SSC JHT Jobs: ಸಿಬ್ಬಂದಿ ನೇಮಕಾತಿ ಆಯೋಗದಿಂದ ಜೆಎಚ್‌ಟಿ ನೇಮಕಕ್ಕೆ ಅಧಿಸೂಚನೆ ಪ್ರಕಟ, 307 ಹುದ್ದೆ, ಅರ್ಜಿಸಲ್ಲಿಸಲು ಸೆ 12 ಕೊನೆದಿನ
Dec 22, 2023 06:19 PM IST
SSC JHT Exam 2023 notification released, application begins today at ssc.nic.in
- SSC JHT 2023 Notification: ಹಿಂದಿ ಅನುವಾದಕ ಹುದ್ದೆಗಳನ್ನು (ಎಚ್‌ಟಿ) ಭರ್ತಿ ಮಾಡುವ ಸಲುವಾಗಿ ಸಿಬ್ಬಂದಿ ನೇಮಕಾತಿ ಆಯೋಗ (ಎಸ್‌ಎಸ್‌ಸಿ) ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಹುದ್ದೆಗಳ ವಿವರ, ವಿದ್ಯಾರ್ಹತೆ, ವಯೋಮಿತಿ, ಅರ್ಜಿ ಸಲ್ಲಿಸುವ ವಿಧಾನ ಸೇರಿದಂತೆ ಹೆಚ್ಚಿನ ವಿವರ ಇಲ್ಲಿದೆ.
ಬೆಂಗಳೂರು: ಸಿಬ್ಬಂದಿ ನೇಮಕಾತಿ ಆಯೋಗವು ಜೂನಿಯರ್ ಹಿಂದಿ ಟ್ರಾನ್ಸ್‌ಲೇಟರ್ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಕೇಂದ್ರ ಸರಕಾರದ ವಿವಿಧ ಇಲಾಖೆಗಳು, ಸಂಸ್ಥೆಗಳಲ್ಲಿ ಖಾಲಿ ಇರುವ ಹಿಂದಿ ಅನುವಾದಕ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಈ ನೇಮಕಾತಿ ಪರೀಕ್ಷೆ ನಡೆಯಲಿದೆ. ಅಕ್ಟೋಬರ್ 16ರಂದು ನೇಮಕಾತಿ ಪರೀಕ್ಷೆ ನಡೆಯಲಿದೆ. ಲಭ್ಯವಿರುವ ಹುದ್ದೆಗಳು, ಅರ್ಜಿ ಸಲ್ಲಿಸುವ ವಿಧಾನ, ವಿದ್ಯಾರ್ಹತೆ ಸೇರಿದಂತೆ ಹೆಚ್ಚಿನ ವಿವರ ಇಲ್ಲಿ ನೀಡಲಾಗಿದೆ.
ಹುದ್ದೆಗಳ ವಿವರ
- ಕಿರಿಯ ಅನುವಾದಕ ಅಧಿಕಾರಿ -13.
- ಕಿರಿಯ ಹಿಂದಿ ಅನುವಾದಕ - 21.
- ಕಿರಿಯ ಅನುವಾದಕ - 263.
- ಹಿರಿಯ ಅನುವಾದಕ - 01.
- ಹಿರಿಯ ಹಿಂದಿ ಅನುವಾದಕ -09.
ಅರ್ಜಿ ಸಲ್ಲಿಸುವುದು ಹೇಗೆ?
ಆಸಕ್ತ ಅರ್ಹ ಅಭ್ಯರ್ಥಿಗಳು ಮೊದಲಿಗೆ https://ssc.nic.in/ ವೆಬ್‌ಸೈಟ್‌ಗೆ ಭೇಟಿ ನೀಡಿ. ಅಲ್ಲಿ ಸಂಬಂಧಪಟ್ಟ ಅಧಿಸೂಚನೆಯನ್ನು ಎಚ್ಚರಿಕೆಯಿಂದ ಓದಿಕೊಳ್ಳಿ. ನೀಡಲಾದ ಲಿಂಕ್ ಮೂಲಕ ಅರ್ಜಿ ಸಲ್ಲಿಸಿ. ಅರ್ಜಿ ಶುಲ್ಕ ಪಾವತಿಸಿ ಅರ್ಜಿ ಸಲ್ಲಿಕೆ ಪೂರ್ಣಗೊಳಿಸಿ.
ಆಯ್ಕೆ ವಿಧಾನ
ಅರ್ಜಿ ಸಲ್ಲಿಕೆ ಪೂರ್ಣಿಗೊಳಿಸಿದ ಬಳಿಕೆ ಅಭ್ಯರ್ಥಿಯನ್ನು ನಿರ್ದಿಷ್ಟ ದಿನದಂದು ಆಯ್ಕೆ ಪರೀಕ್ಷೆಗೆ ಒಳಪಡಿಸಲಾಗುತ್ತದೆ.
ಕಂಪ್ಯೂಟರ್ ಆಧರಿತ ಪರೀಕ್ಷೆ (ಸಿಬಿಟಿ), ಡಿಸ್ಕ್ರಿಫ್ಟಿವ್ ಮೋಡ್, ದಾಖಲೆ ಪರಿಶೀಲನೆ, ವೈದ್ಯಕೀಯ ತಪಾಸಣೆ ಹಾಗೂ ಸಂದರ್ಶನ ಮೂಲಕ ಅಭ್ಯರ್ಥಿ ಆಯ್ಕೆ ನಡೆಯಲಿದೆ.
ಅರ್ಜಿ ಸಲ್ಲಿಸಲು ವಯೋಮಿತಿ ಎಷ್ಟು?
ಕನಿಷ್ಠ 18 ವರ್ಷ, ಗರಿಷ್ಠ 30 ವರ್ಷ ಇರಬೇಕು. ಒಬಿಸಿಗಳಿಗೆ 3 ವರ್ಷ, ಎಸ್ ಸಿ /ಎಸ್ಟಿಗಳಿಗೆ 5 ವರ್ಷ, ವಿಶೇಷ ಚೇತನರಿಗೆ (ವಿವಿಧ ವರ್ಗವಾರು)10 ರಿಂದ 15ವರ್ಷ ವಿನಾಯಿತಿ ಇರಲಿದೆ.
ವಿದ್ಯಾರ್ಹತೆ ಏನು?
ಅಭ್ಯರ್ಥಿಗಳು ಹಿಂದಿ ಮತ್ತು ಇಂಗ್ಲಿಷ್ ವಿಷಯ ಒಳಗೊಂಡಂತೆ ಸ್ನಾತಕೋತ್ತರ ಪದವಿ, ಡಿಪ್ಲೊಮಾ ಪಡೆದಿರಬೇಕು. ಪ್ರತಿಯೊಂದು ಹುದ್ದೆಗೂ ನಿಗದಿಪಡಿಸಿದ ವಿದ್ಯಾರ್ಹತೆಯನ್ನು ಅಧಿಸೂಚನೆಯಿಂದ ಪಡೆದುಕೊಳ್ಳಿ.
ಅರ್ಜಿ ಶುಲ್ಕ ಎಷ್ಟು?
ಸಾಮಾನ್ಯ ಅಭ್ಯರ್ಥಿಯು 100 ರೂ ಅರ್ಜಿ ಶುಲ್ಕ ಪಾವತಿಸಬೇಕಿದ್ದು, ಎಸ್ ಸಿ /ಎಸ್ಟಿ, ಮಹಿಳಾ. ಅಂಗವಿಕಲ ಮಾಜಿ ಸರಕಾರಿ ಉದ್ಯೋಗಿಗಳಿಗೆ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ.
ವೇತನ ಎಷ್ಟು?
ಕಿರಿಯ ಅನುವಾದಕ ಅಧಿಕಾರಿ ಹಾಗೂ ಹಿಂದಿ ಅನುವಾದಕ ಹುದ್ದೆಗೆ 35,400 ರೂ 1,12,400 ರೂ. ವೇತನ ಇರಲಿದೆ. ಎಲ್ಲ ಉಳಿದ ಅಭ್ಯರ್ಥಿ ಹುದ್ದೆಗಳಿಗೆ 44,900 ರೂ - 1,42,400 ರೂ. ವೇತನ ಶ್ರೇಣಿ ನಿಗದಿಪಡಿಸಲಾಗಿದೆ.
ಅರ್ಜಿ ಸಲ್ಲಿಕೆಗೆ 12 ಸೆಪ್ಟೆಂಬರ್ 2023. ಕೊನೆಯ ದಿನವಾಗಿದೆ.
ಹೆಚ್ಚಿನ ಮಾಹಿತಿ ಪಡೆಯಲು ಮತ್ತು ಅರ್ಜಿ ಸಲ್ಲಿಸಲು ಎಸ್‌ಎಸ್‌ಸಿ ವೆಬ್‌ಸೈಟ್ (ssc.nic.in)ಗೆ ಭೇಟಿ ನೀಡಿ.
- ವರದಿ: ಅಕ್ಷರ ಕಿರಣ್
ಭಾರತೀಯ ತೈಲ ನಿಗಮದಲ್ಲಿ ಉದ್ಯೋಗಾವಕಾಶ
ಇಂಡಿಯನ್ ಆಯಿಲ್ ಕಾರ್ಪೋರೇಷನ್ ಲಿಮಿಟೆಡ್ (ಐಒಸಿಎಲ್) ತರಬೇತಿ ಹುದ್ದೆ ಸಹಿತ ವಿವಿಧ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಹೊರಡಿಸಿದೆ. ಭಾರತೀಯ ತೈಲ ನಿಗಮದಲ್ಲಿ ಅಪ್ರೆಂಟಿಸ್‌ಶಿಪ್ ತರಬೇತಿ ಪಡೆಯಲು ಬಯಸುವವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಕರ್ನಾಟಕದಲ್ಲಿ ಒಟ್ಟು 90 ಹುದ್ದೆಗಳಿವೆ. ಈ ಕುರಿತು ಹೆಚ್ಚಿನ ವಿವರ ಪಡೆಯಲು ಇಲ್ಲಿ ಕ್ಲಿಕ್ ಮಾಡಿ