Reserve Bank of India: ರೆಪೋ ದರ ಯಥಾಸ್ಥಿತಿ ಕಾಯ್ದುಕೊಂಡ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ; ಇಎಂಐ ಪಾವತಿದಾರರಿಗೆ ಬಿಗ್ ರಿಲೀಫ್
Jun 08, 2023 02:37 PM IST
ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ್ ದಾಸ್ (ANI)
ಹಣಕಾಸು ನೀತಿ ಪ್ರಕಟಿಸಿರುವ ಆರ್‌ಬಿಐ, ರೆಪೋ ದರ ಹೆಚ್ಚಳ ಮಾಡದೆ ಯಥಾಸ್ಥಿತಿಯಲ್ಲಿ ಮುಂದುವರೆಸಿದೆ. ಬಡ್ಡಿ ದರಗಳು ಏರಿಕೆಯ ಆಂತಕದಲ್ಲಿದ್ದ ಇಎಂಐ ಪಾವತಿದಾರರಿಗೆ ಕೊಂಚ ಮಟ್ಟಿಗೆ ರಿಲೀಫ್ ನೀಡಿದ್ದಂತಾಗಿದೆ.
ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್‌ನ (Reserve Bank of India) ಗವರ್ನರ್ ಶಕ್ತಿಕಾಂತ್ ದಾಸ್ (Shaktikanta Das) ಹಣಕಾಸು ನೀತಿಗಳ ಪರಾಮರ್ಶೆಯ ವರದಿ ಪ್ರಕಟಿಸಿದ್ದು, ರೆಪೋ ದರವನ್ನು (Repo Rate) ಯಥಾಸ್ಥಿತಿಯಲ್ಲಿ ಮುಂದುವರೆಸುತ್ತಿರುವುದಾಗಿ ಹೇಳಿದ್ದಾರೆ.
ಆರ್‌ಬಿಐ (RBI) ಈ ಹಿಂದೆ ಸತತವಾಗಿ ರೆಪೋ ದರವನ್ನು ಏರಿಕೆ ಮಾಡಿತ್ತು. ಕಳೆದ ಫೆಬ್ರವರಿಯಲ್ಲಿ ರೆಪೋ ದರವನ್ನು 25 ಮೂಲಾಂಕ ಏರಿಕೆ ಮಾಡಲಾಗಿತ್ತು. ಆ ಬಳಿಕ ಶೇ.6.50ಕ್ಕೆ ತಲುಪಿತ್ತು. ಪ್ರಸ್ತುತ ಈ ದರ ಯಥಾಸ್ಥಿತಿಯಲ್ಲಿ ಮುಂದುವರೆಯಲಿದೆ.
ರೆಪೋ ದರ ಏರಿಕೆಯಾದರೆ ಬಡ್ಡಿ ದರಗಳ ಮೇಲೆ ಪರಿಣಾಮ ಬೀರಬಹುದು ಎಂಬ ಆತಂಕದಲ್ಲಿ ಇದ್ದ ಇಎಂಐ ಪಾವತಿದಾರರಿಗೆ ಆರ್‌ಬಿಐ ಈ ನಿರ್ಧಾರ ಕೊಂಚ ರಿಲೀಫ್ ನೀಡಿದೆ.
ಈ ಬಗ್ಗೆ ಮಾಹಿತಿ ನೀಡಿದ ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಭಾರತೀಯ ಆರ್ಥಿಕತೆ ಸ್ಥಿರವಾಗಿ ಮುನ್ನಡೆಯುತ್ತಿದೆ ಎಂದು ಹೇಳಿದ್ದಾರೆ. ಆರ್‌ಬಿಐ ಹಣಕಾಸು ನೀತಿ ಸಮಿತಿಯ ಪ್ರಮುಖ ನೀತಿಗಳ ದರ ಪರಿಶೀಲನೆ ಸಭೆಯ ಮಾಹಿತಿ ನೀಡಿದ್ದಾರೆ.
ತಜ್ಞರ ನಿರೀಕ್ಷೆಯಂತೆ ಆರ್‌ಬಿಐ ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಹಿಂದಿನ ಶೇ.6.5ರಲ್ಲೇ ಮುಂದುವರಿಸಲು ನಿರ್ಧರಿಸಿದ್ದು, ರೆಪೋದರಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ ಎಂದು ಹೇಳಿದ್ದಾರೆ.
ಆರ್ಥಿಕ ಪರಿಸ್ಥಿತಿಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಸುಧಾರಿಸಿದ್ದು, ಹಿಂದಿನಷ್ಟು ಕೆಟ್ಟದಾಗಿಲ್ಲ. ಈ ಪರಿಸ್ಥಿಗಳಲ್ಲಿಯೂ ಭಾರತದ ಆರ್ಥಿಕತೆಯ ಗುಣಾತ್ಮಕ ಫಲಿತಾಂಶಗಳನ್ನು ಸಾಧಿಸುತ್ತಿದೆ ಎಂದು ಹೇಳಿದ್ದಾರೆ.
ದೇಶದ ಇತರೆ ಬ್ಯಾಂಕ್‌ಗಳಿಗೆ ನೀಡುವ ಸಾಲಕ್ಕೆ ಆರ್‌ಬಿಐ ವಿಧಿಸುವ ಬಡ್ಡಿ ದರವನ್ನು ರೆಪೋ ದರ ಎಂದು ಕರೆಯಲಾಗುತ್ತದೆ. ಅಪಾಯಕಾರಿ ಮಟ್ಟದ ಹಣಹುಬ್ಬರ ಕೊರತೆ ಹಾಗೂ ಕಳೆದ ಕೆಲವು ತಿಂಗಳುಗಳಿಂದ ಹಣದುಬ್ಬರ ಇಳಿಕೆಯಾಗುತ್ತಿರುವ ಕಾರಣ ರೆಪೋ ದರದಲ್ಲಿ ಯಾವುದೇ ಬದಲಾವಣೆಗಳನ್ನು ಮಾಡದಿರಲು ಆರ್‌ಬಿಐ ನಿರ್ಧರಿಸಿದೆ.
ಹಣಕಾಸು ತಜ್ಞರು ಕೂಡ ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡುವುದಿಲ್ಲ ಎಂಬ ಭವಿಷ್ಯ ನುಡಿದಿದ್ದರು. ಅದರಂತೆ ರೆಪೋ ದರ ಯಥಾಸ್ಥಿತಿಯಲ್ಲಿದೆ. ಹಣದುಬ್ಬರವು ಪ್ರಸ್ತುತ ಅಭಿವೃದ್ಧಿ ಹೊಂದಿದ ದೇಶಗಳು ಸೇರಿದಂತೆ ಅನೇಕ ದೇಶಗಳನ್ನು ಕಾಡುತ್ತಿರುವ ಪ್ರಮುಖ ಸಮಸ್ಯೆಯಾಗಿದೆ. ಭಾರತವು ಈ ಸಮಸ್ಯೆಯನ್ನು ಯಶಸ್ವಿಯಾಗಿ ಎದುರಿಸುತ್ತಿದೆ ಎಂದಿದ್ದರು.
ಆರ್‌ಬಿಐ 2022 ಮೇ ತಿಂಗಳಿನಿಂದ ರೊಪೋ ದರವನ್ನು ಸುಮಾರ್ 25 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಿಸಿತ್ತು. ಆರ್‌ಬಿಐ ರೆಪೋ ದರ ಪ್ರಸ್ತುತ 6.5 ರಷ್ಟು ಇದೆ. ಆರ್‌ಬಿಐನ ಹಣಕಾಸು ನೀತಿ ಸಮಿತಿಯ ಆರು ಸದಸ್ಯರು ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡದಿರುವ ಪ್ರಸ್ತಾವನೆಯನ್ನು ಸರ್ವಾನುಮತದಿಂದ ಅಂಗೀಕರಿಸಿದ್ದಾರೆ.
2023-24 ರ ಹಣಕಾಸು ವರ್ಷದಲ್ಲಿ ಸಿಪಿಐ ಹಣದುಬ್ಬರವು ಶೇ. 5.1 ರಷ್ಟಿದೆ ಎಂದು ಆರ್‌ಬಿಐ ಅಂದಾಜಿಸಿದೆ. ಹಣದುಬ್ಬರವನ್ನು ಮೊದಲ ತ್ರೈಮಾಸಿಕದಲ್ಲಿ ಶೇ.4.6, ಎರಡನೇ ತ್ರೈಮಾಸಿಕದಲ್ಲಿ ಶೇ. 5.2, ಮೂರನೇ ತ್ರೈಮಾಸಿಕದಲ್ಲಿ ಶೇ.5.4 ಹಾಗೂ ಐದನೇ ತ್ರೈಮಾಸಿಕದಲ್ಲಿ ಶೇ.5.2 ರಷ್ಟು ಎಂದು ಅಂದಾಜಿಸಲಾಗಿದೆ.
2023-24ರ ಆರ್ಥಿಕ ವರ್ಷದಲ್ಲಿ ದೇಶದ ಜಿಡಿಪಿ ಬೆಳವಣಿಗ ದರವನ್ನು ಶೇ.6.5 ರಷ್ಟು ಎಂದು ದೃಢಪಡಿಸಲಾಗಿದೆ. ಬೆಳವಣಿಗೆ ದರವು ಮೊದಲ ತ್ರೈಮಾಸಿಕದಲ್ಲಿ ಶೇ.8, ಎರಡನೇ ತ್ರೈಮಾಸಿಕದಲ್ಲಿ ಶೇ. 6.5, ಮೂರನೇ ತ್ರೈಮಾಸಿಕದಲ್ಲಿ ಶೇ.6 ಹಾಗೂ ನಾಲ್ಕನೇ ತ್ರೈಮಾಸಿಕದಲ್ಲಿ 5.7 ರಷ್ಟು ಎಂದು ನಿರೀಕ್ಷಿಸಲಾಗಿದೆ. ಭಾರತೀಯ ರಿಸರ್ವ್ ಬ್ಯಾಂಕ್‌ನ ಹಣಕಾಸು ನೀತಿ ಸಮಿತಿ ಸಭೆಯ ಸಂಪೂರ್ಣ ವಿವರ ಜೂನ್ 12 ರಂದು ಬಹಿರಂಗವಾಗಲಿದೆ. ‘
ವಿಭಾಗ