logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Corbevax: ಇಂದಿನಿಂದ ಲಸಿಕಾ ಕೇಂದ್ರಗಳಲ್ಲಿ ಕಾರ್ಬೆವಾಕ್ಸ್ ಲಭ್ಯ, ಬೆಲೆ ಎಷ್ಟು? ಇದರ ವೈಶಿಷ್ಟ್ಯ ತಿಳಿದುಕೊಳ್ಳಿ

Corbevax: ಇಂದಿನಿಂದ ಲಸಿಕಾ ಕೇಂದ್ರಗಳಲ್ಲಿ ಕಾರ್ಬೆವಾಕ್ಸ್ ಲಭ್ಯ, ಬೆಲೆ ಎಷ್ಟು? ಇದರ ವೈಶಿಷ್ಟ್ಯ ತಿಳಿದುಕೊಳ್ಳಿ

HT Kannada Desk HT Kannada

Aug 12, 2022 09:41 AM IST

google News

ಸಂಗ್ರಹ ಚಿತ್ರ

  • ಕೋವಾಕ್ಸಿನ್ ಅಥವಾ ಕೋವಿಶೀಲ್ಡ್‌ ಲಸಿಕೆ ಪಡೆದು ಆರು ತಿಂಗಳ ಬಳಿಕ, 18 ವರ್ಷ ಮೇಲ್ಪಟ್ಟವರು ಈ ಲಸಿಕೆ ಹಾಕಿಸಿಕೊಳ್ಳಬಹುದು. 

ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಹೈದರಾಬಾದ್‌: ಇತ್ತೀಚೆಗೆ ಅನುಮೋದನೆಗೊಂಡ ಕೋವಿಡ್ 19 ಲಸಿಕೆಯಾದ ಬೈಯೋಲಾಜಿಕಲ್‌ ಇ ಲಿಮಿಟೆಡ್ (BE) ಕಾರ್ಬೆವಾಕ್ಸ್, ಇಂದಿನಿಂದ ಬೂಸ್ಟರ್ ಡೋಸ್ ಆಗಿ ಲಭ್ಯವಿರಲಿದೆ. ಎಲ್ಲಾ ಸಾರ್ವಜನಿಕ ಮತ್ತು ಖಾಸಗಿ ಲಸಿಕಾ ಕೇಂದ್ರಗಳಲ್ಲಿ ಈ ಮುನ್ನೆಚ್ಚರಿಕಾ ಡೋಸ್‌ ಲಭ್ಯವಾಗುವ ಸಾಧ್ಯತೆ ಇದೆ.

ಕೋವಾಕ್ಸಿನ್ ಅಥವಾ ಕೋವಿಶೀಲ್ಡ್‌ ಲಸಿಕೆ ಪಡೆದು ಆರು ತಿಂಗಳ ಬಳಿಕ, 18 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟವರು ಈ ಲಸಿಕೆ ಹಾಕಿಸಿಕೊಳ್ಳಬಹುದು. ಭಾರತದ ಮೊದಲ ಭಿನ್ನರೂಪದ ಕೋವಿಡ್ 19 ಮುಂಜಾಗ್ರತಾ ಡೋಸ್‌ ಆಗಿ ಕಾರ್ಬೆವಾಕ್ಸ್ ಅನ್ನು ಇತ್ತೀಚೆಗೆ ಅನುಮೋದಿಸಲಾಯಿತು. ಕೋವಾಕ್ಸಿನ್ ಅಥವಾ ಕೋವಿಶೀಲ್ಡ್ ಲಸಿಕೆ ಹಾಕಿಸಿಕೊಂಡ ಜನರು ತುರ್ತು ಬಳಕೆಯ ದೃಢೀಕರಣ ರೂಪದಲ್ಲಿ ಕಾರ್ಬೆವಾಕ್ಸ್ ಬೂಸ್ಟರ್ ಡೋಸ್‌ ಹಾಕಿಸಿಕೊಳ್ಳಬಹುದು.

ರಾಷ್ಟ್ರೀಯ ತಾಂತ್ರಿಕ ಸಲಹಾ ಗುಂಪಿನ(NTAGI) ರೋಗನಿರೋಧಕ ಸಮೂಹವು ಇತ್ತೀಚೆಗೆ ಮಾಡಿದ ಶಿಫಾರಸ್ಸಿನ ಮೇರೆಗೆ, ಕೇಂದ್ರ ಆರೋಗ್ಯ ಸಚಿವಾಲಯವು ತುರ್ತು ಬಳಕೆಗಾಗಿ ಕಾರ್ಬೆವಾಕ್ಸ್ ಲಸಿಕೆಯನ್ನು ಅನುಮೋದಿಸಿದೆ.

“ಈ ವರ್ಷದ ಜೂನ್ 4ರಂದು 18 ವರ್ಷ ವಯಸ್ಸಿನ ವ್ಯಕ್ತಿಗಳಿಗೆ ಕಾರ್ಬೆವ್ಯಾಕ್ಸ್‌ ಲಸಿಕೆಯನ್ನು ಕೋವಿಡ್ 19 ಬೂಸ್ಟರ್ ಡೋಸ್ ಆಗಿ ತುರ್ತು ಬಳಕೆಗಾಗಿ ಲಸಿಕೆಯನ್ನು ಡಿಸಿಜಿಐ ಅನುಮೋದಿಸಿದ ಬಳಿಕ, ಇದಕ್ಕೆ ಅನುಮೋದನೆ ನೀಡಲಾಗಿದೆ” ಎಂದು ಅಧಿಕೃತ ಹೇಳಿಕೆ ತಿಳಿಸಿದೆ. ಇನ್ನೊಂದೆಡೆ ಕಾರ್ಬೆವಾಕ್ಸ್ ಲಸಿಕೆಯನ್ನು ವಯಸ್ಕರು, ಹದಿಹರೆಯದವರು ಮತ್ತು 5 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಮಕ್ಕಳಿಗೆ ಪ್ರಾಥಮಿಕ ಎರಡು ಡೋಸ್ ಲಸಿಕೆಗಳಾಗಿ ತುರ್ತು ಬಳಕೆಗೂ ದೃಢೀಕರಣ ಪಡೆದಿದೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ.

ಹೈದರಾಬಾದ್ ಮೂಲದ ಫಾರ್ಮಾಸ್ಯುಟಿಕಲ್ ಕಂಪನಿ (BE), ಇಲ್ಲಿಯವರೆಗೆ 10 ಕೋಟಿ ಡೋಸ್ ಕಾರ್ಬೆವಾಕ್ಸ್ ಲಸಿಕೆಯನ್ನು ಕೇಂದ್ರಕ್ಕೆ ಕಳುಹಿಸಿದೆ. 12 ರಿಂದ 14 ವರ್ಷ ವಯಸ್ಸಿನ ಮಕ್ಕಳಿಗೆ ಬೂಸ್ಟರ್ ಡೋಸ್‌ ಲಸಿಕಾಕರಣವನ್ನು ಮಾರ್ಚ್ 16ರಂದು ಪ್ರಾರಂಭಿಸಲಾಗಿದೆ. ಇಲ್ಲಿಯವರೆಗೆ ಸುಮಾರು 7 ಕೋಟಿ ಮಕ್ಕಳಿಗೆ ವ್ಯಾಕ್ಸಿನೇಷನ್‌ ಮಾಡಲಾಗಿದೆ. ಇದರಲ್ಲಿ 2.9 ಕೋಟಿ ಮಕ್ಕಳಿಗೆ ಎಲ್ಲಾ ಎರಡು ಡೋಸ್ ವ್ಯಾಕ್ಸಿನೇಷನ್ ಪೂರ್ಣಗೊಂಡಿದೆ.

ಲಸಿಕೆ ತಯಾರಕ ಕಂಪನಿಯ ಪ್ರಕಾರ, ಲಸಿಕೆಯನ್ನು ಭಾರತದಲ್ಲಿನ ಆರೋಗ್ಯ ವ್ಯವಸ್ಥೆಯಡಿ ಸಮಗ್ರ ಪ್ರಯೋಗಗಳಿಗೆ ಒಳಪಡಿಸಲಾಗಿದೆ. ಆ ಬಳಿಕ ಭಾರತೀಯ ನಿಯಂತ್ರಕ ಪ್ರಾಧಿಕಾರದಿಂದ ಅನುಮೋದನೆ ಪಡೆದಿದೆ. ಬಿಇ ಕಾರ್ಬೆವಾಕ್ಸ್ ಭಿನ್ನ ರೂಪದ ಕೋವಿಡ್ 19 ಬೂಸ್ಟರ್ ಡೋಸ್ ಆಗಿ ಅನುಮೋದಿಸಿದ ಮೊದಲ ಭಾರತೀಯ ಲಸಿಕೆ. ಇದನ್ನು ಹೆಪಟೈಟಿಸ್ ಬಿ ನಂತಹ ಲಸಿಕೆಗಳಿಗೆ ಸಹ ಬಳಸಲಾಗುತ್ತದೆ.

ಕಾರ್ಬೆವಾಕ್ಸ್ ಲಸಿಕೆಗೆ ಬೆಲೆ ಎಷ್ಟು?

ಖಾಸಗಿ ಲಸಿಕಾ ಕೇಂದ್ರಗಳಲ್ಲಿ ಕಾರ್ಬೆವಾಕ್ಸ್‌ನ ಬೆಲೆ 250 ರೂಪಾಯಿ. ಇದು ಸರಕು ಮತ್ತು ಮಾರಾಟ ತೆರಿಗೆಯನ್ನು ಒಳಗೊಂಡ ಬೆಲೆ. ಅಂತಿಮ ಬಳಕೆದಾರರಿಗೆ, ಲಸಿಕೆಯ ತೆರಿಗೆ ಮತ್ತು ಆಡಳಿತಾತ್ಮಕ ಶುಲ್ಕಗಳು ಸೇರಿದಂತೆ 400 ರೂಪಾಯಿಗೆ ಲಭ್ಯವಾಗಲಿದೆ. ಇಂದಿನಿಂದ ಸಾರ್ವಜನಿಕ ಮತ್ತು ಖಾಸಗಿ ವ್ಯಾಕ್ಸಿನೇಷನ್ ಕೇಂದ್ರಗಳಲ್ಲಿ ಬೂಸ್ಟರ್ ಡೋಸ್ ಆಗಿ ಲಭ್ಯವಿರಲಿದೆ.

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ