Gold Price Today December 7: ಶುಭ ಬುಧವಾರ, ಇಳಿದಿದೆ ಬೆಳ್ಳಿ-ಬಂಗಾರದ ದರ: ಆದರೂ ಕಷ್ಟವೇಕೆ ಶೃಂಗಾರ?
Dec 07, 2022 06:03 AM IST
ಸಾಂದರ್ಭಿಕ ಚಿತ್ರ
- ಇಂದು(ಡಿ.07-ಬುಧವಾರ) ದೇಶೀಯ ಮಾರುಕಟ್ಟೆಗೆ ಅನುಗುಣವಾಗಿ ದೇಶದ ಪ್ರಮುಖ ನಗರಗಳಲ್ಲಿ ಚಿನ್ನ ಹಾಗೂ ಬೆಳ್ಳಿ ದರಗಳಲ್ಲಿ ವ್ಯತ್ಯಾಸ ಕಂಡುಬಂದಿದ್ದು, ಚಿನ್ನ ಹಾಗೂ ಬೆಳ್ಳಿ ದರದಲ್ಲಿ ಕೊಂಚ ಇಳಿಕೆ ಕಂಡುಬಂದಿದೆ. ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ದೇಶದ ಮಹಾನಗರಗಳಲ್ಲಿ ಚಿನ್ನ ಹಾಗೂ ಬೆಳ್ಳಿ ಇಂದಿನ ದರಪಟ್ಟಿಯ ಮಾಹಿತಿ ಇಲ್ಲಿದೆ..
ಬೆಂಗಳೂರು: ಭಾರತೀಯ ಸಂಸ್ಕೃತಿಯಲ್ಲಿ ಚಿನ್ನ ಹಾಗೂ ಬೆಳ್ಳಿ ಸೇರಿದಂತೆ ಇತರ ಅಮೂಲ್ಯ ಆಭರಣಗಳಿಗೆ ಭಾರೀ ಮಹತ್ವವಿದೆ. ಅದರಲ್ಲೂ ಮಹಿಳೆಯರ ಜೀವನದ ಅವಿಭಾಜ್ಯ ಅಂಗವಾಗಿರುವ ಆಭರಣಗಳು, ನಮ್ಮ ದೇವ-ದೇವತೆಯರ ಕೊರಳನ್ನೂ ಸಿಂಗರಿಸುತ್ತವೆ. ಆದರೆ ಮಾರುಕಟ್ಟೆಯಲ್ಲಿ ನಿತ್ಯವೂ ಆಗುವ ಚಿನ್ನ ಹಾಗೂ ಬೆಳ್ಳಿ ದರಗಳಲ್ಲಿ ವ್ಯತ್ಯಾಸ, ಖರೀದಿದಾರರ ಮೇಲೆ ಪರಿಣಾಮ ಬೀರುವುದೂ ಸತ್ಯ.
ಆಭರಣ ವ್ಯಾಪಾರ ಭಾರತದ ಆರ್ಥಿಕತೆಯ ಪ್ರಮುಖ ಆಧಾರಸ್ತಂಭವಾಗಿದ್ದು, ಹಬ್ಬ, ಮದುವೆ ಹಾಗೂ ಇತರೆ ಸಮಾರಂಭಗಳಲ್ಲಿ ಚಿನ್ನ ಹಾಗೂ ಬೆಳ್ಳಿಯ ಖರೀದಿ ಭರಾಟೆ ಜೋರಾಗಿರುತ್ತದೆ. ಇದನ್ನು ಹೊರತುಪಡಿಸಿ ಸಾಮಾನ್ಯ ದಿನಗಳಲ್ಲೂ ಚಿನ್ನ ಹಾಗೂ ಬೆಳ್ಳಿಯನ್ನು ಕೊಳ್ಳುವುದು ಭಾರತೀಯರು ಬೆಳೆಸಿಕೊಂಡಿರುವ ರೂಢಿಗಳಲ್ಲೊಂದು.
ಅದರಂತೆ ಇಂದು(ಡಿ.07-ಬುಧವಾರ) ದೇಶೀಯ ಮಾರುಕಟ್ಟೆಗೆ ಅನುಗುಣವಾಗಿ ದೇಶದ ಪ್ರಮುಖ ನಗರಗಳಲ್ಲಿ ಚಿನ್ನ ಹಾಗೂ ಬೆಳ್ಳಿ ದರಗಳಲ್ಲಿ ವ್ಯತ್ಯಾಸ ಕಂಡುಬಂದಿದ್ದು, ಇಂದಿನ ದರಪಟ್ಟಿಯ ಮಾಹಿತಿ ಇಲ್ಲಿದೆ..
ಬುಧವಾರದ ಮಾರುಕಟ್ಟೆ ಪರಿಸ್ಥಿತಿಯನ್ನು ಅವಲೋಕಿಸಿದರೆ, ದೇಶದಲ್ಲಿ 1 ಗ್ರಾಂ (24 ಕ್ಯಾರಟ್) ಬಂಗಾರದ ಬೆಲೆ 5,378 ರೂ. ದಾಖಲಾಗಿದೆ. ನಿನ್ನೆ(ಡಿ.-06-ಮಂಗಳವಾರ) ಇದರ ಬೆಲೆ 5,411 ರೂ. ಆಗಿತ್ತು. ಅಂದರೆ ಒಂದು ದಿನದಲ್ಲಿ 33 ರೂ.ಇಳಿಕೆ ಕಂಡಿದೆ. ಅದರಂತೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 1 ಗ್ರಾಂ (24 ಕ್ಯಾರಟ್) ಚಿನ್ನದ ಬೆಲೆ 5,383 ರೂ. ನಿಗದಿಯಾಗಿದೆ. ನಿನ್ನೆ (ಡಿ.06-ಮಂಗಳವಾರ) ಇದರ ಬೆಲೆ 5,416 ರೂ. ಆಗಿತ್ತು. ಅಂದರೆ ಒಂದು ದಿನದಲ್ಲಿ 33 ರೂ.ಇಳಿಕೆ ಕಂಡಿದೆ.
ಇನ್ನು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 10 ಗ್ರಾಂ (22 ಕ್ಯಾರಟ್) ಚಿನ್ನದ ಬೆಲೆ 49,350 ರೂ. ಆಗಿದ್ದು, ನಿನ್ನೆ (ಡಿ.06-ಮಂಗಳವಾರ) ಇದರ ಬೆಲೆ 49,650 ರೂ. ಆಗಿತ್ತು ಅಂದರೆ ಒಂದು ದಿನದಲ್ಲಿ 300 ರೂ. ಇಳಿಕೆ ಕಂಡಿದೆ. ಇನ್ನು 10 ಗ್ರಾಂ ಅಪರಂಜಿ ಚಿನ್ನದ (24 ಕ್ಯಾರಟ್) ಬೆಲೆ 53,830 ರೂ. ಆಗಿದೆ. ನಿನ್ನೆ (ಡಿ.06-ಮಂಗಳವಾರ) ಇದರ ಬೆಲೆ 54,160 ರೂ. ಆಗಿತ್ತು. ಅಂದರೆ ಒಂದು ದಿನದಲ್ಲಿ 330 ರೂ. ಇಳಿಕೆ ಕಂಡಿದೆ.
ದೇಶದ ಮಹಾನಗರಗಳಲ್ಲಿ ಇಂದಿನ ಚಿನ್ನದ ದರವನ್ನು ನೋಡುವುದಾದರೆ..(10 ಗ್ರಾಂ)
ನವದೆಹಲಿ: 49,450 ರೂ.(22 ಕ್ಯಾರಟ್) ಮತ್ತು 53,930 ರೂ. (24 ಕ್ಯಾರಟ್)
ಮುಂಬೈ: 49,300 ರೂ.(22 ಕ್ಯಾರಟ್) ಮತ್ತು 53,780 ರೂ. (24 ಕ್ಯಾರಟ್)
ಕೋಲ್ಕತ್ತಾ: 49,300 ರೂ.(22 ಕ್ಯಾರಟ್) ಮತ್ತು 53,780 ರೂ. (24 ಕ್ಯಾರಟ್)
ಚೆನ್ನೈ: 50,100 ರೂ.(22 ಕ್ಯಾರಟ್) ಮತ್ತು 54,650 ರೂ. (24 ಕ್ಯಾರಟ್)
ಹೈದರಾಬಾದ್: 49,300 ರೂ.(22 ಕ್ಯಾರಟ್) ಮತ್ತು 53,780 ರೂ. (24 ಕ್ಯಾರಟ್)
ಇನ್ನು ಬೆಳ್ಳಿ ದರದತ್ತ ಗಮನಹರಿಸುವುದಾದರೆ, ದೇಶದಲ್ಲಿ ಬೆಳ್ಳಿ ಬೆಲೆ ಒಂದು ಕೆಜಿಗೆ 66,000 ರೂ. ಆಗಿದೆ. ನಿನ್ನೆ(ಡಿ.06-ಮಂಗಳವಾರ) ಒಂದು ಕೆಜಿ ಬೆಳ್ಳಿ ಬೆಲೆ 66,500 ಆಗಿತ್ತು. ಅಂದರೆ ಒಂದು ದಿನದಲ್ಲಿ ಬರೋಬ್ಬರಿ 500 ರೂ. ಇಳಿಕೆ ಕಂಡಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಒಂದು ಕೆಜಿ ಬೆಳ್ಳಿ ಬೆಲೆ 70,800 ರೂ. ಆಗಿದ್ದು, ನಿನ್ನೆ(ಡಿ.06-ಮಂಗಳವಾರ) 72,500 ರೂ. ಆಗಿತ್ತು. ಅಂದರೆ ಒಂದು ದಿನದಲ್ಲಿ ಬರೋಬ್ಬರಿ 1,700 ರೂ. ಇಳಿಕೆ ಕಂಡಿದೆ.
ದೇಶದ ಮಹಾನಗರಗಳಲ್ಲಿ ಇಂದಿನ ಬೆಳ್ಳಿ ದರವನ್ನು ನೋಡುವುದಾದರೆ..
ನವದೆಹಲಿ: 66,000ರೂ. (ಒಂದು ಕೆಜಿ)
ಮುಂಬೈ: 66,000 ರೂ. (ಒಂದು ಕೆಜಿ)
ಕೋಲ್ಕತ್ತಾ: 66,000 ರೂ. (ಒಂದು ಕೆಜಿ)
ಚೆನ್ನೈ: 70,800 ರೂ. (ಒಂದು ಕೆಜಿ)
ಹೈದರಾಬಾದ್: 70,800 ರೂ. (ಒಂದು ಕೆಜಿ)
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ದರ ವ್ಯತ್ಯಾಸ ಮತ್ತು ದೇಶೀಯ ಬೇಡಿಕೆಗಳಿಗೆ ಅನುಗುಣವಾಗಿ, ದೇಶೀಯ ಮಾರುಕಟ್ಟೆಯಲ್ಲಿ ಚಿನ್ನ ಹಾಗೂ ಬೆಳ್ಳಿ ದರದಲ್ಲಿ ಇಳಿಕೆಯಾಗಿದ್ದು, ಆದಾಗ್ಯೂ ಒಟ್ಟಾರೆ ದರವನ್ನು ಗಮನಿಸಿದರೆ ತುಸು ಹೆಚ್ಚೇ ಎಂದು ಹೇಳಬಹುದಾಗಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆ ಪರಿಸ್ಥಿತಿ, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯವನ್ನು ಆಧರಿಸಿ, ಚಿನ್ನ ಹಾಗೂ ಬೆಳ್ಳಿ ಮೇಲಿನ ದೈನಂದಿನ ಬೆಲೆಯನ್ನು ನಿರ್ಧಾರ ಮಾಡಲಾಗುತ್ತದೆ ಎಂಬುದು ಇಲ್ಲಿ ಉಲ್ಲೇಖನೀಯ.