logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Gold Rate Today: ಮಂಗಳವಾರ ಹಳದಿ ಲೋಹದ ದರ ಕೊಂಚ ಇಳಿಕೆ, ಬೆಳ್ಳಿ ತುಸು ಏರಿಕೆ; ಜುಲೈ 16ರ ಚಿನ್ನ, ಬೆಳ್ಳಿ ಬೆಲೆ ಗಮನಿಸಿ

Gold Rate Today: ಮಂಗಳವಾರ ಹಳದಿ ಲೋಹದ ದರ ಕೊಂಚ ಇಳಿಕೆ, ಬೆಳ್ಳಿ ತುಸು ಏರಿಕೆ; ಜುಲೈ 16ರ ಚಿನ್ನ, ಬೆಳ್ಳಿ ಬೆಲೆ ಗಮನಿಸಿ

Reshma HT Kannada

Jul 16, 2024 06:00 AM IST

google News

ಮಂಗಳವಾರ ಹಳದಿ ಲೋಹದ ದರ ಕೊಂಚ ಇಳಿಕೆ, ಬೆಳ್ಳಿ ತುಸು ಏರಿಕೆ; ಜುಲೈ 16ರ ಚಿನ್ನ, ಬೆಳ್ಳಿ ಬೆಲೆ ಗಮನಿಸಿ

    • ಭಾರತದಲ್ಲಿ ಚಿನ್ನ, ಬೆಳ್ಳಿ ದರದಲ್ಲಿ ಏರಿಳಿತ ಸಹಜ. ಇದೀಗ ಆಷಾಢ ಮಾಸವಾದ ಕಾರಣ ಆಭರಣ ಖರೀದಿಯ ಭರ ಕೊಂಚ ತಗ್ಗಿದೆ. ಆದರೂ ಚಿನ್ನಕ್ಕೆ ಬೇಡಿಕೆಯೇನೂ ಕಡಿಮೆಯಾಗಿಲ್ಲ ಬಿಡಿ. ಮಂಗಳವಾರ (ಜುಲೈ 16) ಚಿನ್ನದ ಬೆಲೆ ಕೊಂಚ ಇಳಿಕೆಯಾಗಿದೆ. ಬೆಳ್ಳಿ ತುಸು ಏರಿಕೆಯಾಗಿದೆ. ದೇಶದಾದ್ಯಂತ ಇಂದು ಆಭರಣ ದರ ಎಷ್ಟಿದೆ ಗಮನಿಸಿ.
ಮಂಗಳವಾರ ಹಳದಿ ಲೋಹದ ದರ ಕೊಂಚ ಇಳಿಕೆ, ಬೆಳ್ಳಿ ತುಸು ಏರಿಕೆ; ಜುಲೈ 16ರ ಚಿನ್ನ, ಬೆಳ್ಳಿ ಬೆಲೆ ಗಮನಿಸಿ
ಮಂಗಳವಾರ ಹಳದಿ ಲೋಹದ ದರ ಕೊಂಚ ಇಳಿಕೆ, ಬೆಳ್ಳಿ ತುಸು ಏರಿಕೆ; ಜುಲೈ 16ರ ಚಿನ್ನ, ಬೆಳ್ಳಿ ಬೆಲೆ ಗಮನಿಸಿ (REUTERS)

ಬೆಂಗಳೂರು: ಹಿಂದೂ ಸಂಪ್ರದಾಯದಲ್ಲಿ ಆಷಾಢದಲ್ಲಿ ಯಾವುದೇ ಶುಭಕಾರ್ಯಗಳು ನಡೆಯುವುದು ಕಡಿಮೆ. ಆದರೂ ಆಭರಣ ಖರೀದಿಗೇನೂ ಭರವಿಲ್ಲ. ಭಾರತದಲ್ಲಿ ಚಿನ್ನ ಹಾಗೂ ಬೆಳ್ಳಿ ದರದಲ್ಲಿ ಏರಿಳಿತ ಸಾಮಾನ್ಯ. ಕಳೆದ ಕೆಲವು ತಿಂಗಳುಗಳಿಂದ ಒಮ್ಮೆ ಏರಿಕೆಯಾದರೆ ಇನ್ನೊಮ್ಮೆ ಇಳಿಕೆಯಾಗುತ್ತಿದೆ ಆಭರಣ ದರ. ಇದೀಗ ಜುಲೈ 16 ರಂದು ಚಿನ್ನದ ದರದಲ್ಲಿ ಕೊಂಚ ಇಳಿಕೆಯಾದ್ರೆ, ಬೆಳ್ಳಿ ದರದಲ್ಲಿ ತುಸು ಏರಿಕೆಯಾಗಿದೆ. ಹಾಗಾದ್ರೆ ದೇಶದಾದ್ಯಂತ ಚಿನ್ನ ಹಾಗೂ ಬೆಳ್ಳಿ ದರ ಎಷ್ಟಿದೆ, 22 ಕ್ಯಾರೆಟ್‌ ಚಿನ್ನಕ್ಕೆ ಎಷ್ಟು, 24 ಕ್ಯಾರೆಟ್‌ ಚಿನ್ನಕ್ಕೆ ಎಷ್ಟು ಎಂಬಿತ್ಯಾದಿ ವಿವರ ಇಲ್ಲಿದೆ.

ನಿಮ್ಮ ನಗರದಲ್ಲಿ ಇಂದಿನ ಚಿನ್ನದ ಧಾರಣೆ ಎಷ್ಟಿದೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

22 ಕ್ಯಾರೆಟ್‌ ಚಿನ್ನದ ಬೆಲೆ

ಇಂದು 1 ಗ್ರಾಂ ಚಿನ್ನಕ್ಕೆ 6,750 ರೂ ಇದೆ. ನಿನ್ನೆ 6,760 ರೂ ಇದ್ದು, ಈ ದರಕ್ಕೆ ಹೋಲಿಸಿದರೆ 10 ರೂ ಇಳಿಕೆಯಾಗಿದೆ. 8 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 54,000 ರೂ ನೀಡಬೇಕು. ನಿನ್ನೆ 54,080 ರೂ ಇದ್ದು, ನಿನ್ನೆ ದರಕ್ಕೆ ಹೋಲಿಸಿದರೆ ಇಂದು 80 ರೂ. ಕಡಿಮೆಯಾಗಿದೆ. 10 ಗ್ರಾಂ ಚಿನ್ನಕ್ಕೆ 67,500 ರೂ ಇದೆ. ನಿನ್ನೆ 67,600 ರೂ. ಇತ್ತು. ಈ ದರಕ್ಕೆ ಹೋಲಿಸಿದರೆ 100 ರೂ. ಕಡಿಮೆಯಾಗಿದೆ. 100 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 6,75,000 ರೂ. ನೀಡಬೇಕು. ನಿನ್ನೆ 6,76,000 ರೂ. ಇದ್ದು ಈ ದರಕ್ಕೆ ಹೋಲಿಸಿದರೆ 1,000 ರೂ. ಇಳಿಕೆಯಾಗಿದೆ.

24 ಕ್ಯಾರೆಟ್‌ ಚಿನ್ನದ ಬೆಲೆ

24 ಕ್ಯಾರೆಟ್‌ ಚಿನ್ನಕ್ಕೆ 1 ಗ್ರಾಂಗೆ 7,364 ರೂ. ಇದೆ. ನಿನ್ನೆ 7,375 ರೂ. ಇದು ಈ ದರಕ್ಕೆ ಹೋಲಿಸಿದರೆ 11 ರೂ ಇಳಿಕೆಯಾಗಿದೆ. 8 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 58,912 ರೂ. ನೀಡಬೇಕು. ನಿನ್ನೆ 59,000 ರೂ. ಇದ್ದು ಈ ದರಕ್ಕೆ ಹೋಲಿಸಿದರೆ 88 ರೂ. ಕಡಿಮೆಯಾಗಿದೆ. ಇಂದು 10 ಗ್ರಾಂ ಚಿನ್ನಕ್ಕೆ 73,640 ನೀಡಬೇಕು. ನಿನ್ನೆ 73,750 ರೂ. ಇದ್ದು, ಈ ದರಕ್ಕೆ ಹೋಲಿಸಿದರೆ 110 ರೂ ಕಡಿಮೆಯಾಗಿದೆ. 100 ಗ್ರಾಂ ಚಿನ್ನದ ಬೆಲೆ 7,36,400 ರೂ. ಇದೆ. ನಿನ್ನೆ 7,37,500 ರೂ ಇತ್ತು. ಈ ದರಕ್ಕೆ ಹೋಲಿಸಿದರೆ 1,100 ರೂ ಕಡಿಮೆಯಾಗಿದೆ.

ಕರ್ನಾಟಕದಲ್ಲಿ ಚಿನ್ನದ ಬೆಲೆ (1 ಗ್ರಾಂ)

ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರದಲ್ಲಿ ಇಂದು ಚಿನ್ನದ ಬೆಲೆ 22 ಕ್ಯಾರೆಟ್‌ಗೆ 6,750 ರೂ. ಹಾಗೂ 24 ಕ್ಯಾರೆಟ್‌ ಚಿನ್ನದ ಬೆಲೆ 7,364 ರೂ. ಇದೆ. ಮೈಸೂರು, ಮಂಗಳೂರು, ಬಳ್ಳಾರಿ, ದಾವಣಗೆರೆ ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಇದೇ ಬೆಲೆ ಇರಲಿದೆ. ಆದರೆ ಮಜೂರಿ, ಇತರೆ ಶುಲ್ಕ ಹಾಗೂ ಇನ್ನಿತರ ದರಗಳು ವಿವಿಧ ನಗರಗಳಲ್ಲಿ ವ್ಯತ್ಯಾಸವಿರಬಹುದು.

ಹೊರ ರಾಜ್ಯಗಳಲ್ಲಿ ಚಿನ್ನದ ದರ (1 ಗ್ರಾಂ)

ಚೆನ್ನೈನಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 6,785 ರೂ. 24 ಕ್ಯಾರೆಟ್‌ಗೆ 7,402 ರೂ. ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 6,750 ರೂ. 24 ಕ್ಯಾರೆಟ್‌ಗೆ 7,364 ರೂ. ಇದೆ. ದೆಹಲಿಯಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 6,765 ರೂ. 24 ಕ್ಯಾರೆಟ್‌ಗೆ 7,379 ಇದೆ. ಕೊಲ್ಕತ್ತಾದಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 6,750 ರೂ. 24 ಕ್ಯಾರೆಟ್‌ಗೆ 7,364 ರೂ. ಇದೆ. ಹೈದರಾಬಾದ್‌ನಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 6,750 ರೂ. ಇದ್ದರೆ, 24 ಕ್ಯಾರೆಟ್‌ಗೆ 7,364 ರೂ. ಇದೆ. ಕೇರಳದಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 6,750 ರೂ. 24 ಕ್ಯಾರೆಟ್‌ಗೆ 7,364 ರೂ. ಆಗಿದೆ.

ಬೆಳ್ಳಿ ದರ

ಇಂದು ಬೆಳ್ಳಿ ದರ ತುಸು ಹೆಚ್ಚಾಗಿದೆ. ಒಂದು ಗ್ರಾಂ ಬೆಳ್ಳಿಗೆ 95.20 ರೂ. ಇದೆ. 8 ಗ್ರಾಂಗೆ 761.60 ರೂ ಇದ್ದರೆ, 10 ಗ್ರಾಂಗೆ 952 ರೂ. ಇದೆ. 100 ಗ್ರಾಂಗೆ 9,520 ರೂ. ಹಾಗೂ 1 ಕಿಲೋಗೆ 95,200 ರೂ. ಬೆಲೆ ನಿಗದಿ ಆಗಿದೆ.

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ