logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Stock Buy Today: ಈ 3 ಕಂಪನಿಗಳ ಷೇರುಗಳನ್ನು ಖರೀದಿಸಿ, ಜಾಕ್​ಪಾಟ್ ಹೊಡೆಯಿರಿ; ವೈಶಾಲಿ ಪರೇಖ್ ಕೊಟ್ಟ ಸಲಹೆ ಇದು

Stock Buy Today: ಈ 3 ಕಂಪನಿಗಳ ಷೇರುಗಳನ್ನು ಖರೀದಿಸಿ, ಜಾಕ್​ಪಾಟ್ ಹೊಡೆಯಿರಿ; ವೈಶಾಲಿ ಪರೇಖ್ ಕೊಟ್ಟ ಸಲಹೆ ಇದು

Prasanna Kumar P N HT Kannada

Aug 16, 2024 09:23 AM IST

google News

ಷೇರು ಮಾರುಕಟ್ಟೆ

  • Buy or sell stocks:  ಪ್ರಭುದಾಸ್ ಲಿಲ್ಲಾಧರ್ ತಾಂತ್ರಿಕ ಸಂಶೋಧನೆಯ ಉಪಾಧ್ಯಕ್ಷೆ ವೈಶಾಲಿ ಪರೇಖ್ ಅವರು ಇಂದು (ಆಗಸ್ಟ್ 16) ಖರೀದಿಸಲು 3 ಷೇರುಗಳನ್ನು ಶಿಫಾರಸು ಮಾಡಿದ್ದಾರೆ. ಅವುಗಳು ಇಂತಿವೆ.

ಷೇರು ಮಾರುಕಟ್ಟೆ
ಷೇರು ಮಾರುಕಟ್ಟೆ

ಇತ್ತೀಚೆಗೆ ಇಳಿಕೆ ಕಂಡಿದ್ದ ಸೆನ್ಸೆಕ್ಸ್ ಮತ್ತು ನಿಫ್ಟಿಯಲ್ಲಿ ಚೇತರಿಕೆ ಕಂಡಿದೆ. ನಿಫ್ಟಿಯಲ್ಲಿ ಐಟಿ ಸೂಚ್ಯಂಕವು ಅಮೆರಿಕದ ಆರ್ಥಿಕ ದತ್ತಾಂಶವನ್ನು ಬೆಂಬಲಿಸಿದ ನಂತರ 13 ಪ್ರಮುಖ ಉದ್ಯಮಗಳ ಸೂಚ್ಯಂಕ ಏರಿಕೆ ಕಂಡಿದೆ. ಆ ಮೂಲಕ ನಿಫ್ಟಿ ಏರುಗತಿಯಲ್ಲಿ ಸಾಗಿದೆ. ವಿಶ್ವದ ಅತಿದೊಡ್ಡ ಆರ್ಥಿಕತೆಯಲ್ಲಿ ಆರ್ಥಿಕ ಹಿಂಜರಿತದ ಭಯವನ್ನು ಯುಎಸ್ ಆರ್ಥಿಕ ಮಾಹಿತಿಯು ನಿವಾರಿಸಿದ ನಂತರ ಈ ಬೆಳವಣಿಗೆ ಕಂಡು ಬಂದಿದೆ.

ಆಗಸ್ಟ್ 15ರಂದು 30 ಷೇರುಗಳ ಬಿಎಸ್ಇ ಸೆನ್ಸೆಕ್ಸ್ 149.85 ಅಂಕ ಅಥವಾ ಶೇಕಡಾ 0.19 ರಷ್ಟು ಏರಿಕೆ ಕಂಡು 79,105.88ಕ್ಕೆ ತಲುಪಿದೆ. ಏತನ್ಮಧ್ಯೆ, ನಿಫ್ಟಿ 4.75 ಅಂಕ ಅಥವಾ ಶೇಕಡಾ 0.02 ರಷ್ಟು ಏರಿಕೆ ಕಂಡು 24,143.75ಕ್ಕೆ ಕೊನೆಗೊಂಡಿತು. ಮಾರುಕಟ್ಟೆಯಲ್ಲಿ ನಿಫ್ಟಿ ಮಿಡ್ ಕ್ಯಾಪ್ ಶೇಕಡಾ 0.59 ರಷ್ಟು ಮತ್ತು ನಿಫ್ಟಿ ಸ್ಮಾಲ್ ಕ್ಯಾಪ್ ಶೇಕಡಾ 0.64 ರಷ್ಟು ಏರಿಕೆಯಾಗಿದೆ. ಐಟಿ ಷೇರುಗಳ ಹೆಚ್ಚಳದಿಂದಾಗಿ ಷೇರು ಸೂಚ್ಯಂಕಗಳು ಏರಿವೆ.

ವೈಶಾಲಿ ಪರೇಖ್ ಸೂಚಿಸಿದ ಮೂರು ಷೇರುಗಳು

ಪ್ರಭುದಾಸ್ ಲಿಲ್ಲಾಧರ್ ತಾಂತ್ರಿಕ ಸಂಶೋಧನೆಯ ಉಪಾಧ್ಯಕ್ಷೆ ವೈಶಾಲಿ ಪರೇಖ್ ಅವರು ನಿಫ್ಟಿ ಸಂಕುಚಿತ ವ್ಯಾಪ್ತಿಗೆ ತಲುಪಿದ್ದು, ನಿಫ್ಟಿ 24,143.75ಕ್ಕೆ ಕೊನೆಗೊಂಡಿದ್ದರ ಪರಿಣಾಮ ಮೂರು ಷೇರುಗಳ ಖರೀದಿಗೆ ಸಲಹೆ ನೀಡಿದ್ದಾರೆ. ಜಿಂದಾಲ್ ಸ್ಟೀಲ್, ಹಿಂದೂಸ್ತಾನ್ ಆಯಿಲ್ ಮತ್ತು ಎವರೆಸ್ಟ್ ಕಾಂಟೋ ಸಿಲಿಂಡರ್ ಲಿಮಿಟೆಡ್ ಈ 3 ಷೇರುಗಳನ್ನು ಖರೀದಿ ಅಥವಾ ಮಾರಾಟಕ್ಕೆ ಪರೇಖ್ ಶಿಫಾರಸು ಮಾಡಿದ್ದಾರೆ.

ನಿಫ್ಟಿ ದೃಷ್ಟಿಕೋನದ ಬಗ್ಗೆ ಪ್ರತಿಕ್ರಿಯಿಸಿದ ಪರೇಖ್, ಸೂಚ್ಯಂಕವು ಮೇಲ್ಮುಖವಾಗಿ ಏರಿಕೆ ಕಾಣಲು ಮತ್ತು ಸುಧಾರಿಸಲು ನಿಫ್ಟಿ 24,200ಕ್ಕಿಂತ ಹೆಚ್ಚು ಅಂಶಗಳನ್ನು ತಲುಪುವುದು ಅಗತ್ಯವಾಗಿದೆ. ಇದು ಸ್ಥಿರವಾಗಿರಬೇಕೆಂದರೆ 24,400 ಅಂಶಗಳ ಗಡಿ ದಾಟಬೇಕಿದೆ ಎಂದು ಹೇಳಿದ್ದಾರೆ.

ಬ್ಯಾಂಕ್ ನಿಫ್ಟಿಗೆ ಸಂಬಂಧಿಸಿದಂತೆ ಪರೇಖ್ ಹೇಳಿದಿಷ್ಟು.. ‘ಬ್ಯಾಂಕ್ ನಿಫ್ಟಿಯು 100 ದಿನಗಳ ಮೂವಿಂಗ್‌ ಅವರೇಜ್‌ (ಎಂಎ) ಅಗತ್ಯ ಬೆಂಬಲದ ಸಮೀಪಕ್ಕೆ ಬಂದಿದ್ದು, 49700 ಮಟ್ಟಕ್ಕೆ ತಲುಪಿದೆ. ಇದು ಇದೇ ರೀತಿ ಸ್ಥಿರವಾಗಿ ಉಳಿಯಬೇಕು. ಇಲ್ಲವಾದರೆ ಟ್ರೆಂಡ್‌ ದುರ್ಬಲವಾಗಲಿದೆ. ಇದು ಮುಂದುವರೆಯಲು 50,700 ಮಟ್ಟ ಮೀರಬೇಕು. ಇದರೊಂದಿಗೆ ಮತ್ತಷ್ಟು ಏರಿಕೆ ನಿರೀಕ್ಷಿಸಬಹುದು’ ಎಂದಿದ್ದಾರೆ.

ವೈಶಾಲಿ ಪರೇಖ್ ಸೂಚಿಸಿದ ಷೇರುಗಳ ಖರೀದಿಸಿ ಅಥವಾ ಮಾರಾಟ ಮಾಡಿ

  1. ಜಿಂದಾಲ್ ಸ್ಟೀಲ್: ಖರೀದಿ - 929.75 ರೂಪಾಯಿ, ಟಾರ್ಗೆಟ್ - 975 ರೂಪಾಯಿ (ಇಷ್ಟರೊಳಗೆ ಖರೀದಿಸಿ ಎಂಬ ಗುರಿ), ಸ್ಟಾಪ್‌ ಲಾಸ್‌ - 908 ರೂಪಾಯಿ.
  2. ಹಿಂದೂಸ್ತಾನ್ ಆಯಿಲ್ ಎಕ್ಸ್​ಪ್ಲೊರೇಷನ್ ಕಂಪನಿ: ಖರೀದಿ-251.75 ರೂಪಾಯಿ, ಟಾರ್ಗೆಟ್ - 268 ರೂಪಾಯಿ, ಸ್ಟಾಪ್‌ ಲಾಸ್‌ - 245 ರೂಪಾಯಿ.
  3. ಎವರೆಸ್ಟ್ ಕಾಂಟೋ ಸಿಲಿಂಡರ್: ಖರೀದಿ - 167.30 ರೂಪಾಯಿ, ಟಾರ್ಗೆಟ್ - 175 ರೂಪಾಯಿ, ಸ್ಟಾಪ್‌ ಲಾಸ್‌ - 163 ರೂಪಾಯಿ.

ಖರೀದಿ - ನೀವು ಒಂದು ಷೇರನ್ನು ಇಷ್ಟು ದರಕ್ಕೆ ಖರೀದಿಸುವುದು.

ಟಾರ್ಗೆಟ್ - ಇಷ್ಟು ರೂಪಾಯಿಗೆ ಷೇರು ತಲುಪಿದರೆ ಮಾರಿ ಲಾಭ ಮಾಡುವುದು

ಸ್ಟಾಪ್‌ ಲಾಸ್‌ - ಆ ಷೇರಿನ ದರ ಇಳಿಕೆ ಕಂಡರೆ ಆಟೋಮ್ಯಾಟಿಕ್‌ (ಸ್ವಯಂಚಾಲಿತ) ಮಾರಾಟ (ಸ್ಟಾಪ್‌ ಲಾಸ್‌ ದರದಲ್ಲಿ)

(ಗಮನಿಸಿ: ಮೇಲಿನ ಅಭಿಪ್ರಾಯಗಳು ಮತ್ತು ಶಿಫಾರಸುಗಳು ವಿಶ್ಲೇಷಕರು ಅಥವಾ ಬ್ರೋಕಿಂಗ್ ಕಂಪನಿಗಳು ನೀಡಿರುವ ಮಾಹಿತಿಯಷ್ಟೆ. ಈ ಮಾಹಿತಿ ಹಿಂದೂಸ್ತಾನ್ ಟೈಮ್ಸ್ ಕನ್ನಡದ್ದಲ್ಲ. ಯಾವುದೇ ಹೂಡಿಕೆ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು ತಜ್ಞರೊಂದಿಗೆ ಪರಿಶೀಲಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳುವಂತೆ ನಾವು ಹೂಡಿಕೆದಾರರಿಗೆ ಸಲಹೆ ನೀಡುತ್ತೇವೆ)

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ