logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Gold Rate: ಆಭರಣ ಪ್ರಿಯರೇ ಗಮನಿಸಿ, ವರ್ಷದ ಕೊನೆಯ ದಿನ ಬದಲಾಗಿಲ್ಲ ಚಿನ್ನ-ಬೆಳ್ಳಿ ಬೆಲೆ, ನಿನ್ನೆಯ ದರದಲ್ಲೇ ಮುಂದುವರಿಕೆ

Gold Rate: ಆಭರಣ ಪ್ರಿಯರೇ ಗಮನಿಸಿ, ವರ್ಷದ ಕೊನೆಯ ದಿನ ಬದಲಾಗಿಲ್ಲ ಚಿನ್ನ-ಬೆಳ್ಳಿ ಬೆಲೆ, ನಿನ್ನೆಯ ದರದಲ್ಲೇ ಮುಂದುವರಿಕೆ

Reshma HT Kannada

Dec 31, 2023 06:00 AM IST

google News

ಡಿಸೆಂಬರ್‌ 31ರ ಚಿನ್ನ, ಬೆಳ್ಳಿ ಬೆಲೆ

    • ಇಂದು 2023ನೇ ವರ್ಷದ ಕೊನೆಯ ದಿನ. ಕಳೆದೊಂದು ವರ್ಷದಿಂದ ಚಿನ್ನದ ಬೆಲೆಯಲ್ಲಿ ಸಾಕಷ್ಟು ಏರಿಳಿತವಿತ್ತು. ಆರಂಭದ ದಿನಗಳಲ್ಲಿ ಭಾರಿ ಏರಿಕೆ ಕಂಡಿದ್ದ ಚಿನ್ನ, ಅಂತ್ಯದ ದಿನಗಳಲ್ಲಿ ಇಳಿಕೆಯಾಗಿತ್ತು. ಬೆಳ್ಳಿ ದರವೂ ಇಂದು ತಟಸ್ಥವಾಗಿದೆ. ಆ ಮೂಲಕ ವರ್ಷವನ್ನು ಮುಗಿಸಲು ರೆಡಿಯಾಗಿದೆ.
ಡಿಸೆಂಬರ್‌ 31ರ ಚಿನ್ನ, ಬೆಳ್ಳಿ ಬೆಲೆ
ಡಿಸೆಂಬರ್‌ 31ರ ಚಿನ್ನ, ಬೆಳ್ಳಿ ಬೆಲೆ (PTI)

ಬೆಂಗಳೂರು: 2023ನೇ ವರ್ಷ ಒಂದು ಕೊನೆಯಾಗಲಿದೆ. ನಾಳೆ ಹೊಸ ವರ್ಷಕ್ಕೆ ಕಾಲಿಡಲಿದ್ದೇವೆ. ಈ ನಡುವೆ ವರ್ಷದ ಕೊನೆಯ ದಿನ ಚಿನ್ನ ಖರೀದಿ ಮಾಡೋಣ ಎಂದುಕೊಂಡವರಿಗೆ ಇಂದು ಶುಭಸುದ್ದಿ ಇದೆ. ಅದೇನೆಂದರೆ ಇಂದು ಚಿನ್ನದ ದರದಲ್ಲಿ ಯಾವುದೇ ರೀತಿಯ ವತ್ಯಾಸವಾಗಿಲ್ಲ. ಹಾಗೆಯೇ ಬೆಳ್ಳಿ ದರ ಕೂಡ ಸ್ಥಿರವಾಗಿದೆ. ನಾಳೆ ಎಂದರೆ ಹೊಸ ವರ್ಷದ ಸಂಭ್ರಮ ಜೊತೆಯಾಗಿರುತ್ತದೆ. ಹಾಗಾದರೆ ಇಂದು ದೇಶದ ವಿವಿಧ ರಾಜ್ಯಗಳಲ್ಲಿ ಚಿನ್ನದ ದರ ಎಷ್ಟಿದೆ ಎಂಬುದನ್ನು ಗಮನಿಸಿ.

ನಿಮ್ಮ ನಗರದಲ್ಲಿ ಇಂದಿನ ಚಿನ್ನದ ಧಾರಣೆ ಎಷ್ಟಿದೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

22 ಕ್ಯಾರೆಟ್‌ ಚಿನ್ನದ ದರ

ಇಂದು 1 ಗ್ರಾಂ ಚಿನ್ನದ ಬೆಲೆ 5,855 ರೂ. ಇದೆ. 8 ಗ್ರಾಂ ಚಿನ್ನ ಖರೀದಿಸುವುದಾದರೆ ಇಂದು 46,840 ರೂ. ನೀಡಬೇಕು. ಇಂದಿನ 10 ಗ್ರಾಂ ಚಿನ್ನದ ಬೆಲೆ 58,550 ಆಗಿದ್ದರೆ, 100 ಗ್ರಾಂ ಚಿನ್ನದ ಬೆಲೆ 5,85,500 ರೂ. ಇದೆ.

24 ಕ್ಯಾರೆಟ್‌ ಚಿನ್ನದ ದರ

1 ಗ್ರಾಂ 24 ಕ್ಯಾರೆಟ್‌ ಚಿನ್ನಕ್ಕೆ ಇಂದು 6,387 ರೂ ಇದೆ. 8 ಗ್ರಾಂ ಚಿನ್ನಕ್ಕೆ ಇಂದು 51,096 ರೂ ನೀಡಬೇಕು. 10 ಗ್ರಾಂ ಚಿನ್ನ ಖರೀದಿಸುವುದಾದರೆ ಇಂದು 63,870 ರೂ. ಕೊಡಬೇಕು. 100 ಗ್ರಾಂ ಚಿನ್ನದ ದರ 6,38,700 ರೂ ಇದೆ.

ಕರ್ನಾಟಕದಲ್ಲಿ ಇಂದಿನ ಚಿನ್ನದ ದರ

ಬೆಂಗಳೂರು, ಮಂಗಳೂರು, ಮೈಸೂರು, ದಾವಣಗೆರೆ, ಬಳ್ಳಾರಿ ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಇಂದು 22 ಕ್ಯಾರೆಟ್‌ ಚಿನ್ನದ ಬೆಲೆ 10 ಗ್ರಾಂ ಗೆ 58,550 ರೂ ಇದ್ದರೆ, 24 ಕ್ಯಾರೆಟ್‌ಗೆ 63,870 ರೂ. ಇದೆ. ಆದರೆ ಮಜೂರಿ, ಇತರೆ ಶುಲ್ಕ ಹಾಗೂ ಇತ್ಯಾದಿ ದರಗಳು ವಿವಿಧ ನಗರಗಳಲ್ಲಿ ವ್ಯತ್ಯಾಸವಿರಬಹುದು.

ಹೊರರಾಜ್ಯಗಳಲ್ಲಿ ಚಿನ್ನದ ದರ

22 ಕ್ಯಾರೆಟ್‌ ಚಿನ್ನದ ದರ: 10 ಗ್ರಾಂ 22 ಕ್ಯಾರೆಟ್‌ ಚಿನ್ನದ ದರ ಇಂದು ಚೆನ್ನೈನಲ್ಲಿ 59,100 ರೂ., ಮುಂಬೈನಲ್ಲಿ 58,550 ರೂ., ದೆಹಲಿಯಲ್ಲಿ 58,700 ರೂ., ಕೋಲ್ಕತಾದಲ್ಲಿ 58,550 ರೂ., ಹೈದರಾಬಾದ್‌ 58,550 ರೂ., ಕೇರಳ 58,550 ರೂ., ಪುಣೆ 58,550 ರೂ., ಅಹಮದಾಬಾದ್‌ 58,600 ರೂ., ಜೈಪುರ 58,700 ರೂ., ಲಖನೌ 58,700 ರೂ., ಕೊಯಮತ್ತೂರು 59,100 ರೂ., ಮಧುರೈ 59,100 ರೂ. ಹಾಗೂ ವಿಜಯವಾಡದಲ್ಲಿ 58,550 ರೂ. ಇದೆ.

24 ಕ್ಯಾರೆಟ್‌ ಚಿನ್ನದ ದರ: 10 ಗ್ರಾಂ 24 ಕ್ಯಾರೆಟ್‌ ಚಿನ್ನದ ದರ ಚೆನ್ನೈನಲ್ಲಿ 64,470 ರೂ., ಮುಂಬೈನಲ್ಲಿ 63,870 ರೂ., ದೆಹಲಿಯಲ್ಲಿ 63,970 ರೂ., ಕೋಲ್ಕತಾದಲ್ಲಿ 63,970 ರೂ., ಹೈದರಾಬಾದ್‌ 63,870 ರೂ., ಕೇರಳ 63,870 ರೂ., ಪುಣೆ 63,870 ರೂ., ಅಹಮದಾಬಾದ್‌ 63,300 ರೂ., ಜೈಪುರ 63,920 ರೂ., ಲಖನೌ 63,970 ರೂ., ಕೊಯಮತ್ತೂರು 64,470 ರೂ., ಮದುರೈ 64,470 ರೂ., ವಿಜಯವಾಡ 63,870 ರೂ. ಇದೆ.

ಬೆಳ್ಳಿ ದರ

ದೇಶದಲ್ಲಿ ಇಂದು ಬೆಳ್ಳಿ ದರ ಸ್ಥಿರವಾಗಿದೆ. 1ಗ್ರಾಂ ಬೆಳ್ಳಿಗೆ 76.75 ರೂ., ಇದೆ. 8ಗ್ರಾಂ ಬೆಳ್ಳಿ ಕೊಳ್ಳುವುದಾದರೆ 614 ರೂ. ನೀಡಬೇಕು. 10ಗ್ರಾಂ ಬೆಳ್ಳಿ ಖರೀದಿ ಮಾಡುವುದಾದರೆ ಇಂದು 767.50 ರೂ. ನೀಡಬೇಕು. 100 ಗ್ರಾಂ ಬೆಳ್ಳಿಗೆ ಇಂದು 7,675 ರೂ ಆಗಿದೆ. ಇಂದು 1 ಕೆಜಿ ಬೆಳ್ಳಿ ದರ 76,750 ರೂ., ಇದೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ