logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Opening Bell: ಆತಂಕದಲ್ಲಿ ಷೇರುಪೇಟೆ, ನಿಧಾನಗತಿಯ ಆರಂಭ, ಇಂದು ಸ್ಟಾಕ್‌ ಮಾರ್ಕೆಟ್‌ನಲ್ಲಿ ಷೇರು ಖರೀದಿಸುವವರು ಈ ಹಲವು ಅಂಶಗಳನ್ನು ಗಮನಿಸಿ

Opening Bell: ಆತಂಕದಲ್ಲಿ ಷೇರುಪೇಟೆ, ನಿಧಾನಗತಿಯ ಆರಂಭ, ಇಂದು ಸ್ಟಾಕ್‌ ಮಾರ್ಕೆಟ್‌ನಲ್ಲಿ ಷೇರು ಖರೀದಿಸುವವರು ಈ ಹಲವು ಅಂಶಗಳನ್ನು ಗಮನಿಸಿ

Jun 15, 2023 09:23 AM IST

India Stock Market Today: ಭಾರತೀಯ ಷೇರುಪೇಟೆಯು ಇಂದು ತುಸು ಆತಂಕದಲ್ಲಿದ್ದು, ನಿಧಾನಗತಿಯ ಆರಂಭಕ್ಕೆ ಕಾರಣವಾಗಲಿದೆ. ಅಮೆರಿಕದ ಫೆಡರಲ್‌ ಬಡ್ಡಿದರದಲ್ಲಿ ಯಾವುದೇ ಬದಲಾವಣೆ ಮಾಡದೆ ಇದ್ದರೂ ಈ ವರ್ಷ ಇನ್ನೂ ಎರಡು ಬಾರಿ ಬಡ್ಡಿದರ ಬದಲಾಯಿಸುವ ಸೂಚನೆ ನೀಡಿರುವುದು ಪರಿಣಾಮ ಬೀರಿದೆ. ಇಂದು ಷೇರು ಖರೀದಿಸುವವರು ಗಮನಿಸಬೇಕಾದ ಕೆಲವು ವಿಚಾರಗಳು ಇಲ್ಲಿವೆ.

India Stock Market Today: ಭಾರತೀಯ ಷೇರುಪೇಟೆಯು ಇಂದು ತುಸು ಆತಂಕದಲ್ಲಿದ್ದು, ನಿಧಾನಗತಿಯ ಆರಂಭಕ್ಕೆ ಕಾರಣವಾಗಲಿದೆ. ಅಮೆರಿಕದ ಫೆಡರಲ್‌ ಬಡ್ಡಿದರದಲ್ಲಿ ಯಾವುದೇ ಬದಲಾವಣೆ ಮಾಡದೆ ಇದ್ದರೂ ಈ ವರ್ಷ ಇನ್ನೂ ಎರಡು ಬಾರಿ ಬಡ್ಡಿದರ ಬದಲಾಯಿಸುವ ಸೂಚನೆ ನೀಡಿರುವುದು ಪರಿಣಾಮ ಬೀರಿದೆ. ಇಂದು ಷೇರು ಖರೀದಿಸುವವರು ಗಮನಿಸಬೇಕಾದ ಕೆಲವು ವಿಚಾರಗಳು ಇಲ್ಲಿವೆ.
ಅತ್ಯಧಿಕ ಏರಿಕೆ ಕಂಡಿರುವ ಹಣದುಬ್ಬರವನ್ನು ನಿಯಂತ್ರಿಸುವ ಸಲುವಾಗಿ ಫೆಡರಲ್‌ ರಿಸರ್ವ್‌ ನಿನ್ನೆ ಬಡ್ಡಿದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಕಳೆದ ಸತತ ಹತ್ತು ಬಾರಿಯೂ ಯಾವುದೇ ಬದಲಾವಣೆ ಮಾಡಿಲ್ಲ. ಆದರೆ, ಅಚ್ಚರಿಯ ಹೆಜ್ಜೆಯೆಂಬಂತೆ ಈ ವರ್ಷ ಎರಡಕ್ಕೂ ಹೆಚ್ಚು ಬಾರಿ ಬಡ್ಡಿದರ ಏರಿಕೆ ಮಾಡುವ ಸೂಚನೆ ನೀಡಿದೆ. ಮುಂದಿನ ತಿಂಗಳಿನಿಂದಲೇ ಈ ಪ್ರಕ್ರಿಯೆ ಆರಂಭವಾಗುವ ಸಾಧ್ಯತೆಯಿದೆ. 
(1 / 9)
ಅತ್ಯಧಿಕ ಏರಿಕೆ ಕಂಡಿರುವ ಹಣದುಬ್ಬರವನ್ನು ನಿಯಂತ್ರಿಸುವ ಸಲುವಾಗಿ ಫೆಡರಲ್‌ ರಿಸರ್ವ್‌ ನಿನ್ನೆ ಬಡ್ಡಿದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಕಳೆದ ಸತತ ಹತ್ತು ಬಾರಿಯೂ ಯಾವುದೇ ಬದಲಾವಣೆ ಮಾಡಿಲ್ಲ. ಆದರೆ, ಅಚ್ಚರಿಯ ಹೆಜ್ಜೆಯೆಂಬಂತೆ ಈ ವರ್ಷ ಎರಡಕ್ಕೂ ಹೆಚ್ಚು ಬಾರಿ ಬಡ್ಡಿದರ ಏರಿಕೆ ಮಾಡುವ ಸೂಚನೆ ನೀಡಿದೆ. ಮುಂದಿನ ತಿಂಗಳಿನಿಂದಲೇ ಈ ಪ್ರಕ್ರಿಯೆ ಆರಂಭವಾಗುವ ಸಾಧ್ಯತೆಯಿದೆ. (Bloomberg)
ಫೆಡರಲ್‌ ರಿಸರ್ವ್‌ ಬಡ್ಡಿದರ ಬದಲಾವಣೆ ಮಾಡದೆ ಇದ್ದರೂ, ಮುಂದಿನ ದಿನಗಳಲ್ಲಿ ಬಡ್ಡಿದರ ಹೆಚ್ಚಿಸುವ ಸೂಚನೆ ನೀಡಿರುವುದರಿಂದ ಅಮೆರಿಕದ ಷೇರುಗಳು ಬುಧವಾರ ಮಿಶ್ರ ಪ್ರತಿಕ್ರಿಯೆ ನೀಡಿದವು. ಎಸ್‌ಆಂಡ್‌ಪಿ 500 ಸೂಚ್ಯಂಕವು ಶೇಕಡ 0.08 ಏರಿಕೆ ಕಂಡು 4,372.59ಕ್ಕೆ ಸ್ಥಿರವಾಗಿದೆ ನಾಸ್ದಾಕ್‌ ಸೂಚ್ಯಂಕವು ಶೇಕಡ 0.39 ಏರಿಕೆ ಕಂಡು 13,626.48 ಅಂಕಕ್ಕೆ ತಲುಪಿದೆ. ಡೋಜಾನ್ಸ್‌ ಇಂಡಸ್ಟ್ರಿಯಲ್‌ ಸರಾಸರಿಯು ಶೇಕಡ 0.68 ಇಳಿಕೆ ಕಂಡು 33,979.33ಕ್ಕೆ ಸ್ಥಿರವಾಗಿದೆ.  
(2 / 9)
ಫೆಡರಲ್‌ ರಿಸರ್ವ್‌ ಬಡ್ಡಿದರ ಬದಲಾವಣೆ ಮಾಡದೆ ಇದ್ದರೂ, ಮುಂದಿನ ದಿನಗಳಲ್ಲಿ ಬಡ್ಡಿದರ ಹೆಚ್ಚಿಸುವ ಸೂಚನೆ ನೀಡಿರುವುದರಿಂದ ಅಮೆರಿಕದ ಷೇರುಗಳು ಬುಧವಾರ ಮಿಶ್ರ ಪ್ರತಿಕ್ರಿಯೆ ನೀಡಿದವು. ಎಸ್‌ಆಂಡ್‌ಪಿ 500 ಸೂಚ್ಯಂಕವು ಶೇಕಡ 0.08 ಏರಿಕೆ ಕಂಡು 4,372.59ಕ್ಕೆ ಸ್ಥಿರವಾಗಿದೆ ನಾಸ್ದಾಕ್‌ ಸೂಚ್ಯಂಕವು ಶೇಕಡ 0.39 ಏರಿಕೆ ಕಂಡು 13,626.48 ಅಂಕಕ್ಕೆ ತಲುಪಿದೆ. ಡೋಜಾನ್ಸ್‌ ಇಂಡಸ್ಟ್ರಿಯಲ್‌ ಸರಾಸರಿಯು ಶೇಕಡ 0.68 ಇಳಿಕೆ ಕಂಡು 33,979.33ಕ್ಕೆ ಸ್ಥಿರವಾಗಿದೆ.  (AFP)
ಏಷ್ಯಾ ಷೇರುಗಳಲ್ಲಿಯೂ ನಿನ್ನೆ ಕೊಂಚ ಬದಲಾವಣೆಯಾದವು. ಫೆಡರಲ್‌ ರಿಸರ್ವ್‌ ಬಡ್ಡಿದರದಲ್ಲಿ ಯಾವುದೇ ಬದಲಾವಣೆ ಮಾಡದೆ ಇದ್ದರೂ ಹಣಕಾಸು ನೀತಿಯನ್ನು ಬಿಗಿಯಾಗಿಸುವ ನಿರ್ಧಾರ ಇದಕ್ಕೆ ಕಾರಣ. ಜಾಪ್‌ನಲ್ಲಿ ನಿಕೈ 225 ಅಂಕ ಏರಿಕೆ ಕಂಡಿದೆ. ಬ್ಯಾಂಕ್‌ ಆಫ್‌ ಜಪಾನ್‌ ತನ್ನ ಎರಡು ದಿನದ ಹಣಕಾಸು ನೀತಿಗೆ ಚಾಲನೆ ನೀಡಿದ ಬಳಿಕ ಟಾಕ್ಸಿಕ್‌ ಸೂಚ್ಯಂಕ ಶೇಕಡ 0.13ರಷ್ಟು ಇಳಿಕೆ ಕಂಡಿದೆ. ದಕ್ಷಿಣ ಕೋರಿಯಾದ  ಕೋಸ್ಪಿಯು ಶೇಕಡ 0.54ರಷ್ಟು ಏರಿಕೆ ಕಂಡಿದೆ. ಇದೇ ಸಮಯದಲ್ಲಿ ಕೊಸ್ದಾಕ್‌ ಸೂಚ್ಯಂಕ ಶೇಕಡ 1.23ರಷ್ಟು ಏರಿಕೆ ಕಂಡಿದೆ. ಹಾಮಕಾಂಗ್‌ನ ಹಾಂಗ್‌ಸೆಂಗ್‌ ಸೂಚ್ಯಂಕವು ಏರುಗತಿಯಲ್ಲಿದೆ. 
(3 / 9)
ಏಷ್ಯಾ ಷೇರುಗಳಲ್ಲಿಯೂ ನಿನ್ನೆ ಕೊಂಚ ಬದಲಾವಣೆಯಾದವು. ಫೆಡರಲ್‌ ರಿಸರ್ವ್‌ ಬಡ್ಡಿದರದಲ್ಲಿ ಯಾವುದೇ ಬದಲಾವಣೆ ಮಾಡದೆ ಇದ್ದರೂ ಹಣಕಾಸು ನೀತಿಯನ್ನು ಬಿಗಿಯಾಗಿಸುವ ನಿರ್ಧಾರ ಇದಕ್ಕೆ ಕಾರಣ. ಜಾಪ್‌ನಲ್ಲಿ ನಿಕೈ 225 ಅಂಕ ಏರಿಕೆ ಕಂಡಿದೆ. ಬ್ಯಾಂಕ್‌ ಆಫ್‌ ಜಪಾನ್‌ ತನ್ನ ಎರಡು ದಿನದ ಹಣಕಾಸು ನೀತಿಗೆ ಚಾಲನೆ ನೀಡಿದ ಬಳಿಕ ಟಾಕ್ಸಿಕ್‌ ಸೂಚ್ಯಂಕ ಶೇಕಡ 0.13ರಷ್ಟು ಇಳಿಕೆ ಕಂಡಿದೆ. ದಕ್ಷಿಣ ಕೋರಿಯಾದ  ಕೋಸ್ಪಿಯು ಶೇಕಡ 0.54ರಷ್ಟು ಏರಿಕೆ ಕಂಡಿದೆ. ಇದೇ ಸಮಯದಲ್ಲಿ ಕೊಸ್ದಾಕ್‌ ಸೂಚ್ಯಂಕ ಶೇಕಡ 1.23ರಷ್ಟು ಏರಿಕೆ ಕಂಡಿದೆ. ಹಾಮಕಾಂಗ್‌ನ ಹಾಂಗ್‌ಸೆಂಗ್‌ ಸೂಚ್ಯಂಕವು ಏರುಗತಿಯಲ್ಲಿದೆ. (PIxabay)
ಇಂದು ಬೆಳಗ್ಗೆ 8:20 ಎನ್‌ಜಿಎಕ್ಸ್‌ ನಿಫ್ಟಿಯು ಶೇಕಡ 24 ಅಂಕ ಅಥವಾ ಶೇಕಡ 0.13ರಷ್ಟು ಇಳಿಕೆ ಕಂಡು 18,811ಕ್ಕೆ ತಲುಪಿದೆ. ಈ ಮೂಲಕ ಭಾರತದ ಷೇರುಪೇಟೆಯ ಆರಂಭ ಹೀಗೆಯೇ ಇರಲಿದೆ ಎಂದು ಸೂಚನೆ ನೀಡಿದೆ. 
(4 / 9)
ಇಂದು ಬೆಳಗ್ಗೆ 8:20 ಎನ್‌ಜಿಎಕ್ಸ್‌ ನಿಫ್ಟಿಯು ಶೇಕಡ 24 ಅಂಕ ಅಥವಾ ಶೇಕಡ 0.13ರಷ್ಟು ಇಳಿಕೆ ಕಂಡು 18,811ಕ್ಕೆ ತಲುಪಿದೆ. ಈ ಮೂಲಕ ಭಾರತದ ಷೇರುಪೇಟೆಯ ಆರಂಭ ಹೀಗೆಯೇ ಇರಲಿದೆ ಎಂದು ಸೂಚನೆ ನೀಡಿದೆ. (Image by StartupStockPhotos from Pixabay)
ಬುಧವಾರ ಭಾರತೀಯ ಷೇರುಗಳು ಏರಿಕೆ ಕಂಡಿವೆ. ನಿನ್ನೆ ಮುಂಬಯಿ ಷೇರುಪೇಟೆ ಸೂಚ್ಯಂಕವಾದ ಸೆನ್ಸೆಕ್ಸ್‌ 85.35 ಅಂಕ ಏರಿಕೆ ಕಂಡು 63,228.51ಕ್ಕೆ ಸ್ಥಿರವಾಗಿದೆ. ನಿಫ್ಟಿ 39.75 ಅಂಕ ಏರಿಕೆ ಕಂಡು 18,755.90ಕ್ಕೆ ವಹಿವಾಟು ಮುಗಿಸಿದೆ. ಈ ಮೂಲಕ ಭಾರತದ ಷೇರುಪೇಟೆಯು ಇಂದು ಗ್ರೀನ್‌ ಬಣ್ಣದೊಂದಿಗೆ ವಹಿವಾಟು ಅಂತ್ಯಗೊಳಿಸಿದೆ. 
(5 / 9)
ಬುಧವಾರ ಭಾರತೀಯ ಷೇರುಗಳು ಏರಿಕೆ ಕಂಡಿವೆ. ನಿನ್ನೆ ಮುಂಬಯಿ ಷೇರುಪೇಟೆ ಸೂಚ್ಯಂಕವಾದ ಸೆನ್ಸೆಕ್ಸ್‌ 85.35 ಅಂಕ ಏರಿಕೆ ಕಂಡು 63,228.51ಕ್ಕೆ ಸ್ಥಿರವಾಗಿದೆ. ನಿಫ್ಟಿ 39.75 ಅಂಕ ಏರಿಕೆ ಕಂಡು 18,755.90ಕ್ಕೆ ವಹಿವಾಟು ಮುಗಿಸಿದೆ. ಈ ಮೂಲಕ ಭಾರತದ ಷೇರುಪೇಟೆಯು ಇಂದು ಗ್ರೀನ್‌ ಬಣ್ಣದೊಂದಿಗೆ ವಹಿವಾಟು ಅಂತ್ಯಗೊಳಿಸಿದೆ. (Image by Sergei Tokmakov Terms.Law from Pixabay)
ಅಮೆರಿಕದ ಫೆಡರಲ್‌ ರಿಸರ್ವ್‌ ಈ ವರ್ಷ ಬಡ್ಡಿದರ ಹೆಚ್ಚಿಸುವ ಸೂಚನೆ ನೀಡಿದ್ದರಿಂದ ತೈಲ ದರಗಳು ಇಳಿಕೆ ಕಂಡಿವೆ. ಅಮೆರಿಕದ ಕಚ್ಚಾ ತೈಲ ಸೂಚ್ಯಂಕ ಬ್ರೆಂಟ್‌ ಕ್ರೂಡ್‌ ಫ್ಯೂಚರ್ಸ್‌ ಬ್ಯಾರೆಲ್‌ಗೆ ಶೇಕಡ 1.5 ಇಳಿಕೆ ಕಂಡು 73.20 ಡಾಲರ್‌ಗೆ ತಲುಪಿದೆ. ಯುಎಸ್‌ ವೆಸ್ಟ್‌ ಟೆಕ್ಸಾಸ್‌ ಇಂಟರ್‌ಮೀಡಿಯೇಟ್‌ ಶೇಕಡ 1.7 ಇಳಿಕೆ ಕಂಡು 68.27 ಡಾಲರ್‌ಗೆ ತಲುಪಿದೆ. ಇದಕ್ಕೂ ಹಿಂದಿನ ದಿನ ಇವೆರಡು ಸೂಚ್ಯಂಕಗಳು ಶೇಕಡ 1.5ರಷ್ಟು ಏರಿಕೆ ಕಂಡಿದ್ದವು. 
(6 / 9)
ಅಮೆರಿಕದ ಫೆಡರಲ್‌ ರಿಸರ್ವ್‌ ಈ ವರ್ಷ ಬಡ್ಡಿದರ ಹೆಚ್ಚಿಸುವ ಸೂಚನೆ ನೀಡಿದ್ದರಿಂದ ತೈಲ ದರಗಳು ಇಳಿಕೆ ಕಂಡಿವೆ. ಅಮೆರಿಕದ ಕಚ್ಚಾ ತೈಲ ಸೂಚ್ಯಂಕ ಬ್ರೆಂಟ್‌ ಕ್ರೂಡ್‌ ಫ್ಯೂಚರ್ಸ್‌ ಬ್ಯಾರೆಲ್‌ಗೆ ಶೇಕಡ 1.5 ಇಳಿಕೆ ಕಂಡು 73.20 ಡಾಲರ್‌ಗೆ ತಲುಪಿದೆ. ಯುಎಸ್‌ ವೆಸ್ಟ್‌ ಟೆಕ್ಸಾಸ್‌ ಇಂಟರ್‌ಮೀಡಿಯೇಟ್‌ ಶೇಕಡ 1.7 ಇಳಿಕೆ ಕಂಡು 68.27 ಡಾಲರ್‌ಗೆ ತಲುಪಿದೆ. ಇದಕ್ಕೂ ಹಿಂದಿನ ದಿನ ಇವೆರಡು ಸೂಚ್ಯಂಕಗಳು ಶೇಕಡ 1.5ರಷ್ಟು ಏರಿಕೆ ಕಂಡಿದ್ದವು. (AP)
ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) 1,714.72 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ. ಆದರೆ ದೇಶೀಯ ಸಾಂಸ್ಥಿಕ ಹೂಡಿಕೆದಾರರು (ಡಿಐಐ) ಜೂನ್ 14 ರಂದು 654.77 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ ಎಂದು ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದ ತಾತ್ಕಾಲಿಕ ಮಾಹಿತಿಯಿಂದ ತಿಳಿದುಬಂದಿದೆ.  
(7 / 9)
ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) 1,714.72 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ. ಆದರೆ ದೇಶೀಯ ಸಾಂಸ್ಥಿಕ ಹೂಡಿಕೆದಾರರು (ಡಿಐಐ) ಜೂನ್ 14 ರಂದು 654.77 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ ಎಂದು ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದ ತಾತ್ಕಾಲಿಕ ಮಾಹಿತಿಯಿಂದ ತಿಳಿದುಬಂದಿದೆ.  
ಬುಧವಾರ ರೂಪಾಯಿ ಮೌಲ್ಯ ಏರಿಕೆ ಕಂಡಿದೆ. ನಿನ್ನೆ ಡಾಲರ್‌ ಎದುರು 15 ಪೈಸೆ ಏರಿಕೆ ಕಂಡು 82.10 ರೂಪಾಯಿಗೆ ತಲುಪಿದೆ. 
(8 / 9)
ಬುಧವಾರ ರೂಪಾಯಿ ಮೌಲ್ಯ ಏರಿಕೆ ಕಂಡಿದೆ. ನಿನ್ನೆ ಡಾಲರ್‌ ಎದುರು 15 ಪೈಸೆ ಏರಿಕೆ ಕಂಡು 82.10 ರೂಪಾಯಿಗೆ ತಲುಪಿದೆ. (Bloomberg)
ಅಮೆರಿಕ ಫೆಡರಲ್‌ ರಿಸರ್ವ್‌ ಬಡ್ಡಿದರದಲ್ಲಿ ಬದಲಾವಣೆ ಮಾಡದೆ ಇರುವ ನಿರ್ಧಾರ ಪ್ರಕಟಿಸಿದ ಬಳಿಕ ಚಿನ್ನದ ದರ ಏರಿಕೆ ಕಂಡಿದೆ. ಸ್ಪಾಟ್‌ ಗೋಲ್ಡ್‌ ಔನ್ಸ್‌ಗೆ ಶೇಕಡ 0.1ರಷ್ಟು ಏರಿಕೆ ಕಂಡು 1,945.19 ಡಾಲರ್‌ಗೆ ತಲುಪಿದೆ. 
(9 / 9)
ಅಮೆರಿಕ ಫೆಡರಲ್‌ ರಿಸರ್ವ್‌ ಬಡ್ಡಿದರದಲ್ಲಿ ಬದಲಾವಣೆ ಮಾಡದೆ ಇರುವ ನಿರ್ಧಾರ ಪ್ರಕಟಿಸಿದ ಬಳಿಕ ಚಿನ್ನದ ದರ ಏರಿಕೆ ಕಂಡಿದೆ. ಸ್ಪಾಟ್‌ ಗೋಲ್ಡ್‌ ಔನ್ಸ್‌ಗೆ ಶೇಕಡ 0.1ರಷ್ಟು ಏರಿಕೆ ಕಂಡು 1,945.19 ಡಾಲರ್‌ಗೆ ತಲುಪಿದೆ. 

    ಹಂಚಿಕೊಳ್ಳಲು ಲೇಖನಗಳು