logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Gold Price In Dubai Vs India: ಚಿನ್ನ ಎಲ್ಲಿ ಅಗ್ಗ ಭಾರತದಲ್ಲಾಅಥವಾ ದುಬೈನಲ್ಲಾ? ಗೆಸ್‌ ಮಾಡಿ ನೋಡೋಣ. ಲೆಕ್ಕಾಚಾರದ ವಿವರ ಇಲ್ಲಿದೆ ನೋಡಿ

Gold Price in Dubai Vs India: ಚಿನ್ನ ಎಲ್ಲಿ ಅಗ್ಗ ಭಾರತದಲ್ಲಾಅಥವಾ ದುಬೈನಲ್ಲಾ? ಗೆಸ್‌ ಮಾಡಿ ನೋಡೋಣ. ಲೆಕ್ಕಾಚಾರದ ವಿವರ ಇಲ್ಲಿದೆ ನೋಡಿ

Oct 21, 2022 02:31 PM IST

Gold Price in Dubai Vs India: ಚಿನ್ನ ಖರೀದಿಸೋದಾದರೆ ದುಬೈಗೇ ಹೋಗಬೇಕು. ಅಲ್ಲೇ ಚೀಪ್‌ ಆಂಡ್‌ ಬೆಸ್ಟ್‌ ಅನ್ನೋ ಕಲ್ಪನೆ ಹಲವರಲ್ಲಿ ಬಹುಕಾಲದಿಂದ ಇದೆ. ಯಾವಾತ್ತಾದರೂ ವಾಸ್ತವಿಕ ನೆಲೆಗಟ್ಟಿನಲ್ಲಿ ಚಿನ್ನದ ದರ ಎಲ್ಲಿ ಅಗ್ಗ ಅಂತ ಪರಿಶೀಲಿಸಿದ್ದೀರಾ? ಇಲ್ಲ ಅನ್ನೋದಾದರೆ ಈ ವರದಿ ಗಮನಿಸಿ. 

  • Gold Price in Dubai Vs India: ಚಿನ್ನ ಖರೀದಿಸೋದಾದರೆ ದುಬೈಗೇ ಹೋಗಬೇಕು. ಅಲ್ಲೇ ಚೀಪ್‌ ಆಂಡ್‌ ಬೆಸ್ಟ್‌ ಅನ್ನೋ ಕಲ್ಪನೆ ಹಲವರಲ್ಲಿ ಬಹುಕಾಲದಿಂದ ಇದೆ. ಯಾವಾತ್ತಾದರೂ ವಾಸ್ತವಿಕ ನೆಲೆಗಟ್ಟಿನಲ್ಲಿ ಚಿನ್ನದ ದರ ಎಲ್ಲಿ ಅಗ್ಗ ಅಂತ ಪರಿಶೀಲಿಸಿದ್ದೀರಾ? ಇಲ್ಲ ಅನ್ನೋದಾದರೆ ಈ ವರದಿ ಗಮನಿಸಿ. 
ದೇಶಾದ್ಯಂತ ಧನ್‌ತೇರಸ್‌ ಸಂಭ್ರಮ. ಚಿನ್ನ ಖರೀದಿ ತರಾತುರಿ ಶುರುವಾಗಿದೆ. ಅನೇಕರು ಮಧ್ಯಪ್ರಾಚ್ಯದಲ್ಲಿರುವ ಸಂಬಂಧಿಕರಿಗೆ ಚಿನ್ನವನ್ನು ಖರೀದಿಸಿ ತರುವಂತೆ ಬೇಡಿಕೊಳ್ಳುವ ದೃಶ್ಯ ಸರ್ವೇ ಸಾಮಾನ್ಯ. ಆದರೆ, ದುಬೈನಲ್ಲಿ ಚಿನ್ನದ ಬೆಲೆ ಕಡಿಮೆಯಾದರೂ, ಚಿನ್ನಾಭರಣಗಳ 'ಮೇಕಿಂಗ್ ಚಾರ್ಜ್' ಭಾರತಕ್ಕಿಂತ ಹೆಚ್ಚು ಎಂಬ ಸತ್ಯ ಅನೇಕ ಭಾರತೀಯರಿಗೆ ತಿಳಿದಿಲ್ಲ.
(1 / 5)
ದೇಶಾದ್ಯಂತ ಧನ್‌ತೇರಸ್‌ ಸಂಭ್ರಮ. ಚಿನ್ನ ಖರೀದಿ ತರಾತುರಿ ಶುರುವಾಗಿದೆ. ಅನೇಕರು ಮಧ್ಯಪ್ರಾಚ್ಯದಲ್ಲಿರುವ ಸಂಬಂಧಿಕರಿಗೆ ಚಿನ್ನವನ್ನು ಖರೀದಿಸಿ ತರುವಂತೆ ಬೇಡಿಕೊಳ್ಳುವ ದೃಶ್ಯ ಸರ್ವೇ ಸಾಮಾನ್ಯ. ಆದರೆ, ದುಬೈನಲ್ಲಿ ಚಿನ್ನದ ಬೆಲೆ ಕಡಿಮೆಯಾದರೂ, ಚಿನ್ನಾಭರಣಗಳ 'ಮೇಕಿಂಗ್ ಚಾರ್ಜ್' ಭಾರತಕ್ಕಿಂತ ಹೆಚ್ಚು ಎಂಬ ಸತ್ಯ ಅನೇಕ ಭಾರತೀಯರಿಗೆ ತಿಳಿದಿಲ್ಲ. (pixabay)
ಮೇಲ್ನೋಟಕ್ಕೆ, ದುಬೈನಲ್ಲಿ ಚಿನ್ನದ ಬೆಲೆ ಅಗ್ಗ ಅಂತ ಕಾಣಬಹುದು. ಆದರೆ ನೀವು ಆಭರಣ ರೂಪದಲ್ಲಿ ಚಿನ್ನವನ್ನು ಖರೀದಿಸಲು ಬಯಸಿದರೆ, ಅದು ದುಬೈಗಿಂತ ಭಾರತದಲ್ಲೇ ಹೆಚ್ಚು ಅಗ್ಗ. ದುಬೈನಿಂದ ಚಿನ್ನಾಭರಣ ಖರೀದಿಸಿದರೆ ನಿಮ್ಮ ಜೇಬಿಗೆ ಹೊರೆ. ಮೇಲಾಗಿ ದುಬೈನಿಂದ ಚಿನ್ನ ಖರೀದಿಸಿ ಭಾರತಕ್ಕೆ ತಂದರೆ ಅದಕ್ಕೆ ಹೆಚ್ಚುವರಿ ಸುಂಕ ತೆರಬೇಕಾಗುತ್ತದೆ.
(2 / 5)
ಮೇಲ್ನೋಟಕ್ಕೆ, ದುಬೈನಲ್ಲಿ ಚಿನ್ನದ ಬೆಲೆ ಅಗ್ಗ ಅಂತ ಕಾಣಬಹುದು. ಆದರೆ ನೀವು ಆಭರಣ ರೂಪದಲ್ಲಿ ಚಿನ್ನವನ್ನು ಖರೀದಿಸಲು ಬಯಸಿದರೆ, ಅದು ದುಬೈಗಿಂತ ಭಾರತದಲ್ಲೇ ಹೆಚ್ಚು ಅಗ್ಗ. ದುಬೈನಿಂದ ಚಿನ್ನಾಭರಣ ಖರೀದಿಸಿದರೆ ನಿಮ್ಮ ಜೇಬಿಗೆ ಹೊರೆ. ಮೇಲಾಗಿ ದುಬೈನಿಂದ ಚಿನ್ನ ಖರೀದಿಸಿ ಭಾರತಕ್ಕೆ ತಂದರೆ ಅದಕ್ಕೆ ಹೆಚ್ಚುವರಿ ಸುಂಕ ತೆರಬೇಕಾಗುತ್ತದೆ. (Reuters)
ಭಾರತದ ಮುಂಬೈನಲ್ಲಿ ಅಕ್ಟೋಬರ್ 19 ರ ಹೊತ್ತಿಗೆ, ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 4655 ರೂಪಾಯಿ ಆಗಿದೆ. ಈ ದರದಲ್ಲಿ, 20 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 93,100 ರೂಪಾಯಿ. ಇದರ ಮೇಲೆ 3 ಪ್ರತಿಶತ GST (2793 ರೂಪಾಯಿ) ವಿಧಿಸಿದರೆ, 20 ಗ್ರಾಂ ಚಿನ್ನದ ಒಟ್ಟು ಬೆಲೆ 95,893 ರೂಪಾಯಿ ಆಗುತ್ತದೆ.
(3 / 5)
ಭಾರತದ ಮುಂಬೈನಲ್ಲಿ ಅಕ್ಟೋಬರ್ 19 ರ ಹೊತ್ತಿಗೆ, ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 4655 ರೂಪಾಯಿ ಆಗಿದೆ. ಈ ದರದಲ್ಲಿ, 20 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 93,100 ರೂಪಾಯಿ. ಇದರ ಮೇಲೆ 3 ಪ್ರತಿಶತ GST (2793 ರೂಪಾಯಿ) ವಿಧಿಸಿದರೆ, 20 ಗ್ರಾಂ ಚಿನ್ನದ ಒಟ್ಟು ಬೆಲೆ 95,893 ರೂಪಾಯಿ ಆಗುತ್ತದೆ. (pixabay)
ಈ ಚಿನ್ನದ ಮೇಲೆ ಶೇಕಡಾ 7 ಮೇಕಿಂಗ್ ಚಾರ್ಜ್ (6712 ರೂಪಾಯಿ) ಮತ್ತು ಮೇಕಿಂಗ್ ಚಾರ್ಜ್ ಮೇಲೆ 5 ಶೇಕಡಾ ಸುಂಕ ( 336 ರೂಪಾಯಿ) ಸೇರಿಸಿ, 20 ಗ್ರಾಂ ತೂಕದ 22 ಕ್ಯಾರೆಟ್ ಚಿನ್ನದ ಆಭರಣದ ಬೆಲೆ 1,02,941 ರೂಪಾಯಿ ಆಗುತ್ತದೆ. ಎಲ್ಲಾ ಆಕ್ಸೆಸರಿ ಚಾರ್ಜ್‌ಗಳನ್ನು ಸೇರಿಸುವುದರಿಂದ ನಿಮ್ಮ ಚಿನ್ನದ ಆಭರಣದ ಬೆಲೆಗೆ ಸ್ವಲ್ಪ ಹೆಚ್ಚು ಸೇರಿಸಲಾಗುತ್ತದೆ. (ಸಾಂಕೇತಿಕ ಚಿತ್ರ)
(4 / 5)
ಈ ಚಿನ್ನದ ಮೇಲೆ ಶೇಕಡಾ 7 ಮೇಕಿಂಗ್ ಚಾರ್ಜ್ (6712 ರೂಪಾಯಿ) ಮತ್ತು ಮೇಕಿಂಗ್ ಚಾರ್ಜ್ ಮೇಲೆ 5 ಶೇಕಡಾ ಸುಂಕ ( 336 ರೂಪಾಯಿ) ಸೇರಿಸಿ, 20 ಗ್ರಾಂ ತೂಕದ 22 ಕ್ಯಾರೆಟ್ ಚಿನ್ನದ ಆಭರಣದ ಬೆಲೆ 1,02,941 ರೂಪಾಯಿ ಆಗುತ್ತದೆ. ಎಲ್ಲಾ ಆಕ್ಸೆಸರಿ ಚಾರ್ಜ್‌ಗಳನ್ನು ಸೇರಿಸುವುದರಿಂದ ನಿಮ್ಮ ಚಿನ್ನದ ಆಭರಣದ ಬೆಲೆಗೆ ಸ್ವಲ್ಪ ಹೆಚ್ಚು ಸೇರಿಸಲಾಗುತ್ತದೆ. (ಸಾಂಕೇತಿಕ ಚಿತ್ರ)(PTI)
ದುಬೈನಲ್ಲಿ ಅಕ್ಟೋಬರ್ 19 ರಂದು ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ  4177 ರೂಪಾಯಿ ಆಗಿದೆ. ಈ ದರದಲ್ಲಿ, 20 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 83,552 ರೂಪಾಯಿ  ಮರುಪಾವತಿಸಬಹುದಾದ ವ್ಯಾಟ್ ಅದರ ಮೇಲೆ ಇರುತ್ತದೆ. ಅದರ ಮೇಲೆ ಶೇಕಡಾ 25 ಮೇಕಿಂಗ್ ಚಾರ್ಜ್ ( 20,888 ರೂಪಾಯಿ) ಸೇರಿಸಿ, 20 ಗ್ರಾಂ ತೂಕದ 22 ಕ್ಯಾರೆಟ್ ಚಿನ್ನದ ಆಭರಣದ ಬೆಲೆ 1,04,440 ರೂಪಾಯಿ ಆಗುತ್ತದೆ. ಇತರೆ ಎಲ್ಲಾ ಆಕ್ಸೆಸರಿ ಶುಲ್ಕಗಳು ಮತ್ತು ಹಣ ವಿನಿಮಯ ವೆಚ್ಚಗಳು ಸೇರಿ 20 ಗ್ರಾಂ ತೂಕದ 22 ಕ್ಯಾರೆಟ್ ಚಿನ್ನಾಭರಣ ಬೆಲೆ ದುಬೈನಲ್ಲಿ ಸುಮಾರು 1,10,000 ರೂಪಾಯಿ. (ಸಾಂಕೇತಿಕ ಚಿತ್ರ)
(5 / 5)
ದುಬೈನಲ್ಲಿ ಅಕ್ಟೋಬರ್ 19 ರಂದು ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 4177 ರೂಪಾಯಿ ಆಗಿದೆ. ಈ ದರದಲ್ಲಿ, 20 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 83,552 ರೂಪಾಯಿ ಮರುಪಾವತಿಸಬಹುದಾದ ವ್ಯಾಟ್ ಅದರ ಮೇಲೆ ಇರುತ್ತದೆ. ಅದರ ಮೇಲೆ ಶೇಕಡಾ 25 ಮೇಕಿಂಗ್ ಚಾರ್ಜ್ ( 20,888 ರೂಪಾಯಿ) ಸೇರಿಸಿ, 20 ಗ್ರಾಂ ತೂಕದ 22 ಕ್ಯಾರೆಟ್ ಚಿನ್ನದ ಆಭರಣದ ಬೆಲೆ 1,04,440 ರೂಪಾಯಿ ಆಗುತ್ತದೆ. ಇತರೆ ಎಲ್ಲಾ ಆಕ್ಸೆಸರಿ ಶುಲ್ಕಗಳು ಮತ್ತು ಹಣ ವಿನಿಮಯ ವೆಚ್ಚಗಳು ಸೇರಿ 20 ಗ್ರಾಂ ತೂಕದ 22 ಕ್ಯಾರೆಟ್ ಚಿನ್ನಾಭರಣ ಬೆಲೆ ದುಬೈನಲ್ಲಿ ಸುಮಾರು 1,10,000 ರೂಪಾಯಿ. (ಸಾಂಕೇತಿಕ ಚಿತ್ರ)(PTI)

    ಹಂಚಿಕೊಳ್ಳಲು ಲೇಖನಗಳು