logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Maharashtra Politics: ಚುನಾವಣಾ ಆಯೋಗದ ಆಯುಕ್ತರ ನೇಮಕಕ್ಕೂ ಚುನಾವಣೆ ನಡೆಯಬೇಕು; ಉದ್ಧವ್ ಠಾಕ್ರೆ ಹೊಸ ಬೇಡಿಕೆ

Maharashtra Politics: ಚುನಾವಣಾ ಆಯೋಗದ ಆಯುಕ್ತರ ನೇಮಕಕ್ಕೂ ಚುನಾವಣೆ ನಡೆಯಬೇಕು; ಉದ್ಧವ್ ಠಾಕ್ರೆ ಹೊಸ ಬೇಡಿಕೆ

HT Kannada Desk HT Kannada

Feb 20, 2023 07:42 PM IST

google News

ಮುಂಬೈನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಂಜಯ್ ರಾವತ್ (HT photo/Anshuman Poyrekar)

  • Maharashtra Politics: ಮಹಾರಾಷ್ಟ್ರದ ಮಾಜಿ ಸಿಎಂ ಉದ್ಧವ್ ಠಾಕ್ರೆ ಚುನಾವಣಾ ಆಯೋಗವನ್ನ ತಕ್ಷಣವೇ ವಿಸರ್ಜನೆ ಮಾಡಬೇಕೆಂದು ಒತ್ತಾಯಿಸಿದ್ದಾರೆ. ಚುನಾವಣಾ ಆಯೋಗದ ಆಯುಕ್ತರನ್ನು ಜನರಿಂದ ಆಯ್ಕೆ ಮಾಡುವಂತ ಹೊಸ ವ್ಯವಸ್ಥೆ ತರಬೇಕು ಎಂದು ಆಗ್ರಹಿಸಿದ್ದಾರೆ. 

ಮುಂಬೈನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಂಜಯ್ ರಾವತ್  (HT photo/Anshuman Poyrekar)
ಮುಂಬೈನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಂಜಯ್ ರಾವತ್ (HT photo/Anshuman Poyrekar)

ಮುಂಬೈ: ಮಹಾರಾಷ್ಟ್ರ ರಾಜಕೀಯ ಬೆಳವಣಿಗೆಗಳು ರಸಭರಿತವಾಗಿ ಸಾಗುತ್ತಿವೆ. ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ತಮ್ಮ ಶಿವಸೇನೆ ಪಕ್ಷದ ಹೆಸರು ಮತ್ತು ಚುನಾವಣಾ ಚಿಹ್ನೆಯಾದ ಬಿಲ್ಲು-ಬಾಣವನ್ನು ಕಳೆದುಕೊಂಡ ನಂತರ ಬಿಜೆಪಿ ಹಾಗೂ ಶಿಂಧೆ ಬಣದ ವಿರುದ್ಧ ವಾಗ್ದಾಳಿಯನ್ನು ಮುಂದುವರಿಸಿದ್ದಾರೆ.

ಕಳೆದೆರುಡು ದಿನಗಳಿಂದ ತೀವ್ರ ವಾಕ್ಸಮರ ನಡೆಸುತ್ತಿರುವ ಠಾಕ್ರೆ, ಇಂದು (ಫೆಬ್ರವರಿ 20) ಕೂಡ ಇದೇ ವಿಷಯದ ಬಗ್ಗೆ ಮಾತನಾಡಿದ್ದಾರೆ. ಕೇಂದ್ರ ಚುನಾವಣಾ ಆಯೋಗವನ್ನು (ಸಿಇಸಿ) ರದ್ದುಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ. ಚುನಾವಣಾ ಆಯುಕ್ತರನ್ನು ಜನರೇ ಚುನಾವಣೆ ಮೂಲಕ ಆಯ್ಕೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಉದ್ಧವ್ ಅವರ ತಂದೆ ಬಾಳ್ ಠಾಕ್ರೆ ಸ್ಥಾಪಿಸಿದ ಶಿವಸೇನೆ ಪಕ್ಷದ ಹೆಸರು ಮತ್ತು ಚಿಹ್ನೆಯಾದ ಬಿಲ್ಲು-ಬಾಣವನ್ನು ಚುನಾವಣಾ ಆಯೋಗವು ಮುಖ್ಯಮಂತ್ರಿಯಾದ ಏಕನಾಥ್ ಶಿಂಧೆ ಅವರ ಬಣಕ್ಕೆ ಹಂಚಿಕೆ ಮಾಡಿ ಆದೇಶ ನೀಡಿತ್ತು.

ಇಂದು ಉದ್ಧವ್ ಠಾಕ್ರೆ ಬಣ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ಈ ಸಂದರ್ಭದಲ್ಲಿ ಉದ್ಧವ್ ಪ್ರಮುಖ ಮಾತುಗಳನ್ನಾಡಿದರು.

ಒಂದು ಗುಂಪಿಗೆ ನೇರವಾಗಿ ಪಕ್ಷದ ಹೆಸರು ಮತ್ತು ಚಿಹ್ನೆ ನೀಡುವುದು ಹಿಂದೆಂದೂ ನಡೆದಿರಲಿಲ್ಲ ಎಂದು ಉದ್ಧವ್ ಹೇಳಿದ್ದಾರೆ. ನಾನು ಏನನ್ನಾದರೂ ಕೇಳಲು ಬಯಸುತ್ತಿದ್ದೇನೆ. ನೀವೆಲ್ಲ ಯಾಕೆ ಇಲ್ಲಿದ್ದೀರಿ? ಅವರು ನಮ್ಮಿಂದ ಎಲ್ಲವನ್ನೂ ಕದ್ದಿದ್ದಾರೆ. ಆದರೆ ನೀವು ಯಾಕೆ ಇಲ್ಲಿದ್ದೀರಿ?ಇನ್ನೊಂದು ಬಣ ನಮ್ಮ ಪಕ್ಷದ ಹೆಸರು, ಚಿನ್ಹೆ ಕದ್ದರೂ ಠಾಕ್ರೆ ಹೆಸರು ತಗೊಳ್ಳೋಕೆ ಆಗುವುದಿಲ್ಲ ಎಂದಿದ್ದಾರೆ. ಬಾಳಾಸಾಹೇಬ್ ಠಾಕ್ರೆಯವರ ಕುಟುಂಬದಲ್ಲಿ ಹುಟ್ಟಿದ್ದು ನನ್ನ ಅದೃಷ್ಟ. ದೆಹಲಿಯ ಸಹಾಯದಿಂದ ಅವರು ಇದನ್ನು ಪಡೆಯುವುದಿಲ್ಲ ಸಾಧ್ಯವಿಲ್ಲ ಎಂದು ಠಾಕ್ರೆ ಹೇಳಿದ್ದಾರೆ.

ಶಿವಸೇನಾ ಪಕ್ಷದ ಹೆಸರು ಮತ್ತು ಚಿಹ್ನೆಯನ್ನು ಏಕನಾಥ್ ಶಿಂಧೆ ಬಣಕ್ಕೆ ಕೊಡಲು ಯಾವಾಗಲೂ ಸಂಚು ನಡೆಯುತ್ತಿದೆ ಎಂದು ಉದ್ಧವ್ ಠಾಕ್ರೆ ಆರೋಪಿಸಿದ್ದು, ಕೇಂದ್ರದಲ್ಲಿರುವ ಆಡಳಿತಾರೂಢ ಬಿಜೆಪಿ ಪ್ರಜಾಪ್ರಭುತ್ವ ಸಂಸ್ಥೆಗಳ ನೆರವಿನಿಂದ ದೇಶದಲ್ಲಿ ಪ್ರಜಾಪ್ರಭುತ್ವವನ್ನು ಕೊಂದು ಹಾಕುತ್ತಿದೆ ಎಂದು ಕಿಡಿಕಾರಿದ್ದಾರೆ.

ಇಂದು ಬಿಜೆಪಿ ನಮಗೆ ಏನು ಮಾಡಿದೆ? ಯಾರಿಗಾದರೂ ಹೀಗೆ ಮಾಡಬಹುದು. ಇದು ಹೀಗೆಯೇ ಮುಂದುವರಿದರೆ 2024ರ ನಂತರ ದೇಶದಲ್ಲಿ ಪ್ರಜಾಪ್ರಭುತ್ವ ಮತ್ತು ಚುನಾವಣೆ ಇರುವುದಿಲ್ಲ ಎಂದು ಠಾಕ್ರೆ ಪ್ರಧಾನಿ ಮೋದಿ ಸರ್ಕಾರ ಹಾಗೂ ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಬಣವನ್ನು ಟೀಕಿಸಿದ್ದಾರೆ.

ಈ ಮಧ್ಯೆ ಮಹಾರಾಷ್ಟ್ರದ ಮಾಜಿ ಸಿಎಂ ಉದ್ಧವ್ ಠಾಕ್ರೆ ಭಾನುವಾರ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಟೀಕಿಸಿದ್ದಾರೆ. ಅಮಿತ್ ಶಾ ಅವರನ್ನು ಉದ್ದೇಶಿಸಿ ಮಾತನಾಡಿದ ಅವರು, ಪಕ್ಷದ ಹೆಸರು ಮತ್ತು ಚಿಹ್ನೆಯನ್ನು ಕಿತ್ತುಕೊಂಡಿದ್ದಕ್ಕೆ ಮುಗಾಂಬೊಗೆ ಸಂತೋಷವಾಗಿದೆ ಎಂದಿದ್ದಾರೆ.

1993ರ ಮುಂಬೈ ಸರಣಿ ಸ್ಫೋಟದ ವೇಳೆ ಮೋದಿ ಅವರು ಭಯಗೊಂಡಿದ್ದರು ಎಂದು ಪ್ರತಿಕ್ರಿಯಿಸಿದ್ದಾರೆ. ತಾನು ಹಿಂದಿಗೂ, ಎಂದಿಗೂ ಹಿಂದುತ್ವವಾದಿ ಎಂದು ಉದ್ಧವ್ ಠಾಕ್ರೆ ಸ್ಪಷ್ಟಪಡಿಸಿದ್ದಾರೆ.

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ