logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Bilkis Bano Case: ಬಿಲ್ಕಿಸ್ ಬಾನೋ ಕೇಸ್‌ನಲ್ಲಿ ಗುಜರಾತ್ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ತರಾಟೆ; ಗಮನಿಸಬೇಕಾದ 5 ಅಂಶಗಳು

Bilkis Bano Case: ಬಿಲ್ಕಿಸ್ ಬಾನೋ ಕೇಸ್‌ನಲ್ಲಿ ಗುಜರಾತ್ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ತರಾಟೆ; ಗಮನಿಸಬೇಕಾದ 5 ಅಂಶಗಳು

HT Kannada Desk HT Kannada

Jan 08, 2024 02:02 PM IST

google News

ಬಿಲ್ಕಿಸ್ ಬಾನೋ ಕೇಸ್‌ನಲ್ಲಿ ಕಾನೂನು ಗಾಳಿಗೆ ತೂರಿದ ಗುಜರಾತ್ ಸರ್ಕಾರವನ್ನು ಸುಪ್ರೀಂ ಕೋರ್ಟ್ ಸೋಮವಾರ ತರಾಟೆಗೆ ತೆಗೆದುಕೊಂಡಿತು. ಗುಜರಾತ ಸರ್ಕಾರ 2022ರ ಆಗಸ್ಟ್‌ನಲ್ಲಿ 11 ಅಪರಾಧಿಗಳನ್ನು'ಸನ್ನಡತೆ' ಹೆಸರಲ್ಲಿ ಬಿಡುಗಡೆ ಮಾಡಿತ್ತು.(ಕೆಳಭಾಗದ ಎಡಚಿತ್ರ). ಬಿಲ್ಕಿಸ್ ಬಾನೋ ಅವರು (ಕೆಳಭಾಗದ ಬಲಚಿತ್ರ) ಇದನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.

  • ಬಿಲ್ಕಿಸ್ ಬಾನೋ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣದ ಅಪರಾಧಿಗಳನ್ನು ಬಿಡುಗಡೆ ಮಾಡಿದ ಗುಜರಾತ್ ಸರ್ಕಾರದ ಆದೇಶವನ್ನು ಸುಪ್ರೀಂ ಕೋರ್ಟ್ ಸೋಮವಾರ (ಜ.8) ರದ್ದುಗೊಳಿಸಿದೆ. ತೀರ್ಪನ್ನು ಮೀರಿ ಶಿಕ್ಷೆಯಲ್ಲಿ ವಿನಾಯಿತಿ ನೀಡುವ ಅಧಿಕಾರ ಗುಜರಾತ್ ಸರ್ಕಾರಕ್ಕೆ ಇಲ್ಲ ಎಂದು ತೀಕ್ಷ್ಣ ಮಾತುಗಳಲ್ಲಿ ಎಚ್ಚರಿಸಿದೆ. ಕೋರ್ಟ್ ತೀರ್ಪಿನಲ್ಲಿ ಗಮನಿಸಬೇಕಾದ 5 ಅಂಶಗಳು ಹೀಗಿವೆ. 

ಬಿಲ್ಕಿಸ್ ಬಾನೋ ಕೇಸ್‌ನಲ್ಲಿ ಕಾನೂನು ಗಾಳಿಗೆ ತೂರಿದ ಗುಜರಾತ್ ಸರ್ಕಾರವನ್ನು ಸುಪ್ರೀಂ ಕೋರ್ಟ್ ಸೋಮವಾರ ತರಾಟೆಗೆ ತೆಗೆದುಕೊಂಡಿತು. ಗುಜರಾತ ಸರ್ಕಾರ 2022ರ ಆಗಸ್ಟ್‌ನಲ್ಲಿ 11 ಅಪರಾಧಿಗಳನ್ನು'ಸನ್ನಡತೆ' ಹೆಸರಲ್ಲಿ ಬಿಡುಗಡೆ ಮಾಡಿತ್ತು.(ಕೆಳಭಾಗದ ಎಡಚಿತ್ರ). ಬಿಲ್ಕಿಸ್ ಬಾನೋ ಅವರು (ಕೆಳಭಾಗದ ಬಲಚಿತ್ರ) ಇದನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.
ಬಿಲ್ಕಿಸ್ ಬಾನೋ ಕೇಸ್‌ನಲ್ಲಿ ಕಾನೂನು ಗಾಳಿಗೆ ತೂರಿದ ಗುಜರಾತ್ ಸರ್ಕಾರವನ್ನು ಸುಪ್ರೀಂ ಕೋರ್ಟ್ ಸೋಮವಾರ ತರಾಟೆಗೆ ತೆಗೆದುಕೊಂಡಿತು. ಗುಜರಾತ ಸರ್ಕಾರ 2022ರ ಆಗಸ್ಟ್‌ನಲ್ಲಿ 11 ಅಪರಾಧಿಗಳನ್ನು'ಸನ್ನಡತೆ' ಹೆಸರಲ್ಲಿ ಬಿಡುಗಡೆ ಮಾಡಿತ್ತು.(ಕೆಳಭಾಗದ ಎಡಚಿತ್ರ). ಬಿಲ್ಕಿಸ್ ಬಾನೋ ಅವರು (ಕೆಳಭಾಗದ ಬಲಚಿತ್ರ) ಇದನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.

ಬಿಲ್ಕಿಸ್ ಬಾನೋ ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಅವರ ಕುಟುಂಬದ ಸದಸ್ಯರ ಕೊಲೆ ಮಾಡಿದ 11 ಅಪರಾಧಿಗಳ ಶಿಕ್ಷೆಯಲ್ಲಿ ವಿನಾಯಿತಿ ನೀಡಿ, ಬಿಡುಗಡೆ ಮಾಡಿದ ಗುಜರಾತ್ ಸರ್ಕಾರದ ಕ್ರಮ ಸರಿಯಲ್ಲ ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ.

ಗುಜರಾತ್ ಸರ್ಕಾರದ ಕ್ರಮಕ್ಕೆ ತೀವ್ರ ಅಸಾಮಾಧಾನ ವ್ಯಕ್ತಪಡಿಸಿದ ನ್ಯಾಯಾಲಯ, ತಾನು ನೀಡಿರುವ ತೀರ್ಪನ್ನು ಮೀರಿ ಶಿಕ್ಷೆಯಲ್ಲಿ ವಿನಾಯಿತಿ ನೀಡುವ ಅಧಿಕಾರ ಗುಜರಾತ್ ಸರ್ಕಾರಕ್ಕೆ ಇಲ್ಲ ಎಂದು ತೀಕ್ಷ್ಣ ಮಾತುಗಳಲ್ಲಿ ಎಚ್ಚರಿಸಿದೆ.

ಬಿಲ್ಕಿಸ್ ಬಾನು ಅವರು ಸಲ್ಲಿಸಿದ ಮನವಿಯನ್ನು ಸಮರ್ಥಿಸಿಕೊಂಡ ನ್ಯಾಯಮೂರ್ತಿಗಳಾದ ಬಿ.ವಿ.ನಾಗರತ್ನ ಮತ್ತು ಉಜ್ಜಲ್ ಭುಯಾನ್ ಅವರಿದ್ದ ನ್ಯಾಯ ಪೀಠವು ಗುಜರಾತ್ ಸರ್ಕಾರವು ಪರಿಹಾರ ಆದೇಶವನ್ನು ಜಾರಿಗೊಳಿಸುವ ಸೂಕ್ತ ಅಧಿಕಾರವನ್ನು ಹೊಂದಿಲ್ಲ ಎಂದು ಸ್ಪಷ್ಪಪಡಿಸಿತು.

ಗೋಧ್ರಾ ಹತ್ಯಾ ಕಾಂಡ 2002ರ ನಂತರದ ಕೋಮು ಗಲಭೆಯ ಸಂದರ್ಭದಲ್ಲಿ ಬಿಲ್ಕಿಸ್ ಬಾನು ಮೇಲೆ 11 ಅಪರಾಧಿಗಳು ಸಾಮೂಹಿಕ ಅತ್ಯಾಚಾರ ನಡೆಸಿದ್ದರು. ಅಷ್ಟೇ ಅಲ್ಲ, ಬಿಲ್ಕಿಸ್ ಬಾನು ಕುಟುಂಬದ ಸದಸ್ಯರನ್ನು ಕೊಲೆ ಮಾಡಿದ್ದರು. ಹತ್ಯೆಗೀಡಾದವರ ಪೈಕಿ ಬಾನು ಅವರ ಮೂರು ವರ್ಷದ ಮಗಳೂ ಇದ್ದಳು. 2022ರ ಆಗಸ್ಟ್‌ ತಿಂಗಳಲ್ಲಿ ಗುಜರಾತ್ ಸರ್ಕಾರ ಈ ಕೋಮು ದೌರ್ಜನ್ಯದ ಅಪರಾಧಿಗಳನ್ನು'ಸನ್ನಡತೆ'ಯ ಹೆಸರಿನಲ್ಲಿ ಬಿಡುಗಡೆ ಮಾಡಿತ್ತು. ಇದನ್ನು ಪ್ರಶ್ನಿಸಿ ಬಿಲ್ಕಿಸ್ ಬಾನು ಮತ್ತು ಅನೇಕರು ಸುಪ್ರೀಂ ಕೋರ್ಟ್‌ನಲ್ಲಿ ಪಿಐಎಲ್‌ ದಾಖಲಿಸಿದ್ದರು.

ಇದರ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ನ್ಯಾಯಪೀಠ ಇಂದು (ಜ.8) ತೀರ್ಪು ನೀಡಿದೆ. ಇದರಲ್ಲಿ ಗಮನಿಸಬೇಕಾದ 5 ಅಂಶಗಳು ಹೀಗಿವೆ.

1. ನ್ಯಾಯಾಲಯದಲ್ಲಿ “ವಂಚನೆ”ಯ ಮೂಲಕ ಮತ್ತು ವಾಸ್ತವಾಂಶಗಳನ್ನು ಮರೆಮಾಚುವ ಮೂಲಕ 2022ರ ಮೇ 13 ರ ತೀರ್ಪನ್ನು ಪಡೆಯಲಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. 2022ರ ಈ ಕೋರ್ಟ್‌ ಆದೇಶವು ಅಪರಾಧಿಗಳ ಕ್ಷಮಾಪಣೆಯನ್ನು ಪರಿಶೀಲಿಸುವಂತೆ ಗುಜರಾತ್ ಸರ್ಕಾರಕ್ಕೆ ನಿರ್ದೇಶಿಸಿದೆ. ಆದರೆ, ಗುಜರಾತ್ ಸರ್ಕಾರ ತನ್ನ ಅಫಿಡವಿಟ್‌ನಲ್ಲಿ ಅಪರಾಧಿಗಳಿಗೆ ನೀಡಲಾದ ವಿನಾಯಿತಿಯನ್ನು ಸಮರ್ಥಿಸಿಕೊಂಡಿದೆ. ಅಪರಾಧಿಗಳು 14 ವರ್ಷಗಳ ಜೈಲು ಶಿಕ್ಷೆಯನ್ನು ಪೂರ್ಣಗೊಳಿಸಿದ್ದಾರೆ ಮತ್ತು ಅವರ ನಡವಳಿಕೆಯು ಉತ್ತಮವಾಗಿದೆ ಎಂದು ಅಫಿಡವಿಟ್‌ನಲ್ಲಿ ಹೇಳಿತ್ತು.

2. ನ್ಯಾಯಮೂರ್ತಿ ನಾಗರತ್ನ ಅವರು, "ಕಾನೂನು ಅಥವಾ ಕಟ್ಟುನಿಟ್ಟಾದ ಪೂರ್ವನಿದರ್ಶನಗಳ ಅಜ್ಞಾನದಿಂದ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಮೊದಲನೇಯದಾಗಿ, ನ್ಯಾಯಾಲಯದ ಶಿಕ್ಷೆಯಿಂದ ವಿನಾಯಿತಿ ಕೋರುವ ಅರ್ಜಿಗಳನ್ನು ಸ್ವೀಕರಿಸುವ ಅಥವಾ ಅದನ್ನು ಪರಿಗಣಿಸಿ ಆದೇಶ ನೀಡುವ ಯಾವುದೇ ಅಧಿಕಾರ ವ್ಯಾಪ್ತಿಯನ್ನು ಗುಜರಾತ್ ರಾಜ್ಯ ಸರ್ಕಾರವು ಹೊಂದಿಲ್ಲ ಎಂದು ಸ್ಪಷ್ಟಪಡಿಸಿದರು.

3. ಸಂವಿಧಾನದ ಅನುಚ್ಛೇದ 142 ಅನ್ನು ಹಿಂಪಡೆಯಲಾಗದು. ಅದು ಕೋರ್ಟ್‌ನ ಸ್ವಾತಂತ್ರ್ಯ ಮತ್ತು ಅಧಿಕಾರಕ್ಕೆ ಸಂಬಂಧಿಸಿದ್ದು. ಸಂವಿಧಾನದ 142 ನೇ ವಿಧಿಯು ಕಾನೂನು ಪರಿಹಾರವನ್ನು ಒದಗಿಸದ ಪಕ್ಷಗಳ ನಡುವೆ 'ಸಂಪೂರ್ಣ ನ್ಯಾಯ' ತೀರ್ಮಾನ ಮಾಡುವುದಕ್ಕೆ ಸುಪ್ರೀಂ ಕೋರ್ಟ್‌ಗೆ ಅನನ್ಯ ಅಧಿಕಾರವನ್ನು ನೀಡುತ್ತದೆ. ಆದ್ದರಿಂದ ಇನ್ನು ಎರಡು ವಾರದೊಳಗೆ ಎಲ್ಲ ಅಪರಾಧಿಗಳು ಜೈಲು ಸೇರಬೇಕು.

4. “ನಾವು ಇತರ ವಿಷಯಗಳನ್ನು ಗಣನೆಗೆ ತೆಗೆದಕೊಳ್ಳಬೇಕಾಗಿಲ್ಲ. ಆದರೆ ಕೇಸ್‌ ಪೂರ್ಣಗೊಳಿಸುವ ಸಲುವಾಗಿ, ಗಣನೆಗೆ ತೆಗೆದುಕೊಳ್ಳಬಹುದು. ಈ ಪ್ರಕರಣದಲ್ಲಿ ಗುಜರಾತ್ ಸರ್ಕಾರವು ತನ್ನಲ್ಲಿಲ್ಲದ ಅಧಿಕಾರವನ್ನು ಕಸಿದುಕೊಂಡು ಮತ್ತು ತನ್ನ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಈ ಕೃತ್ಯವೆಸಗಿದೆ. ಕಾನೂನಿನ ನಿಯಮವನ್ನು ಉಲ್ಲಂಘಿಸಲಾಗಿದೆ. ಆ ಆಧಾರದ ಮೇಲೆ, ಗುಜರಾತ್ ಸರ್ಕಾರದ ಆದೇಶ ರದ್ದುಗೊಳಿಸಲು ಅರ್ಹವಾಗಿದೆ” ಎಂದು ನ್ಯಾಯಪೀಠ ಹೇಳಿತು.

5. ಶಿಕ್ಷೆಯನ್ನು ವಿಧಿಸುವುದು ಪ್ರತೀಕಾರಕ್ಕಾಗಿ ಅಲ್ಲ ಆದರೆ ತಡೆಗಟ್ಟುವಿಕೆ ಮತ್ತು ಸುಧಾರಣೆಗಾಗಿ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಶಿಕ್ಷೆಯ ಈ ಚಿಕಿತ್ಸಕ ಸಿದ್ಧಾಂತವು ದಂಡನೆಯನ್ನು ಶಿಕ್ಷಿಸಲ್ಪಡುವವರ ಸಲುವಾಗಿ ನೀಡುವ ಔಷಧಿಗೆ ಹೋಲಿಸುತ್ತದೆ. ಪೂರ್ಣವಾಗದೇ ಯಾವುದೇ ತೀರ್ಮಾನವನ್ನು ತೆಗೆದುಕೊಳ್ಳಬಾರದು ಎಂಬುದನ್ನು ಗ್ರೀಕ್ ತತ್ತ್ವಜ್ಞಾನಿ ಪ್ಲೇಟೋ ಅವರ ನುಡಿಯನ್ನು ಉದಾಹರಿಸಿ ನ್ಯಾಯಪೀಠ ವಿವರಿಸಿತು.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ