Gold Price Today December 6: ಸತತವಾಗಿ ಚಿನ್ನಾಭರಣ ಬೆಲೆ ಏರಿಕೆ; ಚಿನಿವಾರ ಪೇಟೆಯಲ್ಲಿ ಇಂದು ಚಿನ್ನ, ಬೆಳ್ಳಿ ರೇಟ್ ಎಷ್ಟಿದೆ?
Dec 06, 2022 07:52 AM IST
ಇಂದಿನ ಚಿನ್ನ ಮತ್ತು ಬೆಳ್ಳಿ ಬೆಲೆಯನ್ನು ತಿಳಿಯಿರಿ
Gold and silver Price Today December 6: ಇಂದು ಡಿಸೆಂಬರ್ 6.
ಚಿನಿವಾರ ಪೇಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಏರಿಕೆಯಾಗುತ್ತಲೇ ಇದೆ. ನೀವು ಚಿನ್ನ ಖರೀದಿಸುವ ಪ್ಲಾನ್ ಮಾಡಿದ್ದರೆ ಒಮ್ಮೆ ಬೆಲೆಗಳನ್ನು ಪರಿಶೀಲಿಸಿ ಆ ನಂತರ ಖರೀದಿಗೆ ಮುಂದಾಗಿದೆ.
ಬೆಂಗಳೂರು: ವಾರದ ವಹಿವಾಟಿನ ಎರಡನೇ ದಿನ. ಮಂಗಳವಾರ ಡಿಸೆಂಬರ್ 6. ಚಿನ್ನಾಭರಣ ಪ್ರಿಯರು ಸಹಜವಾಗಿಯೇ ಚಿನ್ನ, ಬೆಳ್ಳಿ ರೇಟ್ ನೋಡುತ್ತಾರೆ. ಇಂದು ಚಿನ್ನ, ಬೆಳ್ಳಿ ಎರಡರ ದರವೂ ಹೆಚ್ಚಳವಾಗಿದೆ. ನಿನ್ನೆ ಕೂಡ ಚಿನ್ನಾಭರಣಗಳ ಬೆಲೆ ಭಾರಿ ಏರಿಕೆಯಾಗಿತ್ತು.
ಚಿನ್ನದ ಬೆಲೆ ಏರಿಳಿತದ ವಿಚಾರಕ್ಕೆ ಬಂದರೆ, ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ಭಾರತದ ಕರೆನ್ಸಿಯ ಮೌಲ್ಯಗಳು ನಿರ್ಣಾಯಕ ಪಾತ್ರವಹಿಸುತ್ತವೆ ಎಂಬುದನ್ನು ಮರೆಯುವಂತಿಲ್ಲ. ಆದರೂ, ನಗರದಿಂದ ನಗರಕ್ಕೆ ಚಿನ್ನ, ಬೆಳ್ಳಿ ದರಗಳಲ್ಲಿ ವ್ಯತ್ಯಾಸವಾಗುತ್ತವೆ ಎಂಬುದನ್ನೂ ಗಮನಿಸಬೇಕು. ಇಂದು ದೇಶದ ಪ್ರಮುಖ ನಗರಗಳಲ್ಲಿ ಚಿನ್ನ ಬೆಳ್ಳಿ ದರ ಎಷ್ಟಿದೆ ? ಇಲ್ಲಿದೆ ವಿವರ.
ಚಿನ್ನ ಮತ್ತು ಬೆಳ್ಳಿಯ ದರ ಇಂದು (Gold and Silver Rate Today, December 6)
ದೇಶದಲ್ಲಿ 10 ಗ್ರಾಂ 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ ಏರಿಕೆಯಾಗಿದೆ. 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 150 ರೂಪಾಯಿ ಏರಿಕೆ ನಂತರ 49,650 ರೂಪಾಯಿಗೆ ತಂದು ನಿಂತಿದೆ. ಅಪರಂಜಿ ಚಿನ್ನ 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 160 ರೂಪಾಯಿ ಹೆಚ್ಚಳದ ಬಳಿಕ 54,150 ರೂಪಾಯಿ ಇದೆ. ಇದೇ ರೀತಿ, ಬೆಳ್ಳಿಯ ಬೆಲೆ ಒಂದು ಕಿಲೋಕ್ಕೆ ಇಂದು 72,500 ರೂಪಾಯಿ ಆಗಿದೆ. 1 ಕೆಜಿ ಬೆಳ್ಳಿ ಬೆಲೆಯಲ್ಲಿ 900 ರೂಪಾಯಿ ಏರಿಕೆಯಾಗಿದೆ.
ಬೆಂಗಳೂರು, ಮಂಗಳೂರು, ಮೈಸೂರುಗಳಲ್ಲಿ 22 ಕ್ಯಾರೆಟ್ ಆಭರಣ ಚಿನ್ನದ ದರ (22 carat gold rate)
ಗುಡ್ ರಿಟರ್ನ್ಸ್ ಮಾಹಿತಿ ಪ್ರಕಾರ, ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಆಭರಣ ಚಿನ್ನದ ಇಂದಿನ ಬೆಲೆ 10 ಗ್ರಾಂಗೆ ಹೀಗಿದೆ.
ಬೆಂಗಳೂರು- 49,650 ರೂಪಾಯಿ.
ಮಂಗಳೂರು- 49,650 ರೂಪಾಯಿ.
ಮೈಸೂರು- 49,650 ರೂಪಾಯಿ.
ಚೆನ್ನೈ- 50,450 ರೂಪಾಯಿ.
ಮುಂಬೈ- 49,600 ರೂಪಾಯಿ.
ದೆಹಲಿ- 49,750 ರೂಪಾಯಿ.
ಕೋಲ್ಕತ- 49,600 ರೂಪಾಯಿ.
ಹೈದರಾಬಾದ್- 49,600 ರೂಪಾಯಿ.
ಕೇರಳ- 49,600 ರೂಪಾಯಿ.
ಪುಣೆ- 49,600 ರೂಪಾಯಿ.
ಬೆಂಗಳೂರು, ಮಂಗಳೂರು, ಮೈಸೂರಿಗಳಲ್ಲಿ ಇಂದು ಅಪರಂಜಿ ಚಿನ್ನ (24 ಕ್ಯಾರೆಟ್ ಚಿನ್ನ)ದ ದರ
ಬೆಂಗಳೂರು- 54,160 ರೂಪಾಯಿ.
ಮಂಗಳೂರು- 54,160 ರೂಪಾಯಿ.
ಮೈಸೂರು- 54,160 ರೂಪಾಯಿ.
ಚೆನ್ನೈ- 55,040 ರೂಪಾಯಿ.
ಮುಂಬೈ- 54,110 ರೂಪಾಯಿ.
ದೆಹಲಿ- 54,260ರೂಪಾಯಿ.
ಕೋಲ್ಕತ- 54,110 ರೂಪಾಯಿ.
ಹೈದರಾಬಾದ್- 54,110 ರೂಪಾಯಿ.
ಕೇರಳ- 54,110 ರೂಪಾಯಿ.
ಪುಣೆ- 54,110 ರೂಪಾಯಿ.
ಬೆಂಗಳೂರು, ಮಂಗಳೂರು, ಮೈಸೂರು ಸೇರಿ ದೇಶದ ಪ್ರಮುಖ ನಗರಗಳಲ್ಲಿ ಒಂದು ಕಿಲೋ ಬೆಳ್ಳಿಯ ದರ
ಬೆಂಗಳೂರು- 72,500 ರೂಪಾಯಿ.
ಮೈಸೂರು- 72,500 ರೂಪಾಯಿ.
ಮಂಗಳೂರು- 72,500 ರೂಪಾಯಿ.
ಮುಂಬೈ- 66,500 ರೂಪಾಯಿ.
ಚೆನ್ನೈ- 72,500 ರೂಪಾಯಿ.
ದೆಹಲಿ- 66,500 ರೂಪಾಯಿ.
ಹೈದರಾಬಾದ್- 72,500 ರೂಪಾಯಿ.
ಕೋಲ್ಕತ್ತ- 72,500 ರೂಪಾಯಿ.
ವಿಭಾಗ