logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Chatgpt Jobs: ಚಾಟ್‌ಜಿಪಿಟಿ ಕ್ಷೇತ್ರದಲ್ಲಿ ಬಹುಬೇಡಿಕೆಯ ಉದ್ಯೋಗಗಳಿವು, ಈ ಕೌಶಲ ಕಲಿಯಿರಿ ಕೈತುಂಬಾ ವೇತನ ಪಡೆಯಿರಿ

ChatGPT Jobs: ಚಾಟ್‌ಜಿಪಿಟಿ ಕ್ಷೇತ್ರದಲ್ಲಿ ಬಹುಬೇಡಿಕೆಯ ಉದ್ಯೋಗಗಳಿವು, ಈ ಕೌಶಲ ಕಲಿಯಿರಿ ಕೈತುಂಬಾ ವೇತನ ಪಡೆಯಿರಿ

Praveen Chandra B HT Kannada

Jul 09, 2023 12:00 PM IST

google News

ChatGPT Jobs: ಚಾಟ್‌ಜಿಪಿಟಿ ಕ್ಷೇತ್ರದಲ್ಲಿ ಬಹುಬೇಡಿಕೆಯ ಉದ್ಯೋಗಗಳಿವು, ಈ ಕೌಶಲ ಕಲಿಯಿರಿ ಕೈತುಂಬಾ ವೇತನ ಪಡೆಯಿರಿ

    • Top jobs for ChatGPT Experts: ಈಗ ಎಲ್ಲೆಡೆ ಚಾಟ್‌ಜಿಪಿಟಿ ಮತ್ತು ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ ಇತ್ಯಾದಿ ತಂತ್ರಜ್ಞಾನಗಳ ಸುದ್ದಿ ಕೇಳಿಬರುತ್ತಿದೆ. ಚಾಟ್‌ಜಿಪಿಟಿ ಕ್ಷೇತ್ರದಲ್ಲಿ ಕೈತುಂಬಾ ವೇತನ ಪಡೆಯಲು ಬಯಸುವವರಿಗೆ ಲಭ್ಯವಿರುವ ಕೆಲವು ಪ್ರಮುಖ ಅವಕಾಶಗಳ ವಿವರ ಇಲ್ಲಿದೆ.
ChatGPT Jobs: ಚಾಟ್‌ಜಿಪಿಟಿ ಕ್ಷೇತ್ರದಲ್ಲಿ ಬಹುಬೇಡಿಕೆಯ ಉದ್ಯೋಗಗಳಿವು, ಈ ಕೌಶಲ ಕಲಿಯಿರಿ ಕೈತುಂಬಾ ವೇತನ ಪಡೆಯಿರಿ
ChatGPT Jobs: ಚಾಟ್‌ಜಿಪಿಟಿ ಕ್ಷೇತ್ರದಲ್ಲಿ ಬಹುಬೇಡಿಕೆಯ ಉದ್ಯೋಗಗಳಿವು, ಈ ಕೌಶಲ ಕಲಿಯಿರಿ ಕೈತುಂಬಾ ವೇತನ ಪಡೆಯಿರಿ

ಹೊಸ ಬಗೆಯ ಉದ್ಯೋಗ ಮತ್ತು ಭವಿಷ್ಯದ ಕೌಶಲ ಕಲಿತವರಿಗೆ ಇಂದು ಬೇಡಿಕೆ ಹೆಚ್ಚಾಗಿದೆ. ವಿಶೇಷವಾಗಿ ಜಾಗತಿಕವಾಗಿ ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ ಇತ್ಯಾದಿ ನವೀನ ಕೌಶಲಗಳಿಗೆ ಬೇಡಿಕೆಯಿದೆ. ಉದ್ಯೋಗ ಮಾರುಕಟ್ಟೆಯಲ್ಲಿ ಅವಶ್ಯಕತೆ ಇರುವಷ್ಟು ಪರಿಣಿತರ ಪೂರೈಕೆ ಇಲ್ಲ. ಹೀಗಾಗಿ, ಈ ವಿಷಯಗಳಲ್ಲಿ ಪರಿಣತಿ ಇರುವವರು ಉತ್ತಮ ಅವಕಾಶ ಪಡೆದುಕೊಳ್ಳಬಹುದು. ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ ಮತ್ತು ನ್ಯಾಚುರಲ್‌ ಲ್ಯಾಂಗ್ವೇಜ್‌ ಪ್ರೊಸೆಸಿಂಗ್‌ (ಎನ್‌ಎಲ್‌ಪಿ) ತಜ್ಞರು ವಿವಿಧ ಹುದ್ದೆಗಳಿಗೆ ಅಜಿ ಸಲ್ಲಿಸಬಹುದು. ಗೂಗಲ್‌ನಂತಹ ಪ್ರಮುಖ ಕಂಪನಿಗಳು ಪ್ರಾಂಪ್ಟ್‌ ಎಂಜಿನಿಯರ್‌ನಂತಹ ಹುದ್ದೆಗಳಿಗೆ ವರ್ಷಕ್ಕೆ 335,000 ಡಾಲರ್‌ನಷ್ಟು ವೇತನ ನೀಡುತ್ತವೆ.

ತಂತ್ರಜ್ಞಾನ ಕ್ಷೇತ್ರದಲ್ಲಿ ಉದ್ಯೋಗ ಪಡೆಯಲು ಬಯಸುವ ವಿದ್ಯಾರ್ಥಿಗಳು ಅಥವಾ ಉದ್ಯೋಗಾಕಾಂಕ್ಷಿಗಳು ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ಗೆ ಸಂಬಂಧಪಟ್ಟ ಕೌಶಲಗಳನ್ನು ತಮ್ಮ ಸ್ಕಿಲ್‌ ಸೆಟ್‌ಗೆ ಸೇರಿಸುವ ಮೂಲಕ ತಮ್ಮ ರೆಸ್ಯೂಂ ತೂಕ ಹೆಚ್ಚಿಸಿಕೊಳ್ಳಬೇಕು. ಇದರಿಂದ ಭವಿಷ್ಯದಲ್ಲಿ ಉದ್ಯೋಗ ಪಡೆಯುವುದು ನಿಮಗೆ ಸುಲಭವಾಗಲಿದೆ.

ಕೆಲವು ಚಾಟ್‌ಜಿಪಿಟಿ ಎಕ್ಸ್‌ಪರ್ಟ್‌ ಹುದ್ದೆಗಳ ವಿವರ ಇಲ್ಲಿದೆ

ಪ್ರಾಂಪ್ಟ್‌ ಎಂಜಿನಿಯರ್‌ (Prompt engineer)

ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ ಸಿಸ್ಟಮ್‌ಗಳ ಕಾರ್ಯಕ್ಷಮತೆಯನ್ನು ವಿಶ್ಲೇಷಿಸುವುದು ಮತ್ತು ಸುಧಾರಿಸುವುದನ್ನು ಒಳಗೊಂಡಿರುವ ಉದ್ಯೋಗ ಇದಾಗಿದೆ. ಈ ಮೂಲಕ ಎಐ ಹೆಚ್ಚು ನಿಖರತೆ ಮತ್ತು ಆಕರ್ಷಕವಾಗಿಸುವ ಕಾರ್ಯವನ್ನು ಪ್ರಾಂಪ್ಟ್‌ ಎಂಜಿನಿಯರ್‌ ಮಾಡುತ್ತಾರೆ.

ಮಾರ್ಕೆಟಿಂಗ್

ಉದಾಹರಣೆಗೆ ಫ್ಲೋವಾಟರ್‌ ಎಂಬ ಕಂಪನಿಯ ಉದ್ಯೋಗದ ಬೇಡಿಕೆಯನ್ನು ಗಮನಿಸಿ. ಕಂಪನಿಗೆ ಪೂರ್ಣಪ್ರಮಾಣದ ಮಾರ್ಕೆಟಿಂಗ್‌ ಕೋಆರ್ಡಿನೇಟರ್‌ ಬೇಕಂತೆ, ಚಾಟ್‌ಜಿಪಿಟಿ ಬಳಸಿ ಲೀಡ್‌ ಜನರೇಷನ್‌ ಮಾಡುವಂತಹ ಕೌಶಲ ಇರುವವರು ಬೇಕು, ಈ ಮೂಲಕ ಸೋಷಿಯಲ್‌ ಮೀಡಿಯಾ ಮತ್ತು ಇನ್‌ಫ್ಲೂಯೆನ್ಸರ್‌ ಮಾರ್ಕೆಟಿಂಗ್‌ ಚಟುವಟಿಕೆ ಹೆಚ್ಚಿಸುವವರನ್ನು ಕಂಪನಿ ಹುಡುಕುತ್ತಿದೆ.

ರಿಕ್ರೂಟರ್‌

ಇದೀಗ ಚಾಟ್‌ಜಿಪಿಟಿಯು ಎಚ್‌ಆರ್‌ ಕಾರ್ಯಾಚರಣೆಯನ್ನು ಸರಳಗೊಳಿಸಿದೆ. ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಮತ್ತು ಉತ್ತಮ ನೇಮಕಾತಿ ನಿರ್ಧಾರ ತೆಗೆದುಕೊಳ್ಳಲು ಚಾಟ್‌ಜಿಪಿಟಿ ನೆರವಾಗುತ್ತಿದೆ ಎಂದು ಫೋರ್ಬ್ಸ್‌ ವರದಿ ತಿಳಿಸಿದೆ. ಇಂತಹ ಕೌಶಲ ಇರುವವರು ರಿಕ್ರೂಟರ್‌ ವಿಭಾಗದಲ್ಲಿ ಕೆಲಸಕ್ಕೆ ಪ್ರಯತ್ನಿಸಬಹುದು.

ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ ಮತ್ತು ಮೆಷಿನ್‌ ಲರ್ನಿಂಗ್‌ ಎಂಜಿನಿಯರ್‌

ಎಐ ಮತ್ತು ಮೆಷಿನ್‌ ಲರ್ನಿಂಗ್‌ ಬಳಸಿಕೊಂಡು ಹೊಸ ಉತ್ಪನ್ನಗಳನ್ನು ವಿನ್ಯಾಸಗೊಳಿಸಲು ಬಯಸುವ ಕಂಪನಿಗಳು ಚಾಟ್‌ಜಿಪಿಟಿ ತಜ್ಞರನ್ನು ನೇಮಕ ಮಾಡಿಕೊಳ್ಳುತ್ತವೆ.

ಕಾಪಿರೈಟಿಂಗ್‌

ವ್ಯಾಪಾರೋದ್ಯಮ ಮತ್ತು ಪ್ರಚಾರಕ್ಕಾಗಿ ಉತ್ತಮ ಗುಣಮಟ್ಟದ ಕಂಟೆಂಟ್‌ ರಚಿಸಲು ಚಾಟ್‌ಜಿಪಿಟಿಯಂತಹ ಎಐ ಪರಿಕರಣಗಳನ್ನು ಹೇಗೆ ಬಳಸಬೇಕೆಂದು ತಿಳಿದಿರುವ ಕಾಪಿರೈಟರ್‌ಗಳಿಗೆ ಹೆಚ್ಚಿನ ಬೇಡಿಕೆಯಿದೆ.

ಎಐ ಟ್ರೇನರ್‌

ಕಂಪನಿಗಳು ಎಐ ತರಬೇತುದಾರರನ್ನು ಕೂಡ ನೇಮಕ ಮಾಡಿಕೊಳ್ಳುತ್ತಿವೆ. ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ ಕುರಿತು ಕಂಪನಿಯ ಉದ್ಯೋಗಿಗಳಿಗೆ ತರಬೇತಿ ನೀಡುವವರಿಗೂ ಬೇಡಿಕೆಯಿದೆ.

ಪ್ರಾಡಕ್ಟ್‌ ಮ್ಯಾನೇಜರ್‌

ಪ್ರೊಸೆಸ್‌ ಆಪ್ಟಿಮೈಜೇಷನ್‌ ಮತ್ತು ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಚಾಟ್‌ಜಿಪಿಟಿ ಬಳಸುವ ಪ್ರಾಡಕ್ಟ್‌ ಮ್ಯಾನೇಜರ್‌ಗಳಿಗೂ ಹೆಚ್ಚಿನ ಬೇಡಿಕೆಯಿದೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ