ ಫಿನ್‌ಟೆಕ್‌ ಕೇಂದ್ರ ಆರಂಭಿಸುವುದಾಗಿ ತಿಳಿಸಿದರು.

    ಹಂಚಿಕೊಳ್ಳಲು ಲೇಖನಗಳು