ಪಿಪಿಎಫ್ ಖಾತೆಯಲ್ಲಿ ವರ್ಷಕ್ಕೆ ಒಂದೂವರೆ ಲಕ್ಷ ರೂ ಹೂಡಿಕೆ ಮಾಡಿ ಕೋಟ್ಯಧಿಪತಿ ಆಗಬಹುದು, ಪಿಪಿಎಫ್ ಕ್ಯಾಲ್ಕುಲೇಟರ್ ಲೆಕ್ಕ ಹೀಗಿದೆ ನೋಡಿ
Jun 23, 2024 06:30 AM IST
ಪಿಪಿಎಫ್ ಖಾತೆಯಲ್ಲಿ ವರ್ಷಕ್ಕೆ ಒಂದೂವರೆ ಲಕ್ಷ ರೂ ಹೂಡಿಕೆ ಮಾಡಿ ಕೋಟ್ಯಧಿಪತಿ ಆಗಬಹುದು, (ಸಾಂಕೇತಿಕ ಚಿತ್ರ)
ಪಿಪಿಎಫ್ ಕ್ಯಾಲ್ಕುಲೇಟರ್ (PPF calculator): ಪಿಪಿಎಫ್ ಖಾತೆಯಲ್ಲಿ ವರ್ಷಕ್ಕೆ ಒಂದೂವರೆ ಲಕ್ಷ ರೂ ಹೂಡಿಕೆ ಮಾಡಿ ಕೋಟ್ಯಧಿಪತಿ ಆಗಬಹುದು. ವಾರ್ಷಿಕ ಬಡ್ಡಿದರ ಶೇಕಡ 7.1 ಇದೆ ಈಗ. ಈ ಲೆಕ್ಕಾಚಾರ ಹೇಗೆ ಎಂಬುದವರ ವಿವರ ಇಲ್ಲಿದೆ ನೋಡಿ.
ಪಿಪಿಎಫ್ ಕ್ಯಾಲ್ಕುಲೇಟರ್ (PPF calculator): ಭಾರತದ ಜನಪ್ರಿಯ ದೀರ್ಘಾವಧಿ ಉಳಿತಾಯ ಯೋಜನೆ ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್). ಪ್ರಸ್ತುತ, 2023ರ ಏಪ್ರಿಲ್ 1 ರಿಂದ ಜಾರಿಗೆ ಬರುವಂತೆ ಶೇಕಡ 7.1ರ ಬಡ್ಡಿದರ ಚಾಲ್ತಿಯಲ್ಲಿದೆ. ಕಳೆದ ಕೆಲವು ವರ್ಷಗಳಿಂದ, ಸರ್ಕಾರವು ಈ ಬಡ್ಡಿದರವನ್ನು ಪರಿಷ್ಕರಿಸಿಲ್ಲ. ಯಾವುದೇ ಬ್ಯಾಂಕ್ ಅಥವಾ ಹತ್ತಿರದ ಅಂಚೆ ಕಚೇರಿಯಲ್ಲಿ ಪಿಪಿಎಫ್ ಖಾತೆಯನ್ನು ತೆರೆಯಬಹುದು. ಆದಾಗ್ಯೂ, ಒಬ್ಬರ ಪಿಪಿಎಫ್ ಖಾತೆಯಲ್ಲಿ ವರ್ಷಕ್ಕೆ ಕನಿಷ್ಠ 500 ರೂ. ಹೂಡಿಕೆ ಮಾಡಬೇಕು. ಪಿಪಿಎಫ್ ಖಾತೆಯಲ್ಲಿ ಠೇವಣಿ ಮಾಡಬಹುದಾದ ಗರಿಷ್ಠ ಮೊತ್ತವನ್ನು 1.5 ಲಕ್ಷ ರೂಪಾಯಿಗೆ ನಿಗದಿಪಡಿಸಲಾಗಿದೆ. ಪಿಪಿಎಫ್ ಖಾತೆಯ ಪೂರ್ಣ ಅವಧಿ ಎಂದರೆ 15 ವರ್ಷ.
ಅನೇಕರಿಗೆ ಕೋಟ್ಯಧಿಪತಿಯಾಗಬೇಕು ಎಂಬ ಕನಸು ಇರಬಹುದು. ವ್ಯವಸ್ಥಿತವಾದ ಹೂಡಿಕೆ ಮಾಡುವ ಮೂಲಕ ಕೋಟ್ಯಧಿಪತಿಯಾಗಬಹುದು. ಪಿಪಿಎಫ್ ಖಾತೆಯಲ್ಲಿ ಈ ಹಣ ಹೂಡಿಕೆ ಮಾಡಿದರೂ ಕೋಟ್ಯಧಿಪತಿಯಾಗಬಹುದು.
ಪಿಪಿಎಫ್ ಖಾತೆಯಲ್ಲಿ ಹಣ ಠೇವಣಿ ಮಾಡಿ ಕೋಟ್ಯಧಿಪತಿ ಆಗುವುದು ಹೀಗೆ
ಮಧ್ಯಮಸ್ತರದ ಹೂಡಿಕೆಯ ಮೂಲಕ ಕೋಟಿ ರೂಪಾಯಿ ಗಳಿಸುವುದು ಕಷ್ಟವಾಗುತ್ತದೆ. ಆದರೆ, ಪರ್ಸನಲ್ ಫೈನಾನ್ಸ್ ತಜ್ಞರು ಹೇಳುವ ಪ್ರಕಾರ, ಪಿಪಿಎಫ್ ಕಾಂಪೌಂಡಿಂಗ್ ಶಕ್ತಿಯಿಂದ ಮಧ್ಯಮಸ್ತರ ಹೂಡಿಕೆ ಮಾಡಿದರೂ ಕೋಟ್ಯಧಿಪತಿಯಾಗಬಹುದು.
ವ್ಯಕ್ತಿಗಳು ತಮ್ಮ ಪಿಪಿಎಫ್ ಖಾತೆಯನ್ನು 5 ವರ್ಷಗಳ ಅವಧಿಯಂತೆ ಎಷ್ಟು ಅವಧಿಗೆ ಬೇಕಾದರೂ ವಿಸ್ತರಿಸಬಹುದು. ಪಿಪಿಎಫ್ ಖಾತೆಯನ್ನು ನೀವು ವಿಸ್ತರಿಸುವಾಗ, ನೀವು ಹೂಡಿಕೆಯ ಆಯ್ಕೆಯೊಂದಿಗೆ ವಿಸ್ತರಣೆಯನ್ನು ಕೂಡ ಆರಿಸಿಕೊಳ್ಳಬೇಕು. ಏಕೆಂದರೆ ಇದು ಪಿಪಿಎಫ್‌ನ ಮೆಚುರಿಟಿಯು ಲಭ್ಯ ಮೊತ್ತ ಮತ್ತು ಹೊಸ ಹೂಡಿಕೆ ಎರಡರಲ್ಲೂ ಬಡ್ಡಿಯನ್ನು ಪಡೆಯಲು ನಿಮಗೆ ಅನುವು ಮಾಡಿಕೊಡುತ್ತದೆ. ಸರಳವಾಗಿ ಹೇಳುವುದಾದರೆ, ನಿವೃತ್ತಿಯ ಸಮಯದಲ್ಲಿ ಒಬ್ಬರ ಪಿಪಿಎಫ್ ಖಾತೆಯಲ್ಲಿ ಒಂದು ಕೋಟಿಗೂ ಹೆಚ್ಚು ಹಣವನ್ನು ಸಂಗ್ರಹಿಸಬಹುದು" ಎಂದು ಟ್ರಾನ್ಸ್‌ಸೆಂಡ್ ಕನ್ಸಲ್ಟೆಂಟ್ಸ್‌ನ ಸಂಪತ್ತಿನ ನಿರ್ದೇಶಕ ಕಾರ್ತಿಕ್ ಝವೇರಿ ಹೇಳಿದರು.
ಕೋಟಿ ರೂಪಾಯಿ ಗಳಿಕೆ; ಪಿಪಿಎಫ್ ಕ್ಯಾಲ್ಕುಲೇಟರ್ ಲೆಕ್ಕ
ಗಳಿಸುವ ವ್ಯಕ್ತಿಯು 15 ವರ್ಷಗಳು ಪೂರ್ಣಗೊಂಡ ನಂತರ ತನ್ನ ಪಿಪಿಎಫ್ ಖಾತೆಯನ್ನು ಎರಡು ಬಾರಿ ವಿಸ್ತರಿಸಿದರೆ, ಆತ/ಆಕೆ ದೊಡ್ಡ ಮೊತ್ತದ ಹಣವನ್ನು ಸಂಗ್ರಹಿಸಲು ಮತ್ತು 25 ವರ್ಷಗಳಲ್ಲಿ ಕೋಟ್ಯಧಿಪತಿಯಾಗಲು ಸಾಧ್ಯವಾಗುತ್ತದೆ. ಹೇಗೆ ಎಂದು ನೋಡೋಣ.
ಪಿಪಿಎಫ್ ಖಾತೆದಾರರು ಒಬ್ಬರ ಪಿಪಿಎಫ್ ಖಾತೆಯಲ್ಲಿ ವರ್ಷಕ್ಕೆ 1.50 ಲಕ್ಷ ರೂಪಾಯಿಯನ್ನು ಹೂಡಿಕೆ ಮಾಡುತ್ತಿದ್ದಾರೆ. ಅವರು 8333.3 ರೂಪಾಯಿ ಕಂತುಗಳಲ್ಲಿ ಪಾವತಿಯನ್ನು ಮಾಸಿಕವಾಗಿ ವಿಭಜಿಸಬಹುದು. ನಂತರ 25 ವರ್ಷಗಳ ಹೂಡಿಕೆಯ ನಂತರ, ಒಬ್ಬರ ಪಿಪಿಎಫ್ ಮೆಚ್ಯೂರಿಟಿ ಮೊತ್ತವು 1,03,08,015 ರೂಪಾಯಿ (1.03 ಕೋಟಿ ರೂಪಾಯಿ) ಆಗಿರುತ್ತದೆ.
ಕ್ಯಾಲ್ಕುಲೇಟರ್‌ನ ಪ್ರಕಾರ (ಕೆಳಗಿನ ಸ್ಕ್ರೀನ್‌ಶಾಟ್) ವಾರ್ಷಿಕವಾಗಿ ಫ್ಲಾಟ್ 7.10 ಪರ್ಸೆಂಟ್‌ನಲ್ಲಿ ಸಂಪೂರ್ಣ ಅವಧಿಗೆ PPF ಬಡ್ಡಿ ದರವನ್ನು ಊಹಿಸಿದರೆ ಹೂಡಿಕೆ ಮಾಡಿದ ಮೌಲ್ಯವು 37,50,000 ರೂಪಾಯಿ ಮತ್ತು ಗಳಿಸಿದ ಬಡ್ಡಿಯು 65,58,015 ರೂಪಾಯಿ ಎಂಬುದನ್ನು ತೋರಿಸುತ್ತದೆ.
ಪಿಪಿಎಫ್ ಖಾತೆಯು ಇಇಇ ವರ್ಗದ ವ್ಯಾಪ್ತಿಗೆ ಬರುತ್ತದೆ. ಇದರಲ್ಲಿ 1.5 ಲಕ್ಷ ರೂಪಾಯಿವರೆಗಿನ ವಾರ್ಷಿಕ ಠೇವಣಿಗೆ ಸೆಕ್ಷನ್ 80C ಅಡಿಯಲ್ಲಿ ಆದಾಯ ತೆರಿಗೆ ವಿನಾಯಿತಿ ಪಡೆಯಬಹುದು.ಇದರ ಹೊರತಾಗಿ, ಒಬ್ಬರ ಪಿಪಿಎಫ್ ಮೆಚುರಿಟಿ ಮೊತ್ತವೂ ಸಹ ತೆರಿಗೆ-ವಿನಾಯಿತಿಗೆ ಒಳಪಟ್ಟಿದೆ.
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.