Tata Tech IPO: ಟಾಟಾ ಟೆಕ್ ಆರಂಭಿಕ ಷೇರು ವಿತರಣೆ, 20 ವರ್ಷಗಳ ಬಳಿಕ ಟಾಟಾ ಗ್ರೂಪ್‌ನಿಂದ ಮೊದಲ ಐಪಿಒ, ಇಲ್ಲಿದೆ ವಿವರ
Jun 27, 2023 02:13 PM IST
Tata Tech IPO: ಟಾಟಾ ಟೆಕ್ ಆರಂಭಿಕ ಷೇರು ವಿತರಣೆ, 20 ವರ್ಷಗಳ ಬಳಿಕ ಟಾಟಾ ಗ್ರೂಪ್‌ನಿಂದ ಮೊದಲ ಐಪಿಒ, ಇಲ್ಲಿದೆ ವಿವರ
- ಟಾಟಾ ಟೆಕ್ನಾಲಜೀಸ್ ಲಿಮಿಟೆಡ್‌ನ ಆರಂಭಿಕ ಷೇರು ವಿತರಣೆಗೆ (Tata Tech IPO) ಭಾರತದ ಷೇರುಪೇಟೆ ನಿಯಂತ್ರಖ ಸಂಸ್ಥೆ ಸೆಬಿಯು ಅನುಮತಿ ನೀಡಿದೆ. ಟಾಟಾ ಗ್ರೂಪ್ (Tata Group) ಕಂಪನಿಯು ಇದೇ ಮೊದಲ ಬಾರಿಗೆ 22 ವರ್ಷಗಳ ಬಳಿಕ ಐಪಿಒ ವಿತರಣೆ ಮಾಡುತ್ತಿದೆ.
ನವದೆಹಲಿ: ಟಾಟಾ ಟೆಕ್ನಾಲಜೀಸ್ ಲಿಮಿಟೆಡ್‌ನ ಆರಂಭಿಕ ಷೇರು ವಿತರಣೆಗೆ (Tata Tech IPO) ಭಾರತದ ಷೇರುಪೇಟೆ ನಿಯಂತ್ರಖ ಸಂಸ್ಥೆ ಸೆಬಿಯು ಅನುಮತಿ ನೀಡಿದೆ. ಟಾಟಾ ಗ್ರೂಪ್ (Tata Group) ಕಂಪನಿಯು ಇದೇ ಮೊದಲ ಬಾರಿಗೆ 22 ವರ್ಷಗಳ ಬಳಿಕ ಐಪಿಒ ವಿತರಣೆ ಮಾಡುತ್ತಿದೆ.
ಇದೇ ಸಂದರ್ಭದಲ್ಲಿ ಸೆಬಿಯು ಎಸ್‌ಬಿಎಫ್‌ಸಿ ಫೈನಾನ್ಸ್ ಲಿಮಿಟೆಡ್ (SBFC Finance ltd) ಮತ್ತು ಗಾಂಧಾರ್ ಆಯಿಲ್ ರಿಫೈನರಿ ಲಿಮಿಟೆಡ್‌ನ ಐಪಿಒಗಳಿಗೂ ಅನುಮತಿ ನೀಡಿದೆ ಎಂದು ಮನಿಕಂಟ್ರೋಲ್ ವರದಿ ಮಾಡಿದೆ.
ಮಾರ್ಚ್ ತಿಂಗಳಲ್ಲಿ ಸೆಬಿಗೆ ಟಾಟಾ ಟೆಕ್ ಕರಡು ಪತ್ರಗಳನ್ನು ಸಲ್ಲಿಕೆ ಮಾಡಿದೆ. ಇದು ಬಹುನಿರೀಕ್ಷಿತ ಐಪಿಒ ಆಗಿದೆ. ಅಸ್ತಿತ್ವದಲ್ಲಿರುವ ಪ್ರವರ್ತಕರು ಮತ್ತು ಷೇರುದಾರರಿಂದ 95.71 ಮಿಲಿಯನ್ ಷೇರುಗಳ ಸಂಪೂರ್ಣ ಮಾರಾಟದ ಕೊಡುಗೆ ಇದಾಗಿದೆ. ಟಾಟಾ ಮೋಟಾರ್ಸ್‌ನಿಂದ 81.13 ದಶಲಕ್ಷ ಷೇರುಗಳು, ಆಲ್ಫಾ TC ಹೋಲ್ಡಿಂಗ್ಸ್ ಪಿಟಿಇಯಿಂದ 9.72 ದಶಲಕ್ಷ ಮತ್ತು ಟಾಟಾ ಕ್ಯಾಪಿಟಲ್ ಗ್ರೋತ್ ಫಂಡ್ Iನ 4.86 ದಶಲಕ್ಷ ಷೇರನ್ನು ಇದು ಒಳಗೊಂಡಿದೆ.
ಈಗ ಟಾಟಾ ಮೋಟಾರ್ಸ್ ಕಂಪನಿಯು ಟಾಟಾ ಟೆಕ್ನಾಲಜೀಸ್‌ನಲ್ಲಿ ಶೇಕಡ 74.69 ಪಾಲು ಹೊಂದಿದೆ. ಆಲ್ಪಾ ಟಿಸಿಸಿ ಹೋಲ್ಡಿಂಗ್ಸ್ ಶೇಕಡ 7.26 ಪಾಲು ಹೊಂದಿದೆ. ಟಾಟಾ ಕ್ಯಾಪಿಟಲ್ ಗ್ರೋತ್ ಫಂಡ್ I ಕಂಪನಿಯಲ್ಲಿ ಶೇಕಡ 3.67 ಪಾನ್ನು ಹೊಂದಿದೆ. ಜೆಎಂ ಫೈನಾನ್ಶಿಯಲ್ ಲಿಮಿಟೆಡ್, ಬೊಫಾ ಸೆಕ್ಯುರಿಟೀಸ್ ಮತ್ತು ಸಿಟಿಗ್ರೂಪ್ ಗ್ಲೋಬಲ್ ಮಾರ್ಕೆಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಇದರ ಪ್ರಮುಖ ವ್ಯವಸ್ಥಾಪಕರು ಎಂದು ಮನಿಕಂಟ್ರೋಲ್ ವರದಿ ಮಾಡಿದೆ.
ಸದ್ಯದಲ್ಲಿ ಇನ್ನಷ್ಟು ಐಪಿಒ ಬಿಡುಗಡೆಯಾಗಲಿದೆ. ಮಾರ್ಚ್ ತಿಂಗಳಿನಲ್ಲಿ ಎಸ್‌ಬಿಎಫ್‌ಸಿ ಫೈನಾನ್ಸ್ ಕೂಡ ಐಪಿಒ ಕರಡು ಸಲ್ಲಿಸಿದೆ. ಈ ಕಂಪನಿಯು ತನ್ನ ಐಪಿಒ ಗಾತ್ರವನ್ನು 1,600 ಕೋಟಿ ರೂಪಾಯಿಯಿಂದ 1,200 ಕೋಟಿ ರೂಪಾಯಿಗೆ ಕುಗ್ಗಿಸಿದೆ.
ಷೇರು ಖರೀದಿದಾರರಿಗೆ 3 ವರ್ಷದಲ್ಲಿ 313 ಪರ್ಸೆಂಟ್ ಲಾಭ ತಂದುಕೊಟ್ಟ ನ್ಯೂಕ್ಲಿಯಸ್
ಷೇರುಪೇಟೆಯಲ್ಲಿ ಕೆಲವೊಂದು ಷೇರುಗಳು ಹೂಡಿಕೆದಾರರಿಗೆ ಬೊಂಬಾಟ್ ಲಾಭ ತಂದುಕೊಡುತ್ತವೆ. ಇನ್ನು ಕೆಲವು ಷೇರುಗಳು ಆಮೆಯಂತೆ ಮೆಲ್ಲಗೆ ಸಾಗುತ್ತಿರುತ್ತದೆ. Nucleus Software Exports Ltdನ ಷೇರು ಖರೀದಿಸಿದವರು ಈಗ ಖುಷಿಯಲ್ಲಿದ್ದಾರೆ. ಮೂರು ವರ್ಷದ ಹಿಂದೆ ಈ ಕಂಪನಿಯ ಷೇರು ದರ 248 ರೂಪಾಯಿ ಇತ್ತು. ಇದೀಗ ಇದರ ದರ 1025 ರೂಪಾಯಿಗೆ ತಲುಪಿದೆ. ಅಂದರೆ, ಜೂನ್ 2020 ರಂದು 248.2 ರೂಪಾಯಿ ದರವಿದ್ದ ಈ ಷೇರಿನ ದರ ಇದೀಗ (ಜೂನ್ 23, 2023) 1025 ರೂಗೆ ತಲುಪಿ ಶೇಕಡ 313ರಷ್ಟು ಲಾಭವನ್ನು ಷೇರು ಹೂಡಿಕೆದಾರರಿಗೆ ತಂದುಕೊಟ್ಟಿದೆ. ಈ ಕುರಿತು ಸಂಪೂರ್ಣ ವಿವರ ಓದಲು ಇಲ್ಲಿ ಕ್ಲಿಕ್ ಮಾಡಿ.