ಇಪಿಎಫ್‌ಒ; ಈ 3 ಕಾರಣ ನೀಡಿದ್ರೆ ಇಪಿಎಫ್ ಹಣ ಬೇಗ ಹಿಂಪಡೆಯಬಹುದು, ಹಂತ ಹಂತದ ಮಾರ್ಗದರ್ಶಿ ಇಲ್ಲಿದೆ ನೋಡಿ
May 16, 2024 03:36 PM IST
ಇಪಿಎಫ್‌ಒ ವೆಬ್‌ಸೈಟ್‌ನಲ್ಲಿ ಇಪಿಎಫ್ ಹಣ ಬೇಗ ಪಡೆಯಲು ಮೂರು ಪ್ರಮುಖ ಕಾರಣಗಳನ್ನು ನೀಡಬೇಕು. (ಸಾಂಕೇತಿಕ ಚಿತ್ರ)
ಇಪಿಎಫ್‌ಒ; ಈ ಮೂರು ಕಾರಣ ನೀಡಿದ್ರೆ ಇಪಿಎಫ್ ಹಣವನ್ನು ಬೇಗ ಹಿಂಪಡೆಯಬಹುದು. ಆ ಕಾರಣಗಳು ಯಾವುವು, ಇಪಿಎಫ್ ಹಣ ಹಿಂಪಡೆಯುವುದು ಹೇಗೆ ಎಂಬುದರ ಹಂತ ಹಂತದ ಮಾರ್ಗದರ್ಶಿ ಇಲ್ಲಿದೆ ನೋಡಿ.
ನವದೆಹಲಿ: ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ವೈದ್ಯಕೀಯ, ಶಿಕ್ಷಣ, ಮದುವೆ ಮತ್ತು ವಸತಿ ಉದ್ದೇಶಗಳಿಗೆ ಸಂಬಂಧಿಸಿದ ಮುಂಗಡ ಕ್ಲೈಮ್‌ಗಳಿಗಾಗಿ ಸ್ವಯಂ-ಮೋಡ್ ಸೆಟಲ್‌ಮೆಂಟ್ ಅನ್ನು ಪರಿಚಯಿಸಿದೆ. ಈ ಉಪಕ್ರಮವು ಹಕ್ಕುಗಳ ಪ್ರಕ್ರಿಯೆಯಲ್ಲಿ ಮಾನವ ಹಸ್ತಕ್ಷೇಪವನ್ನು ನಿವಾರಿಸುವುದಲ್ಲದೆ, ಕಾರ್ಯಾಚರಣೆಯನ್ನು ಸುಗಮಗೊಳಿಸುತ್ತದೆ.
ಸಾಮಾನ್ಯವಾಗಿ ಇಪಿಎಫ್ ಕ್ಲೈಮ್ ಅನ್ನು ಪೂರ್ಣಗೊಳಿಸುವುದಕ್ಕೆ ಇಪಿಎಫ್‌ಒ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಇಪಿಎಫ್ ಸದಸ್ಯರ ಅರ್ಹತೆ, ಕ್ಲೈಮ್ ಪ್ರಕ್ರಿಯೆಗಾಗಿ ಸಲ್ಲಿಸಿದ ದಾಖಲೆಗಳು (ಯಾವುದಾದರೂ ಇದ್ದರೆ), ಇಪಿಎಫ್f ಖಾತೆಯ ಕೆವೈಸಿ ಸ್ಥಿತಿಗತಿ, ಇಪಿಎಫ್‌ಒ ಮಾನ್ಯಮಾಡಿರುವ ಬ್ಯಾಂಕ್ ಖಾತೆ ವಿವರ ಇತ್ಯಾದಿಗಳನ್ನು ಪರಿಶೀಲಿಸಿದ ಬಳಿಕವಷ್ಟೇ ಇಪಿಎಫ್‌ಒ ಕ್ಲೈಮ್ ಸೆಟಲ್ ಮಾಡಿಕೊಡುತ್ತದೆ. ಬದಲಾದ ಕಾಲಘಟ್ಟದಲ್ಲಿ ಮಾನವ ಹಸ್ತಕ್ಷೇಪವಿಲ್ಲದೆ, ಸ್ವಯಂಚಾಲಿತವಾಗಿ ಎಲ್ಲವನ್ನೂ ನೆರವೇರಿಸುವ ಪ್ರಯತ್ನ ಎಲ್ಲ ರಂಗಗಳಲ್ಲೂ ಚಾಲ್ತಿಯಲ್ಲಿದೆ. ಇದನ್ನು ಅನುಸರಿಸುವ ಪ್ರಯತ್ನದಲ್ಲಿ ಇಪಿಎಫ್‌ಒ ಕೂಡ ಇದೆ.
ಈ 3 ಕಾರಣಕ್ಕೆ 3-4 ದಿನದಲ್ಲಿ ಇಪಿಎಫ್ ಕ್ಲೈಮ್ ಸೆಟಲ್
ಕೆವೈಸಿ, ಅರ್ಹತೆ ಮತ್ತು ಬ್ಯಾಂಕ್ ಮಾಹಿತಿಗಳೆಲ್ಲವೂ ಸರಿ ಇದ್ದರೆ, ಅಂತಹ ಯಾವುದೇ ಕ್ಲೈಮ್ ಅನ್ನು ಸ್ವಯಂಚಾಲಿತವಾಗಿ ಐಟಿ ಟೂಲ್‌ಗಳ ಮೂಲಕ ಸ್ವಯಂಚಾಲಿತ ಪಾವತಿಗೆ ಒಳಪಡಿಸುವ ವ್ಯವಸ್ಥೆಯನ್ನು ಇಪಿಎಫ್‌ಒ ಅಳವಡಿಸಿಕೊಂಡಿದೆ. ಇದರೊಂದಿಗೆ, ಇಪಿಎಫ್‌ಒ ಸದಸ್ಯರು ತಮ್ಮ ಹಣ ಹಿಂಪಡೆಯುವ ಕ್ಲೈಮ್‌ಗಳನ್ನು 3-4 ದಿನಗಳಲ್ಲಿ ಮುಗಿಸಬಹುದು ಎಂದು ಇಪಿಎಫ್‌ಒ ಮೂಲಗಳು ತಿಳಿಸಿವೆ.
ಪ್ರಮಾಣೀಕರಿಸದ ಕ್ಲೈಮ್‌ಗಳನ್ನು ಹಿಂದಿರುಗಿಸುವ ಅಥವಾ ತಿರಸ್ಕರಿಸುವ ಸಾಂಪ್ರದಾಯಿಕ ವಿಧಾನಗಳಿಗಿಂತ ಭಿನ್ನವಾಗಿ, ಸ್ವಯಂಚಾಲಿತ ವ್ಯವಸ್ಥೆಯು ಎರಡನೇ ಹಂತದ ಪರಿಶೀಲನೆ ಮತ್ತು ಅನುಮೋದನೆಗೆ ಆ ಕ್ಲೈಮ್ ಅರ್ಜಿಯನ್ನು ಕಳುಹಿಸುತ್ತದೆ. ಇದು ಈ ಹೊಸ ವಿಧಾನದ ವಿಶೇಷ ಅಂಶ. ಆದಾಗ್ಯೂ ಈ ಮೂರು ಕಾರಣಗಳಿಗೆ ಮಾತ್ರವೇ ಹಣವನ್ನು ಬೇಗ ಪಡೆಯಬಹುದು.
1) ವೈದ್ಯಕೀಯ ಕ್ಲೈಮ್‌ಗಳಿದ್ದರೆ, ಅದಕ್ಕೆ ಉದ್ಯೋಗದಾತರ ಅಥವಾ ಡಾಕ್ಟರ್ ಕೊಡುವ ಪ್ರಮಾಣ ಪತ್ರವನ್ನೂ ಸಲ್ಲಿಸಬೇಕಾದ್ದು ನಿಯಮ 68 J ಪ್ರಕಾರ ಕಡ್ಡಾಯವಾಗಿರುತ್ತದೆ. ಈ ನಿಯಮ ಪ್ರಕಾರ ಇಪಿಎಫ್ ಯೋಜನೆಯ ಅವಧಿಯನ್ನು ಪರಿಗಣಿಸದೆ ಅಗತ್ಯ ಹಣವನ್ನು ಹಿಂಪಡೆಯುವುದಕ್ಕೆ ಅವಕಾಶವಿದೆ.
2) ಮದುವೆ ಅಥವಾ ಉನ್ನತ ಶಿಕ್ಷಣದ ಉದ್ದೇಶಗಳಿಗಾಗಿ, ಇಪಿಎಫ್ ಹಣ ಹಿಂಪಡೆಯುವುದಾದರೆ ಅದಕ್ಕೆ ನಿಯಮ 68K ಪ್ರಕಾರ ಕೂಡಲೇ ಅನುಮತಿ ನೀಡಲಾಗುತ್ತದೆ. ಆದರೆ, ಇಪಿಎಫ್‌ಒ ಸದಸ್ಯರಾಗಿ ಕನಿಷ್ಠ 7 ವರ್ಷ ಆಗಿರಬೇಕು. ಸದಸ್ಯತ್ವದ ಅವಧಿಒಯಲ್ಲಿ ವಿವಿಧ ಅಗತ್ಯ ದಾಖಲೆಗಳೊಂದಿಗೆ ಮೂರು ಸಲ ಮಾತ್ರವೇ ಈ ರೀತಿ ಹಣಪಡೆಯಬಹುದು.
3) ಮನೆ ನಿರ್ಮಾಣಕ್ಕೆ ಮುಂಗಡ ಹಣ ಪಡೆಯುವುದಕ್ಕೆ ನಿಯಮ 68B ಅನುಮತಿಸುತ್ತಿದ್ದು, ಇಪಿಎಫ್‌ಒ ಸದಸ್ಯರಾಗಿ ಕನಿಷ್ಠ 5 ವರ್ಷ ಆಗಿರಬೇಕು. ಹೊಸ ಮನೆ ಖರೀದಿ, ನಿರ್ಮಾಣ ಅಥವಾ ಮನೆ ನವೀಕರಣಕ್ಕೆ ಬಳಸುವುದಕ್ಕಾಗಿ ಈ ಹಣ ಪಡೆಯಬಹುದು.
ಈ ನಡುವೆ, ಇಪಿಎಫ್‌ಒ ನಿಯಮ 68ಜೆ ಪ್ರಕಾರ, ಸ್ವಯಂ ಕ್ಲೈಮ್ ಸೆಟಲ್‌ಮೆಂಟ್‌ಗಳ ಅರ್ಹತೆಯ ಮಿತಿಯನ್ನು 50,000 ರೂಪಾಯಿಯಿಂದ 1 ಲಕ್ಷ ರೂಪಾಯಿಗೆ ಹೆಚ್ಚಿಸಿದೆ.
ಇಪಿಎಫ್‌ಒ ವೆಬ್‌ಸೈಟ್‌ನಲ್ಲಿ ಆನ್‌ಲೈನ್ ಮೂಲಕ ಇಪಿಎಫ್ ಕ್ಲೈಮ್ ಮಾಡುವುದು ಹೀಗೆ
ಹಂತ 1- ಇಪಿಎಫ್‌ಒದ ಅಧಿಕೃತ ವೆಬ್‌ಸೈಟ್ unifiedportal-mem.epfindia.gov.in ಗೆ ಯುಎಎನ್ ಮತ್ತು ಪಾಸ್‌ವರ್ಡ್ ಬಳಸಿ ಲಾಗಿನ್ ಆಗಬೇಕು. ಯುಎಎನ್ ನಿಮ್ಮ ವೇತನ ಚೀಟಿಯಲ್ಲಿ ನಮೂದಾಗಿರುತ್ತದೆ.
ಹಂತ 2 ವೆಬ್‌ಸೈಟ್‌ಗೆ ಲಾಗಿನ್ ಆದ ಬಳಿಕ 'online services' ಗೆ ಹೋಗಬೇಕು. ಅಲ್ಲಿ 'claim' ಸೆಕ್ಷನ್ ಅನ್ನು ಕ್ಲಿಕ್ ಮಾಡಬೇಕು.
ಹಂತ 3 - ನಿಮ್ಮ ಬ್ಯಾಂಕ್ ಖಾತೆ ನಂಬರ್ ವೆರಿಫೈ ಮಾಡಬೇಕು.
ಹಂತ 4 - ನಿಮ್ಮ ಚೆಕ್ ಅಥವಾ ಪಾಸ್‌ಪುಸ್ತಕದ ಸ್ಕ್ಯಾನ್ಡ್ ಪ್ರತಿಯನ್ನು ಅಪ್ಲೋಡ್ ಮಾಡಬೇಕು.
ಹಂತ 5 - “reason for submitting the advance” ಅನ್ನು ಕ್ಲಿಕ್ ಮಾಡಬೇಕು.
ಇಪಿಎಫ್ ಖಾತೆಯಿಂದ ಬಾಗಶಃ ಹಣವನ್ನು ವಿತ್‌ಡ್ರಾ ಮಾಡಬಹುದು. ಅದು ಕೂಡ ಮನೆ ಖರೀದಿ/ ಮನೆ ನಿರ್ಮಾಣ, ಸಲಾ ತೀರಿಸಲು, ಎರಡು ತಿಂಗಳು ವೇತನ ಇಲ್ಲದೇ ಇದ್ದರೆ, ತನ್ನ/ಮಗಳ/ಮಗ/ಸಹೋದರನ ಮದುವೆ, ಕುಟುಂಬ ಸದಸ್ಯರ ವೈದ್ಯಕೀಯ ವೆಚ್ಚ, ಸಾಂಕ್ರಾಮಿಕ ಇತ್ಯಾದಿ (the purchase/construction of a house, repayment of a loan, non-receipt of the wage for two months, the marriage of self/daughter/son/brother, for medical treatment of family members, an outbreak of a pandemic,) ಕಾರಣಗಳಿದ್ದು ಒಂದನ್ನು ಆಯ್ಕೆ ಮಾಡಿಕೊಳ್ಳಬೇಕು.
ಹಂತ 6 - ಆಧಾರ್ ಆಧಾರಿತವಾದ ಒಟಿಪಿ ಬರುತ್ತೆ. ಅದನ್ನು ಸಲ್ಲಿಸಿ ಸಬ್‌ಮಿಟ್ ಕೊಡಬೇಕು. ನಂತರ ಈ ಮನವಿ ಉದ್ಯೋಗದಾತರ ಅಂಕಿತಕ್ಕೆ ರವಾನೆಯಾಗುತ್ತದೆ. ಅಲ್ಲಿ ಒಕೆ ಆದ ಬಳಿಕ ಹಣ ಖಾತೆಗೆ ಜಮೆಯಾಗುತ್ತದೆ. ಅರ್ಜಿಯ ಪ್ರಗತಿಯನ್ನು “claim status” ಅಡಿಯಲ್ಲಿರುವ “claim status'” ಕ್ಲಿಕ್ ಮಾಡಿ ತಿಳಿಯಬಹುದು.
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.