logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Donald Trump In New York: ನ್ಯೂಯಾರ್ಕ್‌ನಲ್ಲಿ ವಿಚಾರಣೆಗೆ ಡೊನಾಲ್ಡ್‌ ಟ್ರಂಪ್‌; ಗಮನಾರ್ಹ 10 ಅಂಶಗಳು

Donald Trump in New York: ನ್ಯೂಯಾರ್ಕ್‌ನಲ್ಲಿ ವಿಚಾರಣೆಗೆ ಡೊನಾಲ್ಡ್‌ ಟ್ರಂಪ್‌; ಗಮನಾರ್ಹ 10 ಅಂಶಗಳು

HT Kannada Desk HT Kannada

Apr 04, 2023 04:56 PM IST

google News

ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌

  • Donald Trump in New York: ಡೊನಾಲ್ಡ್ ಟ್ರಂಪ್ ಅವರ ದೋಷಾರೋಪಣೆ ಪ್ರಕ್ರಿಯೆಯು ಅಮೆರಿಕನ್ನರನ್ನಷ್ಟೆ ಅಲ್ಲ ಪ್ರಪಂಚದ ಇತರ ಜನರ ಗಮನವನ್ನು ಸೆಳೆದಿದೆ. ಡೊನಾಲ್ಡ್ ಟ್ರಂಪ್ ವಿದ್ಯಮಾನದ ಇತ್ತೀಚಿನ ಅಪ್ಡೇಟ್ಸ್‌ ಇಲ್ಲಿವೆ.

ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌
ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (AP Photo/Bryan Woolston)

ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಮುಂಚಿತವಾಗಿ, ಡೊನಾಲ್ಡ್ ಟ್ರಂಪ್ ಅವರ ದೋಷಾರೋಪಣೆ ಪ್ರಕ್ರಿಯೆಯು ಅಮೆರಿಕನ್ನರನ್ನಷ್ಟೆ ಅಲ್ಲ ಪ್ರಪಂಚದ ಇತರ ಜನರ ಗಮನವನ್ನು ಸೆಳೆದಿದೆ. ಹುಸಿ ಹಣ ಪಾವತಿಸಿದ ಆರೋಪದ ಮೇಲೆ ಡೊನಾಲ್ಡ್ ಟ್ರಂಪ್ ಅವರ ವಿಚಾರಣೆಯು ಮುಂಬರುವ ಅಧ್ಯಕ್ಷೀಯ ಚುನಾವಣೆಯನ್ನು ಹೇಗೆ ರೂಪಿಸುವುದೆಂಬ ಕುತೂಹಲ ಕೆರಳಿಸಿದೆ. ಈ ನಡುವೆ, ಯುಎಸ್‌ನ ಮಾಜಿ ಅಧ್ಯಕ್ಷರು ಸೋಮವಾರ ಮಾರ್-ಎ-ಲಾಗೊದಿಂದ ಹೊರಟು ನ್ಯೂಯಾರ್ಕ್ ತಲುಪಿದರು. ರಾತ್ರಿ ಮ್ಯಾನ್‌ಹ್ಯಾಟನ್‌ನ 5ನೇ ಅಡ್ಡರಸ್ತೆಯಲ್ಲಿರುವ ಟ್ರಂಪ್ ಟವರ್‌ನಲ್ಲಿ ತಂಗಿ, ಅಲ್ಲಿನ ಸ್ಥಳೀಯ ಕಾಲಮಾನ ಪ್ರಕಾರ ಮಂಗಳವಾರ ನ್ಯಾಯಾಲಯದ ಮುಂದೆ ಹಾಜರಾದರು. ಡೊನಾಲ್ಡ್ ಟ್ರಂಪ್ ವಿದ್ಯಮಾನದ ಇತ್ತೀಚಿನ ಅಪ್ಡೇಟ್ಸ್‌ ಇಲ್ಲಿವೆ:

ಡೊನಾಲ್ಡ್‌ ಟ್ರಂಪ್‌ ಕೇಸ್‌ನ ಲೇಟೆಸ್ಟ್‌ ಅಪ್ಡೇಟ್ಸ್‌

  • ಡೊನಾಲ್ಡ್‌ ಟ್ರಂಪ್‌ ಸೋಮವಾರ ಮಧ್ಯರಾತ್ರಿ 12:30 ಕ್ಕೆ ಲಾ ಗಾರ್ಡಿಯಾ ವಿಮಾನ ನಿಲ್ದಾಣದಲ್ಲಿ ತಮ್ಮ ಬೋಯಿಂಗ್ 757 ವಿಮಾನ ಏರಿ ನ್ಯೂಯಾರ್ಕ್ ನಗರಕ್ಕೆ ಆಗಮಿಸಿದರು. ಅವರು ಮ್ಯಾನ್‌ಹ್ಯಾಟನ್‌ನ 5 ನೇ ಅವೆನ್ಯೂನಲ್ಲಿರುವ ಟ್ರಂಪ್ ಟವರ್‌ನಲ್ಲಿ ತಂಗಿದರು. ಟ್ರಂಪ್ ನಿವಾಸದ ಸಮೀಪವಿರುವ ಇಡೀ ಪ್ರದೇಶ ಬಿಗಿ ಬಂದೋಬಸ್ತ್‌ನಲ್ಲಿದೆ.
  • ಅವರು ಸ್ಥಳೀಯಕಾಲ ಮಾನ ಮಂಗಳವಾರ ಅಪರಾಹ್ನ 2.15 EST (11.45 pm IST) ಕ್ಕೆ ನ್ಯಾಯಾಧೀಶ ಜುವಾನ್ ಮರ್ಚನ್ ಅವರ ಮುಂದೆ ಹಾಜರಾಗುತ್ತಾರೆ. ಪ್ರಕರಣದ ವಿಚಾರಣೆಯ ವೇಳೆ ಡೊನಾಲ್ಡ್ ಟ್ರಂಪ್ ಅವರು ತಪ್ಪು ಒಪ್ಪಿಕೊಳ್ಳುವ ನಿರೀಕ್ಷೆಯಿದೆ. ನ್ಯಾಯಾಲಯಕ್ಕೆ ಹಾಜರಾದ ನಂತರ ಶೀಘ್ರದಲ್ಲೇ ಅವರು ಫ್ಲೋರಿಡಾಕ್ಕೆ ಹಿಂತಿರುಗುತ್ತಾರೆ. ಸಂಜೆ ಪಾಮ್ ಬೀಚ್‌ನಲ್ಲಿರುವ ಮಾರ್-ಎ-ಲಾಗೊಕ್ಕೆ ತಲುಪಲಿದ್ದಾರೆ.
  • ನ್ಯಾಯಾಲಯದ ಪ್ರಕ್ರಿಯೆಯು ಗರಿಷ್ಠ 15 ನಿಮಿಷ ಎಂದು ನಿರೀಕ್ಷಿಸಲಾಗಿದೆ. ಇದರಲ್ಲಿ ದೋಷಾರೋಪಣೆ ಪ್ರಕರಣದಲ್ಲಿನ ಎಲ್ಲ ಆರೋಪಗಳನ್ನು ಡೊನಾಲ್ಡ್ ಟ್ರಂಪ್‌ ಅವರಿಗೆ ಅರ್ಥವಾಗುವಂತೆ ಓದಲಾಗುತ್ತದೆ. ಲಭ್ಯ ಮಾಹಿತಿ ಪ್ರಕಾರ, 2016 ರ ಅಧ್ಯಕ್ಷೀಯ ಚುನಾವಣೆಗೆ ಮುಂಚಿತವಾಗಿ, ಸ್ಟಾರ್ಮಿ ಡೇನಿಯಲ್ಸ್‌ಗೆ ಮಾಡಿದ ಪಾವತಿಗೆ ಸಂಬಂಧಿಸಿದ ಎಲ್ಲ ಆರೋಪಗಳನ್ನು ಟ್ರಂಪ್ ನಿರಾಕರಿಸಿದ್ದಾರೆ.
  • ಅಧ್ಯಕ್ಷ ಜೋ ಬಿಡೆನ್ ಅವರು ಕಾನೂನು ಹೋರಾಟದ ಬಗ್ಗೆ ಯಾವುದೇ ಕಾಮೆಂಟ್ ಮಾಡಿಲ್ಲ. ಆದರೆ, ನ್ಯೂಯಾರ್ಕ್ ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಬಗ್ಗೆ ತಮ್ಮ ವಿಶ್ವಾಸವನ್ನು ವ್ಯಕ್ತಪಡಿಸಿದರು. "ನನಗೆ ನ್ಯೂಯಾರ್ಕ್ ಪೊಲೀಸ್ ಇಲಾಖೆಯಲ್ಲಿ ನಂಬಿಕೆ ಇದೆ" ಎಂದು ಬಿಡೆನ್‌ ಅವರು ಹೇಳಿದರು.
  • ಮುಂದಿನ ವರ್ಷ ಅಂದರೆ 2024 ರಲ್ಲಿ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲ್ಲುವ ಡೊನಾಲ್ಡ್ ಟ್ರಂಪ್ ಅವರ ಕನಸಿಗೆ ದೋಷಾರೋಪಣೆಯು ಅಡ್ಡಿ ಆಗಿದೆ. ಅವರು ಪ್ರಸ್ತುತ 2024 ರ ರಿಪಬ್ಲಿಕನ್ ಶ್ವೇತಭವನದ ನಾಮನಿರ್ದೇಶನಕ್ಕಾಗಿ ಎಲ್ಲ ಘೋಷಿತ ಮತ್ತು ಸಂಭಾವ್ಯ ಸ್ಪರ್ಧಿಗಳ ಪೈಕಿ ಮುಂಚೂಣಿಯಲ್ಲಿದ್ದಾರೆ.
  • ಪ್ರಕರಣದಲ್ಲಿ ತಪ್ಪಿತಸ್ಥರೆಂದು ಸಾಬೀತಾದರೆ ಮತ್ತು ಜೈಲು ಶಿಕ್ಷೆ ಅನುಭವಿಸಿದರೆ, ಅವರು ಚುನಾವಣಾ ಪ್ರಚಾರದಲ್ಲಿ ಭಾಗವಹಿಸಬಹುದು. ಅಪರಾಧದ ತಪ್ಪಿತಸ್ಥನಾಗಿರುವ ಅಭ್ಯರ್ಥಿ ಜೈಲಿನಿಂದ ಅಧ್ಯಕ್ಷ ಸ್ಥಾನಕ್ಕೆ ಪ್ರಚಾರ ಮಾಡುವುದನ್ನು ಮತ್ತು ಸೇವೆ ಸಲ್ಲಿಸುವುದನ್ನು ತಡೆಯುವ ಅಮೆರಿಕ ಕಾನೂನಿನಲ್ಲಿ ಯಾವುದೂ ಇಲ್ಲ.
  • ಮತ್ತೊಂದೆಡೆ, ಡೊನಾಲ್ಡ್ ಟ್ರಂಪ್ ವಿರುದ್ಧದ ದೋಷಾರೋಪಣೆಯನ್ನು ಅವರ ಬೆಂಬಲಿಗರು ಮತ್ತು ಪಕ್ಷವು 2024ರ ಮರು-ಚುನಾವಣೆಯ ಪ್ರಚಾರ ಬಲಪಡಿಸುವ ಅವಕಾಶವಾಗಿ ಬಳಸಿಕೊಂಡಿದ್ದಾರೆ. ದೋಷಾರೋಪಣೆಯು ಡೊನಾಲ್ಡ್ ಟ್ರಂಪ್‌ಗೆ ಪ್ರಯೋಜನವನ್ನು ನೀಡುತ್ತದೆ ಮತ್ತು ಅವರ ಜನಪ್ರಿಯತೆಯನ್ನು ಹೆಚ್ಚಿಸಬಹುದು ಎಂಬುದು ಅನೇಕ ತಜ್ಞರು ಅಭಿಮತ.
  • ನಮ್ಮ ರಾಷ್ಟ್ರದ ಇತಿಹಾಸದಲ್ಲಿ ಅತ್ಯಂತ ನಾಚಿಕೆಗೇಡಿನ ಕ್ರಮದ ಪರಿಣಾಮವಾಗಿ ನಾಳೆ ನನ್ನನ್ನು ಬಂಧಿಸಲಾಗುತ್ತದೆ ಎಂದರೆ ನಂಬಲು ಕಷ್ಟ. 'ನಾಳೆ, ನನ್ನನ್ನು ಬಂಧಿಸಲಾಗುವುದು' ಎಂಬ ಶೀರ್ಷಿಕೆಯ ಟ್ರಂಪ್ ಅಭಿಯಾನದ ಇಮೇಲ್‌ನಲ್ಲಿ, ನಮ್ಮ ಗಣರಾಜ್ಯದ ಭವಿಷ್ಯ ಕಷ್ಟದಲ್ಲಿದೆ. ಇದನ್ನು ರಕ್ಷಿಸಲು ಮತದಾರರು ಅಭಿಯಾನಕ್ಕೆ ಕೊಡುಗೆ ನೀಡಬೇಕು ಎಂದು ಹೇಳಿದ್ದಾರೆ.
  • ನವೆಂಬರ್ 5ರಂದು ಕಳುಹಿಸಲಾದ ಮತ್ತೊಂದು ಟ್ರಂಪ್ ಪ್ರಚಾರ ಇಮೇಲ್‌ನಲ್ಲಿ 2024ರ ಚುನಾವಣಾ ದಿನವನ್ನು 'ಅಮೆರಿಕಕ್ಕೆ ಸಮರ್ಥನೆಯ ದಿನ' ಎಂದು ಹೇಳಲಾಗಿದೆ. "ಇದು ನಮ್ಮ ಸಮರ್ಥನೆಯ ದಿನವಾಗಿರುತ್ತದೆ. ನಾವು ಗೆದ್ದಾಗ, ಅದು ನಮ್ಮ ಚಳುವಳಿಗೆ ಸಮರ್ಥನೆಯಾಗಿದೆ - ಆದರೆ ಅಮೆರಿಕಕ್ಕೆ ಸಮರ್ಥನೆಯಾಗಿದೆ" ಎಂದು ಮೇಲ್ ವಿವರಿಸಿದೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ