ITR filing: ತೆರಿಗೆ ಬಾಧ್ಯತೆ ಇಲ್ಲದೆ ಇದ್ದರೂ ಆದಾಯ ತೆರಿಗೆ ರಿಟರ್ನ್ ಸಲ್ಲಿಸಬೇಕೆ? ಕಡಿಮೆ ವೇತನದ ಉದ್ಯೋಗಿಗಳ ಪ್ರಶ್ನೆಗೆ ಇಲ್ಲಿದೆ ಉತ್ತರ
Jan 09, 2024 08:16 PM IST
ITR filing: ತೆರಿಗೆ ಬಾಧ್ಯತೆ ಇಲ್ಲದೆ ಇದ್ದರೂ ಆದಾಯ ತೆರಿಗೆ ರಿಟರ್ನ್ ಸಲ್ಲಿಸಬೇಕೆ? ಕಡಿಮೆ ವೇತನದ ಉದ್ಯೋಗಿಗಳ ಪ್ರಶ್ನೆಗೆ ಇಲ್ಲಿದೆ ಉತ್ತರ
ITR filing last date: ITR filing last date: 2022-23 ಹಣಕಾಸು ವರ್ಷದ ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ಜುಲೈ 31 ಕೊನೆಯ ದಿನವಾಗಿದೆ. ಆದಾಯ ತೆರಿಗೆ ಕಡಿತವಾಗದೆ ಇರುವ ಉದ್ಯೋಗಿಗಳು ಐಟಿ ರಿಟರ್ನ್ ಸಲ್ಲಿಸುವ ಅಗತ್ಯವಿದೆಯೇ? ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.
ITR filing: 2022-23 ಹಣಕಾಸು ವರ್ಷದ ಆದಾಯ ತೆರಿಗೆ ರಿಟರ್ನ್ (income tax return) ಸಲ್ಲಿಸಲು ಜುಲೈ 31 ಕೊನೆಯ ದಿನವಾಗಿದೆ. ಐಟಿಆರ್ ರಿಟರ್ನ್ ಸಲ್ಲಿಕೆ ಸಮಯದಲ್ಲಿ ಸಾಕಷ್ಟು ಉದ್ಯೋಗಿಗಳಲ್ಲಿ ಗೊಂದಲ ಇರುತ್ತದೆ. ಹೊಸದಾಗಿ ಉದ್ಯೋಗಕ್ಕೆ ಸೇರಿದವರು, ಉದ್ಯೋಗಕ್ಕೆ ಸೇರಿ ಕೆಲವು ವರ್ಷಗಳಾದವರು ವೇತನವು ತೆರಿಗೆ ಕಡಿತದ ವ್ಯಾಪ್ತಿಗಿಂತ ಕಡಿಮೆ ಇರಬಹುದು. ನಮಗೆ ತೆರಿಗೆ ಕಡಿತ ಝೀರೋ, ನಾವು ರಿಟರ್ನ್ ಸಲ್ಲಿಸಬೇಕೆ? ಎಂದು ಕೇಳುವವರು ಇದ್ದಾರೆ. "ನಮಗೆ ಯಾವುದೇ ಆದಾಯ ತೆರಿಗೆ ಬಾಧ್ಯತೆ ಇಲ್ಲ, ಹೀಗಾಗಿ ನಾವು ಐಟಿಆರ್ ಫೈಲ್ ಮಾಡುವ ಅಗತ್ಯವಿರುವುದಿಲ್ಲ" ಎಂದು ಬಹುತೇಕರು ಭಾವಿಸುತ್ತಾರೆ. ಕಿರಿಯ ಉದ್ಯೋಗಿಗಳು ಮಾತ್ರವಲ್ಲದೆ ಹಿರಿಯ ಉದ್ಯೋಗಿಗಳಲ್ಲಿಯೂ ಇದೇ ರೀತಿಯ ಸಂದೇಹ ಇರಬಹುದು. ನಮಗೆ ಬಡ್ಡಿ ಆದಾಯವು ತೆರಿಗೆ ಕಡಿತವಾಗಿಯೇ ದೊರಕುತ್ತದೆ ಎಂದು ಹಿರಿಯ ನಾಗರಿಕರು ಭಾವಿಸುತ್ತಾರೆ. ಆದರೆ, ಆ ಭಾವನೆ ಸರಿಯಲ್ಲ.
ಹಣ ಸಂಪಾದನೆ ಮಾಡುವ ವ್ಯಕ್ತಿಯ ಮಿತಿಯು ಆದಾಯ ತೆರಿಗೆ ಕಡಿತದ ಮಿತಿಗಿಂತ ಕಡಿಮೆ ಇದ್ದರೆ, ಆದರೆ, ಅವರ ಪೇಮಾಸ್ಟರ್‌ನಿಂದ ಟಿಡಿಎಸ್ ಕಡಿತಗೊಂಡಿದ್ದರೆ, ಈ ಸಂದರ್ಭದಲ್ಲಿ ಅವರು ಐಟಿಆರ್ ಸಲ್ಲಿಸಬೇಕು. ಐಟಿಆರ್ ಮರುಪಾವತಿ (ಐಟಿಆರ್ ರಿಫಂಡ್) ಮೂಲಕ ತಮ್ಮ ಕಡಿತವಾದ ಟಿಡಿಎಸ್ ಮೊತ್ತವನ್ನು ಪಡೆಯಬೇಕು ಎಂದು ತೆರಿಗೆ ಮತ್ತು ಹೂಡಿಕೆ ತಜ್ಞರು ಸಲಹೆ ನೀಡಿದ್ದಾರೆ.
ಇದೇ ರೀತಿ ಒಬ್ಬ ವ್ಯಕ್ತಿಯು ಆದಾಯ ತೆರಿಗೆ ಕಡಿತ ಮಿತಿಗಿಂತ ಕಡಿಮೆ ವಾರ್ಷಿಕ ವೇತನ ಹೊಂದಿದ್ದರೆ, ಆದರೆ, ಅವನು/ಅವಳು ಮ್ಯೂಚುವಲ್ ಫಂಡ್‌ಗಳು, ಈಕ್ವಿಟಿಗಳು, ಬ್ಯಾಂಕ್‌ನ ಸ್ಥಿರ ಠೇವಣಿ ಇತ್ಯಾದಿಗಳಲ್ಲಿ ಹೂಡಿಕೆ ಮಾಡಿದ್ದರೆ, ವ್ಯಕ್ತಿಯ ನಿವ್ವಳ ಆದಾಯವು ಎಲ್ಲಾ ಮೂಲಗಳ ಆದಾಯವನ್ನು ಲೆಕ್ಕಹಾಕಿದಾಗ ಆ ಆದಾಯವು ನಿರ್ದಿಷ್ಟ ಮಿತಿಯನ್ನು ಮೀರಿದರೆ ಅಂತಹ ಸಂದರ್ಭದಲ್ಲಿ ವೇತನದಾರ ಆದಾಯ ತೆರಿಗೆ ರಿಟರ್ನ್ ಸಲ್ಲಿಸಬೇಕಾಗುತ್ತದೆ.
ವೇತನ ಪಡೆಯುವವರು ಐಟಿಆರ್ ರಿಟರ್ನ್ ಸಲ್ಲಿಕೆಗೆ ಸಲಹೆ
ಆದಾಯದ ಎಲ್ಲಾ ಮೂಲಗಳನ್ನು ಲೆಕ್ಕಾಚಾರ ಮಾಡುವಂತೆ ಹಣ ಸಂಪಾದನೆ ಮಾಡುವ ವ್ಯಕ್ತಿಗಳಿಗೆ ಮುಂಬೈ ಮೂಲದ ತೆರಿಗೆ ತಜ್ಞ ಬಲ್ವಂತ್ ಜೈನ್ ಸಲಹೆ ನೀಡಿದ್ದಾರೆ.
"ವಿವಿಧ ಕಡಿತಗಳು ಮತ್ತು ವಿನಾಯಿತಿಗಳಿಂದಾಗಿ ನೀವು ಯಾವುದೇ ತೆರಿಗೆ ಪಾವತಿ ಹೊಣೆಗಾರಿಕೆ ಹೊಂದಿಲ್ಲದೆ ಇರಬಹುದು. ನಿಮ್ಮ ಎಲ್ಲಾ ಆದಾಯವನ್ನು ಲೆಕ್ಕಹಾಕಿದಾಗ (ಕಡಿತ ಮತ್ತು ವಿನಾಯಿತಿ ಒಳಗೊಂಡಂತೆ) ತೆರಿಗೆ ಹೊಣೆಗಾರಿಕೆ ಹೊಂದಿರಬಹುದು. ಇಂತಹ ಸಂದರ್ಭದಲ್ಲಿ ನೀವು ಐಟಿಆರ್ ಸಲ್ಲಿಸಬೇಕಾಗಬಹುದು. ಉದಾಹರಣೆಗೆ ನಿಮ್ಮ ಆದಾಯವು ಐದು ಲಕ್ಷ ರೂಪಾಯಿಗಿಂತ ಕಡಿಮೆ ಇದ್ದರೆ, ಪಟ್ಟಿ ಮಾಡಲಾದ ಯಾವುದೇ ಷೇರುಗಳು ಮತ್ತು ಈಕ್ವಿಟಿ ಫಂಡ್‌ಗಳಲ್ಲಿ ದೀರ್ಘಾವಧಿಯ ಬಂಡವಾಳ ಲಾಭವನ್ನು ಹೊಂದಿಲ್ಲದೆ ಇರಬಹುದು. ಸೆಕ್ಷನ್ 87ಎ ಅಡಿಯಲ್ಲಿ ಲಭ್ಯವಿರುವ ವಿವಿಧ ರಿಯಾಯಿತಿಗಳ ಕಾರಣದಿಂದ ನೀವು ಯಾವುದೇ ತೆರಿಗೆ ಪಾವತಿಸುವ ಅಗತ್ಯ ಇಲ್ಲದೆ ಇರಬಹುದು, ಆದರೆ, ನೀವು ಐಟಿಆರ್ ಸಲ್ಲಿಸಬೇಕಾಗುತ್ತದೆ" ಎಂದು ಅವರು ಸಲಹೆ ನೀಡಿದ್ದಾರೆ.
ಸರಳವಾಗಿ ಹೇಳಬೇಕೆಂದರೆ 87ಎ ಅಡಿಯಲ್ಲಿ ನೀವು ಪಡೆದಿರುವ ವಿನಾಯಿತಿ, ಕಡಿತವನ್ನು ಸೇರಿಸಿದಾಗ ನಿಮ್ಮ ಆದಾಯವೂ ತೆರಿಗೆ ಕಡಿತದ ಆದಾಯಕ್ಕಿಂತ ಹೆಚ್ಚಿದ್ದರೆ ನೀವು ಐಟಿ ರಿಟರ್ನ್ ಸಲ್ಲಿಸಬೇಕಾಗುತ್ತದೆ.
ಚಾಪ್ಟರ್ VIA ಅಡಿಯಲ್ಲಿ ಕಡಿತವಾಗುವ ಮೊದಲು ಅವು ನಿಮ್ಮ ಆದಾಯವಾಗಿ. ಅಂದರೆ, 80C, 80 CCD, 80D, 80 G, 80TTA, 80 TTB ಇತ್ಯಾದಿಗಳನ್ನು ಇದು ಒಳಗೊಂಡಿರುತ್ತದೆ. ಜೀವ ವಿಮಾ ಕಂತುಗಳು ಮತ್ತು ಆರೋಗ್ಯ ವಿಮಾ ಕಂತುಗಳು, ಇಪಿಎಫ್, ಪಿಪಿಎಫ್ ಮತ್ತು ಎನ್‌ಪಿಎಸ್ ಖಾತೆಗಳಿಗೆ ಕೊಡುಗೆಗಳು, ಬ್ಯಾಂಕ್‌ಗಳಿಂದ ಬಡ್ಡಿ, ಮಕ್ಕಳಿಗೆ ಬೋಧನಾ ಶುಲ್ಕಗಳು, ಗೃಹ ಸಾಲಗಳ ಮರುಪಾವತಿ ಇತ್ಯಾದಿಗಳನ್ನು ತೋರಿಸಿ ನೀವು ನಿಮ್ಮ ಆದಾಯವನ್ನು ಕಡಿಮೆ ತೋರಿಸಿರಬಹುದು. ಈ ರೀತಿ ಕಡಿತವಾದ ಮೊತ್ತವನ್ನು ಸೇರಿಸಿದಾಗ ನಿಮ್ಮ ಆದಾಯವು ಎಷ್ಟಾಗುತ್ತದೆ ಎನ್ನುವುದು ಮುಖ್ಯ ಎಂದು ಅವರು ಹೇಳಿದ್ದಾರೆ.
"60 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಮೂಲ ವಿನಾಯಿತಿಯ ಮಿತಿ 2.50 ಲಕ್ಷ ರೂಪಾಯಿಗಳು. 60 ಮತ್ತು 80 ರ ನಡುವಿನ ನಿವಾಸಿ ವ್ಯಕ್ತಿಗಳಿಗೆ ಮತ್ತು 80 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಈದು ಕ್ರಮವಾಗಿ 3 ಲಕ್ಷ ಮತ್ತು 5 ಲಕ್ಷ ರೂಪಾಯಿಯಾಗಿದೆ. ವಿವಿಧ ಕಡಿತ ಮತ್ತು ರಿಯಾಯಿತಿ ಮೂಲಕ ಇಷ್ಟು ಆದಾಯವನ್ನು ಈ ವಯಸ್ಸಿನ ವ್ಯಕ್ತಿಗಳು ತೋರಿಸಬಹುದು. ಅವರು ಯಾವುದೇ ತೆರಿಗೆ ಹೊಣೆಗಾರಿಕೆ ಹೊಂದಿಲ್ಲದೆ ಇರಬಹುದು. ಆದರೆ, ಎಲ್ಲಾ ಆದಾಯದ ಮೊತ್ತವನ್ನು ಲೆಕ್ಕಹಾಕಿದಾಗ ಆ ಮೊತ್ತವು ನಿಗದಿತ ಮಿತಿಯನ್ನು ಮೀರಿದ್ದರೆ ಐಟಿಆರ್ ಸಲ್ಲಿಸಬೇಕು" ಎಂದು ಬಲ್ವಂತ್ ಜೈನ್ ಹೇಳಿದ್ದಾರೆ.
ಬ್ಯಾಂಕ್ ಠೇವಣಿದಾರರು ಮತ್ತು ಐಟಿಆರ್ ಸಲ್ಲಿಕೆ
ಬ್ಯಾಂಕ್ ಹೂಡಿಕೆದಾರರಿಗೆ ಆದಾಯ ತೆರಿಗೆ ನಿಯಮ ಹೀಗಿದೆ. "ಎಲ್ಲಾದರೂ ವ್ಯಕ್ತಿಯೊಬ್ಬರು ಒಂದು ಹಣಕಾಸು ವರ್ಷದಲ್ಲಿ ಚಾಲ್ತಿ ಖಾತೆಯಲ್ಲಿ ಒಂದು ಕೋಟಿ ರೂ. ಅಥವಾ ಅದಕ್ಕಿಂತ ಹೆಚ್ಚು ಮೊತ್ತವನ್ನು ಅಥವಾ ಉಳಿತಾಯ ಖಾತೆಯಲ್ಲಿ 50 ಲಕ್ಷ ರೂಪಾಯಿ ಅಥವಾ ಅದಕ್ಕಿಂತ ಹೆಚ್ಚು ಹಣ ಠೇವಣಿಯಿಟ್ಟರೆ ಅವರು ಐಟಿಆರ್ ರಿಟರ್‌ನ್ ಸಲ್ಲಿಎಕ ಮಾಡಬಹುದು. ಅವರಿಗೆ ತೆರಿಗೆ ಬಾಧ್ಯತೆ ಇಲ್ಲದೆ ಇದ್ದರೂ ಅವರು ಐಟಿಆರ್ ಸಲ್ಲಿಕೆ ಮಾಡಬೇಕಾಗುತ್ತದೆ. ಇದೇ ರೀತಿ, ಒಂದು ಹಣಕಾಸು ವರ್ಷದಲ್ಲಿ ನಿಮ್ಮ ಆದಾಯದಿಂದ ಕಡಿತವಾಗುವ ತೆರಿಗೆಯು 25 ಸಾವಿರ ರೂ.ಗಿಂತ ಹೆಚ್ಚಿದ್ದರೆ ನೀವು ಐಟಿಆರ್ ಸಲ್ಲಿಸಬೇಕು. ಎಲ್ಲಾದರೂ ನೀವು ಹಿರಿಯ ನಾಗರಿಕರಾಗಿದ್ದರೆ ನಿಮ್ಮ ಆದಾಯದಲ್ಲಿ ಕಡಿತವಾಗುವ ತೆರಿಗೆ ಮೊತ್ತ 50 ಸಾವಿರವನ್ನು ಪರಿಗಣಿಸಲಾಗುತ್ತದೆ" ಎಂದು ಸೆಬಿ ನೋಂದಾಯಿತ ತೆರಿಗೆ ಮತ್ತು ಹೂಡಿಕೆ ತಜ್ಞ ಜಿತೇಂದ್ರ ಸೊಲಂಕಿ ಹೇಳಿದ್ದಾರೆ.
60 ವರ್ಷ ವಯಸ್ಸಿಗಿಂತ ಕಡಿಮೆ ವಯಸ್ಸಿನ ಹಿರಿಯ ನಾಗರಿಕರು ಮತ್ತು ವ್ಯಕ್ತಿಗಳು, ತಮ್ಮ ಬ್ಯಾಂಕ್ ಖಾತೆಯ ಬಡ್ಡಿ ಆದಾಯದಲ್ಲಿ ಅಥವಾ ಇತರೆ ಆದಾಯ ಮೂಲದಲ್ಲಿ ಟಿಡಿಎಸ್ ಕಡಿತವಾಗುತ್ತಿದ್ದರೆ ಅವರು ಐಟಿಆರ್ ಸಲ್ಲಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ.
(ಮೂಲ ಲೇಖನ: ಎಚ್‌ಟಿ ಕನ್ನಡದ ಸಹೋದರಿ ಪತ್ರಿಕೆ ದಿ ಮಿಂಟ್)