logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Pm Modi On Budget: ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸಲು ಬಲವಾದ ಅಡಿಪಾಯ: ಕೇಂದ್ರ ಬಜೆಟ್‌ ಕೊಂಡಾಡಿದ ಪ್ರಧಾನಿ

PM Modi on Budget: ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸಲು ಬಲವಾದ ಅಡಿಪಾಯ: ಕೇಂದ್ರ ಬಜೆಟ್‌ ಕೊಂಡಾಡಿದ ಪ್ರಧಾನಿ

HT Kannada Desk HT Kannada

Feb 01, 2023 02:46 PM IST

google News

ಪ್ರಧಾನಿ ಮೋದಿ

    • ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು, ಲೋಕಸಭೆಯಲ್ಲಿ ಇಂದು(ಫೆ.01-ಬುಧವಾರ) ಕೇಂದ್ರ ಬಜೆಟ್‌ 2023ರನ್ನು ಮಂಡಿಸಿದ್ದಾರೆ. ಈ ಬಾರಿಯ ಬಜೆಟ್‌ನ್ನು ಸ್ವಾಗತಿಸಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, ಇದೊಂದು ಅಭಿವೃದ್ಧಿ ಪರ ಹಾಗೂ ಜನಪರ ಬಜೆಟ್‌ ಎಂದು ಬಣ್ಣಿಸಿದ್ದಾರೆ. ಈ ಕುರಿತು ಇಲ್ಲಿದೆ ಮಾಹಿತಿ..
ಪ್ರಧಾನಿ ಮೋದಿ
ಪ್ರಧಾನಿ ಮೋದಿ (ANI)

ನವದೆಹಲಿ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು, ಲೋಕಸಭೆಯಲ್ಲಿ ಇಂದು(ಫೆ.01-ಬುಧವಾರ) ಕೇಂದ್ರ ಬಜೆಟ್‌ 2023ರನ್ನು ಮಂಡಿಸಿದ್ದಾರೆ. ಈ ಬಾರಿಯ ಬಜೆಟ್‌ನ್ನು ಸ್ವಾಗತಿಸಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, ಇದೊಂದು ಅಭಿವೃದ್ಧಿ ಪರ ಹಾಗೂ ಜನಪರ ಬಜೆಟ್‌ ಎಂದು ಬಣ್ಣಿಸಿದ್ದಾರೆ.

ಅಮೃತ ಕಾಲದ ಮೊದಲ ಬಜೆಟ್ ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸಲು ಬಲವಾದ ಅಡಿಪಾಯವನ್ನು ನಿರ್ಮಿಸುತ್ತದೆ. ಈ ಬಜೆಟ್ ಬಡವರು, ಮಧ್ಯಮ ವರ್ಗದ ಜನರು, ರೈತರು ಸೇರಿದಂತೆ ಮಹತ್ವಾಕಾಂಕ್ಷೆಯ ಸಮಾಜದ ಕನಸುಗಳನ್ನು ನನಸಾಗಿಸುತ್ತದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ದೇಶಕ್ಕಾಗಿ ಪರಂಪರಾಗತವಾಗಿ ದುಡಿಯುತ್ತಿರುವ 'ವಿಶ್ವಕರ್ಮ' ಈ ದೇಶದ ಸೃಷ್ಟಿಕರ್ತರು. ಮೊದಲ ಬಾರಿಗೆ 'ವಿಶ್ವಕರ್ಮ' ತರಬೇತಿ ಮತ್ತು ಬೆಂಬಲಕ್ಕೆ ಸಂಬಂಧಿಸಿದ ಯೋಜನೆಯನ್ನು ಬಜೆಟ್‌ನಲ್ಲಿ ತಂದಿರುವುದು ಸಂತಸದ ಸಂಗತಿ ಎಂದು ಪ್ರಧಾನಿ ಮೋದಿ ನುಡಿದರು.

ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಮಹಿಳೆಯರ ಜೀವನವನ್ನು ಸುಲಭಗೊಳಿಸಲು, ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಮಹಿಳಾ ಸ್ವಸಹಾಯ ಸಂಘಗಳು ಅವರನ್ನು ಮತ್ತಷ್ಟು ಹೆಚ್ಚಿಸಲಿವೆ. ಮನೆಗಳಲ್ಲಿ ಮಹಿಳೆಯರ ಸಬಲೀಕರಣಕ್ಕಾಗಿ ವಿಶೇಷ ಉಳಿತಾಯ ಯೋಜನೆ ಆರಂಭಿಸಲಾಗುವುದು ಎಂದು ಪ್ರಧಾನಿ ಮೋದಿ ಇದೇ ವೇಳೆ ಭರವಸೆ ನೀಡಿದರು.

ಈ ಬಜೆಟ್ ಹಸಿರು ಶಕ್ತಿ, ಹಸಿರು ಬೆಳವಣಿಗೆ, ಹಸಿರು ಮೂಲಸೌಕರ್ಯ ಮತ್ತು ಹಸಿರು ಉದ್ಯೋಗಗಳನ್ನು ಮತ್ತಷ್ಟು ಉತ್ತೇಜಿಸುವ ಸುಸ್ಥಿರ ಭವಿಷ್ಯಕ್ಕಾಗಿ ಗಮನಾರ್ಹ ಕೊಡುಗೆ ನೀಡಿದೆ. ನಾವು ಬಜೆಟ್‌ನಲ್ಲಿ ತಂತ್ರಜ್ಞಾನ ಮತ್ತು ಹೊಸ ಆರ್ಥಿಕತೆಯ ಮೇಲೆ ಕೇಂದ್ರೀಕರಿಸಿದ್ದೇವೆ ಎಂದು ಪ್ರಧಾನಿ ಹೇಳಿದರು.

ನಮ್ಮ ಸರ್ಕಾರವು ಮಧ್ಯಮ ವರ್ಗದವರನ್ನು ಸಬಲೀಕರಣಗೊಳಿಸಲು ಮತ್ತು ಜೀವನವನ್ನು ಸುಲಭಗೊಳಿಸಲು ಹಲವಾರು ಕ್ರಮಗಳನ್ನು ಕೈಗೊಂಡಿದೆ. ನಾವು ತೆರಿಗೆ ದರವನ್ನು ಕಡಿಮೆ ಮಾಡಿದ್ದೇವೆ ಮತ್ತು ಅದಕ್ಕೆ ಅನುಗುಣವಾಗಿ ಪರಿಹಾರ ನೀಡಿದ್ದೇವೆ ಎಂದು ಪ್ರಧಾನಿ ಮೋದಿ ಹೇಳಿದರು.

ಅಭಿವೃದ್ಧಿ ಪರ ಮತ್ತು ಜನಪರ ಬಜೆಟ್‌ನ್ನು ಮಂಡಿಸಿದ್ದಕ್ಕಾಗಿ ನಾನು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಹಾಗೂ ಅವರ ತಂಡವನ್ನು ಅಭಿನಂದಿಸುವುದಾಗಿ ಪ್ರಧಾನಿ ಮೋದಿ ಇದೇ ವೇಳೆ ಹೇಳಿದರು.

ಈ ಬಾರಿಯ ಬಜೆಟ್‌ ಭಾರತದ ಆರ್ಥಿಕ ಪಥವನ್ನು ನಿರ್ದೇಶಿಸಿದ್ದು, ನಾವೆಲ್ಲಾ ಒಟ್ಟಾಗಿ ಈ ಪಥದಲ್ಲಿ ಮುನ್ನಡೆದು, ಭಾರತವನ್ನು ಒಂದು ಬಲಾಢ್ಯ ದೇಶವನ್ನಾಗಿ ಕಟ್ಟೋಣ. ಭಾರತದ ಬೆಲವಣಿಗೆಯಲ್ಲಿ ಜನಭಾಗಿದಾರಿಕೆ ಅತ್ಯಂತ ಅವಶ್ಯವಾಗಿದ್ದು, ಪ್ರಜಾಪ್ರಭುತ್ವ ಮಾದರಿಯಲ್ಲಿ ನಾವೆಲ್ಲಾ ಭವ್ಯ ಭಾರತದ ನಿರ್ಮಾಣಕ್ಕೆ ಕೈಜೋಡಿಸೋಣ ಎಂದು ಪ್ರಧಾನಿ ಮೋದಿ ಇದೇ ವೇಳೆ ದೇಶವಾಸಿಗಳಿಗೆ ಕರೆ ನೀಡಿದರು.

ಸಂಬಂಧಿಸಿದ ಸುದ್ದಿಗಳು:

Budget Responses: ಕೇಂದ್ರ ಬಜೆಟ್‌ ಬಗ್ಗೆ ಯಾರು ಏನಂದರು?: ಇಲ್ಲಿದೆ ಪ್ರಮುಖ ನಾಯಕರ ಪ್ರತಿಕ್ರಿಯೆ..

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು, ಲೋಕಸಭೆಯಲ್ಲಿ ಇಂದು(ಫೆ.01-ಬುಧವಾರ) ಕೇಂದ್ರ ಬಜೆಟ್‌ 2023ರನ್ನು ಮಂಡಿಸಿದ್ದಾರೆ. ತೆರಿಗೆ ಮಿತಿ ಹೆಚ್ಚಳ ಈ ಬಾರಿಯ ಬಜೆಟ್‌ನ ಪ್ರಮುಖ ಅಂಶವಾಗಿದೆ. ಅಲ್ಲದೇ ಹಲವು ಜನಪರ ಯೋಜನೆಗಳನ್ನು ಈ ಬಾರಿಯ ಬಜೆಟ್‌ನಲ್ಲಿ ಘೋಷಿಸಲಾಗಿದ್ದು, ಈ ಕುರಿತು ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ನಾಯಕರಿಂದ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಈ ಕುರಿತು ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ.

Union Budget 2023: ವೈಯಕ್ತಿಕ ಆದಾಯ ತೆರಿಗೆದಾರರಿಗೆ ಭರ್ಜರಿ ಗಿಫ್ಟ್‌ ನೀಡಿ ಬಜೆಟ್‌ ಭಾಷಣ ಮುಗಿಸಿದ ನಿರ್ಮಲಾ ಸೀತಾರಾಮನ್

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಕೇಂದ್ರ ಬಜೆಟ್‌ 2023ನ್ನು ಲೋಕಸಭೆಯಲ್ಲಿ ಮಂಡಿಸಿದ್ದಾರೆ. ವೈಯಕ್ತಿಕ ಆದಾಯ ತೆರಿಗೆದಾರರಿಗೆ ನಿರ್ಮಲಾ ಸೀತಾರಾಮನ್‌ ಭರ್ಜರಿ ಗಿಫ್ಟ್‌ ನೀಡಿ ತಮ್ಮ ಭಾಷಣವನ್ನು ಅಂತ್ಯಗೊಳಿಸಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ.

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ