logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  China Population Dips: ಆರು ದಶಕದಲ್ಲೇ ಮೊದಲ ಬಾರಿಗೆ ಕುಸಿದ ಚೀನಾದ ಜನಸಂಖ್ಯೆ, ಚೀನಾವನ್ನು ಹಿಂದಿಕ್ಕಲಿದೆಯೇ ಭಾರತ!

China population dips: ಆರು ದಶಕದಲ್ಲೇ ಮೊದಲ ಬಾರಿಗೆ ಕುಸಿದ ಚೀನಾದ ಜನಸಂಖ್ಯೆ, ಚೀನಾವನ್ನು ಹಿಂದಿಕ್ಕಲಿದೆಯೇ ಭಾರತ!

HT Kannada Desk HT Kannada

Jan 17, 2023 01:41 PM IST

google News

China population dips: ಆರು ದಶಕದಲ್ಲೇ ಮೊದಲ ಬಾರಿಗೆ ಕುಸಿದ ಚೀನಾದ ಜನಸಂಖ್ಯೆ

    • ಜಗತ್ತಿನಲ್ಲಿಯೇ ಅತ್ಯಧಿಕ ಜನಸಂಖ್ಯೆ ಹೊಂದಿರುವ ದೇಶವೆಂದು ಖ್ಯಾತಿ ಪಡೆದಿರುವ ಚೀನಾದ ಜನಸಂಖ್ಯೆಯು ಕಳೆದ ಆರು ದಶಕದಲ್ಲಿಯೇ ಇದೇ ಮೊದಲ ಬಾರಿಗೆ ಇಳಿಕೆ ದಾಖಲಿಸಿದೆ.
China population dips: ಆರು ದಶಕದಲ್ಲೇ ಮೊದಲ ಬಾರಿಗೆ ಕುಸಿದ ಚೀನಾದ ಜನಸಂಖ್ಯೆ
China population dips: ಆರು ದಶಕದಲ್ಲೇ ಮೊದಲ ಬಾರಿಗೆ ಕುಸಿದ ಚೀನಾದ ಜನಸಂಖ್ಯೆ

ಬೀಜಿಂಗ್‌: ಜಗತ್ತಿನಲ್ಲಿಯೇ ಅತ್ಯಧಿಕ ಜನಸಂಖ್ಯೆ ಹೊಂದಿರುವ ದೇಶವೆಂದು ಖ್ಯಾತಿ ಪಡೆದಿರುವ ಚೀನಾದ ಜನಸಂಖ್ಯೆಯು ಕಳೆದ ಆರು ದಶಕದಲ್ಲಿಯೇ ಇದೇ ಮೊದಲ ಬಾರಿಗೆ ಇಳಿಕೆ ದಾಖಲಿಸಿದೆ ಎಂದು ನ್ಯಾಷನಲ್‌ ಬ್ಯೂರೋ ಆಫ್‌ ಸ್ಟ್ಯಟಿಸ್ಟಿಕ್ಸ್‌ (ಎನ್‌ಬಿಎಸ್‌) ಇಂದು ಬಿಡುಗಡೆ ಮಾಡಿದ ಅಂಕಿಅಂಶಗಳಿಂದ ತಿಳಿದುಬಂದಿದೆ.

ಅಧಿಕೃತ ಅಂಕಿಅಂಶಗಳ ಪ್ರಕಾರ 2022ರಲ್ಲಿ ಚೀನಾದ ಜನಸಂಖ್ಯೆಯು 1,411,750,000 (140 ಶತಕೋಟಿ) ಆಗಿತ್ತು. ಇದಕ್ಕೂ ಹಿಂದಿನ ವರ್ಷದ ಜನಸಂಖ್ಯಾ ಅಂಕಿಅಂಶಗಳಿಗೆ ಹೋಲಿಸಿದರೆ ಇದು 850,000 ಇಳಿಕೆಯಾಗಿದೆ.

ಜನಸಂಖ್ಯೆ ಇಳಿಕೆಯು ಚೀನಾದ ಆರ್ಥಿಕತೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಸರಕಾರವು ಇದನ್ನು ಗಂಭೀರವಾಗಿ ಪರಿಗಣಿಸುವ ಸಾಧ್ಯತೆಯಿದೆ. ಆರು ದಶಕದಲ್ಲಿಯೇ ಮೊದಲ ಬಾರಿಗೆ ಈ ಕುಸಿತ ದಾಖಲಾಗಿದೆ.

ಈಗ ಜಗತ್ತಿನಲ್ಲಿಯೇ ಅತ್ಯಧಿಕ ಜನಸಂಖ್ಯೆಯಲ್ಲಿ ಅಗ್ರ ಎರಡನೇ ಸ್ಥಾನ ಹೊಂದಿರುವ ಭಾರತವು ಶೀಘ್ರದಲ್ಲಿಯೇ ಚೀನಾವನ್ನು ಹಿಂದಿಕ್ಕಿ ಮೊದಲ ಸ್ಥಾನ ಪಡೆಯಬಹುದು ಎಂದು ವಿವಿಧ ವರದಿಗಳಲ್ಲಿ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

"ಚೀನಾದ ಬೈಜು ಸರ್ಜ್‌ ಎಂಜಿನ್‌ನಲ್ಲಿ ಬೇಬಿ ಟೇಕರ್‌ಗಳ ಆನ್‌ಲೈನ್‌ ಹುಡುಕಾಟವು 2022ರಲ್ಲಿ ಶೇಕಡ 17ರಷ್ಟು ಕಡಿಮೆಯಾಗಿದೆ. ಇದು 2018ರಿಂದ ಶೇಕಡ 41ರಷ್ಟು ಕಡಿಮೆಯಾಗಿದೆ. ಮಗುವಿನ ಹಾಲಿನ ಬಾಟಲಿಗಳ ಹುಟಕಾಟಗಳು 2018ರಿಂದ ಮೂರನೇ ಒಂದು ಭಾಗದಷ್ಟು ಕಡಿಮೆಯಾಗಿದೆ. ಆದರೆ, ಭಾರತದಲ್ಲಿ 2022ರಲ್ಲಿ ಮಗುವಿನ ಹಾಲಿನ ಬಾಟಲಿಗಳ ಆನ್‌ಲೈನ್‌ ಹುಡುಕಾಟವು ಶೇಕಡ 15ರಷ್ಟು ಜಿಗಿತ ಕಂಡಿದೆʼʼ ಎಂದು ಸುದ್ದಿಸಂಸ್ಥೆ ರಾಯಿಟರ್ಸ್‌ ವರದಿ ಮಾಡಿದೆ.

ಜನಸಂಖ್ಯಾ ಸ್ಫೋಟ

ನಿನ್ನೆಗೆ ಹೋಲಿಸಿದರೆ ಇಂದು 2 ಲಕ್ಷ ಜನರು ಜಗತ್ತಿನಲ್ಲಿ ಜಾಸ್ತಿಯಾಗಿದ್ದಾರೆ. ಈ ಲೆಕ್ಕಾಚಾರದಲ್ಲಿಯೇ ಜಗತ್ತಿನ ಜನಸಂಖ್ಯೆ ವೃದ್ಧಿಸುತ್ತಿದೆ. ಈ ಸ್ಪೋಟದಿಂದ ಆಯಾ ದೇಶದ ಸಂಪನ್ಮೂಲಗಳ ಮೇಲೆ ಒತ್ತಡ ಸೃಷ್ಟಿಯಾಗುತ್ತಿದೆ. ವಿಶ್ವದ ಆರ್ಥಿಕತೆಯು ಈ ಶತಮಾನದಲ್ಲಿ 26 ಪಟ್ಟು ವೃದ್ಧಿಯಾಗಿದೆ. ಇದರಿಂದಾಗಿ ಭೂಮಿ ಮೇಲಿನ ಸಂಪನ್ಮೂಲಗಳ ಮೇಲೆ ಒತ್ತಡ ಬಿದ್ದಿದೆ. ನಾವು ಈಗಾಗಲೇ ಶೇ.160 ಪಟ್ಟು ಹೆಚ್ಚಿನದಾಗಿಯೇ ಬಳಸಿಕೊಂಡಿದ್ದೇವೆ.

ಪರಿಹಾರ ಏನು?

ಜನಸಂಖ್ಯೆ ನಿಯಂತ್ರಿಸುವ ಸಲುವಾಗಿ ಕುಟುಂಬ ಯೋಜನೆಗಳ ಪ್ರಚಾರ ಮಾಡಬೇಕಿದೆ. ಬೇಡದ ಗರ್ಭಧಾರಣೆ ತಡೆಯ ಶಿಕ್ಷಣ ನೀಡಬೇಕು. ಸಮಾಜದಲ್ಲಿ ಲಿಂಗ ಅಸಮಾನತೆ ನಿವಾರಣೆಗೆ ಪೂರಕವಾಗಿ ಶಿಕ್ಷಣ ಒದಗಿಸುವುದು ಸೇರಿದಂತೆ ಹಲವು ಕ್ರಮಗಳ ಮೂಲಕ ಜನಸಂಖ್ಯೆ ನಿಯಂತ್ರಣ ಮಾಡಬಹುದು.

ಜನಸಂಖ್ಯೆ ಹೆಚ್ಚಳದಿಂದ ಸಮಸ್ಯೆಗಳೇನು?

ಜನಸಂಖ್ಯೆ ಹೆಚ್ಚಳದಿಂದ ಆಹಾರ, ನಿರುದ್ಯೋಗ, ಶಿಕ್ಷಣದ ಸಮಸ್ಯೆ ಉಂಟಾಗುತ್ತದೆ. ಇದರೊಂದಿಗೆ ವಲಸೆ, ಅನಾರೋಗ್ಯ, ಅಪೌಷ್ಟಿಕತೆ, ತ್ಯಾಜ್ಯ ನಿರ್ವಹಣೆ, ಜಲ, ನೆಲ ಮತ್ತಿತರ ಸಮಸ್ಯೆಗಳು ಉಂಟಾಗುತ್ತವೆ.

ಜನಸಂಖ್ಯೆಯ ಲಾಭ

ಉದ್ಯೋಗಿಗಳ ಕೊರತೆ ಇರುವುದಿಲ್ಲ. ಆರ್ಥಿಕತೆ ಪ್ರಗತಿಗೆ ಪೂರಕವಾಗಿದೆ. ಜನರು ಸಹ ದೇಶದ ಸಂಪನ್ಮೂಲವೇ ಆಗಿದ್ದು, ಅಭಿವೃದ್ಧಿಗೆ ಕೊಡುಗೆ. ಹೊಸ ಆಲೋಚನೆ, ಕೆಲಸದ ಹಂಚಿಕೆಗೆ ಅನುಕೂಲವಾಗಲಿದೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ