Job News: ಎಂಜಿನಿಯರ್‌ಗಳಿಗೆ ಅತ್ಯಧಿಕ ವೇತನ ನೀಡೋದು ಈ 2 ಕಂಪನಿಗಳು ಮಾತ್ರವಂತೆ, ಬ್ಲೈಂಡ್ ಅಂಕಿಅಂಶಗಳಿಂದ ಬಹಿರಂಗ
Aug 29, 2023 11:29 AM IST
ಎಂಜಿನಿಯರ್‌ಗಳಿಗೆ ಅತ್ಯಧಿಕ ವೇತನ ನೀಡುವ ಕಂಪನಿಗಳು
- Engineer Salary: ಜಗತ್ತಿನಲ್ಲಿರುವ ಪ್ರಮುಖ ಟೆಕ್ ಕಂಪನಿಗಳಲ್ಲಿ ಎಂಜಿನಿಯರ್‌ಗಳಿಗೆ ಅತ್ಯಧಿಕ ವೇತನ ನೀಡುವ ಕಂಪನಿಗಳು ಗೂಗಲ್ ಮತ್ತು ಫೇಸ್ಬುಕ್ ಎಂದು ಬ್ಲೈಡ್‌ನ ನೂತನ ಅಂಕಿಅಂಶಗಳು ತಿಳಿಸಿವೆ. ಬ್ಲೈಂಡ್ ವರದಿಯಲ್ಲಿರುವ ಇನ್ನಿತರ ವಿಚಾರಗಳ ವಿವರವೂ ಇಲ್ಲಿದೆ.
ಬೆಂಗಳೂರು: ಒಳ್ಳೆಯ ವೇತನ ನೀಡುವ ಕಂಪನಿಗಳೆಂದರೆ ಉದ್ಯೋಗಿಗಳಿಗೆ ಅಚ್ಚುಮೆಚ್ಚು. ಯಾವ ಕಂಪನಿ ಹೆಚ್ಚುವೇತನ ನೀಡುತ್ತದೆಯೋ ಆ ಕಂಪನಿಗಳಿಗೆ ಉದ್ಯೋಗಕ್ಕೆ ಅರ್ಜಿ ಸಲ್ಲಿಸುವವರ ಸಂಖ್ಯೆ ಹೆಚ್ಚಿರುತ್ತದೆ. ಕೆಲವೊಂದು ಕಂಪನಿಗಳು ಹೆಚ್ಚು ಕೆಲಸ ಮಾಡಿಸಿಕೊಂಡು ಕಡಿಮೆ ವೇತನ ನೀಡುತ್ತವೆ, ಇನ್ನು ಕೆಲವು ಕಂಪನಿಗಳು ಉದ್ಯೋಗಗಿಳ ಪ್ರತಿಭೆಗೆ ತಕ್ಕಂತೆ ತೃಪ್ತಿದಾಯಕ ವೇತನ ನೀಡುತ್ತವೆ. ಟೆಕ್ನಾಲಜಿ ಕ್ಷೇತ್ರದ ಕಂಪನಿಗಳಿಗೆ ಎಂಜಿನಿಯರ್‌ಗಳಿಗೆ ಕೈತುಂಬಾ ವೇತನ ನೀಡುವ ಎರಡು ಕಂಪನಿಗಳು ಎಂಬ ವಿವರ ಇತ್ತೀಚಿನ ಬ್ಲೈಂಡ್ ವರದಿಯಿಂದ ತಿಳಿದುಬಂದಿದೆ.
ಇತ್ತೀಚೆಗೆ ಟೆಕ್ನಾಲಜಿ ಕಂಪನಿಗಳು ಉದ್ಯೋಗ ಕಡಿತದ ವಿಚಾರದಲ್ಲಿ ಸುದ್ದಿಯಲ್ಲಿವೆ. ಗೂಗಲ್, ಫೇಸ್‌ಬುಕ್ ಮೆಟಾ, ಮೈಕ್ರೊಸಾಫ್ಟ್ ಇತ್ಯಾದಿ ಕಂಪನಿಗಳು ನೂರಾರು ಸಾವಿರಾರು ಉದ್ಯೋಗಿಗಳನ್ನು ಮನೆಗೆ ಕಳುಹಿಸುವೆ. ಈ ರೀತಿಯ ಸಮಸ್ಯೆಗಳಿದ್ದರೂ ಜಗತ್ತಿನಲ್ಲಿ ಎಂಜಿನಿಯರ್‌ಗಳಿಗೆ ಅತ್ಯಧಿಕ ವೇತನ ನೀಡುವ ಕಂಪನಿಗಳಲ್ಲಿ ಗೂಗಲ್ ಮತ್ತು ಮೆಟಾ ಮುಂದಿವೆ. ಇತರೆ ಬೃಹತ್ ಟೆಕ್ ಕಂಪನಿಗಳಿಗೆ ಹೋಲಿಸಿದರೆ ಗೂಗಲ್ ಮತ್ತು ಮೆಟಾ ಕಂಪನಿಗಳು ಎಂಜಿನಿಯರ್‌ಗಳಿಗೆ ಅತ್ಯುತ್ತಮ ವೇತನ ನೀಡುತ್ತವೆ ಎಂದು ಬ್ಲೈಂಡ್‌ನ ನೂತನ ವರದಿ ತಿಳಿಸಿದೆ. ಅಂದರೆ, ಆಪಲ್, ಅಮೆಜಾನ್ ಅಥವಾ ಮೈಕ್ರೊಸಾಫ್ಟ್ ಕಂಪನಿಗಳಿಗೆ ಹೋಲಿಸಿದರೆ ಗೂಗಲ್ ಮತ್ತು ಮೆಟಾದಲ್ಲಿ ಎಂಜಿನಿಯರ್‌ಗಳಿಗೆ ಅತ್ಯಧಿಕ ವೇತನ ದೊರಕುತ್ತಿದೆ.
ಕಳೆದ ವರ್ಷ ಜನವರಿಯಿಂದ ಈ ವರ್ಷ ಆಗಸ್ಟ್ 2023ರವರೆಗೆ ಉದ್ಯೋಗಿಗಳಿಗೆ ನೀಡಲಾದ ವೇತನದ ಆಧಾರದಲ್ಲಿ ಬ್ಲೈಂಡ್ ಈ ವರದಿ ತಯಾರಿಸಿದೆ. ಅಂದರೆ, ಉದ್ಯೋಗಿಗಳೇ ಬ್ಲೈಂಡ್ ವೇದಿಕೆಯಲ್ಲಿ ವೇತನ ವಿವರ ಅಪ್‌ಡೇಟ್ ಮಾಡಿದ್ದರು. ಈ ಅಂಕಿಅಂಶಗಳ ಆಧಾರದಲ್ಲಿ ಅತ್ಯಧಿಕ ವೇತನ ನೀಡುವ ಕಂಪನಿಗಳ ವರದಿಯನ್ನು ಬ್ಲೈಂಡ್ ತಯಾರಿಸಿದೆ.
ಇದೇ ಸಮಯದಲ್ಲಿ ಅಮೆಜಾನ್ ಕಂಪನಿಯು ಉದ್ಯೋಗಿಗಳಿಗೆ ವಿವಿಧ ಪೇ ಬಾಂಡ್‌ಗಳನ್ನು ನೀಡುತ್ತದೆ. ಇದರಿಂದ ಕಂಪನಿಯ ಒಟ್ಟಾರೆ ವೇತನ ಅತ್ಯಧಿಕವಾಗಿರುತ್ತದೆ. ಇತರೆ ಕಂಪನಿಗಳಿಗೆ ಹೋಲಿಸಿದರೆ ಆಪಲ್‌ನ ಒಟ್ಟು ವೇತನ ಕಡಿಮ, ಆದರೆ, ಅವರ ಉದ್ಯೋಗಿಗಳು ಉನ್ನತ ಹುದ್ದೆ ಪಡೆದಂತೆ ವೇತನ ಉತ್ತಮವಾಗಿರುತ್ತದೆ. ಗೂಗಲ್ ಕಂಪನಿಯು ಹೆಚ್ಚು ಸಮತೋಲನ ಹೊಂದಿರುವ ವೇತನ ನೀಡುವುದಾಗಿ ವರದಿ ತಿಳಿಸಿದೆ. ಮೆಟಾ ಕಂಪನಿಯಲ್ಲಿರುವ ಎಂಜಿನಿಯರ್‌ಗಳಿಗೆ ಬೇಗ ಬಡ್ತಿ ದೊರಕುತ್ತದೆ ಎಂದು ವರದಿ ಕಂಡುಕೊಂಡಿದೆ.
ಪದವಿ ಮುಗಿದ ಬಳಿಕ ಅತ್ಯಧಿಕ ವೇತನ ಪಡೆಯಬಹುದಾದ ಉದ್ಯೋಗ
ಕೆಲವರಿಗೆ ಡಬಲ್ ಡಿಗ್ರಿ ಪಡೆದರೂ ಕಡಿಮೆ ವೇತನದ ವೇತನ ದೊರಕುತ್ತದೆ. ಇನ್ನು ಕೆಲವರಿಗೆ ಪದವಿ ಮುಗಿಸಿದ ತಕ್ಷಣ ಲಕ್ಷಾಂತರ ರೂಪಾಯಿ ವೇತನದ ಉದ್ಯೋಗಗಳು ಕೈಬೀಸಿ ಕರೆಯುತ್ತವೆ. ಡಿಗ್ರಿ ಮುಗಿದ ಬಳಿಕ ಅತ್ಯಧಿಕ ವೇತನ ಪಡೆಯಬಹುದಾದ ಕೆಲವು ಉದ್ಯೋಗಗಳು ಈ ಮುಂದಿನಂತೆ ಇವೆ. ಕಲಿಕೆಯ ಹಂತದಲ್ಲಿಯೇ ಇದಕ್ಕೆ ಸಂಬಂಧಪಟ್ಟ ಕೋರ್ಸ್ ಆಯ್ಕೆ ಮಾಡಿಕೊಂಡರೆ ನೀವೂ ಕೈತುಂಬಾ ಗಳಿಸಬಹುದು. ಕಾಲೇಜು ಪದವಿ ಮುಗಿದ ಬಳಿಕ ಅತ್ಯಧಿಕ ವೇತನ ಪಡೆಯುವ ಉದ್ಯೋಗಗಳಲ್ಲಿ ಇನ್ವೆಸ್ಟ್ ಬ್ಯಾಂಕರ್ಸ್, ಪೈಲಟ್, ಎಂಜಿನಿಯರ್, ಬಿಸ್ನೆಸ್ ಅನಾಲಿಸ್ಟ್ ಇತ್ಯಾದಿಗಳು ಸೇರಿವೆ. ಡಿಗ್ರಿ ಮುಗಿದ ಬಳಿಕ ಅತ್ಯಧಿಕ ವೇತನ ಪಡೆಯಬಹುದಾದ ಕೆಲವು ಉದ್ಯೋಗಗಳ ವಿವರ ಇಲ್ಲಿದೆ.
ವಿಭಾಗ