Wrestlers Strike: ಕುಸ್ತಿ ಅಸೋಸಿಯೇಷನ್ ಅಧ್ಯಕ್ಷರ ಪ್ರಕರಣ; 1000 ಪುಟ ಚಾರ್ಜ್‌ಶೀಟ್, 500 ಪುಟ ಆರೋಪ ರದ್ದು ವರದಿ !
Jun 15, 2023 02:00 PM IST
ಕುಸ್ತಿ ಫೆಡೇರಷನ್ ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್ ವಿರುದ್ದ ದಿಲ್ಲಿ ಪೊಲೀಸರು ಆರೋಪ ಪಟ್ಟಿ ಸಲ್ಲಿಸಿದ್ದಾರೆ.
- ಐದು ದಿನದ ಹಿಂದೆ ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಕುಸ್ತಿ ಪಟುಗಳೊಂದಿಗೆ ಸಭೆ ನಡೆಸಿ ಜೂನ್ 15 ರೊಳಗೆ ಬ್ರಿಜ್ ಭೂಷಣ್ ಸಿಂಗ್ ವಿರುದ್ದದ ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದು ತಿಳಿಸಿದ್ದರು. ಅದರಂತೆ ಗುರುವಾರ ದಿಲ್ಲಿ ಪೊಲೀಸ್ ತನಿಖಾಧಿಕಾರಿಗಳ ತಂಡ ದಿಲ್ಲಿ ಪಾಟೀಯಾಲ ನ್ಯಾಯಾಲಯಕ್ಕೆ ಪ್ರಕರಣದ ಜಾರ್ಜ್ ಶೀಟ್ ಸಲ್ಲಿಸಿದೆ.
ಹೊಸದಿಲ್ಲಿ: ಎರಡು ತಿಂಗಳಿನಿಂದ ಭಾರತೀಯ ಕುಸ್ತಿ ಫೆಡರೇಷನ್ ಅಧ್ಯಕ್ಷ ಹಾಗೂ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಸಿಂಗ್ ವಿರುದ್ದ ನಡೆಯುತ್ತಿದ್ದ ಲೈಂಗಿಕ ದೌರ್ಜನ್ಯ ಆರೋಪಗಳ ಹೋರಾಟದ ಚಾರ್ಜ್‌ಶೀಟ್ ಸಲ್ಲಿಕೆಯಾಗಿದೆ. ದಿಲ್ಲಿ ಪೊಲೀಸರು ಸಿಂಗ್ ವಿರುದ್ದ ಸಲ್ಲಿಸಿರುವುದರಲ್ಲಿ ಕುಸ್ತಿ ಪಟುಗಳು ಆರೋಪಿಸಿದ್ದ 1000 ಪುಟಗಳ ವಿವರವಿದ್ದರೆ, 500 ಪುಟ ಪುಟಗಳು ಪೋಕ್ಸೋ ಅಡಿ ಬಾಲಕಿ ದಾಖಲಿಸಿದ್ದ ಪ್ರಕರಣದ ಆರೋಪ ರದ್ದಿಗೆ ಪೂರಕವಾದ ಅಂಶಗಳು !
ಐದು ದಿನದ ಹಿಂದೆ ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಕುಸ್ತಿ ಪಟುಗಳೊಂದಿಗೆ ಸಭೆ ನಡೆಸಿ ಜೂನ್ 15 ರೊಳಗೆ ಬ್ರಿಜ್ ಭೂಷಣ್ ಸಿಂಗ್ ವಿರುದ್ದದ ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದು ತಿಳಿಸಿದ್ದರು. ಅದರಂತೆ ಗುರುವಾರ ದಿಲ್ಲಿ ಪೊಲೀಸ್ ತನಿಖಾಧಿಕಾರಿಗಳ ತಂಡ ದಿಲ್ಲಿ ಪಾಟೀಯಾಲ ನ್ಯಾಯಾಲಯಕ್ಕೆ ಪ್ರಕರಣದ ಜಾರ್ಜ್ ಶೀಟ್ ಸಲ್ಲಿಸಿದೆ.
ಕೆಲ ದಿನಗಳ ಹಿಂದೆ ಬಾಲಕಿಯ ತಂದೆ ಯು ಟರ್ನ್ ಹೊಡೆದು ಸಿಂಗ್ ಮೇಲೆ ದೂರು ನೀಡಿದ್ದು ನಿಜ. ಅದನ್ನು ಮುಂದುವರೆಸುವುದು ಬೇಡ ಎನ್ನುವ ಹೇಳಿಕೆ ನೀಡಿದ್ದರು. ಈ ಹೇಳಿಕೆ ಬಳಿಕ ದಿಲ್ಲಿ ಪೊಲೀಸರು ಆರೋಪ ರದ್ದಿಗೆ ಕೋರಿರುವುದು ಪ್ರಮುಖ ಬೆಳವಣಿಗೆಯಾಗಿದೆ.
ಸಿಂಗ್ ವಿರುದ್ದ ಪೋಕ್ಸೋ ಅಡಿ ದಾಖಲಾಗಿದ್ದ ಪ್ರಕರಣದ ವಿಚಾರಣೆ ನಡೆಸಿ ಸಿಆರ್‌ಪಿಸಿ 173 ಕಲಂ ಅಡಿ ವರದಿ ಸಲ್ಲಿಸಿದ್ದು, ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದರ ಬಗ್ಗೆ ಸೂಕ್ತ ದಾಖಲೆ ಇಲ್ಲದೇ ಇರುವುದರಿಂಧ ಆರೋಪ ರದ್ದುಗೊಳಿಸಬೇಕು. ಸಂತ್ರಸ್ತೆ ಹಾಗೂ ಆಕೆ ತಂದೆ ನೀಡಿದ ಹೇಳಿಕೆಗಳನ್ನು ಆಧರಿಸಿ ಈ ವರದಿ ಸಲ್ಲಿಸಲಾಗಿದೆ ಎಂದು ದಿಲ್ಲಿ ಪೊಲೀಸರು ತಿಳಿಸಿದ್ದಾರೆ.
ಇದಲ್ಲದೇ ಕುಸ್ತಿಪಟುಗಳು ನೀಡಿದ್ದ ದೂರುಗಳನ್ನು ಆಧರಿಸಿ ಸಿಂಗ್ ಹಾಗೂ ವಿನೋದ್ ತೋಮರ್ ವಿರುದ್ದ ವಿವಿಧ ಕಲಂಗಳಡಿ ದಾಖಲಾಗಿದ್ದ ಪ್ರಕರಣಗಳ ಕುರಿತಾಗಿ ತನಿಖೆ ನಡೆಸಿ ಹೇಳಿಕೆಗಳೊಂದಿಗೆ ಜಾರ್ಜ್‌ಶೀಟ್ ಸಲ್ಲಿಸಿದ್ದೇವೆ ಎಂದು ಪೊಲೀಸರು ವಿವರಿಸಿದ್ದಾರೆ.
ಈ ಕುರಿತಾದ ಪ್ರಕರಣದ ವಿಚಾರಣೆ ಜುಲೈ 4ರಂದು ದಿಲ್ಲಿ ಕೋರ್ಟ್‌ನಲ್ಲಿ ನಿಗದಿಯಾಗಿದೆ ಎಂದು ಸರ್ಕಾರದ ಪರವಾದ ವಕೀಲರು ತಿಳಿಸಿದ್ದಾರೆ.
ಕುಸ್ತಿ ಫೆಡರೇಷನ್ ಅಧ್ಯಕ್ಷರನ್ನು ಬದಲಾಯಿಸಬೇಕು. ಬಂಧಿಸಬೇಕು ಹಾಗೂ ಮಹಿಳೆಯೊಬ್ಬರು ಫೆಡೇರಷನ್ ಅಧ್ಯಕ್ಷರಾಗಬೇಕು ಎನ್ನುವ ಬೇಡಿಕೆಯೊಂದಿಗೆ ಪ್ರಮುಖ ಕುಸ್ತಿಪಟುಗಳಾದ ಸಾಕ್ಷಿ ಮಲ್ಲಿಕ್, ಭಜರಂಗ್ ಪೂನಿಯಾ, ವಿನೇಶ್ ಪೋಗಟ್ ಸಹಿತ ಹಲವರ ನೇತೃತ್ವದಲ್ಲಿ ಪ್ರತಿಭಟನೆ ನಡೆದಿತ್ತು. ರೈತ ಪರ ಸಂಘಟನೆಗಳು ಹೋರಾಟಕ್ಕೆ ಬೆಂಬಲ ಸೂಚಿಸಿದ್ದರು. ಕೇಂದ್ರ ಗೃಹ ಸಚಿವ ಅಮಿತ್ ಶಾ ಸೂಚನೆ ಮೇರೆಗೆ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಸಭೆ ನಡೆಸಿದ್ದರು. ಕೇಂದ್ರದ ಭರವಸೆ ನಂತರ ಕುಸ್ತಿಪಟುಗಳು ಹೋರಾಟ ಹಿಂದಕ್ಕೆ ಪಡೆದಿದ್ದರು.
ಇದನ್ನೂ ಓದಿರಿ..
ವಿಭಾಗ