FASTag: ಫಾಸ್ಟ್ಯಾಗ್ ಬ್ಯಾಲೆನ್ಸ್ ಚೆಕ್ ಮಾಡುವುದು ಹೇಗೆ, ಪಾವತಿ ವಿಧಾನ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ
Sep 09, 2023 10:11 AM IST
ಫಾಸ್ಟ್ಯಾಗ್ ಬ್ಯಾಲೆನ್ಸ್ ಚೆಕ್ ಮಾಡುವುದು ಹೇಗೆ
- ಭಾರತದಲ್ಲಿ 2021ರಿಂದ ಫಾಸ್ಟ್ಯಾಗ್ ಬಳಕೆ ಜಾರಿಯಲ್ಲಿದೆ. ಆದರೆ ಈಗಲೂ ಹಲವರು ಟೋಲ್ ಪ್ಲಾಜಾದ ಬಳಿ ನಗದು ಪಾವತಿ ಮಾಡುವುದನ್ನು ಕಾಣಬಹುದು. ಇದಕ್ಕೆ ಮುಖ್ಯ ಕಾರಣ ಫಾಸ್ಟ್ಯಾಗ್ ಬ್ಯಾಲೆನ್ಸ್ ಲೋ ಆಗಿರುವುದು. ಹಾಗಾದರೆ ಫಾಸ್ಟ್ಯಾಗ್ ಬ್ಯಾಲೆನ್ಸ್ ಚೆಕ್ ಮಾಡುವುದು ಹೇಗೆ, ಬ್ಯಾಲೆನ್ಸ್ ಪಾವತಿ ಮಾಡುವುದು ಹೇಗೆ? ಈ ಕುರಿತ ಸಂಪೂರ್ಣ ವಿವರ ಇಲ್ಲಿದೆ.
ಅರ್ಜೆಂಟ್ ಆಗಿ ಎಲ್ಲೋ ಹೋಗಬೇಕಿರುತ್ತೆ, ಗಡಿಬಿಡಿಯಲ್ಲಿ ಗಾಡಿ ಓಡಿಸಿಕೊಂಡು ಹೋಗ್ತಾ ಇರ್ಬೇಕಾದ್ರೆ ಟೋಲ್ ಪ್ಲಾಜಾದ ಬಳಿ ಗಾಡಿ ಸ್ಟಕ್ ಆಗಿ ಬಿಡುತ್ತೆ, ಕಾರಣ ಕೇಳಿದ್ರೆ ಫಾಸ್ಟ್ಯಾಗ್‌ನಲ್ಲಿ ಹಣವಿಲ್ಲ. ಕೆಲವೊಮ್ಮೆ ನಾವು ಗಾಡಿಯಲ್ಲಿ ಹೋಗುತ್ತಿರಬೇಕಾದ್ರೆ ಟೋಲ್‌ಗೇಟ್ ಬಳಿ ಗಾಡಿಯೊಂದು ನಿಂತಿರುತ್ತೆ, ತುಂಬಾ ಹೊತ್ತು ಮುಂದೆ ಹೋಗೋದಿಲ್ಲ. ಹಿಂದೆ ಇರುವ ನಮ್ಮ ಗಾಡಿಯು ಮುಂದೆ ಹೋಗುವ ಹಾಗಿಲ್ಲ. ಆ ಗಾಡಿ ಓನರ್ ಫಾಸ್ಟ್ಯಾಗ್ ರೀಚಾರ್ಜ್ ಮಾಡಿಲ್ಲ. ಆ ಕಾರಣಕ್ಕೆ ತಡ ಗಾಡಿ ಟೋಲ್ ಗೇಟ್ ಓಪನ್ ಆಗಿರೊಲ್ಲ. ಈ ರೀತಿಯ ಅನುಭವಗಳು ನಿಮಗೂ ಆಗಿರಬಹುದು ಅಲ್ವಾ. ಇದರಿಂದ ನೀವು ಟೋಲ್ ಗೇಟ್ ಬಳಿ ನಿಂತು ಕೋಪ, ಅಸಹನೆ ತೋರಿರಬಹುದು. ಇದು ನಿಮಗೊಬ್ಬರಿಗೆ ಅಲ್ಲ, ನಿಮ್ಮಂತೆ ಹಲವರ ಕಥೆ ಇದು. ಈ ಫಾಸ್ಟ್ಯಾಗ್ ರಿಚಾರ್ಜ್ ವಿಚಾರದಲ್ಲಿ ನೀವು ತಲೆ ಕೆಡಿಸಿಕೊಂಡಿರಬಹುದು. ಏನಪ್ಪಾ, ಇದು ಯಾವಾಗ್ಲೂ ಹೀಗೆ ಟೋಲ್ ಗೇಟ್ ಮುಂದೆ ಕೈ ಕೊಡುತ್ತೆ ಅಂತ ಬಯ್ಯಕೊಂಡ್ ಇರಬಹುದು. ಆದರೆ ಖಂಡಿತ ಈ ಸಮಸ್ಯೆಗೆ ಪರಿಹಾರವಿದೆ.
ಫಾಸ್ಟ್ಯಾಗ್ ಪ್ರಿಪೆಯ್ಡ್ ವ್ಯವಸ್ಥೆಯಾಗಿದೆ. ಇದು ರೆಡಿಯೊ ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್ (RFID) ತಂತ್ರಜ್ಞಾನವನ್ನು ಬಳಸಿಕೊಳ್ಳುವ ಸಂಪರ್ಕರಹಿತ ಟೋಲ್ ಸಂಗ್ರಹ ವ್ಯವಸ್ಥೆಯಾಗಿದೆ. ಇದು ಟೋಲ್ ಪ್ಲಾಜಾಗಳಲ್ಲಿ ಗಾಡಿಯನ್ನು ನಿಲ್ಲಿಸಿ ಪಾವತಿಸುವಂತೆ ಮಾಡದೇ ನೇರವಾಗಿ ಸ್ಕ್ಯಾನ್ ಮಾಡುವ ಮೂಲಕ ಟೋಲ್ ಪಾವತಿಸುವ ವ್ಯವಸ್ಥೆಯಾಗಿದೆ.
ಭಾರತದಲ್ಲಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚರಿಸುವ ಎಲ್ಲಾ ವಾಹನಗಳಿಗೆ ಫಾಸ್ಟ್‌ಟ್ಯಾಗ್ ಕಡ್ಡಾಯವಾಗಿ ಎರಡು ವರ್ಷ ಕಳೆದಿದೆ. 2021ರ ಜನವರಿಯಿಂದ ಫಾಸ್ಟ್ಯಾಗ್ ಬಳಕೆ ಕಡ್ಡಾಯವಾಗಿದೆ. ನೀವು ಫಾಸ್ಟ್ಯಾಗ್ ಹೊಂದಿದ್ದರೆ ನಿಮ್ಮ ಬ್ಯಾಲೆನ್ಸ್ ಅನ್ನು ಟ್ರ್ಯಾಕ್ ಮಾಡುವುದು ಅವಶ್ಯ. ಟೋಲ್ ಮುಂದೆ ಬ್ಯಾಲೆನ್ಸ್ ಖಾಲಿ ಆಗಿ ಗಾಡಿ ನಿಲ್ಲುವುದನ್ನು ತಡೆಯಲು ನೀವು ಈ ಕೆಲವು ವಿಧಾನಗಳ ಮೂಲಕ ಬ್ಯಾಲೆನ್ಸ್ ಚೆಕ್ ಮಾಡಬಹುದು.
ಈ ಲೇಖನದಲ್ಲಿ ಫಾಸ್ಟ್ಯಾಗ್ ಬ್ಯಾಲೆನ್ಸ್ ಚೆಕ್ ಮಾಡುವುದು ಹೇಗೆ ಎಂದು ತಿಳಿಸುವುದಲ್ಲದೇ ಫಾಸ್ಟ್ಯಾಗ್ ಸಂಬಂಧಿಸಿ ಕೆಲವು ಟಿಪ್ಸ್‌ಗಳನ್ನು ತಿಳಿಸುತ್ತೇವೆ.
ಫಾಸ್ಟ್ಯಾಗ್ ಬ್ಯಾಲೆನ್ಸ್ ಎಂದರೇನು?
ಫಾಸ್ಟ್ಯಾಗ್ ಅಕೌಂಟ್‌ನಲ್ಲಿ ಸಂಗ್ರಹವಿರುವ ಮೊತ್ತವನ್ನು ಫಾಸ್ಟ್ಯಾಗ್ ಬ್ಯಾಲೆನ್ಸ್ ಎನ್ನುತ್ತಾರೆ. ನೀವು ರಾಷ್ಟ್ರೀಯ ಹೆದ್ದಾರಿ ವಾಹನದಲ್ಲಿ ಸಂಚರಿಸುವಾಗ ಟೋಲ್ ಪ್ಲಾಜಾ ಬಳಿ ಹಾದು ಹೋಗುವಾಗ ನಿಮ್ಮ ಫಾಸ್ಟ್ಯಾಗ್ ಬ್ಯಾಲೆನ್ಸ್‌ನಿಂದ ಹಣ ಕಡಿತವಾಗುತ್ತದೆ. ಒಂದು ವೇಳೆ ನಿಮ್ಮ ಫಾಸ್ಟ್ಯಾಗ್ ಬ್ಯಾಲೆನ್ಸ್ ಕಡಿಮೆ ಇದ್ದರೆ ಟೋಲ್ ಗೇಟ್ ಬಂದ್ ಆಗಿದ್ದು, ನಿಮ್ಮ ಗಾಡಿಯನ್ನು ಮುಂದಕ್ಕೆ ಚಲಿಸಲು ಬಿಡುವುದಿಲ್ಲ.
ಫಾಸ್ಟ್ಯಾಗ್ ಅಕೌಂಟ್ ರಚಿಸುವುದು ಹೇಗೆ?
ನೀವು ನಿಮ್ಮ ಫಾಸ್ಟ್ಯಾಗ್ ಅಕೌಂಟ್ ಹೊಂದಬೇಕು ಎಂದರೆ ಫಾಸ್ಟ್ಯಾಗ್ ಪಾವತಿ ಏಜೆನ್ಸಿಗಳ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬೇಕು. ಭಾರತದಲ್ಲಿರುವ ಕೆಲವು ಪ್ರಮುಖ ಫಾಸ್ಟ್ಯಾಗ್ ಏಜೆನ್ಸಿಗಳಿವು.
- ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ
- ಇಂಡಿಯನ್ ಬ್ಯಾಂಕ್
- ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
- ಎಚ್‌ಡಿಎಫ್‌ಸಿ ಬ್ಯಾಂಕ್
- ಪೇಟಿಎಂ
ನೀವು ನಿಮ್ಮ ಫಾಸ್ಟ್ಯಾಗ್ ಅಕೌಂಟ್ ಕ್ರಿಯೇಟ್ ಮಾಡಲು ಈ ಯಾವುದಾದರೂ ಒಂದು ಫಾಸ್ಟ್ಯಾಗ್ ಏಜೆನ್ಸಿಯನ್ನು ಆಯ್ಕೆ ಮಾಡಿಕೊಂಡ ನಂತರ, ನೀವು ಕೆಲವು ಬೇಸಿಕ್ ಮಾಹಿತಿಯನ್ನು ನೀಡಬೇಕಾಗುತ್ತದೆ. ನಿಮ್ಮ ಹೆಸರು, ವಿಳಾಸ, ಗಾಡಿ ನೋಂದಣಿ ಸಂಖ್ಯೆ ಹಾಗೂ ಮೊಬೈಲ್ ನಂಬರ್‌ಗಳನ್ನು ನೀಡಬೇಕಾಗುತ್ತದೆ. ಅಲ್ಲದೆ ಮೊದಲ ಬಾರಿ ರಿಜಿಸ್ಟ್ರೇಷನ್ ಮೊತ್ತವನ್ನೂ ಪಾವತಿಸಬೇಕಾಗುತ್ತದೆ.
ಫಾಸ್ಟ್ಯಾಗ್ ಬ್ಯಾಲೆನ್ಸ್ ಪರಿಶೀಲನೆ ಮಾಡುವ ವಿವಿಧ ಹಂತಗಳು
ಫಾಸ್ಟ್ಯಾಗ್ ಟೋಲ್ ಗೇಟ್‌ಗಳಲ್ಲಿ ಟೋಲ್ ಪಾವತಿಸಲು ಸುಲಭ ಮಾರ್ಗವಾಗಿದೆ. ಇದು ತೊಂದರೆ ಮುಕ್ತ ಸಂಚಾರಕ್ಕೆ ಅನುವು ಮಾಡಿಕೊಡುತ್ತದೆ. ಇದು ನಗದು ಪಾವತಿ, ಚಿಲ್ಲರೆಗೆ ಪರದಾಡುವುದು ಇಂತಹ ಅಗತ್ಯಗಳನ್ನು ನಿವಾರಿಸುತ್ತದೆ ಮತ್ತು ಇದು ಟೋಲ್ ಸಂಗ್ರಹ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ. ಅದೆಲ್ಲಾ ಸರಿ, ಆದರೆ ನಿಮ್ಮ ಫಾಸ್ಟ್ಯಾಗ್ ಅಕೌಂಟ್‌ನಲ್ಲಿ ಹಣ ಇಲ್ಲ ಅಂದ್ರೆ ಹೇಗೆ ಅಲ್ವಾ, ಅದಕ್ಕಾಗಿ ನೀವು ಬ್ಯಾಲೆನ್ಸ್ ಟ್ರ್ಯಾಕ್ ಮಾಡುವುದು ಬಹಳ ಅವಶ್ಯ.
ನಿಮ್ಮ ಫಾಸ್ಟ್ಯಾಗ್ ಬ್ಯಾಲೆನ್ಸ್ ಅನ್ನು ಪರಿಶೀಲಿಸಲು ಕೆಲವು ವಿಭಿನ್ನ ಹಾಗೂ ಹಲವಾರು ಮಾರ್ಗಗಳಿವೆ.
ಅನ್‌ಲೈನ್‌ನಲ್ಲಿ ಫಾಸ್ಟ್ಯಾಗ್ ಪರಿಶೀಲನೆ ಮಾಡುವುದು
ನಿಮ್ಮ ಫಾಸ್ಟ್‌ಟ್ಯಾಗ್ ಬ್ಯಾಲೆನ್ಸ್ ಅನ್ನು ಆನ್‌ಲೈನ್‌ನಲ್ಲಿ ಪರಿಶೀಲಿಸುವುದು ಟೋಲ್ ಪಾವತಿಗೆ ನೀವು ಸಾಕಷ್ಟು ಬ್ಯಾಲೆನ್ಸ್ ಹೊಂದಿರುವಿರಿ ಎಂದು ಖಚಿತಪಡಿಸಿಕೊಳ್ಳಲು ತ್ವರಿತ ಮತ್ತು ಸುಲಭವಾದ ಮಾರ್ಗವಾಗಿದೆ. ಇದನ್ನು ಹೇಗೆ ಮಾಡಬೇಕೆಂಬುದರ ಹಂತಗಳು ಇಲ್ಲಿವೆ:
ಫಾಸ್ಟ್ಯಾಗ್ ಪಾವತಿದಾರರ ವೆಬ್‌ಸೈಟ್‌ಗೆ ಭೇಟಿ ನೀಡಿ: ಇದು ಸಾಮಾನ್ಯವಾಗಿ ನಿಮ್ಮ ಫಾಸ್ಟ್‌ಟ್ಯಾಗ್ ಅನ್ನು ಖರೀದಿಸಲು ಬಳಸಿದ ಅದೇ ಬ್ಯಾಂಕ್ ಅಥವಾ ಮೊಬೈಲ್ ವ್ಯಾಲೆಟ್ ಆಗಿದೆ.
ನಿಮ್ಮ ಅಕೌಂಟ್‌ಗೆ ಲಾಗಿನ್ ಆಗಿ: ಇದಕ್ಕೆ ನೀವು ಯೂಸರ್ ನೇಮ್ ಹಾಗೂ ಪಾಸ್‌ವರ್ಡ್ ನಮೂದಿಸಬೇಕು.
ಬ್ಯಾಲೆನ್ಸ್ ಟಾಬ್‌ನಲ್ಲಿ ಬ್ಯಾಲೆನ್ಸ್ ಚೆಕ್ ಮಾಡಿ: ಇದು ನಿಮ್ಮ ಅಕೌಂಟ್‌ನಲ್ಲಿ ಸದ್ಯ ಇರುವ ಹಣವನ್ನು ತೋರಿಸುತ್ತದೆ. ನಿಮ್ಮ ಸ್ಕ್ರೀನ್ ಮೇಲೆ ನಿಮ್ಮ ಅಕೌಂಟ್ ಬ್ಯಾಲೆನ್ಸ್ ತೋರಿಸುತ್ತದೆ.
ಮೊಬೈಲ್ ಆಫ್ ಮೂಲಕ ಬ್ಯಾಲೆನ್ಸ್ ಪರಿಶೀಲನೆ
ಗೂಗಲ್ ಹಾಗೂ ಆಫಲ್ ಪ್ಲೇಸ್ಟೋರ್‌ನಲ್ಲಿ ಹಲವು ಫಾಸ್ಟ್ಯಾಗ್ ಆಪ್‌ಗಳಿವೆ. ನಿಮ್ಮ ಫಾಸ್ಟ್ಯಾಗ್ ಬ್ಯಾಲೆನ್ಸ್ ಚೆಕ್ ಮಾಡಲು ನೀವು ಈ ಆಪ್ ಬಳಸಬಹುದು.
ಈ ವಿಧಾನ ಬಳಸಿ ಬ್ಯಾಲೆನ್ಸ್ ಪರಿಶೀಲಿಸಿ:
- ಮೊದಲು ಫಾಸ್ಟ್ಯಾಗ್ ಆಪ್ ತೆರೆಯಿರಿ
- ನಂತರ ನಿಮ್ಮ ಗಾಡಿ ಸಂಖ್ಯೆ ಹಾಗೂ ಮೊಬೈಲ್ ಸಂಖ್ಯೆ ನಮೂದಿಸಿ.
- ಚೆಕ್ ಬ್ಯಾಲೆನ್ಸ್ ಎಂದು ಇರುವಲ್ಲಿ ಕ್ಲಿಕ್ ಮಾಡಿ.
- ಈಗ ಫಾಸ್ಟ್ಯಾಗ್ ಬ್ಯಾಲೆನ್ಸ್ ನಿಮ್ಮ ಮೊಬೈಲ್ ಪರದೆಯ ಮೇಲೆ ಕಾಣಿಸುತ್ತದೆ.
ಗೂಗಲ್ ಪೇ, ಫೋನ್ ಪೇ ಹಾಗೂ ಪೇಟಿಎಂನಲ್ಲಿ ಫಾಸ್ಟ್ಯಾಗ್ ಬ್ಯಾಲೆನ್ಸ್ ಪರಿಶೀಲನೆ ಮಾಡುವುದು
ಗೂಗಲ್ ಪೇ
- ಮೊಬೈಲ್‌ನಲ್ಲಿ ಗೂಗಲ್ ಪೇ ಆಪ್ ಓಪನ್ ಮಾಡಿ.
- ರೀಚಾರ್ಜ್ ಅಂಡ್ ಪೇ ಬಿಲ್ ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
- ಇಲ್ಲಿ ಫಾಸ್ಟ್ಯಾಗ್ ರೀಚಾರ್ಜ್ ಆಯ್ಕೆ ಮೇಲೆ ಕ್ಲಿಕ್ ಮಾಡಿ.
- ಅದರಲ್ಲಿ ನಿಮ್ಮ ಬ್ಯಾಂಕ್ ಖಾತೆಯನ್ನು ಕ್ಲಿಕ್ ಮಾಡಿ.
- ನಂತರ ನಿಮ್ಮ ಗಾಡಿ ರಿಜಿಸ್ಟೇಷನ್ ನಂಬರ್ ಕ್ಲಿಕ್ ಮಾಡಿ.
- ನಂತರ ವಿವ್ಯೂ ಬ್ಯಾಲೆನ್ಸ್ ಆಯ್ಕೆ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಫಾಸ್ಟ್ಯಾಗ್ ಬ್ಯಾಲೆನ್ಸ್ ನೋಡಬಹುದು.
ಪೇಟಿಎಂ
- ಪೇಟಿಎಂ ಆಪ್ ತೆರೆಯಿರಿ
- ಅಲ್ಲಿ ಪೇ ಬಿಲ್ಸ್ ಮೇಲೆ ಕ್ಲಿಕ್ ಮಾಡಿ
- ಅದರಲ್ಲಿ ಫಾಸ್ಟ್ಯಾಗ್ ಆಯ್ಕೆ ಮೇಲೆ ಒತ್ತಿ.
- ನಿಮ್ಮ ಗಾಡಿ ರಿಜಿಸ್ಟೇಷನ್ ಸಂಖ್ಯೆ ನಮೂದಿಸಿ. ನಂತರ ವ್ಯೂವ್ ಬ್ಯಾಲೆನ್ಸ್ ಆಯ್ಕೆ ಮೇಲೆ ಕ್ಲಿಕ್ ಮಾಡಿ.
ಫೋನ್ ಪೇ
- ನಿಮ್ಮ ಮೊಬೈಲ್‌ನಲ್ಲಿ ಫೋನ್ ಪೇ ಆಪ್ ಕ್ಲಿಕ್ ಮಾಡಿ
- ರೀಚಾರ್ಜ್ ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
- ಅದರಲ್ಲಿ ಫಾಸ್ಟ್ಯಾಗ್ ಆಯ್ಕೆ ಒತ್ತಿ.
- ಅಲ್ಲಿ ನಿಮ್ಮ ಗಾಡಿ ರಿಜಿಸ್ಟ್ರೇಷನ್ ನಂಬರ್ ನಮೂದಿಸಿ. ನಂತರ ವ್ಯೂವ್ ಬಾಲೆನ್ಸ್ ಮೇಲೆ ಕ್ಲಿಕ್ ಮಾಡಿ.
ಕಸ್ಟಮರ್ ಕೇರ್‌ಗೆ ಕರೆ ಮಾಡಿ ಬ್ಯಾಲೆನ್ಸ್ ಪರಿಶೀಲನೆ ಮಾಡುವುದು
ಕಸ್ಟಮರ್ ಕೇರ್‌ಗೆ ಕರೆ ಮಾಡುವ ಮೂಲಕವು ಫಾಸ್ಟ್ಯಾಗ್ ಬ್ಯಾಲೆನ್ಸ್ ಬಗ್ಗೆ ತಿಳಿದುಕೊಳ್ಳಬಹುದು. ಇದಕ್ಕೆ ನಿಮ್ಮ ಫಾಸ್ಟ್ಯಾಗ್ ಪಾವತಿದಾರರ ಟೋಲ್ ಫ್ರಿ ನಂಬರ್‌ಗೆ ಕರೆ ಮಾಡಬೇಕು. ಸಾಮಾನ್ಯವಾಗಿ ಫಾಸ್ಟ್ಯಾಗ್ ಸ್ಟಿಕರ್ ಮೇಲೆ ಟೋಲ್ ಫ್ರಿ ಸಂಖ್ಯೆಯನ್ನು ನಮೂದಿಸಲಾಗುತ್ತದೆ.
ನೀವು ಕಸ್ಟಮರ್ ಕೇರ್‌ಗೆ ಕರೆ ಮಾಡಿದಾಗ ನಿಮ್ಮ ಗಾಡಿಯ ರಿಜಿಸ್ಟ್ರೇಷನ್ ಸಂಖ್ಯೆ ಹಾಗೂ ಮೊಬೈಲ್ ಸಂಖ್ಯೆಯನ್ನು ನೀಡಬೇಕಾಗುತ್ತದೆ. ಆಗ ಕಸ್ಟಮರ್ ಕೇರ್ ಪ್ರತಿನಿಧಿ ನಿಮ್ಮ ಫಾಸ್ಟ್ಯಾಗ್ ಬ್ಯಾಲೆನ್ಸ್ ಅನ್ನು ನಿಮಗೆ ತಿಳಿಸಿರುತ್ತಾರೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ 1300 ನಂಬರ್‌ಗೂ ಕರೆ ಮಾಡಬಹುದು.
ಫಾಸ್ಟ್ಯಾಗ್ ಬ್ಯಾಲೆನ್ಸ್ ಚೆಕ್ ಮಾಡುವ ಇತರ ವಿಧಾನಗಳು
- ನಿಮ್ಮ ಫಾಸ್ಟ್ಯಾಗ್ ಇರುವ ಬ್ಯಾಂಕ್‌ನ ಕಸ್ಟಮರ್ ಕೇರ್‌ಗೂ ಕರೆ ಮಾಡಿ ನಿಮ್ಮ ಫಾಸ್ಟ್ಯಾಗ್ ಬಾಕಿ ಮೊತ್ತವನ್ನು ತಿಳಿಯಬಹುದು.
- ರಾಷ್ಟ್ರೀಯ ಎಲೆಕ್ಟ್ರಾನಿಕ್ ಟೋಲ್ ಕಲೆಕ್ಷನ್ (NETC) ಅಥಾರಿಟಿ ಆಫ್ ಇಂಡಿಯಾದ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ನಿಮ್ಮ ಫಾಸ್ಟ್‌ಟ್ಯಾಗ್ ಬ್ಯಾಲೆನ್ಸ್ ಅನ್ನು ಸಹ ನೀವು ಪರಿಶೀಲಿಸಬಹುದು.
ಬ್ಯಾಲೆನ್ಸ್ ಖಾಲಿಯಾಗಿ ಟೋಲ್ ಮುಂದೆ ನಿಲ್ಲಿಸುವುದನ್ನು ತಪ್ಪಿಸುವುದು ಹೇಗೆ?
- ಪ್ರತಿನಿತ್ಯ ಬ್ಯಾಲೆನ್ಸ್ ಪರಿಶೀಲಿಸಿ: ನೀವು ಆನ್‌ಲೈನ್, ಮೊಬೈಲ್ ಆಪ್, ಕಸ್ಟಮರ್ ಕೇರ್‌ಗೆ ಕಾಲ್ ಮಾಡುವ ಮೂಲಕ ಬ್ಯಾಲೆನ್ಸ್ ತಿಳಿದುಕೊಳ್ಳಿ.
- ಸಂಪೂರ್ಣ ಬ್ಯಾಲೆನ್ಸ್ ಖಾಲಿಯಾಗುವ ಮೊದಲೇ ರೀಚಾರ್ಜ್ ಮಾಡಿ: ಮೊಬೈಲ್ ಆಪ್, ಆನ್‌ಲೈನ್ ಮೂಲಕ ಬ್ಯಾಲೆನ್ಸ್ ಪರಿಶೀಲಿಸಿ.
- ರಿಕರಿಂಗ್ ಬ್ಯಾಲೆನ್ಸ್ ಚೆಕ್ ಮಾಡಿ: ಯಾವಾಗಲೂ ಬ್ಯಾಲೆನ್ಸ್ ಭರ್ತಿಯಾಗಿರುವಂತೆ ನೋಡಿಕೊಳ್ಳಿ.
ವಿಭಾಗ