logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Pan Aadhaar Link: ನಿಮ್ಮ ಪ್ಯಾನ್‌, ಆಧಾರ್ ಲಿಂಕ್‌ ಆಗಿದೆಯೇ ಎಂದು ಆನ್‌ಲೈನ್‌, ಎಸ್‌ಎಂಎಸ್‌ ಮೂಲಕ ತಿಳಿಯುವುದು ಹೇಗೆ? ಇಲ್ಲಿದೆ ಮಾಹಿತಿ

PAN Aadhaar Link: ನಿಮ್ಮ ಪ್ಯಾನ್‌, ಆಧಾರ್ ಲಿಂಕ್‌ ಆಗಿದೆಯೇ ಎಂದು ಆನ್‌ಲೈನ್‌, ಎಸ್‌ಎಂಎಸ್‌ ಮೂಲಕ ತಿಳಿಯುವುದು ಹೇಗೆ? ಇಲ್ಲಿದೆ ಮಾಹಿತಿ

Reshma HT Kannada

Jun 27, 2023 09:45 AM IST

google News

ಪ್ಯಾನ್‌- ಆಧಾರ್‌ ಲಿಂಕ್‌ ಸ್ಟೇಟಸ್‌ ಆನ್‌ಲೈನ್‌, ಎಸ್‌ಎಂಎಸ್‌ ಮೂಲಕ ತಿಳಿಯುವುದು

    • ಆದಾಯ ತೆರಿಗೆ ಇಲಾಖೆ ಪ್ಯಾನ್‌ ಹಾಗೂ ಆಧಾರ್‌ ಕಾರ್ಡ್‌ ಲಿಂಕ್‌ಗೆ ನೀಡಿದ್ದ ಗಡುವು ಸಮೀಪಿಸಿದೆ.  ಜೂನ್‌ 30ರೊಳಗೆ ಲಿಂಕ್‌ ಮಾಡದೇ ಇದ್ದರೆ ದಂಡ ಕಟ್ಟಬೇಕಾಗುತ್ತದೆ. ಹಾಗಾದರೆ ನಿಮ್ಮ ಆಧಾರ್‌ ಹಾಗೂ ಪಾನ್‌ ಸಂಖ್ಯೆ ಲಿಂಕ್‌ ಆಗಿದೆಯೇ ಇಲ್ಲವೆ ಎಂಬುದನ್ನು ಆನ್‌ಲೈನ್‌ ಹಾಗೂ ಎಸ್‌ಎಂಎಸ್‌ ಮೂಲಕ ಸುಲಭವಾಗಿ ತಿಳಿಯುವುದು ಹೇಗೆ? ಇಲ್ಲಿದೆ ಮಾಹಿತಿ. 
ಪ್ಯಾನ್‌- ಆಧಾರ್‌ ಲಿಂಕ್‌ ಸ್ಟೇಟಸ್‌ ಆನ್‌ಲೈನ್‌, ಎಸ್‌ಎಂಎಸ್‌ ಮೂಲಕ ತಿಳಿಯುವುದು
ಪ್ಯಾನ್‌- ಆಧಾರ್‌ ಲಿಂಕ್‌ ಸ್ಟೇಟಸ್‌ ಆನ್‌ಲೈನ್‌, ಎಸ್‌ಎಂಎಸ್‌ ಮೂಲಕ ತಿಳಿಯುವುದು

ತೆರಿಗೆ ವಿನಾಯಿತಿ ಇಲ್ಲದವರು ತಮ್ಮ ಪ್ಯಾನ್‌ ಕಾರ್ಡ್‌ನೊಂದಿಗೆ ಆಧಾರ್‌ ಕಾರ್ಡ್‌ ಲಿಂಕ್‌ ಮಾಡುವುದು ಕಡ್ಡಾಯವಾಗಿದೆ. ಆದಾಯ ತೆರಿಗೆ ಇಲಾಖೆಯು ಎಲ್ಲಾ ಪ್ಯಾನ್‌ ಕಾರ್ಡ್‌ ಹೊಂದಿರುವವರು ಪ್ಯಾನ್‌ ಮತ್ತು ಆಧಾರ್‌ ಕಾರ್ಡ್‌ ಲಿಂಕ್‌ ಮಾಡಲು ಗಡುವು ನೀಡಿದೆ, ಮಾತ್ರವಲ್ಲ ಸರ್ಕಾರ ನೀಡಿದ ಗಡುವಿನ ಮೊದಲು ಲಿಂಕ್‌ ಮಾಡುವುದನ್ನು ಕಡ್ಡಾಯಗೊಳಿಸಿದೆ ಹಾಗೂ ಲಿಂಕ್‌ ಮಾಡದೇ ಇರುವವರು ದಂಡ ಪಾವತಿಸಬೇಕಾಗುತ್ತದೆ.

ಈ ಹಿಂದೆ ಪ್ಯಾನ್‌ ಹಾಗೂ ಆಧಾರ್‌ ಲಿಂಕ್‌ ಮಾಡಲು ಮಾರ್ಚ್‌ 31 ಅಂತಿಮ ದಿನಾಂಕ ಎಂದು ನಿಗದಿ ಮಾಡಲಾಗಿತ್ತು, ನಂತರ ಈ ಗಡುವನ್ನು ಮುಂದುವರಿಸಿ ಜೂನ್‌ 30 2023ರವರೆಗೆ ವಿಸ್ತರಿಸಲಾಗಿತ್ತು. ನೀವು ಪ್ಯಾನ್‌ ಆಧಾರ ಲಿಂಕ್‌ ಮಾಡುವ ಪ್ರಕ್ರಿಯೆಯನ್ನು ಇನ್ನೂ ಪೂರ್ಣಗೊಳಿಸದೇ ಇದ್ದರೆ ತಡ ಮಾಡಬೇಡಿ, ಕೂಡಲೇ ಲಿಂಕ್‌ ಮಾಡಿ, ದಂಡ ಕಟ್ಟುವುದರಿಂದ ವಿಮುಕ್ತರಾಗಿ.

ನೀವು ಈಗಾಗಲೇ ನಿಮ್ಮ ಪ್ಯಾನ್‌ ಹಾಗೂ ಆಧಾರ್‌ ಕಾರ್ಡ್‌ ಅನ್ನು ಲಿಂಕ್‌ ಮಾಡಿದ್ದರೆ ಮತ್ತು ಅದರ ಆನ್‌ಲೈನ್‌ ಸ್ಟೇಟಸ್‌ ಪರಿಶೀಲಿಸಲು ಬಯಸಿದರೆ, ನಿಮಗೆ ಇಲ್ಲಿದೆ ಮಾಹಿತಿ.

ಪ್ಯಾನ್‌-ಆಧಾರ್‌ ಸ್ಟೇಟಸ್‌ ತಿಳಿಯುವ ಆನ್‌ಲೈನ್‌ ವಿಧಾನ ಇಲ್ಲಿದೆ

* ಆದಾಯ ತೆರಿಗೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ: incometax.gov.in.

* ಈ ವೆಬ್‌ಸೈಟ್‌ನ ಮುಖಪುಟ (ಹೋಮ್‌ಪೇಜ್‌)ನಲ್ಲಿ ಕ್ವಿಕ್‌ ಲಿಂಕ್ಸ್‌ (Quick Links) ವಿಭಾಗಕ್ಕೆ ಹೋದರೆ ಅಲ್ಲಿ ನಿಮಗೆ ಲಿಂಕ್‌ ಆಧಾರ್‌ (Link Aadhaar) ಆಯ್ಕೆ ಕಾಣಿಸುತ್ತದೆ.

* ಅಲ್ಲಿ ಸ್ಕ್ರೀನ್‌ ಮೇಲೆ ಲಾಗಿನ್‌ ಪುಟದ ಆಯ್ಕೆ ಕಾಣಿಸುತ್ತದೆ.

* ಲಾಗಿನ್‌ ಆಗಲು ನಿಮ್ಮ ಆಧಾರ್‌ ನಂಬರ್‌, ಪ್ಯಾನ್‌ ನಂಬರ್‌ ಹಾಗೂ ಕ್ಯಾಪ್ಚ ಹಾಕಿ ಸಬ್‌ಮಿಟ್‌ ಆಯ್ಕೆ ಒತ್ತಿ.

* ಅಲ್ಲಿ ನಿಮಗೆ ವ್ಯೂವ್‌ ಲಿಂಕ್‌ ಆಧಾರ ಸ್ಟೇಟಸ್‌ (View Link Aadhaar Status) ಎಂಬ ಆಯ್ಕೆ ಕಾಣಿಸುತ್ತದೆ.

* ಅಲ್ಲಿ ಕ್ಲಿಕ್‌ ಮಾಡಿದರೆ ಆಧಾರ್‌ ಪ್ಯಾನ್‌ ಲಿಂಕ್‌ ಸ್ಟೇಟಸ್‌ ನಿಮ್ಮ ಪರದೆಯ ಮೇಲೆ ಕಾಣಿಸುತ್ತದೆ.

* ನಿಮ್ಮ ಆಧಾರ-ಪ್ಯಾನ್‌ ಲಿಂಕ್‌ ಆಗಿದ್ದರೆ ಲಿಂಕ್ಡ್‌ (linked) ಎಂದು ತೋರಿಸುತ್ತದೆ, ಒಂದು ವೇಳೆ ಲಿಂಕ್‌ ಆಗಿಲ್ಲದಿದ್ದರೆ, ಆಧಾರ್‌, ಪ್ಯಾನ್‌ ಲಿಂಕ್‌ ಪುಟಕ್ಕೆ ಹೋಗಿ ಲಿಂಕ್‌ ಮಾಡಿ.

ಎಸ್‌ಎಂಎಸ್‌ ಮೂಲಕ ತಿಳಿಯುವುದು ಹೇಗೆ?

* ನಿಮ್ಮ ಮೊಬೈಲ್‌ನಲ್ಲಿ ಮೆಸೇಜ್‌ ಅಪ್ಲಿಕೇಶನ್‌ ತೆರೆಯಿರಿ.

* ನ್ಯೂ ಮೆಸೇಜ್‌ ಆಯ್ಕೆ ಒತ್ತಿ, ಅಲ್ಲಿ UIDPAN ಎಂದು ಟೈಪ್‌ ಮಾಡಿ 12 ಸಂಖ್ಯೆಯ ಆಧಾರ್‌ ಹಾಗೂ 10 ಡಿಜಿಟ್‌ ಪ್ಯಾನ್‌ ನಂಬರ್‌ ಟೈಪ್‌ ಮಾಡಿ.

* ಆ ಮೆಸೇಜ್‌ ಅನ್ನು 567678 ಅಥವಾ 56161ಗೆ ಕಳುಹಿಸಿ.

* ರಿಜಿಸ್ಟರ್‌ ಮೊಬೈಲ್‌ ನಂಬರ್‌ಗೆ ನಿಮ್ಮ ಪ್ಯಾನ್‌, ಆಧಾರ್‌ ಲಿಂಕ್‌ನ ಸ್ಟೇಟಸ್‌ ಪಡೆಯಲಿದ್ದೀರಿ.

ಇದನ್ನೂ ಓದಿ

PAN-Aadhaar linking: ಪ್ಯಾನ್‌ - ಆಧಾರ್‌ ಜೋಡಣೆ ಅವಧಿ 3 ತಿಂಗಳು ವಿಸ್ತರಣೆ; ಜೂ.30 ಈಗ ಹೊಸ ಡೆಡ್‌ಲೈನ್‌

PAN-Aadhaar linking: ಕಾಯಿದೆಯ ಪ್ರಕಾರ 2023ರ ಏಪ್ರಿಲ್‌ 1 ರಿಂದ ಕೆಲವು ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಹೇಳಲಾಗಿತ್ತು. ಆದರೆ, ಈಗ ಈ ಗಡುವನ್ನು ಅಂದರೆ ಪ್ಯಾನ್ ಮತ್ತು ಆಧಾರ್ ಅನ್ನು ಲಿಂಕ್ ಮಾಡುವ ಉದ್ದೇಶದ ದಿನಾಂಕವನ್ನು ಜೂನ್ 30ರವರೆಗೆ ವಿಸ್ತರಿಸಲಾಗಿದೆ ಎಂದು ಹಣಕಾಸು ಸಚಿವಾಲಯದ ಹೇಳಿಕೆ ತಿಳಿಸಿದೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ