logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Opening Bell: ಷೇರು ಮಾರುಕಟ್ಟೆ ನೀರಸ ಆರಂಭ, ಕುಸಿದ ಇನ್ಪೋಸಿಸ್‌ ಷೇರು, ನಿಫ್ಟಿ ಐಟಿ ಸೂಚ್ಯಂಕಕ್ಕೆ ಮಂಕು, ಇಂದು ಈ ಷೇರುಗಳನ್ನು ಗಮನಿಸಿ

Opening Bell: ಷೇರು ಮಾರುಕಟ್ಟೆ ನೀರಸ ಆರಂಭ, ಕುಸಿದ ಇನ್ಪೋಸಿಸ್‌ ಷೇರು, ನಿಫ್ಟಿ ಐಟಿ ಸೂಚ್ಯಂಕಕ್ಕೆ ಮಂಕು, ಇಂದು ಈ ಷೇರುಗಳನ್ನು ಗಮನಿಸಿ

Praveen Chandra B HT Kannada

Jul 21, 2023 09:42 AM IST

google News

Opening Bell: ಷೇರು ಮಾರುಕಟ್ಟೆ ನೀರಸ ಆರಂಭ, ಕುಸಿದ ಇನ್ಪೋಸಿಸ್‌ ಷೇರು, ನಿಫ್ಟಿ ಐಟಿ ಸೂಚ್ಯಂಕಕ್ಕೆ ಮಂಕು, ಇಂದು ಈ ಷೇರುಗಳನ್ನು ಗಮನಿಸಿ

  • Market News: ಶುಕ್ರವಾರ ಐಟಿ ಷೇರುಗಳು ಇಳಿಮುಖವಾಗಿವೆ. ವಲಯವಾರು ಸೂಚ್ಯಂಕಗಳಲ್ಲಿ ಐಟಿ ಷೇರುಗಳು ಶೇಕಡ 4ರಷ್ಟು ಇಳಿಕೆ ಕಂಡಿವೆ. ಇನ್ಫೋಸಿಸ್‌ನಂತಹ (Infosys share) ಪ್ರಮುಖ ಷೇರುಗಳು ಸುಮಾರು ಶೇಕಡ 10ರಷ್ಟು ಇಳಿಕೆ ಕಂಡಿವೆ.

Opening Bell: ಷೇರು ಮಾರುಕಟ್ಟೆ ನೀರಸ ಆರಂಭ, ಕುಸಿದ ಇನ್ಪೋಸಿಸ್‌ ಷೇರು, ನಿಫ್ಟಿ ಐಟಿ ಸೂಚ್ಯಂಕಕ್ಕೆ ಮಂಕು, ಇಂದು ಈ ಷೇರುಗಳನ್ನು ಗಮನಿಸಿ
Opening Bell: ಷೇರು ಮಾರುಕಟ್ಟೆ ನೀರಸ ಆರಂಭ, ಕುಸಿದ ಇನ್ಪೋಸಿಸ್‌ ಷೇರು, ನಿಫ್ಟಿ ಐಟಿ ಸೂಚ್ಯಂಕಕ್ಕೆ ಮಂಕು, ಇಂದು ಈ ಷೇರುಗಳನ್ನು ಗಮನಿಸಿ (PTI)

ಬೆಂಗಳೂರು: ಅಮೆರಿಕದ ಉದ್ಯೋಗ ಅಂಕಿಅಂಶಗಳ ಕುರಿತು ಎಚ್ಚರಿಕೆಯಿಂದ ಶುಕ್ರವಾರ ಭಾರತದ ಷೇರುಗಳು ಮಂದಗತಿಯಲ್ಲಿ ಆರಂಭವಾಗುವ ಸೂಚನೆಯಿದೆ. ಇದೇ ಸಂದರ್ಭದಲ್ಲಿ ಹೂಡಿಕೆದಾರರು ಭಾರತದ ಕಂಪನಿಗಳ ಫಲಿತಾಂಶ ಪ್ರಕಟದ ಕುರಿತು ಗಮನವಿಟ್ಟಿದ್ದು, ಇಂದು ಷೇರುಪೇಟೆಯಲ್ಲಿ ಸಾಕಷ್ಟು ಏರಿಳಿತವಿರುವ ಸಾಧ್ಯತೆಯಿದೆ.

ಭಾರತದ ಜಿಫ್ಟ್‌ ನಿಫ್ಟಿಯು ಎನ್‌ಎಸ್‌ಇ ಇಂಟರ್‌ನ್ಯಾಷನಲ್‌ ಎಕ್ಸ್‌ಚೇಂಜ್‌ನಲ್ಲಿ ಬೆಳಗ್ಗೆ 8:12 ಗಂಟೆಗೆ ಶೇಕಡ 0.09 ಏರಿಕೆ ಕಂಡು 19,876.5ಕ್ಕೆ ತಲುಪಿದೆ. ನಿಫ್ಟಿ 50 ಮತ್ತು ಸೆನ್ಸೆಕ್ಸ್‌ ಸೂಚ್ಯಂಕಗಳು ಕಳೆದ ಸತತ ಐದು ಅವಧಿಗಳಲ್ಲಿ ಏರಿಕೆ ದಾಖಲಿಸಿವೆ. ಇವುಗಳಲ್ಲಿ ನಿಫ್ಟಿ 50ಯು 20 ಸಾವಿರದ ಅಂಚಿನಲ್ಲಿದೆ. ಕಳೆದ ನಾಲ್ಕು ವಾರದಲ್ಲಿ ಶೇಕಡ 2ರಷ್ಟು ಏರಿಕೆ ದಾಖಲಿಸಿವೆ.

ಟೆಸ್ಲಾ ಮತ್ತು ನೆಟ್‌ಫ್ಲಿಕ್ಸ್‌ ಗಳಿಕೆಯ ವರದಿಗಳು ಕುಸಿದಿರುವುದು ಮತ್ತು ಅಮೆರಿಕದಲ್ಲಿ ದೀರ್ಘಾವಧಿಯಲ್ಲಿ ಹೆಚ್ಚಿನ ಬಡ್ಡಿದರದ ಆತಂಕ ಉಂಟಾದ ಕಾರಣ ಏಷ್ಯಾ ಷೇರುಗಳು ರಾತ್ರಿಯಿಡೀ ವಾಲ್‌ ಸ್ಟ್ರೀಟ್‌ನಲ್ಲಿ ಮಂದಗತಿಯಲ್ಲಿದ್ದು, ನಂತರ ಕುಸಿತ ಕಂಡಿದೆ.

ಜಗತ್ತಿನ ಅತಿದೊಡ್ಡ ಆರ್ಥಿಕತೆ ಎಂಬ ಖ್ಯಾತಿಯ ಅಮೆರಿಕದಲ್ಲಿ ಸಾಪ್ತಾಹಿಕ ನಿರುದ್ಯೋಗ ಕ್ಲೇಮುಗಳು ಅನಿರೀಕ್ಷಿತವಾಗಿ ಕುಸಿದವು. ಉದ್ಯೋಗ ಮಾರುಕಟ್ಟೆಯ ಬಲವನ್ನು ಇದು ಸೂಚಿಸಿದರೂ ಅಮೆರಿಕದ ಫೆಡರಲ್‌ ರಿಸರ್ವ್‌ ಬ್ಯಾಂಕ್‌ ಬಡ್ಡಿದರವನ್ನು ದೀರ್ಘಕಾಲದವರೆಗೆ ಇರಿಸುವ ಭಯವನ್ನು ಇದು ಹೆಚ್ಚಿಸಿದೆ.

ಬೆಲ್‌ವೆದರ್ ಸಾಫ್ಟ್‌ವೇರ್ ಸೇವೆಗಳನ್ನು ಒದಗಿಸುವ ಇನ್ಫೋಸಿಸ್ ತನ್ನ ಪೂರ್ಣ-ವರ್ಷದ ಆದಾಯ ಬೆಳವಣಿಗೆಯ ದೃಷ್ಟಿಕೋನವನ್ನು ಅರ್ಧದಷ್ಟು ಕಡಿಮೆಗೊಳಿಸಿದ ನಂತರ ಮಾಹಿತಿ ತಂತ್ರಜ್ಞಾನ (ಐಟಿ) ಷೇರುಗಳು ಮಂಕಾಗಿವೆ.

ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಗುರುವಾರ ನಿವ್ವಳ ಆಧಾರದ ಮೇಲೆ 33.71 ಶತಕೋಟಿ ರೂಪಾಯಿ (410.9 ಮಿಲಿಯನ್ ಡಾಲರ್‌) ಮೌಲ್ಯದ ಭಾರತೀಯ ಷೇರುಗಳನ್ನು ಖರೀದಿಸಿದ್ದಾರೆ. ಆದರೆ ದೇಶೀಯ ಹೂಡಿಕೆದಾರರು 1.93 ಶತಕೋಟಿ ರೂಪಾಯಿ ಷೇರುಗಳನ್ನು ಮಾರಾಟ ಮಾಡಿದ್ದಾರೆ.

ಇಂದು ಗಮನಿಸಬಹುದಾದ ಷೇರುಗಳು

  1. ಹಿಂದುಸ್ತಾನ್ ಯೂನಿಲಿವರ್: ಅತ್ಯಧಿಕ ವೆಚ್ಚದ ಕಾರಣದಿಂದ ಜೂನ್‌ ತ್ರೈಮಾಸಿಕದಲ್ಲಿ ಕಂಪನಿಯು ಲಾಭವನ್ನು ಮಿಸ್‌ ಮಾಡಿಕೊಂಡಿದೆ.
  2. ತನ್ಲಾ ಪ್ಲಾಟ್‌ಫಾರ್ಮ್‌: ಮೊದಲ ತ್ರೈಮಾಸಿಕದಲ್ಲಿ ಕಂಪನಿಯ ಏಕೀಕೃತ ನಿವ್ವಳ ಲಾಭ ಏರಿಕೆಯಾಗಿದೆ.
  3. ಯೂನಿಯನ್‌ ಬ್ಯಾಂಕ್‌: ಜೂನ್‌ ತ್ರೈಮಾಸಿಕದಲ್ಲಿ ಕಂಪನಿಯ ನಿವ್ವಳ ಲಾಭ ಏರಿಕೆಯಾಗಿದೆ. ಅಸೆಟ್‌ ಗುಣಮಟ್ಟವು ಸುಧಾರಿಸಿದೆ.
  4. ಯುನೈಟೆಡ್‌ ಸ್ಪಿರಿಟ್ಸ್‌: ಜೂನ್‌ ತ್ರೈಮಾಸಿಕದಲ್ಲಿ ಕಂಪನಿಯ ವೆಚ್ಚ ಕಡಿಮೆಯಾಗಿದ್ದು, ಲಾಭ ಹೆಚ್ಚಾಗಿದೆ. ಪ್ರೀಮಿಯಂ ವಿಭಾಗದಲ್ಲಿ ಮಾರಾಟ ಹೆಚ್ಚಾಗಿದೆ.

ಕರೆನ್ಸಿ ಮೌಲ್ಯ

1 ಡಾಲರ್‌= 82.0400 ರೂಪಾಯಿ

ಕುಸಿದ ಇನ್ಪೋಸಿಸ್‌ ಷೇರು, ನಿಫ್ಟಿ ಐಟಿ ಸೂಚ್ಯಂಕಕ್ಕೆ ಮಂಕು

ಶುಕ್ರವಾರ ಐಟಿ ಷೇರುಗಳು ಇಳಿಮುಖವಾಗಿವೆ. ವಲಯವಾರು ಸೂಚ್ಯಂಕಗಳಲ್ಲಿ ಐಟಿ ಷೇರುಗಳು ಶೇಕಡ 4ರಷ್ಟು ಇಳಿಕೆ ಕಂಡಿವೆ. ಇನ್ಫೋಸಿಸ್‌ನಂತಹ ಪ್ರಮುಖ ಷೇರುಗಳು ಸುಮಾರು ಶೇಕಡ 10ರಷ್ಟು ಇಳಿಕೆ ಕಂಡಿವೆ. ಮಾಹಿತಿ ತಂತ್ರಜ್ಞಾನ ವಲಯದ ಪ್ರಮುಖ ಕಂಪನಿ ಇನ್ಪೋಸಿಸ್‌ನ ಜೂನ್‌ ತ್ರೈಮಾಸಿಕದ ಗಳಿಕೆ ದುರ್ಬಲವಾಗಿರುವುದರಿಂದ ಐಟಿ ಷೇರುಗಳು ಮಂಕಾಗಿವೆ.

ಇನ್ಫೋಸಿಸ್ ತನ್ನ ದುರ್ಬಲ ಜೂನ್ ತ್ರೈಮಾಸಿಕ ಆದಾಯ ಬೆಳವಣಿಗೆಯನ್ನು ಗುರುವಾರ ವರದಿ ಮಾಡಿದೆ. ಪ್ರಸಕ್ತ ಹಣಕಾಸು ವರ್ಷದ ವಾರ್ಷಿಕ ಮಾರಾಟದ ಮುನ್ಸೂಚನೆಯನ್ನು ಕಡಿತಗೊಳಿಸಿದೆ. ಕಂಪನಿಯ ಆದಾಯವು ಹಿಂದಿನ ತ್ರೈಮಾಸಿಕದಿಂದ ಶೇಕಡಾ ಒಂದು ಮತ್ತು ಹಿಂದಿನ ವರ್ಷಕ್ಕಿಂತ ಶೇಕಡಾ 4.2 ರಷ್ಟು ಏರಿಕೆಯಾಗಿ 37,933 ಕೋಟಿ ರೂಪಾಯಿಗೆ ತಲುಪಿದೆ. ನಿವ್ವಳ ಲಾಭವು ಹಿಂದಿನ ವರ್ಷದಿಂದ 5,945 ಕೋಟಿ ರೂಪಾಯಿಗೆ ತಲುಪಿ ಶೇಕಡ 10.9 ರಷ್ಟು ಏರಿಕೆಯಾಗಿದೆ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ