logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Itr Filing Guide: ಆನ್‌ಲೈನ್‌ನಲ್ಲಿ ಐಟಿಆರ್‌ ನಮೂನೆ ಸಲ್ಲಿಕೆ ಹೇಗೆ? ಆದಾಯ ತೆರಿಗೆ ರಿಟರ್ನ್‌ ಸಲ್ಲಿಸಲು ಹಂತ ಹಂತದ ಮಾರ್ಗದರ್ಶಿ

ITR Filing Guide: ಆನ್‌ಲೈನ್‌ನಲ್ಲಿ ಐಟಿಆರ್‌ ನಮೂನೆ ಸಲ್ಲಿಕೆ ಹೇಗೆ? ಆದಾಯ ತೆರಿಗೆ ರಿಟರ್ನ್‌ ಸಲ್ಲಿಸಲು ಹಂತ ಹಂತದ ಮಾರ್ಗದರ್ಶಿ

Praveen Chandra B HT Kannada

Jan 09, 2024 08:10 PM IST

google News

ITR Filing Guide: ಆನ್‌ಲೈನ್‌ನಲ್ಲಿ ಐಟಿಆರ್‌ ನಮೂನೆ ಸಲ್ಲಿಕೆ ಹೇಗೆ? ಆದಾಯ ತೆರಿಗೆ ರಿಟರ್ನ್‌ ಸಲ್ಲಿಸಲು ಹಂತ ಹಂತದ ಮಾರ್ಗದರ್ಶಿ

  • Income tax return filing: ಆನ್‌ಲೈನ್‌ ಮೂಲಕ ಆದಾಯ ತೆರಿಗೆ ಐಟಿಆರ್‌ ರಿಟರ್ನ್‌ ಸಲ್ಲಿಕೆಗೆ ಜುಲೈ 31 ಕೊನೆಯ ದಿನಾಂಕವಾಗಿದೆ. ಐಟಿಆರ್‌ ರಿಟರ್ನ್‌ ಸಲ್ಲಿಕೆ ಹೇಗೆ ಎಂದು ಹಂತಹಂತದ ಮಾರ್ಗದರ್ಶಿಯನ್ನು ಇಲ್ಲಿ ನೀಡಲಾಗಿದೆ.

ITR Filing Guide: ಆನ್‌ಲೈನ್‌ನಲ್ಲಿ ಐಟಿಆರ್‌ ನಮೂನೆ ಸಲ್ಲಿಕೆ ಹೇಗೆ? ಆದಾಯ ತೆರಿಗೆ ರಿಟರ್ನ್‌ ಸಲ್ಲಿಸಲು ಹಂತ ಹಂತದ ಮಾರ್ಗದರ್ಶಿ
ITR Filing Guide: ಆನ್‌ಲೈನ್‌ನಲ್ಲಿ ಐಟಿಆರ್‌ ನಮೂನೆ ಸಲ್ಲಿಕೆ ಹೇಗೆ? ಆದಾಯ ತೆರಿಗೆ ರಿಟರ್ನ್‌ ಸಲ್ಲಿಸಲು ಹಂತ ಹಂತದ ಮಾರ್ಗದರ್ಶಿ

Income tax return filing: ಆನ್‌ಲೈನ್‌ ಮೂಲಕ ಆದಾಯ ತೆರಿಗೆ ಐಟಿಆರ್‌ ರಿಟರ್ನ್‌ ಸಲ್ಲಿಕೆಗೆ ಜುಲೈ 31 ಕೊನೆಯ ದಿನಾಂಕವಾಗಿದೆ. ಕೊನೆಯ ಕ್ಷಣದಲ್ಲಿ ಅವಸರ ಅವಸರವಾಗಿ ಆದಾಯ ತೆರಿಗೆ ರಿಟರ್ನ್‌ ಸಲ್ಲಿಸಿದರೆ ತಪ್ಪುಗಳಾಗುವ ಸಾಧ್ಯತೆ ಇರುತ್ತದೆ, ಹೀಗಾಗಿ ಆದಷ್ಟು ಬೇಗ ಸಲ್ಲಿಸಿದರೆ ಇಂತಹ ತೊಂದರೆಯಿಂದ ಪಾರಾಗಬಹುದು ಎಂದು ತಜ್ಞರು ಸಲಹೆ ನೀಡಿದ್ದಾರೆ. ಹೀಗಾಗಿ, ಹೆಚ್ಚು ವಿಳಂಬ ಮಾಡದೆ ಆದಾಯ ತೆರಿಗೆ ಇಲಾಖೆಯ ವೆಬ್‌ಸೈಟ್‌ನಲ್ಲಿ ತೆರಿಗೆ ರಿಟರ್ನ್‌ ಭರ್ತಿ ಮಾಡಿ, ಸಲ್ಲಿಸಿ ಮತ್ತು ಇವೇರಿಫೈ ಮಾಡಿ.

ಬಹುತೇಕ ಉದ್ಯೋಗಿಗಳಿಗೆ ಕಂಪನಿಯು ಈಗಾಗಲೇ ಫಾರ್ಮ್‌ 16 ನೀಡಿರಬಹುದು. ತೆರಿಗೆ ಪಾವತಿದಾರರು ರಿಟರ್ನ್‌ ಸಲ್ಲಿಸುವಾಗ ಈ ಫಾರ್ಮ್‌ 16 ಅನ್ನು ಗಮನವಿಟ್ಟು ಪರಿಶೀಲಿಸಿ ಐಟಿಆರ್‌ ಸಲ್ಲಿಕೆ ಪ್ರಕ್ರಿಯೆ ಆರಂಭಿಸಬಹುದು. ಅಂದಹಾಗೆ, ಫಾರ್ಮ್‌ 16 ನಮೂನೆಯಲ್ಲಿ ಗಮನಿಸಬೇಕಾದ ಅಂಶಗಳ ಕುರಿತು ಈಗಾಗಲೇ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ವಿಶೇಷ ಲೇಖನ ಪ್ರಕಟಿಸಿದೆ. ನೀವು ಇನ್ನೂ ಓದಿಲ್ಲವೆಂದಾದರೆ ಇಲ್ಲಿ ಕ್ಲಿಕ್‌ ಮಾಡುವ ಮೂಲಕ ಓದಿರಿ.

ಐಟಿಆರ್‌ ನಮೂನೆ ಫೈಲ್‌ ಮಾಡುವುದು ಹೇಗೆ?

ಇ-ಫೈಲಿಂಗ್‌ ಪೋರ್ಟಲ್‌ಗಳು ಅಥವಾ ಆಪ್‌ಗಳು ಅಥವಾ ಚಾರ್ಟೆಡ್‌ ಅಕೌಂಟೆಂಟ್‌ಗಳ ನೆರವಿನಿಂದ ಐಟಿಆರ್‌ ರಿಟರ್ನ್‌ ಸಲ್ಲಿಸಬಹುದು. ಇದನ್ನು ನೀವು ಸ್ವತಃ ಸಲ್ಲಿಸಬಹುದು. ಆದಾಯ ತೆರಿಗೆ ಇಲಾಖೆಯ ವೆಬ್‌ಸೈಟ್‌ ಮೂಲಕ ಸುಲಭವಾಗಿ ಸಲ್ಲಿಸಬಹುದು.

ಯಾವೆಲ್ಲ ದಾಖಲೆಗಳು ಬೇಕು?

ಇ-ಫೈಲಿಂಗ್‌ ಪೋರ್ಟಲ್‌ನಲ್ಲಿ ಈಗಾಗಲೇ ಭರ್ತಿಯಾಗಿರುವ ಐಟಿಆರ್‌ ಫಾರ್ಮ್‌ ಇರುತ್ತದೆ. ಕೆಲವೊಂದು ಅಂಶಗಳನ್ನು ನೀವು ಮ್ಯಾನುಯಲ್‌ ಆಗಿ ಭರ್ತಿ ಮಾಡಬೇಕಿರುತ್ತದೆ. ಐಟಿಆರ್‌ ಸಲ್ಲಿಸುವಾಗ ಆಯಾ ಆದಾಯ ತೆರಿಗೆ ಪಾವತಿದಾರರಿಗೆ ತಕ್ಕಂತೆ ಈ ಮುಂದಿನ ದಾಖಲೆಗಳು ಇರಬೇಕಾಗುತ್ತದೆ.

- ಫಾರ್ಮ್‌ 16

- ಫಾರ್ಮ್‌ 16 ಎ

- ಫಾರ್ಮ್‌ 26ಎಎಸ್‌

- ಕ್ಯಾಪಿಟಲ್‌ ಗೈನ್ಸ್‌ ಸ್ಟೇಟ್‌ಮೆಂಟ್ಸ್‌

- ಟ್ಯಾಕ್ಸ್‌ ಸೇವಿಂಗ್‌ ಇನ್ವೆಸ್ಟ್‌ಮೆಂಟ್‌ ಪ್ರೂಫ್‌

ಐಟಿಆರ್‌ ಭರ್ತಿ ಮಾಡಲು ಸ್ಟೆಪ್‌ ಟು ಸ್ಟೆಪ್‌ ಮಾರ್ಗದರ್ಶಿ

  1. ಮೊದಲು eportal.incometax.gov.in ವೆಬ್‌ಸೈಟ್‌ಗೆ ಭೇಟಿ ನೀಡಿ
  2. ನಿಮ್ಮ ಯೂಸರ್‌ ಐಡಿ (ಪ್ಯಾನ್‌), ಪಾಸ್ವರ್ಡ್‌, ಕ್ಯಾಪ್ಚಾ ಕೋಡ್‌ ನೀಡಿ ಲಾಗಿನ್‌ ಆಗಿ
  3. ಮೆನುವಿನಲ್ಲಿ ಇಫೈಲ್‌ ಕ್ಲಿಕ್‌ ಮಾಡಿ. ಬಳಿಕ Income Tax Return ಲಿಂಕ್‌ ಕ್ಲಿಕ್‌ ಮಾಡಿ
  4. ನಿಮಗೆ ಸೂಕ್ತವಾದ ಐಟಿಆರ್‌ ನಮೂನೆ ಆಯ್ಕೆ ಮಾಡಿಕೊಳ್ಳಿ. ನಿಮ್ಮಲ್ಲಿ ಫಾರ್ಮ್‌ 16 ಇದ್ದರೆ ನೀವು ಐಟಿಆರ್‌-1 ಅಥವಾ ಐಟಿಆರ್‌ 2 ಆಯ್ಕೆ ಮಾಡಿಕೊಳ್ಳಬೇಕು.
  5. - ಇದಾದ ಬಳಿಕ ನೀವು ಅಸೆಸ್‌ಮೆಂಟ್‌ ವರ್ಷ ಆಯ್ಕೆ ಮಾಡಿಕೊಳ್ಳಬೇಕು. ಈ ವರ್ಷ ನೀವು ಸಲ್ಲಿಸಬೇಕಿರುವುದು 2023-24 ವರ್ಷದ ರಿಟರ್ನ್‌.
  6. ನಮೂನೆಯಲ್ಲಿ ನಿಗದಿಪಡಿಸಿದ ಮಾಹಿತಿಗಳನ್ನು ಭರ್ತಿ ಮಾಡಿ.
  7. ಸಬ್‌ಮಿಟ್‌ ಮಾಡಿ.
  8. ಸಬ್‌ಮಿಟ್‌ ಮಾಡಿದ ಬಳಿಕ ಆಧಾರ್‌ ಒಟಿಪಿ ಇತ್ಯಾದಿಗಳ ಮೂಲಕ ವೇರಿಫೈ ಮಾಡಿ. ಇ-ವೇರಿಫೈ ಆಯ್ಕೆಯು ಮೆನುವಿನಲ್ಲಿದೆ ಗಮನಿಸಿ.
  9. ಎಲ್ಲಾ ವಿವರ ಸರಿಯಾಗಿದೆ ಎಂದು ಖಚಿತವಾದ ಬಳಿಕ ಇ-ವೇರಿಫೈ ಮಾಡಿ. ಬಳಿಕ ಯಾವುದೇ ಬದಲಾವಣೆ ಮಾಡಲಾಗುವುದಿಲ್ಲ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ