logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Opening Bell: ಅಲ್ಪ ಗಳಿಕೆಯೊಂದಿಗೆ ವಹಿವಾಟು ಆರಂಭಿಸಿದ ಮಾರುಕಟ್ಟೆ; ಹೂಡಿಕೆದಾರರು ಗಮನಿಸಬಹುದಾದ ಷೇರುಗಳಿವು

Opening Bell: ಅಲ್ಪ ಗಳಿಕೆಯೊಂದಿಗೆ ವಹಿವಾಟು ಆರಂಭಿಸಿದ ಮಾರುಕಟ್ಟೆ; ಹೂಡಿಕೆದಾರರು ಗಮನಿಸಬಹುದಾದ ಷೇರುಗಳಿವು

Reshma HT Kannada

Jan 16, 2024 09:00 AM IST

google News

ಜನವರಿ 16ರ ಷೇರು ಮಾರುಕಟ್ಟೆ ಓಪನಿಂಗ್‌ ಬೆಲ್‌

  • Stock Market Opening bell: ಭಾರತದ ಷೇರು ಮಾರುಕಟ್ಟೆಯು ಇಂದು ಅಲ್ಪ ಏರಿಕೆಯೊಂದಿಗೆ ವಹಿವಾಟು ಆರಂಭಿಸಲು ಸಿದ್ಧವಾಗಿದೆ. ಚೀನಾದ ಆರ್ಥಿಕ ಮಾಹಿತಿಯ ಮೇಲೆ ಏಷ್ಯನ್‌ ಷೇರುಗಳು ದೃಷ್ಟಿ ನೆಟ್ಟಿದ್ದು, ಈ ಹಿನ್ನೆಲೆಯಲ್ಲಿ ಭಾರತದ ಷೇರು ಮಾರುಕಟ್ಟೆಯು ಇಂದು ಮ್ಯೂಟ್‌ ಆಗಿ ವಹಿವಾಟು ಆರಂಭಿಸಲು ಸಜ್ಜಾಗಿದೆ.

ಜನವರಿ 16ರ ಷೇರು ಮಾರುಕಟ್ಟೆ ಓಪನಿಂಗ್‌ ಬೆಲ್‌
ಜನವರಿ 16ರ ಷೇರು ಮಾರುಕಟ್ಟೆ ಓಪನಿಂಗ್‌ ಬೆಲ್‌

ಬೆಂಗಳೂರು: ಹೊಸ ವರ್ಷ ಆರಂಭವಾಗಿ 15 ದಿನಗಳು ಕಳೆದಿವೆ. ಈ ನಡುವೆ ಭಾರತದ ಷೇರು ಮಾರುಕಟ್ಟೆಯಲ್ಲಿ ಬಹುತೇಕ ದಿನ ಏರಿಳಿತ ಸಾಮಾನ್ಯವಾಗಿತ್ತು. ಕಳೆದ ಶುಕ್ರವಾರ (ಜ.19) ವರ್ಷದಲ್ಲೇ ಮೊದಲ ಬಾರಿಗೆ ಸೆನ್ಸೆಕ್ಸ್‌ 70000 ಗಡಿ ದಾಟುವ ಮೂಲಕ ಭಾರತದ ಷೇರು ಮಾರುಕಟ್ಟೆಯು ಸಾರ್ವಕಾಲಿಕ ದಾಖಲೆ ಗಳಿಸಿತ್ತು. ಇಂದು (ಜ.16) ಭಾರತದ ಷೇರು ಮಾರುಕಟ್ಟೆಯಲ್ಲಿ ಕೊಂಚ ಏರಿಕೆಯಾಗಿರುವುದನ್ನು ಗಮನಿಸಬಹುದಾಗಿದೆ. ಏಷ್ಯಾದ ಷೇರುಗಳು ಚೀನಾದ ಆರ್ಥಿಕ ಮಾಹಿತಿಯ ಮೇಲೆ ದೃಷ್ಟಿ ನೆಟ್ಟಿವೆ. ಈ ಹಿನ್ನೆಲೆಯಲ್ಲಿ ಏಷ್ಯಾದ ಮಾರುಕಟ್ಟೆಯಲ್ಲಿ ಕಳವಳ ವ್ಯಕ್ತವಾಗಿದೆ.

ಇಂದು ನಿಫ್ಟಿಯು 22,107ಕ್ಕೆ ತಲುಪುವ ಮೂಕಜ ವಹಿವಾಟು ಆರಂಭಿಸಿದೆ. ಶುಕ್ರವಾರ ಮುಕ್ತಾಯದ ವೇಳೆಗೆ ನಿಫ್ಟಿಯು 22,097.45ರ ಆಸುಪಾಸಿಗೆ ತಲುಪಿ ವಹಿವಾಟು ಮುಗಿಸಿತ್ತು.

ನಿನ್ನೆ (ಜ.15) ಕೂಡ ಸೆನ್ಸೆಕ್ಸ್‌ ಹಾಗೂ ನಿಫ್ಟಿಯಲ್ಲಿ ದಾಖಲೆ ಏರಿಕೆ ಉಂಟಾಗಿರುವುದನ್ನು ಗಮನಿಸಬಹುದಾಗಿದೆ. ನಿಫ್ಟಿ 22,000ದ ಗಡಿ ದಾಟಿದ್ದರೆ, ಸೆನ್ಸೆಕ್ಸ್‌ 73,000ರ ಗಡಿ ದಾಟಿತ್ತು. ಶುಕ್ರವಾರಕ್ಕೆ ಹೋಲಿಸಿದರೆ ನಿನ್ನೆಯ ಇನ್ನೊಂದು ಹೊಸ ದಾಖಲೆ ಸೃಷ್ಟಿಯಾಗಿತ್ತು. ಭಾರತದ ನಾಲ್ಕು ಸಾಫ್ಟ್‌ವೇರ್‌ ದಿಗ್ಗಜ ಕಂಪನಿಗಳು ತಮ್ಮ ತ್ರೈಮಾಸಿಕ ವರದಿಯಲ್ಲಿ ಲಾಭ ಗಳಿಕೆಯನ್ನು ತೋರಿದ್ದ ಕಾರಣ ಭಾರತದ ಷೇರು ಮಾರುಕಟ್ಟೆಯಲ್ಲಿ ಲಾಭ ಗಳಿಕೆ ಸಾಧ್ಯವಾಗಿತ್ತು.

ನಿಫ್ಟಿಯು ಶೇ 2.72ರಷ್ಟು ಗಳಿಕೆ ಕಾಣುವ ಮೂಲಕ ಹೊಸ ದಾಖಲೆ ಸೃಷ್ಟಿಸಿತ್ತು. ಸದ್ಯ ಹೂಡಿಕೆದಾರರು ಬ್ಯಾಂಕಿಂಗ್‌ ವಲಯದ ಖಾಸಗಿ ಸಾಲದಾತ ಕಂಪನಿ ಎನ್ನಿಸಿಕೊಂಡಿರುವ ಎಚ್‌ಡಿಎಫ್‌ಸಿ ತ್ರೈಮಾಸಿಕ ವರದಿ ಫಲಿತಾಂಶಕ್ಕಾಗಿ ಎದುರು ನೋಡುತ್ತಿದ್ದಾರೆ.

ʼಈ ವಾರ ಎಚ್‌ಡಿಎಫ್‌ಸಿ ಬ್ಯಾಂಕ್, ಹಿಂದೂಸ್ತಾನ್ ಯೂನಿಲಿವರ್, ಲಾರ್ಸೆನ್ ಆಂಡ್ ಟೂಬ್ರೊ, ಎಲ್‌ಟಿಐಎಂಡ್‌ಟ್ರೀ, ಏಷ್ಯನ್ ಪೇಂಟ್ಸ್, ಇಂಡಸ್‌ಇಂಡ್ ಬ್ಯಾಂಕ್ ಮತ್ತು ಅಲ್ಟ್ರಾಟೆಕ್ ಸಿಮೆಂಟ್‌ನಂತಹ ಪ್ರಮುಖ ಕಂಪನಿಗಳ ಫಲಿತಾಂಶಗಳತ್ತ ಗಮನ ಕೇಂದ್ರೀಕೃತವಾಗಿದೆʼ ಎಂದು ವಿಶ್ಲೇಷಕರು ಹೇಳುತ್ತಾರೆ.

ಈ ನಡುವೆ ಕೇಂದ್ರ ಬಜೆಟ್‌ ಕೂಡ ಹತ್ತಿರದಲ್ಲಿದ್ದು, ಇದು ಮುಂದಿನ ಎರಡು ವಾರಗಳ ಕಾಲ ಮಾರುಕಟ್ಟೆಯ ಮೇಲೆ ಪ್ರಭಾವ ಬೀರಬಹುದು ಎಂದು ಅಂದಾಜಿಸಲಾಗಿದೆ.

ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಸೋಮವಾರ ನಿವ್ವಳ 10.86 ಶತಕೋಟಿ ರೂಪಾಯಿ (130.95 ಮಿಲಿಯನ್ ಡಾಲರ್‌) ಮೌಲ್ಯದ ಭಾರತೀಯ ಷೇರುಗಳನ್ನು ಖರೀದಿಸಿದರೆ, ದೇಶೀಯ ಸಾಂಸ್ಥಿಕ ಹೂಡಿಕೆದಾರರು 8.21 ಶತಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.

ಇಂದು ಈ ಷೇರುಗಳನ್ನು ಗಮನಿಸಿ

* ಏಂಜಲ್‌ ಒನ್‌

* ರೈಲ್‌ ವಿಕಾಸ್‌ ನಿಗಮ

* ಜೊಮ್ಯಾಟೊ

* ಎಸ್ತರ್‌ ಡಿಎಂ ಹೆಲ್ತ್‌ಕೇರ್‌

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ