Cabinet approves 'PM-SHRI Yojna': ಪಿಎಂ ಶ್ರೀ ಯೋಜನೆಗೆ ಕೇಂದ್ರ ಸಂಪುಟ ಸಮ್ಮತಿ;
Sep 07, 2022 04:37 PM IST
ನವದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಕೇಂದ್ರ ಸಚಿವರಾದ ಧರ್ಮೇಂದ್ರ ಪ್ರಧಾನ್ ಮತ್ತು ಅನುರಾಗ್ ಠಾಕೂರ್.
ಕ್ಯಾಬಿನೆಟ್ 'ಪಿಎಂ-ಶ್ರೀ ಯೋಜನಾ'ವನ್ನು ಅನುಮೋದಿಸಿದೆ. ದೇಶದ 14,500 ಶಾಲೆಗಳನ್ನು ಉನ್ನತೀಕರಣದ ಪ್ರಸ್ತಾವನೆಯೂ ಈ ಯೋಜನೆಯಲ್ಲಿ ಒಳಗೊಂಡಿದೆ. ಈ ಶಾಲೆಗಳು ಮಾದರಿ ಶಾಲೆಗಳಾಗುತ್ತವೆ ಮತ್ತು ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) 2020 ರ ಸಂಪೂರ್ಣ ಚೈತನ್ಯವನ್ನು ಒಳಗೊಂಡಿರುತ್ತವೆ ಎಂದು ಕೇಂದ್ರ ಸಚಿವರು ತಿಳಿಸಿದ್ದಾರೆ.
ನವದೆಹಲಿ: ಪ್ರಧಾನ ಮಂತ್ರಿ ಸ್ಕೂಲ್ಸ್ ಫಾರ್ ರೈಸಿಂಗ್ ಇಂಡಿಯಾ (PM-SHRI) ಯೋಜನೆಗೆ ಕೇಂದ್ರ ಸಚಿವ ಸಂಪುಟವು ಅನುಮೋದನೆ ನೀಡಿದೆ. ಇದರಲ್ಲಿ ದೇಶಾದ್ಯಂತದ 14,500 ಶಾಲೆಗಳನ್ನು PM-SHRI ಶಾಲೆಗಳಾಗಿ ಮೇಲ್ದರ್ಜೆಗೇರಿಸಲಾಗುವುದು. ಕೇಂದ್ರೀಯ ವಿದ್ಯಾಲಯಗಳು ಮತ್ತು ನವೋದಯ ವಿದ್ಯಾಲಯಗಳು ಸೇರಿ 14,000ಕ್ಕೂ ಹೆಚ್ಚು ಶಾಲೆಗಳನ್ನು ಪಿಎಂ-ಶ್ರೀ ಶಾಲೆಗಳಾಗಿ ಪರಿವರ್ತಿಸಲಾಗುವುದು ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಬುಧವಾರ ಹೇಳಿದ್ದಾರೆ.
ಈ ಶಾಲೆಗಳು ಮಾದರಿ ಶಾಲೆಗಳಾಗುತ್ತವೆ ಮತ್ತು ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) 2020 ರ ಸಂಪೂರ್ಣ ಭಾವವನ್ನು ಒಳಗೊಂಡಿರುತ್ತವೆ. ಪ್ರಧಾನಿ ನರೇಂದ್ರ ಮೋದಿ ಅವರು ಸೆಪ್ಟೆಂಬರ್ 5 ರಂದು ಶಿಕ್ಷಕರ ದಿನಾಚರಣೆಯಂದು ಈ ಶಾಲೆಗಳ ವಿಚಾರ ಘೋಷಿಸಿದ್ದರು.
“ಇಂದು, # ಶಿಕ್ಷಕರ ದಿನದಂದು ನಾನು ಹೊಸ ಉಪಕ್ರಮವನ್ನು ಘೋಷಿಸಲು ಸಂತೋಷಪಡುತ್ತೇನೆ - ಪ್ರಧಾನ ಮಂತ್ರಿ ಶಾಲೆಗಳು ರೈಸಿಂಗ್ ಇಂಡಿಯಾ (PM-SHRI) ಯೋಜನೆ ಅಡಿಯಲ್ಲಿ ಭಾರತದಾದ್ಯಂತ 14,500 ಶಾಲೆಗಳ ಅಭಿವೃದ್ಧಿ ಮತ್ತು ಉನ್ನತೀಕರಣ. ಇವುಗಳು NEP ಯ ಪೂರ್ಣ ಚೈತನ್ಯವನ್ನು ಆವರಿಸುವ ಮಾದರಿ ಶಾಲೆಗಳಾಗುತ್ತವೆ ”ಎಂದು ಪಿಎಂ ಮೋದಿ ಸರಣಿ ಟ್ವೀಟ್‌ಗಳಲ್ಲಿ ಹೇಳಿದ್ದರು.
PM-SHRI ಶಾಲೆಗಳು ಶಿಕ್ಷಣವನ್ನು ನೀಡುವ ಆಧುನಿಕ, ಪರಿವರ್ತನೆಯ ಮತ್ತು ಸಮಗ್ರ ವಿಧಾನವನ್ನು ಹೊಂದಿರುತ್ತದೆ. ಆವಿಷ್ಕಾರ-ಆಧಾರಿತ, ಕಲಿಕೆ-ಕೇಂದ್ರಿತ ಬೋಧನೆಯ ವಿಧಾನಕ್ಕೆ ಒತ್ತು ನೀಡಲಾಗುತ್ತದೆ. ಅತ್ಯಾಧುನಿಕ ತಂತ್ರಜ್ಞಾನ, ಸ್ಮಾರ್ಟ್ ಕ್ಲಾಸ್‌ರೂಮ್‌ಗಳು, ಕ್ರೀಡೆಗಳು ಮತ್ತು ಹೆಚ್ಚಿನವುಗಳನ್ನು ಒಳಗೊಂಡಂತೆ ಆಧುನಿಕ ಮೂಲಸೌಕರ್ಯಗಳ ಮೇಲೆಯೂ ಗಮನ ಹರಿಸಲಾಗುವುದು ಎಂದು ಮೋದಿ ಹೇಳಿದ್ದರು.
ರಾಷ್ಟ್ರೀಯ ಶಿಕ್ಷಣ ನೀತಿಯು ಇತ್ತೀಚಿನ ವರ್ಷಗಳಲ್ಲಿ ಶಿಕ್ಷಣ ಕ್ಷೇತ್ರವನ್ನು ಪರಿವರ್ತಿಸಿದೆ. NEP ಯ ಉತ್ಸಾಹದಲ್ಲಿ PM-SHRI ಶಾಲೆಗಳು ಭಾರತದಾದ್ಯಂತ ಲಕ್ಷಗಟ್ಟಲೆ ವಿದ್ಯಾರ್ಥಿಗಳಿಗೆ ಮತ್ತಷ್ಟು ಪ್ರಯೋಜನವನ್ನು ನೀಡಲಿವೆ ಎಂದು ಖಚಿತವಾಗಿದೆ ಎಂದು ಅವರು ಭರವಸೆ ವ್ಯಕ್ತಪಡಿಸಿದರು.
ಜೂನ್‌ನಲ್ಲಿ, ಗಾಂಧಿನಗರದಲ್ಲಿ ನಡೆದ ಶಾಲಾ ಶಿಕ್ಷಣ ಮಂತ್ರಿಗಳ ರಾಷ್ಟ್ರೀಯ ಸಮ್ಮೇಳನದ ಸಂದರ್ಭದಲ್ಲಿ ಪ್ರಧಾನ್, PM-SHRI ಶಾಲೆಗಳು NEP 2020 ರ ಪ್ರಯೋಗಾಲಯವಾಗಲಿವೆ ಎಂದು ಹೇಳಿದರು.
ಪಿಎಂ ಶ್ರೀ ಶಾಲೆಗಳೆಂದರೆ…
ಈ ಶಾಲೆಗಳು ಲ್ಯಾಬ್‌ಗಳು, ಸ್ಮಾರ್ಟ್ ತರಗತಿಗಳು, ಗ್ರಂಥಾಲಯಗಳು, ಕ್ರೀಡಾ ಉಪಕರಣಗಳು, ಕಲಾ ಕೊಠಡಿಗಳು ಸೇರಿ ಆಧುನಿಕ ಮೂಲಸೌಕರ್ಯಗಳೊಂದಿಗೆ ಸಜ್ಜುಗೊಳಿಸಲ್ಪಡುತ್ತವೆ. ಅವುಗಳನ್ನು ನೀರಿನ ಸಂರಕ್ಷಣೆಯೊಂದಿಗೆ "ಹಸಿರು ಶಾಲೆಗಳು" ಎಂದು ಅಭಿವೃದ್ಧಿಪಡಿಸಲಾಗುವುದು. ತ್ಯಾಜ್ಯ ಮರುಬಳಕೆ, ಶಕ್ತಿ-ಸಮರ್ಥ ಮೂಲಸೌಕರ್ಯ ಮತ್ತು ಪಠ್ಯಕ್ರಮದಲ್ಲಿ ಸಾವಯವ ಜೀವನಶೈಲಿಯ ಏಕೀಕರಣವಾಗಲಿದೆ ಎಂದು ಶಿಕ್ಷಣ ಸಚಿವಾಲಯ ತಿಳಿಸಿದೆ.
ಎನ್‌ಇಪಿ 2020 ರ ದೃಷ್ಟಿಯ ಪ್ರಕಾರ, ಮಕ್ಕಳ ವೈವಿಧ್ಯಮಯ ಹಿನ್ನೆಲೆ, ಬಹುಭಾಷಾ ಅಗತ್ಯಗಳು ಮತ್ತು ವಿವಿಧ ಶೈಕ್ಷಣಿಕ ಸಾಮರ್ಥ್ಯಗಳನ್ನು ನೋಡಿಕೊಳ್ಳುವ ಮತ್ತು ಅವರ ಸ್ವಂತ ಕಲಿಕೆಯಲ್ಲಿ ಸಕ್ರಿಯ ಪಾಲ್ಗೊಳ್ಳುವವರನ್ನಾಗಿ ಮಾಡುವ ಸಮಾನ, ಅಂತರ್ಗತ ಪ್ರಕ್ರಿಯೆ ಮತ್ತು ಸಂತೋಷದಾಯಕ ಶಾಲಾ ವಾತಾವರಣದಲ್ಲಿ ಉನ್ನತ-ಗುಣಮಟ್ಟದ ಶಿಕ್ಷಣವನ್ನು ಒದಗಿಸುವಲ್ಲಿ ಅವುಗಳು ತಮ್ಮ ಪ್ರದೇಶಗಳಲ್ಲಿ ನಾಯಕತ್ವವನ್ನು ನೀಡಲಿವೆ ಎಂದು ಸಚಿವಾಲಯ ಹೇಳಿದೆ.
ಹೆಚ್ಚಿನ ಸುದ್ದಿಗಳಿಗೆ ನಮ್ಮನ್ನು ಫೇಸ್‌ಬುಕ್ ಮತ್ತು ಟ್ವಿಟರ್ ನಲ್ಲಿ ಫಾಲೋಮಾಡಿ.