logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Cbse Exams: 2024-25ನೇ ಸಾಲಿನಿಂದ ಸಿಬಿಎಸ್‌ಇ ದ್ವೈವಾರ್ಷಿಕ ಬೋರ್ಡ್ ಪರೀಕ್ಷೆಗಳ ಜಾರಿ; ಹೆಚ್ಚಿನ ಮಾಹಿತಿ ಇಲ್ಲಿದೆ

CBSE Exams: 2024-25ನೇ ಸಾಲಿನಿಂದ ಸಿಬಿಎಸ್‌ಇ ದ್ವೈವಾರ್ಷಿಕ ಬೋರ್ಡ್ ಪರೀಕ್ಷೆಗಳ ಜಾರಿ; ಹೆಚ್ಚಿನ ಮಾಹಿತಿ ಇಲ್ಲಿದೆ

Raghavendra M Y HT Kannada

Jan 24, 2024 12:50 PM IST

google News

ಸಿಬಿಎಸ್‌ಇ 2024-25ನೇ ಸಾಲಿನಿಂದ ದ್ದೈವಾರ್ಷಿಕ ಬೋರ್ಡ್ ಪರೀಕ್ಷೆ ಪದ್ಧತಿಯನ್ನು ಜಾರಿಗೆ ತರಲಿದೆ

  • ವಿದ್ಯಾರ್ಥಿಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡಲು 2024-25ನೇ ಶೈಕ್ಷಣಿಕ ವರ್ಷದಿಂದ ಸಿಬಿಎಸ್‌ಇ ವಾರ್ಷಿಕ 2 ಬೋರ್ಡ್ ಪರೀಕ್ಷೆಗಳನ್ನು ನಡೆಸಲು ಮುಂದಾಗಿದೆ.

ಸಿಬಿಎಸ್‌ಇ 2024-25ನೇ ಸಾಲಿನಿಂದ ದ್ದೈವಾರ್ಷಿಕ ಬೋರ್ಡ್ ಪರೀಕ್ಷೆ ಪದ್ಧತಿಯನ್ನು ಜಾರಿಗೆ ತರಲಿದೆ
ಸಿಬಿಎಸ್‌ಇ 2024-25ನೇ ಸಾಲಿನಿಂದ ದ್ದೈವಾರ್ಷಿಕ ಬೋರ್ಡ್ ಪರೀಕ್ಷೆ ಪದ್ಧತಿಯನ್ನು ಜಾರಿಗೆ ತರಲಿದೆ

ಬೆಂಗಳೂರು: ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇನ್ (ಸಿಬಿಎಸ್‌ಇ) 2024-25ನೇ ಶೈಕ್ಷಣಿಕ ವರ್ಷದಿಂದಲೇ ಎರಡು ಬಾರಿ ಬೋರ್ಡ್ ಪರೀಕ್ಷೆ ಪದ್ದತಿಯನ್ನು ಜಾರಿಗೆ ತಂದಿದೆ. ಸಿಬಿಎಸ್‌ಇ 10 ಮತ್ತು 12ನೇ ತರಗತಿಯ ವಿದ್ಯಾರ್ಥಿಗಳು ವರ್ಷದಲ್ಲಿ ಎರಡು ಬಾರಿ ಪರೀಕ್ಷೆಗಳನ್ನು ಬರೆಯಬೇಕಾಗುತ್ತದೆ. ಆದರೆ ಈ ವ್ಯವಸ್ಥೆ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿರುವುದಿಲ್ಲ.

ಒಂದೇ ಅವಕಾಶದಲ್ಲಿ ಪರೀಕ್ಷೆ ಬರೆದು ಉತ್ತೀರಾರ್ಣಗುವ ಬಗ್ಗೆ ಭಯ, ಆತಂಕದಲ್ಲಿರುವ ವಿದ್ಯಾರ್ಥಿಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡುವ ಸಲುವಾಗಿ ಈ ವ್ಯವಸ್ಥೆಯನ್ನು ಜಾರಿಗೆ ತಂದಿರುವ ಉದ್ದೇಶವಾಗಿದೆ. ಅಭ್ಯರ್ಥಿಯು ಮೊದಲ ಅವಧಿಯ ಪರೀಕ್ಷೆಯಲ್ಲಿ ಬಂದ ಅಂಕಗಳಿಗೆ ತೃಪ್ತರಾಗಿದ್ದರೆ ಅವರು 2ನೇ ಪರೀಕ್ಷೆಗೆ ಹಾಜರಾಗುವ ಅವಶ್ಯಕತೆ ಇರುವುದಿಲ್ಲ. ಎರಡು ಪರೀಕ್ಷೆಗಳನ್ನು ಬರೆಯಬೇಕಾ, ಇಲ್ಲವೇ ಒಂದೇ ಸಾಕೇ ಎಂಬುದರ ನಿರ್ಧಾರವನ್ನು ವಿದ್ಯಾರ್ಥಿಗಳಿಗೆ ಬಿಡಲಾಗಿದೆ.

ಸಿಬಿಎಸ್‌ಇಯಿಂದ ಎರಡು ಬಾರಿ ವಾರ್ಷಿಕ ಬೋರ್ಡ್ ಪರೀಕ್ಷೆಯನ್ನು 2024-25ರ ಶೈಕ್ಷಣಿಕ ವರ್ಷದಿಂದಲೇ ಜಾರಿಗೆ ತರಲಾಗುವುದು ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ತಿಳಿಸಿರುವುದಾಗಿ ವರದಿಯಾಗಿದೆ. 10 ಮತ್ತು 12ನೇ ತರಗತಿಗಳಿಗೆ ಇದನ್ನು ಅವಳವಡಿಸಿಕೊಳ್ಳಲಾಗುತ್ತದೆ. ಈಗಾಗಲೇ ಈ ಮಾದರಿಯ ಪರೀಕ್ಷೆಗಳು 9 ಮತ್ತು 11ನೇ ತರಗತಿಗಳಿಗೆ ಪರಿಣಾಕಾರಿಯಾಗಿವೆ ಎಂದು ಟೈಮ್ಸ್ ಆಫ್ ಇಂಡಿಯಾಗೆ ಹೇಳಿದ್ದಾರೆ ಎಂದು ವರದಿಯಾಗಿದೆ.

ವಿದ್ಯಾರ್ಥಿಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡುವ ಉದ್ದೇಶದಿಂದ ಈ ಪದ್ಧತಿಯನ್ನು ಜಾರಿಗೆ ತರಲಾಗುತ್ತಿದೆ. ಒಂದು ಪರೀಕ್ಷೆಯಲ್ಲಿ ಉತ್ತಮ ಸ್ಕೋರ್ ಬಂದು ಅದಕ್ಕೆ ತೃಪ್ತರಾಗಿದ್ದರಾಗಿದ್ದರೆ ಎರಡನೇ ಪರೀಕ್ಷೆಗೆ ಹಾಜರಾಗದಿರುವ ಆಯ್ಕೆಯನ್ನು ಮಾಡಿಕೊಳ್ಳಬಹುದು. ವಾರ್ಷಿಕವಾಗಿ ಎರಡು ಪರೀಕ್ಷೆಗಳು ಕಡ್ಡಾಯವಾಗಿರುವುದಿಲ್ಲ. ಇದನ್ನು ಮೆರಿಟ್ ಪಟ್ಟಿಯನ್ನು ನಿರ್ಧರಿಸಲು ಬಳಸಲಾಗುತ್ತದೆ. 2025ರ ಬೋರ್ಡ್ ಪರೀಕ್ಷೆಗಳು 2024ರ ನವೆಂಬರ್-ಡಿಸೆಂಬರ್ ನಡೆಯುವ ಸಾಧ್ಯತೆ ಇದೆ. ಎರಡನೇ ಪರೀಕ್ಷೆ 2025ರ ಫೆಬ್ರವರಿ-ಮಾರ್ಚ್‌ನಲ್ಲಿ ನಿಗದಿಪಡಿಸಲಾಗಿದೆ. ವರ್ಷಕ್ಕೆ ಎರಡು ಬಾರಿಯ ಬೋರ್ಡ್ ಪರೀಕ್ಷೆಗಳು ವಿದ್ಯಾರ್ಥಿಗಳ ಒತ್ತಡವನ್ನು ಎಷ್ಟರ ಮಟ್ಟಿಗೆ ಕಡಿಮೆ ಮಾಡುತ್ತದೆ ಎಂಬುದನ್ನು ಕಾದು ನೋಡಬೇಕು.

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ