logo
ಕನ್ನಡ ಸುದ್ದಿ  /  ಜೀವನಶೈಲಿ  /  ರೆಡ್‌ಮಿಯಿಂದ ಸ್ಯಾಮ್ಸಂಗ್‌ವರೆಗೆ; 20 ಸಾವಿರದೊಳಗಿರುವ 5 ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳಿವು

ರೆಡ್‌ಮಿಯಿಂದ ಸ್ಯಾಮ್ಸಂಗ್‌ವರೆಗೆ; 20 ಸಾವಿರದೊಳಗಿರುವ 5 ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳಿವು

Raghavendra M Y HT Kannada

Jan 18, 2024 03:54 PM IST

google News

20 ಸಾವಿರ ರೂಪಾಯಿಯೊಳಗಿನ 5 ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ

  • ಒಳ್ಳೆ ಕ್ಯಾಮೆರಾ, ಅತ್ಯಾಕರ್ಷಕ ಡಿಸ್‌ಪ್ಲೇ ಇದ್ದು, ಬೆಲೆ 20 ಸಾವಿರದೊಳಗೆ ಇರುವಂತ ಸ್ಮಾರ್ಟ್‌ಫೋನ್ ಖರೀದಿಸುವ ಪಾನ್ಲ್ ಮಾಡುತ್ತಿದ್ದರೆ, ನಿಮಗಾಗಿ 5 ಫೋನ್‌ಗಳ ಮಾಹಿತಿ ಇಲ್ಲಿದೆ.

20 ಸಾವಿರ ರೂಪಾಯಿಯೊಳಗಿನ 5 ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ
20 ಸಾವಿರ ರೂಪಾಯಿಯೊಳಗಿನ 5 ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ

ಬೆಂಗಳೂರು: ಇವತ್ತಿನ ಹೊಸದು ನಾಳೆಗೆ ಹಳೇದು ಆಗುತ್ತದೆ. ತಂತ್ರಜ್ಞಾನದಲ್ಲೂ ಅಷ್ಟೇ ಇವತ್ತಿನ ತಂತ್ರಜ್ಞಾನ ನಾಳೆಗೆ ಅಪ್‌ಗ್ರೇಡ್ ಆಗಿರುತ್ತದೆ. ವೇಗವಾಗಿ ಬದಲಾಗುತ್ತಿರುವ ಜಗತ್ತಿನಲ್ಲಿ ಹೊಸ ಹೊಸ ತಂತ್ರಜ್ಞಾನದೊಂದಿಗೆ ಮೊಬೈಲ್‌ ಫೋನ್‌ಗಳು ಹೊಸ ಸ್ಪರ್ಶವನ್ನು ಪಡೆಯುತ್ತಲೇ ಇವೆ. ಬೆರಗುಗೊಳಿಸುವ ಡಿಸ್‌ಪ್ಲೇ, ಪವರ್‌ಪುಲ್ ಪ್ರೊಸೆಸರ್‌ಗಳಿಂದ ಅತ್ಯಾಧುನಿಕ ಕ್ಯಾಮೆರಾಗಳನ್ನು ಒಳಗೊಂಡ ಸ್ಮಾರ್ಟ್‌ಫೋನ್‌ಗಳು ಆಸಕ್ತರ ಗಮನ ಸೆಳೆಯುತ್ತಿವೆ.

ನೀವೇನಾದರೂ 20 ಸಾವಿರದೊಳಗೆ ಒಂದೊಳ್ಳೆ ಸ್ಮಾರ್ಟ್‌ಫೋನ್ ಖರೀದಿಸುವ ಪ್ಲಾನ್ ಮಾಡಿಕೊಂಡಿದ್ದರೆ ನಿಮಗಾಗಿ ಬೆಸ್ಟ್ ಎನಿಸುವಂತೆ 5 ಫೋನ್‌ಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ. ಇವುಗಳ ವೈಶಿಷ್ಟ್ಯವನ್ನು ನೀಡಲಾಗಿದೆ. ನಿಮಗೆ ಯಾವುದು ಬೇಕೋ ಅದನ್ನು ಆಯ್ಕೆ ಮಾಡಿಕೊಳ್ಳಿ.

ಒನ್ ಪ್ಲಸ್ ನಾರ್ಡ್ ಸಿಇ3 ಲೈಟ್ 5ಜಿ (OnePlus Nord CE 3 lite 5G)

ಬಜೆಟ್ ದರಕ್ಕೆ ಪ್ರೀಮಿಯಂ ಆ್ಯಂಡ್ರಾಯ್ಡ್ ಸ್ಮಾಟ್‌ಫೋನ್ ಅನ್ನೋರಿಗೆ ಸ್ನ್ಯಾಪ್ ಡ್ರ್ಯಾಗನ್ 695 ಪ್ರೊಸೆಸರ್ ಸಹಿತ ಬರುತ್ತಿರುವ ಒನ್ ಪ್ಲಸ್ ನಾರ್ಡ್ ಸಿಇ3 ಲೈಟ್ 5ಜಿ ಹೇಳಿ ಮಾಡಿಸಿದಂತಿದೆ. 6.72 ಎಲ್‌ಸಿಡಿ ಡಿಸ್‌ಪ್ಲೇ, 5000 ಎಂಎಎಚ್ ಬ್ಯಾಟರಿ ಹಾಗೂ 67ಡಬ್ಲ್ಯೂ ಸೂಪರ್ ವೊಕೊ ಫಾಸ್ಟ್ ಚಾರ್ಜಿಂಗ್ ಈ ಫೋನಿನಲ್ಲಿದೆ. ಕಡಿಮೆ ಸಮಯದಲ್ಲಿ ಬೇಗ ಚಾರ್ಜಿಂಗ್ ಬಳಕೆದಾರರಿಗೆ ಹೆಚ್ಚಿನ ಅನುಕೂಲ ಆಗಲಿದೆ. 8GB RAM ಮತ್ತು 256GB ವರೆಗೆ ಸ್ಟೋರೇಜ್ ಸಾಮರ್ಥ್ಯ ಇರುತ್ತದೆ. ಒನ್ ಪ್ಲಸ್ ನಾರ್ಡ್ ಸಿಇ3 ಲೈಟ್ 5ಜಿ ಬೆಲೆ 19,392 ರೂ.ನಿಂದ ಆರಂಭವಾಗುತ್ತದೆ.

iQOO Z7 5G

iQOO Z7 5G ಸ್ಮಾರ್ಟ್ ಫೋನ್ 20 ಸಾವಿರದೊಳಗಿನ ಬೆಸ್ಟ್ ಸ್ಮಾರ್ಟ್‌ಫೋನ್‌ಗಳಲ್ಲಿ ಒಂದಾಗಿದೆ. ಅತ್ಯಾಕರ್ಷಕ 6.38 ಡಿಸ್‌ಪ್ಲೇ, ಮೀಡಿಯಾ ಟೆಕ್ ಡೈಮೆನ್ಸಿಟಿ 920 ಪ್ರೊಸೆಸರ್, 6GB RAM ಮತ್ತು 128GB ವರೆಗೆ ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿದೆ. ಸಾಕಷ್ಟು ಡೇಟಾ ಸ್ಟೋರೇಜ್‌ಗೆ ಇದು ನೆರವಾಗುತ್ತದೆ. 4500 mAh ಬ್ಯಾಟರಿ, 64MP + 2MP ಹಿಂಬದಿಯ ಕ್ಯಾಮರಾ ಹಾಗೂ ಸೆಲ್ಫಿಗಾಗಿ 16MP ಮುಂಭಾಗದ ಕ್ಯಾಮರಾ ಇದ್ದು, ಈ ಫೋನಿ ಬೆಲೆ 18,999 ರೂಪಾಯಿ ಇದೆ.

ಸ್ಯಾಮ್ಸಂಗ್ ಗ್ಯಾಲಕ್ಸಿ ಎ14 5ಜಿ (Samsung Galaxy A14 5G)

ಸ್ಯಾಮ್ಸಂಗ್ ಗ್ಯಾಲಕ್ಸಿ ಎ14 5ಜಿ 6.6 ಇಂಚಿನ ಫುಲ್‌ಎಚ್‌ಡಿ ಡಿಸ್‌ಪ್ಲೇ ಜೊತೆಗೆ ಆಕ್ಟಾಕೋರ್ 2.4GHz ಪ್ರೊಸೆಸೆರ್ ಇದೆ. ಇನ್ನ ಕ್ಯಾಮೆರಾ ಪವರ್ ನೋಡುವುದಾದರೆ ಹಿಂಭಾಗದಲ್ಲಿ 50MP+2MP++2MP ಟ್ರಿಪಲ್ ರಿಯರ್ ಕಾನ್ಫಿಗರೇಷನ್ ಹಾಗೂ ಮುಂಭಾಗದಲ್ಲಿ 16MP ಕ್ಯಾಮೆರಾ ಇದೆ. ಎಐ ಪವರ್ ಮ್ಯಾನೇಜ್ಮೆಂಟ್‌ನೊಂದಿಗೆ 5000 mAh ಬ್ಯಾಟರಿ, 16GB RAM, 5ಜಿ ಸಂಪರ್ಕ ಹಾಗೂ ಯುಐ ಕೋರ್ 5.0 ಇದರಲ್ಲಿದೆ. ಈ ಫೋನಿನ ಬೆಲೆ 18,999 ರೂಪಾಯಿಗೆ ಲಭ್ಯವಿದೆ.

ವಿವೋ ಟಿ2 5ಜಿ (Vivo T2 5G)

ವಿವೋ ಟಿ2 5ಜಿ ಸ್ಮಾರ್ಟ್‌ಫೋನ್ 6.38 ಇಂಚಿನ ಡಿಸ್‌ಪ್ಲೇ ಜೊತೆಗೆ ಕ್ವಾಲ್ಕಾಮ್ ಸ್ನ್ಯಾಪ್‌ಡ್ರ್ಯಾಗನ್ 695 ಪ್ರೊಸೆಸರ್ ಹೊಂದಿದ್ದು, 6GB RAM ಮತ್ತು 128GB ವರೆಗೆ ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿದೆ. 4500 mAh ಬ್ಯಾಟರಿ, 64MP ಹಿಂಬದಿಯ ಕ್ಯಾಮರಾ ಜೊತೆಗೆ ಇದರಲ್ಲಿ ಪ್ರೈಮರಿ ಲೆನ್ಸ್ 2MP ಇದೆ. ಸೆಲ್ಫಿಗಾಗಿ 16MP ಮುಂಭಾಗದ ಕ್ಯಾಮರಾ ಇದ್ದು, ವಿಡಿಯೊ ಮಾಡಲು ಹೇಳಿ ಮಾಡಿಸಿದಂತಿದೆ. ಈ ಫೋನ್ ಬೆಲೆ 16,999 ರೂಪಾಯಿ ಇದೆ.

ರೆಡ್‌ಮಿ ನೋಟ್ 13 5ಜಿ (Redmi Note 13 5G)

20 ಸಾವಿರ ರೂಪಾಯಿಯೊಳಗಿನ ಬೆಸ್ಟ್ ಸಾರ್ಟ್‌ಫೋನ್‌ಗಳಲ್ಲಿ ರೆಡ್‌ಮಿ ನೋಟ್ 13 5ಜಿ ಕೂಡ ಒಂದು. 6.67 ಇಂಚಿನ ಡಿಸ್‌ಪ್ಲೇ, 6GB RAM ಮತ್ತು 128GB ವರೆಗೆ ಸ್ಟೋರೇಜ್ ಸಾಮರ್ಥ್ಯ, ಮುಂಭಾಗದಲ್ಲಿ 16MP ಕ್ಯಾಮೆರಾ, 5000 mAh ಬ್ಯಾಟರಿ ಸಾಮರ್ಥ್ಯ ಸೇರಿದಂತೆ ಈ ಫೋನ್‌ ಕೂಡ ಬಜೆಟ್ ಪ್ರೀಮಿಯಂ ಫೋನ್ ಆಗಿದ್ದು, ಇದರ ಬೆಲೆ 17,999 ರೂಪಾಯಿ ಇದೆ. ಹಳೆ ಫೋನ್ ಎಕ್ಸ್‌ಚೇಂಜ್ ಕಂಪನಿಗಳ ಆಫರ್ ಮೇಲೆ ಇನ್ನೂ ಕಡಿಮೆ ಬೆಲೆಗೆ ಸಿಗುವ ಸಾಧ್ಯತೆಗಳಿರುತ್ತವೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ