Closing Bell: ಆರ್‌ಬಿಐ ಹಣಕಾಸು ನೀತಿ ಸಭೆಯ ಮೇಲೆ ಕಣ್ಣು, ಚಂಚಲ ವಹಿವಾಟು ನಡೆಸಿ ನೀರಸ ಅಂತ್ಯ ಕಂಡ ಷೇರುಪೇಟೆ
Feb 07, 2024 04:12 PM IST
ಫೆ. 7ರ ಷೇರು ಮಾರುಕಟ್ಟೆ ಕ್ಲೋಸಿಂಗ್ ಬೆಲ್
- ಭಾರತದ ಷೇರು ಮಾರುಕಟ್ಟೆಯು ಇಂದು (ಫೆ. 7) ಚಂಚಲ ವಹಿವಾಟಿಗೆ ಸಾಕ್ಷಿಯಾಗಿತ್ತು. ಆರಂಭದಲ್ಲಿ ಧನಾತ್ಮಕ ಸೂಚನೆ ಇದ್ದರೂ, ನಂತರದ ಏರಿಳಿತವಿತ್ತು. ಇಂದು ಕ್ಲೋಸಿಂಗ್ ಬೆಲ್ ಅವಧಿಯಲ್ಲಿ ಲಾಭ-ನಷ್ಟವಿಲ್ಲದೇ ತಟಸ್ಥವಾಗಿ ತನ್ನ ವಹಿವಾಟು ಮುಗಿಸಿದೆ ಭಾರತದ ಷೇರುಪೇಟೆ. ಇಂದು ಯಾವೆಲ್ಲಾ ಷೇರುಗಳು ಲಾಭ ಗಳಿಸಿವೆ ನೋಡಿ.
ಬೆಂಗಳೂರು: ಭಾರತದ ಷೇರು ಮಾರುಕಟ್ಟೆಯಲ್ಲಿ ಕಳೆದ ಕೆಲವು ದಿನಗಳಿಂದ ಮಂದ ವಹಿವಾಟು ನಡೆಯುತ್ತಿದೆ. ಫೆಬ್ರುವರಿ ತಿಂಗಳ ಆರಂಭದಿಂದಲೂ ಮಾರುಕಟ್ಟೆಯಲ್ಲಿ ಏರಿಳಿತ ಸಹಜವಾಗಿದೆ. ಇಂದು ಆರಂಭದ ವೇಳೆಯಲ್ಲಿ ಧನಾತ್ಮಕ ಸೂಚನೆ ಇದ್ದರೂ ಇಡೀ ದಿನ ನೀರಸ ವಹಿವಾಟು ನಡೆದಿತ್ತು. ಅಲ್ಲದೆ ಮುಕ್ತಾಯದ ವೇಳೆಗೆ ಸ್ಥಿರವಾಗುವ ಮೂಲಕ ಇಂದಿನ ಮಾರುಕಟ್ಟೆ ವ್ಯವಹಾರ ಮುಗಿದಿದೆ.
ಆರ್‌ಬಿಐ ನೀತಿ ಸಭೆಯ ಮೇಲೆ ಗಮನ ಹರಿಸಿರುವ ಭಾರತದ ಷೇರು ಮಾರುಕಟ್ಟೆಯ ಸಂವೇದಿ ಸೂಚ್ಯಂಕಗಳಾದ ಸೆನ್ಸೆಕ್ಸ್ ಹಾಗೂ ನಿಫ್ಟಿ ಇಂದು ಫ್ಲ್ಯಾಟ್ ನೋಟ್‌ನಲ್ಲಿ ವಹಿವಾಟು ಮುಗಿಸಿವೆ.
ಮುಕ್ತಾಯದ ವೇಳೆಗೆ, ಸೆನ್ಸೆಕ್ಸ್ 34.09 ಅಂಕ ಅಥವಾ 0.05 ಶೇ 72,152.00 ಕ್ಕೆ ಇಳಿದಿದೆ. ನಿಫ್ಟಿ 1.10 ಅಂಕ ಅಥವಾ ಶೇ 0.01 ರಷ್ಟು ಏರಿಕೆಯಾಗಿ 21,930.50 ಕ್ಕೆ ತಲುಪಿದೆ. ಇಂದು ಸುಮಾರು 1932 ಷೇರುಗಳು ಲಾಭ ಗಳಿಸಿದರೆ, 1339 ಷೇರುಗಳು ನಷ್ಟ ಕಂಡಿವೆ. 60 ಷೇರುಗಳಲ್ಲಿ ಯಾವುದೇ ಬದಲಾವಣೆಯಾಗಿಲ್ಲ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಗ್ರಾಸಿಮ್ ಇಂಡಸ್ಟ್ರೀಸ್, ಜೆಎಸ್‌ಡಬ್ಲ್ಯೂ ಸ್ಟೀಲ್, ಎಚ್‌ಡಿಎಫ್‌ಸಿ ಲೈಫ್ ಮತ್ತು ಆಕ್ಸಿಸ್ ಬ್ಯಾಂಕ್ ನಿಫ್ಟಿಯಲ್ಲಿ ಅತ್ಯಧಿಕ ಲಾಭ ಗಳಿಸಿದ ಷೇರುಗಳಾಗಿದ್ದರೆ, ಟೆಕ್ ಮಹೀಂದ್ರಾ, ಪವರ್ ಗ್ರಿಡ್ ಕಾರ್ಪೊರೇಷನ್, ಇನ್ಫೋಸಿಸ್, ಅದಾನಿ ಪೋರ್ಟ್ಸ್ ಮತ್ತು ಟಿಸಿಎಸ್ ನಷ್ಟ ಅನುಭವಿಸಿದ ಕಂಪನಿಗಳಾಗಿವೆ.
ವಲಯವಾರು ಷೇರುಗಳಲ್ಲಿ ಪಿಎಸ್‌ಯು ಬ್ಯಾಂಕ್, ಮೆಟಲ್, ಪವರ್, ಫಾರ್ಮಾ ಮತ್ತು ರಿಯಾಲ್ಟಿ ಶೇ 0.5-3 ರಷ್ಟು ಏರಿಕೆ ಕಂಡರೆ, ಮಾಹಿತಿ ತಂತ್ರಜ್ಞಾನ ಸೂಚ್ಯಂಕವು ಶೇ 1 ರಷ್ಟು ಕುಸಿದಿದೆ.
ಬಿಎಸ್‌ಇ ಮಿಡ್‌ಕ್ಯಾಪ್ ಸೂಚ್ಯಂಕ ಶೇ 1.3 ಮತ್ತು ಸ್ಮಾಲ್‌ಕ್ಯಾಪ್ ಸೂಚ್ಯಂಕ ಶೇ 0.4 ರಷ್ಟು ಏರಿಕೆಯಾಗಿದೆ.
ಇಂದು ಡಾಲರ್ ಎದುರು ರೂಪಾಯಿ ಮೌಲ್ಯವು 82.97 ಕ್ಕೆ ತಲುಪಿದೆ.
ಇಂದು ಬ್ಯಾಂಕಿಂಗ್ ಷೇರುಗಳು ಉತ್ತಮ ಪ್ರದರ್ಶನ ತೋರಿದ್ದರೂ, ಮಾಹಿತಿ ತಂತ್ರಜ್ಞಾನ ಷೇರುಗಳ ಕುಸಿತವು ಮಾರುಕಟ್ಟೆಯ ಮೇಲೆ ಪ್ರಭಾವ ಬೀರಿದೆ. ಇದರಿಂದ ಇಂದು ಬಹುತೇಕ ಬಹುತೇಕ ನೀರಸ ವಹಿವಾಟು ನಡೆಸಿದೆ.